ಈ ಬಾರಿ ಬರ್ತ್‌ಡೇ ಆಚರಿಸಿಕೊಳ್ಳುತ್ತಿಲ್ಲವೆಂದ ರಚಿತಾ ರಾಮ್‌; ಎಲ್ಲಾ ನಮ್ಮ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರಿಗಾಗಿ ಎಂದ ಅಭಿಮಾನಿಗಳು-sandalwood news rachita ram cancelled birthday celebration on october 3rd fans said its for challenging star darshan rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಈ ಬಾರಿ ಬರ್ತ್‌ಡೇ ಆಚರಿಸಿಕೊಳ್ಳುತ್ತಿಲ್ಲವೆಂದ ರಚಿತಾ ರಾಮ್‌; ಎಲ್ಲಾ ನಮ್ಮ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರಿಗಾಗಿ ಎಂದ ಅಭಿಮಾನಿಗಳು

ಈ ಬಾರಿ ಬರ್ತ್‌ಡೇ ಆಚರಿಸಿಕೊಳ್ಳುತ್ತಿಲ್ಲವೆಂದ ರಚಿತಾ ರಾಮ್‌; ಎಲ್ಲಾ ನಮ್ಮ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರಿಗಾಗಿ ಎಂದ ಅಭಿಮಾನಿಗಳು

ಅಕ್ಟೋಬರ್‌ 3 , ರಚಿತಾ ರಾಮ್‌ ಹುಟ್ಟುಹಬ್ಬ, ಆಚರೆ ಈ ಬಾರಿ ಡಿಂಪಲ್‌ ಕ್ವೀನ್‌ ಬರ್ತ್‌ಡೇ ಆಚರಣೆ ಕ್ಯಾನ್ಸಲ್‌ ಮಾಡಿದ್ದಾರೆ. ರೇಣುಕಾ ಸ್ವಾಮಿ ಪ್ರಕರಣದಲ್ಲಿ ದರ್ಶನ್‌ , ಜೈಲಿನಲ್ಲಿ ಇರುವುದಕ್ಕೆ ರಚಿತಾ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ದರ್ಶನ್‌ ಅಭಿಮಾನಿಗಳು ರಚಿತಾ ಪೋಸ್ಟ್‌ಗೆ ಕಾಮೆಂಟ್‌ ಮಾಡುತ್ತಿದ್ದಾರೆ.

ಈ ಬಾರಿ ಬರ್ತ್‌ಡೇ ಆಚರಿಸಿಕೊಳ್ಳುತ್ತಿಲ್ಲವೆಂದ ರಚಿತಾ ರಾಮ್‌; ಎಲ್ಲಾ ನಮ್ಮ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರಿಗಾಗಿ ಎಂದ ಅಭಿಮಾನಿಗಳು
ಈ ಬಾರಿ ಬರ್ತ್‌ಡೇ ಆಚರಿಸಿಕೊಳ್ಳುತ್ತಿಲ್ಲವೆಂದ ರಚಿತಾ ರಾಮ್‌; ಎಲ್ಲಾ ನಮ್ಮ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರಿಗಾಗಿ ಎಂದ ಅಭಿಮಾನಿಗಳು (PC: Rachita Ram Instagram)

ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಕಳೆದ ವರ್ಚ ರಚಿತಾ ಅಭಿನಯದ ಮ್ಯಾಟ್ನಿ ಸಿನಿಮಾ ರಿಲೀಸ್‌ ಆದ ನಂತರ ಅವರ ಹೊಸ ಚಿತ್ರಗಳು ಬಿಡುಗಡೆ ಆಗಿಲ್ಲ. ಮತ್ತೆ ರಚ್ಚುವನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕೂಡಾ ಕಾಯುತ್ತಿದ್ದಾರೆ. ಅಂದ ಹಾಗೆ ಅಕ್ಟೋಬರ್‌ 3 ರಚಿತಾ ಹುಟ್ಟುಹಬ್ಬ. ಆದರೆ ಈ ಬಾರಿ ಅಭಿಮಾನಿಗಳಿಗೆ ರಚಿತಾ ಬರ್ತ್‌ಡೇಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗ್ತಿಲ್ಲ.

ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದ ರಚಿತಾ ರಾಮ್

ರಚಿತಾ ರಾಮ್‌ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲವಂತೆ. ಈ ವಿಚಾರವನ್ನು ಖುದ್ದು ರಚಿತಾ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಫೋಟೋ ಇರುವ ಪೋಸ್ಟ್‌ ಒಂದನ್ನು ಹಂಚಿಕೊಂಡಿರುವ ರಚಿತಾ ರಾಮ್‌, ಎಲ್ಲರಿಗೂ ನಮಸ್ಕಾರ, ಎಲ್ಲರೂ ಚೆನ್ನಾಗಿದ್ದೀರಿ ಎಂದು ಭಾವಿಸುತ್ತಾ, ಈ ಬಾರಿ ಚಿತ್ರೀಕರಣ ಇರುವುದರಿಂದ ನನ್ನು ಹುಟ್ಟುಹಬ್ಬ ( ಅಕ್ಟೋಬರ್‌ 3) ಆಚರಣೆಯನ್ನು ನಾನು ಮಾಡಿಕೊಳ್ಳುತ್ತಿಲ್ಲ. ಎಂದು ಹೇಳಲು ಇಚ್ಛಿಸುತ್ತೇನೆ. ಎಲ್ಲರಿಗೂ ಕ್ಷಮೆ ಯಾಚಿಸುತ್ತಾ ಎಂದಿನಂತೆ ಪ್ರತಿ ಭಾನುವಾರ ಚಿತ್ರೀಕರಣ ಮುಗಿಸಿ ಬಂದ ನಂತರ ಸಿಗುತ್ತೇನೆ ನಿಮ್ಮ ಪ್ರೀತಿಯ ರಚ್ಚು ಎಂದು ರಚಿತಾ ಬರೆದುಕೊಂಡಿದ್ದಾರೆ. ಇಂಗ್ಲೀಷ್‌ನಲ್ಲಿ ಕೂಡಾ ರಚಿತಾ ಪೋಸ್ಟ್‌ ಹಂಚಿಕೊಂಡಿದ್ದಾರೆ.‌

