‘ಜಾಕಿ’ ಮರು ಬಿಡುಗಡೆ ಬೆನ್ನಲ್ಲೇ ಫೈರ್ ಫೈಟ್ ವಿವಾದದ ಕಾವು; ಸುಳ್ಳು ಹೇಳಿ ಅವಕಾಶ ಪಡೆದ್ರಾ ರವಿವರ್ಮ! ಡಿಫರೆಂಟ್ ಡ್ಯಾನಿ ಆರೋಪವೇನು?
ಕನ್ನಡ ಸುದ್ದಿ  /  ಮನರಂಜನೆ  /  ‘ಜಾಕಿ’ ಮರು ಬಿಡುಗಡೆ ಬೆನ್ನಲ್ಲೇ ಫೈರ್ ಫೈಟ್ ವಿವಾದದ ಕಾವು; ಸುಳ್ಳು ಹೇಳಿ ಅವಕಾಶ ಪಡೆದ್ರಾ ರವಿವರ್ಮ! ಡಿಫರೆಂಟ್ ಡ್ಯಾನಿ ಆರೋಪವೇನು?

‘ಜಾಕಿ’ ಮರು ಬಿಡುಗಡೆ ಬೆನ್ನಲ್ಲೇ ಫೈರ್ ಫೈಟ್ ವಿವಾದದ ಕಾವು; ಸುಳ್ಳು ಹೇಳಿ ಅವಕಾಶ ಪಡೆದ್ರಾ ರವಿವರ್ಮ! ಡಿಫರೆಂಟ್ ಡ್ಯಾನಿ ಆರೋಪವೇನು?

ಸ್ಯಾಂಡಲ್‌ವುಡ್‌ನ ಸಾಹಸ ನಿರ್ದೇಶಕರ ನಡುವೆ ಇದೀಗ ಶೀತಲ ಸಮರ ನಡೆದಿದೆ. ಪುನೀತ್‌ ರಾಜ್‌ಕುಮಾರ್‌ ನಟನೆಯ ಜಾಕಿ ಸಿನಿಮಾದ ಫೈರ್‌ ಫೈಟ್‌ ವಿಚಾರಕ್ಕಾಗಿ ಡಿಫರೆಂಟ್‌ ಡ್ಯಾನಿ ಮತ್ತು ರವಿವರ್ಮಾ ನಡುವೆ ಕಿತ್ತಾಟ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ರವಿವರ್ಮಾ ವಿರುದ್ಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ ಡ್ಯಾನಿ.

‘ಜಾಕಿ’ ಮರು ಬಿಡುಗಡೆ ಬೆನ್ನಲ್ಲೇ ಫೈರ್ ಫೈಟ್ ವಿವಾದದ ಕಾವು; ಸುಳ್ಳು ಹೇಳಿ ಅವಕಾಶ ಪಡೆದ್ರಾ ರವಿವರ್ಮ! ಡಿಫರೆಂಟ್ ಡ್ಯಾನಿ ಆರೋಪವೇನು?
‘ಜಾಕಿ’ ಮರು ಬಿಡುಗಡೆ ಬೆನ್ನಲ್ಲೇ ಫೈರ್ ಫೈಟ್ ವಿವಾದದ ಕಾವು; ಸುಳ್ಳು ಹೇಳಿ ಅವಕಾಶ ಪಡೆದ್ರಾ ರವಿವರ್ಮ! ಡಿಫರೆಂಟ್ ಡ್ಯಾನಿ ಆರೋಪವೇನು?

