Raghavendra Rajkumar: ಪುನೀತ್‌ ಹೆಸರನ್ನು ಎದೆ ಮೇಲೆ ಹಚ್ಚೆ ಹಾಕಿಸಿಕೊಂಡ ರಾಘವೇಂದ್ರ ರಾಜ್‌ಕುಮಾರ್‌; ಟೊಟೊ ನುಕ್ಕಿ ಅಂದ್ರೆ ಯಾರು?
ಕನ್ನಡ ಸುದ್ದಿ  /  ಮನರಂಜನೆ  /  Raghavendra Rajkumar: ಪುನೀತ್‌ ಹೆಸರನ್ನು ಎದೆ ಮೇಲೆ ಹಚ್ಚೆ ಹಾಕಿಸಿಕೊಂಡ ರಾಘವೇಂದ್ರ ರಾಜ್‌ಕುಮಾರ್‌; ಟೊಟೊ ನುಕ್ಕಿ ಅಂದ್ರೆ ಯಾರು?

Raghavendra Rajkumar: ಪುನೀತ್‌ ಹೆಸರನ್ನು ಎದೆ ಮೇಲೆ ಹಚ್ಚೆ ಹಾಕಿಸಿಕೊಂಡ ರಾಘವೇಂದ್ರ ರಾಜ್‌ಕುಮಾರ್‌; ಟೊಟೊ ನುಕ್ಕಿ ಅಂದ್ರೆ ಯಾರು?

ಅಪ್ಪುವನ್ನು ಅತಿಯಾಗಿ ಪ್ರೀತಿಸುತ್ತಿದ್ದ ರಾಘಣ್ಣ, ಅವರ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಜೊತೆಗೆ ಟೊಟೊ ನುಕಿ ಎಂದು ಕೂಡಾ ಹಚ್ಚೆ ಹಾಕಿಸಿಕೊಂಡಿದ್ದಾರೆ.

ರಾಘವೇಂದ್ರ ರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌
ರಾಘವೇಂದ್ರ ರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌

ಪುನೀತ್‌ ರಾಜ್‌ಕುಮಾರ್‌ ನಿಧನರಾಗಿ ಒಂದು ವರ್ಷ ಕಳೆದರೂ ಅಭಿಮಾನಿಗಳು ಇಂದಿಗೂ ಅವರ ಅಗಲಿಕೆ ನೋವಿನಲ್ಲಿ ಇದ್ದಾರೆ. ಅಪ್ಪು ಇನ್ನಿಲ್ಲ‌ ಎಂದು ತಿಳಿದಾಗ ಆ ಆಘಾತದಿಂದ ಕೆಲವು ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದರು. ಕೆಲವು ಅಭಿಮಾನಿಗಳು ಅಪ್ಪು ನಮ್ಮೊಂದಿಗೆ ಶಾಶ್ವತವಾಗಿ ಇರಲಿ ಎಂಬರ್ಥದಲ್ಲಿ ಎದೆ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದರು. ಇದೀಗ ಅಪ್ಪು ಸಹೋದರ ರಾಘವೇಂದ್ರ ರಾಜ್‌ಕುಮಾರ್‌ ಕೂಡಾ ತಮ್ಮ ಎದೆ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ.