ನಮ್ಮ ಡಿ ಬಾಸ್‌ ಸಲುವಾಗಿ ಬರ್ತ್‌ಡೇ ಕ್ಯಾನ್ಸಲ್‌ ಮಾಡಿದ್ದಾರೆ ಎಂದ ಫ್ಯಾನ್ಸ್‌

ರಚಿತಾ ಹಂಚಿಕೊಂಡಿರುವ ಪೋಸ್ಟ್‌ಗೆ ಫ್ಯಾನ್ಸ್‌ ಕಾಮೆಂಟ್‌ ಮಾಡಿ ದರ್ಶನ್‌, ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲಿನಲ್ಲಿದ್ದಾರೆ, ಇದೇ ಬೇಸರಕ್ಕೆ ರಚಿತಾ ರಾಮ್‌ ಈ ಬಾರಿ ಬರ್ತ್‌ಡೇ ಆಚರಿಸಿಕೊಳ್ಳುತ್ತಿಲ್ಲ ಎನ್ನುತ್ತಿದ್ದಾರೆ. ನಮ್ ರಚ್ಚು ಕೂಡ ಬಾಸ್ ಸೆಲೆಬ್ರಿಟಿ ಗುರು, ನಮ್ಮ ಡಿ ಬಾಸ್ ಗೋಸ್ಕರ ರಚ್ಚು ಲವ್ ಯು, ದೆವರ ಆಶೀರ್ವಾದ ಯಾವಾಗಲೂ ನಿಮ್ಮ ಮೇಲೆ ಇರಲಿ ಜೈ ಡಿ ಬಾಸ್ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. ಕೆಲವರು ಅಡ್ವಾನ್ಸ್‌ ಹ್ಯಾಪಿ ಬರ್ತ್‌ಡೇ ಹೇಳುತ್ತಿದ್ದಾರೆ. ಸೆಪ್ಟೆಂಬರ್‌ 8 ರಂದು ನಟ ಧನ್ವೀರ್‌ ಕೂಡಾ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ದರ್ಶನ್‌ ಅರೆಸ್ಟ್‌ ಆಗಿ ಜೈಲಿಗೆ ಹೋದ ನಂತರ ಒಮ್ಮೆ ರಚಿತಾ ಪರಪ್ಪನ ಅಗ್ರಹಾರಕ್ಕೆ ಹೋಗಿ ಭೇಟಿ ಮಾಡಿ ಬಂದಿದ್ದರು. ಅವರನ್ನು ನೆನೆದು ಭಾವುಕರಾಗಿದ್ದರು.

ಬುಲ್‌ ಬುಲ್‌ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ರಚಿತಾ

ರಚಿತಾ ರಾಮ್‌, ದರ್ಶನ್‌ ಜೊತೆ ಬುಲ್‌ ಬುಲ್‌ ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಬಂದರು ಈ ಸಿನಿಮಾ 2013 ರಲ್ಲಿ ತೆರೆ ಕಂಡಿತ್ತು. ಇದಾದ ನಂತರ ಅಂಬರೀಶ ಸಿನಿಮಾ ಹಾಗೂ 2 ವರ್ಷಗಳ ಹಿಂದೆ ತೆರೆ ಕಂಡಿದ್ದ ಕ್ರಾಂತಿ ಚಿತ್ರದಲ್ಲಿ ರಚಿತಾ, ದರ್ಶನ್‌ಗೆ ನಾಯಕಿಯಾಗಿ ನಟಿಸಿದ್ದರು. ರಚಿತಾ ಮುಂದಿನ ಸಿನಿಮಾಗಳ ಬಗ್ಗೆ ಹೇಳುವುದಾದರೆ ಶಬರಿ ಸರ್ಚಿಂಗ್‌ ಫಾರ್‌ ರಾವಣ, ಲವ್‌ ಮಿ ಆರ್‌ ಹೇಟ್‌ ಮಿ, ಸಂಜು ವೆಡ್ಸ್‌ ಗೀತಾ 2 ಸಿನಿಮಾಗಳಲ್ಲಿ ರಚಿತಾ ರಾಮ್‌ ಬ್ಯುಸಿ ಇದ್ದಾರೆ. ಇದರೊಂದಿಗೆ ಭರ್ಜರಿ ಬ್ಯಾಚುಲರ್ಸ್‌ ಕಿರುತೆರೆ ಶೋನಲ್ಲಿ ರಚಿತಾ ಜಡ್ಜ್‌ ಆಗಿದ್ದಾರೆ.

mysore-dasara_Entry_Point