ಕನ್ನಡ ಸುದ್ದಿ  /  Entertainment  /  Sandalwood News Puneeth Rajkumar Fan Basavaraj Ballari Ratna Movie Trailer Released Appu Fans Story Pcp

ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬದಂದೇ ಅಭಿಮಾನಿಯ ಸಿನಿಮಾದ ಟ್ರೇಲರ್‌ ರಿಲೀಸ್‌; ಇಲ್ಲಿದೆ ರತ್ನ ಝಲಕ್‌

ದಿವಂಗತ ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬದಂದೇ ಅಪ್ಪು ಅಭಿಮಾನಿ ಬಸವರಾಜ್ ಬಳ್ಳಾರಿ ನಿರ್ಮಿಸಿ, ನಿರ್ದೇಶಿಸಿರುವ ರತ್ನ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಇದು ಅಪ್ಪು ಅವರನ್ನು ದೇವರಂತೆ ಕಾಣುವ ಅಭಿಮಾನಿಯ ಕುರಿತಾದ ಚಿತ್ರವಾಗಿದೆ. ಏಪ್ರಿಲ್ 26 ಚಿತ್ರಮಂದಿರಗಳಲ್ಲಿ ರತ್ನ ಸಿನಿಮಾ ರಿಲೀಸ್‌ ಆಗಲಿದೆ.

ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬದಂದೇ ಅಭಿಮಾನಿಯ ಸಿನಿಮಾದ ಟ್ರೇಲರ್‌ ರಿಲೀಸ್‌
ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬದಂದೇ ಅಭಿಮಾನಿಯ ಸಿನಿಮಾದ ಟ್ರೇಲರ್‌ ರಿಲೀಸ್‌

ಬೆಂಗಳೂರು: ಬಸವರಾಜ್ ಬಳ್ಳಾರಿ ನಿರ್ಮಿಸಿ, ನಿರ್ದೇಶಿಸಿರುವ "ರತ್ನ" ಚಿತ್ರದ ಟ್ರೇಲರ್ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿದೆ. ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರಿತ್ತಿದೆ. ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ಅಪ್ಪು ಅವರನ್ನು ದೇವರಂತೆ ಕಾಣುವ ಅಭಿಮಾನಿಯ ಕಥೆಯೇ ಈ ಚಿತ್ರದ ಪ್ರಮುಖ ವಿಷಯವೆಂಬ ಮಾಹಿತಿಯನ್ನು ಚಿತ್ರತಂಡ ನೀಡಿದೆ.

"ನಾನು "ಸೀನ" ಸೇರಿದಂತೆ ಕೆಲವು ಚಿತ್ರಗಳನ್ನು ನಿರ್ದೇಶಿಸಿದ್ದೇನೆ. "ಸೀನ" ಚಿತ್ರಕ್ಕೆ ಆರಂಭ ಫಲಕ ತೋರುವ ಮೂಲಕ ಚಾಲನೆ ನೀಡಿದ್ದು, ಪುನೀತ್ ರಾಜಕುಮಾರ್ ಅವರೆ. ಆನಂತರ ಚಿತ್ರೀಕರಣದ ವೇಳೆ ಕೆಲವು ತೊಂದರೆ ಬಂದಾಗ ನಿವಾರಣೆ ಮಾಡಿದ್ದು ಕೂಡ ಅವರೇ" ಎಂದು ಪುನೀತ್ ಅವರನ್ನು ಸ್ಮರಿಸುತ್ತಾ ನಿರ್ದೇಶಕ ಬಸವರಾಜ್ ಬಳ್ಳಾರಿ ಭಾವುಕರಾದರು.

"ರತ್ನ" ಚಿತ್ರ ಅಪ್ಪು ಅವರಿಗಾಗಿಯೇ ಮಾಡಿರುವ ಚಿತ್ರ. ಅವರನ್ನು ದೇವರಂತೆ ಆರಾಧಿಸುವ ಅವರ ಅಭಿಮಾನಿಯ ಕುರಿತಾದ ಚಿತ್ರವಿದು. ನಮ್ಮ ಚಿತ್ರದ ನಾಯಕಿಯ ಪಾತ್ರದ ಹೆಸರು "ರತ್ನ".‌ ಆಕೆಗೆ ಅಪ್ಪು ಆರಾಧ್ಯ ದೈವ. ಪುನೀತ್ ರಾಜಕುಮಾರ್ ಅವರನ್ನು ಭೇಟಿಯಾಗಬೇಕೆಂಬ ಹಂಬಲ ಆಕೆಯದು. ಈ ರೀತಿ ಚಿತ್ರದ ಕಥೆ ಸಾಗುತ್ತದೆ. ಇಂದು ಟ್ರೇಲರ್ ಬಿಡುಗಡೆಯಾಗಿದೆ. ಏಪ್ರಿಲ್ 26 ಚಿತ್ರ ತೆರೆಗೆ ಬರಲಿದೆ" ಎಂದು ಅವರು ಮಾಹಿತಿ ನೀಡಿದ್ದಾರೆ.

"ನಾನು ಈ ಚಿತ್ರದಲ್ಲಿ ನಿರ್ದೇಶಕನ ಪಾತ್ರ ಮಾಡಿದ್ದೇನೆ. ನಾನು ಸಹ ಪುನೀತ್ ರಾಜಕುಮಾರ್ ಅವರ ಅಪ್ಪಟ್ಟ ಅಭಿಮಾನಿ. ಅಪ್ಪಯ ಅವರ ಕುರಿತಾದ ಈ ಚಿತ್ರದಲ್ಲಿ ನಟಿಸಿರುವುದು ಸಂತೋಷವಾಗಿದೆ" ಎಂದು ನಾಯಕ ವರ್ಧನ್‌ ಹೇಳಿದ್ದಾರೆ.

ವೈದ್ಯನ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ನಟ ಹಾಗೂ ಸಂಕಲನಕಾರ ನಾಗೇಂದ್ರ ಅರಸ್ ಹೇಳಿದರು. ಚಿತ್ರದಲ್ಲಿ ನನ್ನದು ನಟನ ಪಾತ್ರ ಎಂದು ಅಮಿತ್ ರಾವ್ ತಿಳಿಸಿದರು. ಆನಂದ್ ಅಪ್ಪು, ಸುಚೇತ್ ಹಾಗೂ ಸಹ ನಿರ್ಮಾಪಕರಾದ ಮಂಜುನಾಥ್, ರಾಘವೇಂದ್ರ ಕರೂರ್ ಮುಂತಾದವರು "ರತ್ನ" ಚಿತ್ರದ ಕುರಿತು ಮಾತನಾಡಿದರು.

ರತ್ನ ಸಿನಿಮಾದ ತಾರಾಗಣ: ಹರ್ಷಲ ಹನಿ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ. ವರ್ಧನ್, ಆನಂದ್ ಅಪ್ಪು, ಬಾಲರಾಜ್ ಒಡೆಯರ್, ರಾಣಿ ಬಸವರಾಜ್, ಸುಚಿತ್ ಚೌವ್ಹಾಣ್, ರಾಮು ಕರೂರ್, ಮಂಜು ದೈವಜ್ಞ, ನಾಗೇಂದ್ರ ಅರಸ್ , ಅಮಿತ್ ರಾವ್, ಸಾರಿಕಮ್ಮ ಈ ಚಿತ್ರದಲ್ಲಿ ನಟಿಸಿದ್ದಾರೆ.

IPL_Entry_Point