ಅಪ್ಪು ನನ್ನ ತಮ್ಮ ಆದರೂ ಅವನು ಮಗು ಇದ್ದಂತೆ ಎಂದು ಶಿವರಾಜ್‌ಕುಮಾರ್‌ ಹಾಗೂ ರಾಘವೇಂದ್ರ ರಾಜ್‌ಕುಮಾರ್‌ ಅನೇಕ ಬಾರಿ ಹೇಳಿದ್ದಾರೆ. ಡಾ. ರಾಜ್‌ಕುಮಾರ್‌ ಅವರ ಐವರು ಮಕ್ಕಳಲ್ಲಿ ಪುನೀತ್‌ ರಾಜ್‌ಕುಮಾರ್‌ ಕೊನೆಯವರು. ಆ ಕಾರಣದಿಂದಲೋ ಏನೋ ಪುನೀತ್‌ ಎಂದರೆ ಎಲ್ಲರಿಗೂ ವಿಶೇಷ ಪ್ರೀತಿ. ಆದರೆ ಅವರು ಇಷ್ಟು ಬೇಗ ಬಾರದ ಲೋಕಕ್ಕೆ ಹೋಗಬಹುದು ಎಂದು ಕನಸಲ್ಲೂ ಯಾರೂ ಊಹಿಸಿರಲಿಲ್ಲ. ಏಕೆಂದರೆ ಪುನೀತ್‌ ಅಷ್ಟು ಫಿಟ್‌ ಹಾಗೂ ಫೈನ್‌ ಇದ್ದರು. 29 ಅಕ್ಟೋಬರ್‌ 2021 ಬೆಳಗ್ಗೆ ಕೂಡಾ ಅವರು ಎಂದಿನಂತೆ ಲವಲವಿಕೆಯಿಂದ ಇದ್ದರು. ಆದರೆ ಬೆಳಗ್ಗೆ 11.20ನಂತರ ಎಲ್ಲವೂ ಬದಲಾಯ್ತು. ಪತ್ನಿ ಅಶ್ವಿನಿ ಜೊತೆ ಮನೆ ಬಳಿ ಚೆನ್ನಾಗಿ ಕಾರು ಹತ್ತಿದ ಪುನೀತ್‌ ರಾಜ್‌ಕುಮಾರ್‌, ಜೀವಂತವಾಗಿ ಮನೆಗೆ ವಾಪಸ್‌ ಬರಲೇ ಇಲ್ಲ. ಆ ಕರಾಳ ದಿನವನ್ನು ನೆನೆದರೆ ಇಂದಿಗೂ ಕಣ್ಣಲ್ಲಿ ನೀರು ಜಿನುಗದೆ ಇರದು.

ಅಪ್ಪುವನ್ನು ಅತಿಯಾಗಿ ಪ್ರೀತಿಸುತ್ತಿದ್ದ ರಾಘಣ್ಣ, ಅವರ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಜೊತೆಗೆ ಟೊಟೊ ನುಕಿ ಎಂದು ಕೂಡಾ ಹಚ್ಚೆ ಹಾಕಿಸಿಕೊಂಡಿದ್ದಾರೆ. ಪುನೀತ್‌ ಅವರ ಮಕ್ಕಳಾದ ಧೃತಿ ಹಾಗೂ ವಂದಿತಾ ಅವರನ್ನು ಅಣ್ಣಾವ್ರ ಕುಟುಂಬದ ಸದಸ್ಯರು ಮುದ್ದಾಗಿ ಟೊಟೊ, ನುಕಿ ಎಂದು ಕರೆಯುತ್ತಿದ್ದರು. ರಾಘವೇಂದ್ರ ರಾಜ್‌ಕುಮಾರ್‌ ಹಚ್ಚೆಯ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು ಅಪ್ಪು ನೆನೆದು ಅಭಿಮಾನಿಗಳು ಭಾವುಕರಾಗಿದ್ದಾರೆ.

ರಾಘವೇಂದ್ರ ರಾಜ್‌ಕುಮಾರ್‌ ಎದೆ ಮೇಲಿನ ಟ್ಯಾಟೂ
ರಾಘವೇಂದ್ರ ರಾಜ್‌ಕುಮಾರ್‌ ಎದೆ ಮೇಲಿನ ಟ್ಯಾಟೂ

ಮತ್ತಷ್ಟು ಮನರಂಜನೆ ಸುದ್ದಿಗಳು

ಎಂದಿಗೂ ದುಡ್ಡು ಎಣಿಸದೆ ಜೇಬಿನಿಂದ ಹಣ ತೆಗೆದು ಕಷ್ಟದಲ್ಲಿದ್ದವರಿಗೆ ನೀಡುತ್ತಿದ್ದ ಕಲಿಯುಗ ಕರ್ಣ ಅಂಬರೀಶ್‌