Puneeth Rajkumar Jackie Re- release: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಹುಟ್ಟು ಹಬ್ಬದ ಅಂಗವಾಗಿ ಅಪ್ಪು ಅಭಿನಯದ ಜಾಕಿ ಸಿನಿಮಾ ಮತ್ತೆ ರಿಲೀಸ್ ಆಗಲು ಸಿದ್ಧತೆ ನಡೆಸಿದೆ. ಅಪ್ಪು ಸಿನಿಮಾವನ್ನು ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಲು ಕಾಯುತ್ತಿದ್ದಾರೆ. ಹದಿನಾಲ್ಕು ವರ್ಷಗಳ ಹಿಂದೆ ರಿಲೀಸ್ ಆಗಿದ್ದ ಜಾಕಿ ಸಿನಿಮಾ ಇಂದಿಗೂ ಸಿನಿ ರಸಿಕರ ಮನಸ್ಸಿನಲ್ಲಿ ಗಟ್ಟಿಯಾಗಿ ಬೇರೂರಿದೆ. ಈ ಸಿನಿಮಾ ಇದೇ ಶುಕ್ರವಾರ ರಿಲೀಸ್ ಆಗ್ತಾಯಿದೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದ್ದು, ಕೆಲ ಶೋಗಳು ಸೋಲ್ಡ್ ಔಟ್ ಆಗಿವೆ. ಹೀಗೆ ಜಾಕಿ ಸಿನಿಮಾ ಮರು ಬಿಡುಗಡೆಯಾಗುತ್ತಿರೋ ಬೆನ್ನಲ್ಲೇ ಹೊಸ ವಿವಾದ ಶುರುವಾಗಿದ್ದು, ಪೋಲಿಸ್ ಠಾಣೆ ಮೆಟ್ಟಿಲೇರಿದೆ.

ಜಾಕಿ ಸಿನಿಮಾದಲ್ಲಿ ಫೈರ್ ಫೈಟ್ ಇದ್ದಿದ್ದು ನಿಮಗೆಲ್ಲಾ ಗೊತ್ತೆಯಿದೆ. ಆ ಫೈಟ್‌ನಲ್ಲಿ ಅಪ್ಪು ಜಬರ್ದಸ್ತ್ ಆಗಿಯೇ ಫೈಟ್ ಮಾಡಿ ಎಲ್ಲರ ಗಮನ ಸೆಳೆದಿದ್ದರು. ಅಪಾಯದ ಅರಿವಿದ್ರೂ ಕೂಡ ಅಪ್ಪು ಆ ಫೈಟ್‌ಗೆ ಒಪ್ಪಿಕೊಂಡಿದ್ರು. ಜಾಕಿ ಸಿನಿಮಾದ ಹೈಲೆಟ್‌ಗಳಲ್ಲಿ ಆ ಫೈಟ್ ಕೂಡ ಒಂದಾಗಿತ್ತು. ಈಗ ಅದೇ ಫೈಟ್ ವಿವಾದಕ್ಕೆ ಕಾರಣವಾಗಿದೆ.

ಜಾಕಿ ಸಿನಿಮಾದ ಫೈರ್ ಫೈಟ್ ಕಂಪೋಸ್ ಮಾಡಿದ್ದು ನಾನು ಅಂತ ಸುಳ್ಳು ಹೇಳಿ ಸಾಹಸ ನಿರ್ದೇಶಕ ರವಿವರ್ಮ ಬಾಲಿವುಡ್‌ನಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಈ ಬಗ್ಗೆ ಕೇಳಿದ್ದಕ್ಕೆ ನನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸ್ಯಾಂಡಲ್‌ವುಡ್‌ನ ಮತ್ತೊಬ್ಬ ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಈಗ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

ಫೈರ್‌ ಫೈಟ್‌ ನನ್ನದು ಎಂದ ರವಿವರ್ಮಾ

ಸ್ಯಾಂಡಲ್‌ವುಡ್‌ನ ಸಾಹಸ ನಿರ್ದೇಶಕ ಡಿಫೆರೆಂಟ್ ಡ್ಯಾನಿ ಈಗ ಜ್ಞಾನಭಾರತಿ ಪೋಲಿಸ್ ಠಾಣೆ ಮೇಟ್ಟಿಲೇರಿದ್ದಾರೆ. ಜಾಕಿ ಸಿನಿಮಾದ ಫೈರ್ ಫೈಟ್ ನಿರ್ದೇಶನ ಮಾಡಿದ್ದು ನಾನು. ಆ ಫೈಟ್‌ಗಾಗಿ ಬಹಳ ಕಷ್ಟ ಪಟ್ಟಿದ್ದೇನೆ. ಆದರೆ ಅದರ ಕ್ರೆಡಿಟ್ ಅನ್ನು ರವಿವರ್ಮ ತೆಗೆದುಕೊಂಡಿದ್ದಾರೆ. ಅದರ ಜೊತೆಗೆ ಟಿವಿ ಚಾನಲ್‌ಗಳಲ್ಲೂ ಕೂಡ ಆ ಫೈಟ್ ನಿರ್ದೇಶನ ಮಾಡಿದ್ದು ನಾನೇ ಅಂತ ಸಂದರ್ಶನ ಕೊಡ್ತಾಯಿದ್ದಾರೆ ಎಂದಿದ್ದಾರೆ ಡ್ಯಾನಿ.