ಅಭಿಮಾನಿಗಳು ಅನ್ನದಾನ, ಅನಾಥಾಶ್ರಮದಲ್ಲಿ ಹಣ್ಣು ಹಂಪಲು ವಿತರಣೆ, ಸಿಹಿ ಹಂಚುವ ಮೂಲಕ ಅಂಬರೀಶ್‌ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಇಂದು ಕುಟುಂಬದವರು, ಸಂಬಂಧಿಕರು ಸಮಾಧಿ ಬಳಿ ತೆರಳಿ ಅಂಬಿಗೆ ಇಷ್ಟವಾದ ತಿಂಡಿ ತಿನಿಸುಗಳನ್ನು ಇಟ್ಟು ಪೂಜೆ ಸಲ್ಲಿಸಲಿದ್ದಾರೆ. ಮಹಾಭಾರತದ ಕರ್ಣನಂತೆ ಅಂಬರೀಶ್‌ ತೆರೆ ಮೇಲೆ ಮಾತ್ರವಲ್ಲ ತೆರೆ ಹಿಂದೆ ಕೂಡಾ ಹೀರೋ ಆಗಿದ್ದರು. ಅಂಬರೀಶ್‌ ಅಪರೂಪದ ಫೋಟೋಗಳನ್ನು ನೋಡಲು ಈ ಲಿಂಕ್‌ ಒತ್ತಿ.

ದಕ್ಷಿಣದಲ್ಲಿ ಸಾಕಷ್ಟು ನಟಿಯರಿದ್ರೂ ಪ್ರೇಮಲೋಕ ಸಿನಿಮಾಗೆ ರವಿಚಂದ್ರನ್‌ ನಾಯಕಿಯಾಗಿ ಜೂಹಿ ಚಾವ್ಲಾ ಕರೆತಂದಿದ್ದು ಇದೇ ಕಾರಣಕ್ಕೆ

ಜೂಹಿ ಚಾವ್ಲಾ, ಮೊದಲು ನಟಿಸಿದ ಸಿನಿಮಾ ಹಿಂದಿಯ 'ಸುಲ್ತಾನತ್'.‌ ಆದರೆ ಅದು ಆಕೆಗೆ ಹೆಸರು ತರಲಿಲ್ಲ. ನಂತರ ಆಕೆ ಕನ್ನಡದಲ್ಲಿ ನಟಿಸಿದ 'ಪ್ರೇಮಲೋಕ' ರಿಲೀಸ್‌ ಆಗಿದ್ದೇ ತಡ, ಜೂಹಿಗೆ ಹಿಂದಿಯಲ್ಲಿ ಒಂದರ ಹಿಂದೊಂದರಂತೆ ಆಫರ್‌ ಒಲಿಯಿತು. ಆಕೆಗೆ ಸ್ಟಾರ್‌ ನಟಿ ಪಟ್ಟ ಕೂಡಾ ದೊರೆಯಿತು. ದಕ್ಷಿಣದಲ್ಲಿ ಅಷ್ಟೆಲ್ಲಾ ನಾಯಕಿಯರಿದ್ದರೂ ರವಿಚಂದ್ರನ್‌ ಬಾಲಿವುಡ್‌ನಿಂದ ಜೂಹಿಯನ್ನು ಕರೆತರಲು ಕಾರಣ ಏನು ಎಂಬುದು ಎಲ್ಲರಿಗೂ ಕಾಡುವ ಪ್ರಶ್ನೆ. ಕೆಲವು ದಿನಗಳ ಹಿಂದೆ ಟಿವಿ 9 ವಾಹಿನಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ರವಿಚಂದ್ರನ್‌ ಈ ವಿಚಾರದ ಬಗ್ಗೆ ಮಾತನಾಡಿದ್ದರು. ಪೂರ್ತಿ ಸ್ಟೋರಿ ಓದಲು ಈ ಲಿಂಕ್‌ ಕ್ಲಿಕ್‌ ಮಾಡಿ.

Whats_app_banner