ಡಿಫರೆಂಟ್‌ ಡ್ಯಾನಿಗೆ ಕೊಲೆ ಬೆದರಿಕೆ

ಈ ಬಗ್ಗೆ ನಾನು ಒಂದು ಚಾನಲ್ ಸಂದರ್ಶನದಲ್ಲಿ ಸ್ಪಷ್ಟನೆ ಕೊಟ್ಟ ನಂತರ ನನ್ನ ಆಪ್ತ ಸಹಾಯಕ ಕೆಪಿ ಮಂಜು ಅವರಿಗೆ ಕರೆ ಮಾಡಿ ಅವನನ್ನ ( ಢಿಫರೆಂಟ್ ಡ್ಯಾನಿ) ಎತ್ತಿ ಬಿಡ್ತಿನಿ. ಅವನು ಯಾವಾಗ ಎಲ್ಲಿ ಹೊಗ್ತಾನೆ ಎಷ್ಟೋತ್ತಿಗೆ ಹೋಗ್ತಾನೆ ಅಂತ ಕೇಳ್ತಾಯಿದ್ದಾರೆ. ಇದರಿಂದ ನನಗೆ ಕೆಲಸ ಮಾಡಲು ಆಗ್ತಾಯಿಲ್ಲಿ. ಈ ಬಗ್ಗೆ ರವಿವರ್ಮ ಅವರನ್ನು ಮುಖಾಮುಖಿ ಭೇಟಿ ಮಾಡಿಸಿ ಈ ಸಮಸ್ಯೆಗಳನ್ನು ಸರಿಪಡಿಸಿ ಅಂತ ಡಿಫರೆಂಟ್ ಡ್ಯಾನಿ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

4K ವರ್ಷನ್‌ನಲ್ಲಿ ಜಾಕಿ ರಿಲೀಸ್

ದುನಿಯಾ ಸೂರಿ ನಿರ್ದೇಶನದ ಫ್ಯಾಮಿಲಿ ಎಂಟರ್‌ಟೈನರ್ 'ಜಾಕಿ' ಸಿನಿಮಾನಾ ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣ ಮಾಡಿದ್ದರು. ಆಗ ದೊಡ್ಡ ಮಟ್ಟದ ಹಿಟ್ ಕೂಡ ಆಗಿತ್ತು. ಪುನೀತ್‌ಗೆ ಭಾವನಾ ನಾಯಕಿಯಾಗಿದ್ದರೆ, ದುನಿಯಾ ಸೂರಿ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು. ಈಗ ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಈ‌ ಸಿನಿಮಾನ ಹೊಸ ರೂಪದಲ್ಲಿ ಮತ್ತೆ ರಿಲೀಸ್ ಮಾಡುತ್ತಿದೆ. 4K ವರ್ಷನ್‌ನಲ್ಲಿ ಸಿನಿಮಾ ಹೊಸ ಅನುಭವ ನೀಡಲಿದೆ. ಅಭಿಮಾನಿಗಳು ಮತ್ತೊಮ್ಮೆ ಬಿಗ್ ಸ್ಕ್ರೀನ್ ಮೇಲೆ 'ಜಾಕಿ' ಖದರ್ ನೋಡೋಕೆ ತುದಿಗಾಲಲ್ಲಿ ನಿಂತಿದ್ದಾರೆ.

ವರದಿ: ಮನೋಜ್ ವಿಜಯೀಂದ್ರ, ಬೆಂಗಳೂರು

Whats_app_banner