ಕನ್ನಡ ಸುದ್ದಿ  /  Entertainment  /  Sandalwood News Raghavendra Stores Movie Promotion Actor Jaggesh Recalls Old Memories With Dr Rajkumar Mnk

Raghavendra Stores: ಊಟದ ವಿಚಾರದಲ್ಲಿ ಅಪ್ಪು ಅಪ್ಪನಂತೆ, ಆದರೆ ಶಿವಣ್ಣನ ನೋಡಿ ಗಾಬರಿಯಾಯ್ತು; ಅಣ್ಣಾವ್ರಿಗೆ ಜಗ್ಗೇಶ್‌ ಕಂಪ್ಲೇಂಟ್‌

ಆವತ್ತು ಸೆಟ್‌ನಲ್ಲಿ ಶಿವಣ್ಣ ಊಟ ಮಾಡೋದನ್ನ ನೋಡಿ ಗಾಬರಿಗೆ ಬಿದ್ದೆ. ಹಿಂಗ್ಯಾಕೆ ಶಿವಣ್ಣ ಎಂದೆ. ಅಷ್ಟೇ ಅಲ್ಲ ನೇರವಾಗಿ ಅಣ್ಣಾವ್ರ ಬಳಿಯೂ ಕಂಪ್ಲೇಂಟ್‌ ಮಾಡಿದ್ದೆ.. ಅದಕ್ಕೆ ಅಣ್ಣಾವ್ರು ಹೀಗೆ ಹೇಳಿದ್ರು ಎಂದು ಹಳೆಯದನ್ನು ನೆನದ ಜಗ್ಗೇಶ್

ಊಟದ ವಿಚಾರದಲ್ಲಿ ಅಪ್ಪು ಅಪ್ಪನಂತೆ, ಆದರೆ ಶಿವಣ್ಣನ ನೋಡಿ ಗಾಬರಿಯಾಯ್ತು; ಅಣ್ಣಾವ್ರಿಗೆ ಜಗ್ಗೇಶ್‌ ಕಂಪ್ಲೇಂಟ್‌
ಊಟದ ವಿಚಾರದಲ್ಲಿ ಅಪ್ಪು ಅಪ್ಪನಂತೆ, ಆದರೆ ಶಿವಣ್ಣನ ನೋಡಿ ಗಾಬರಿಯಾಯ್ತು; ಅಣ್ಣಾವ್ರಿಗೆ ಜಗ್ಗೇಶ್‌ ಕಂಪ್ಲೇಂಟ್‌

Raghavendra Stores: ಹೊಂಬಾಳೆ ಫಿಲಂಸ್‌ (Hombale Films) ಬ್ಯಾನರ್‌ನಲ್ಲಿ ಮೂಡಿಬಂದಿರುವ ‘ರಾಘವೇಂದ್ರ ಸ್ಟೋರ್ಸ್‌’ (Raghavendra Stores) ಸಿನಿಮಾ ಬಿಡುಗಡೆಗೆ ಹತ್ತಿರ ಬಂದಿದೆ. ಇದೇ ಏ. 28ರಂದು ಸಿನಿಮಾ ತೆರೆಗೆ ಬರುತ್ತಿದೆ. ಸಂತೋಶ್‌ ಆನಂದ್‌ರಾಮ್‌ ನಿರ್ದೇಶನ ಎಂಬುದು ಈ ಸಿನಿಮಾದ ವಿಶೇಷ ಎನಿಸಿದರೆ, ಅದೆಲ್ಲದಕ್ಕಿಂತ ಹೆಚ್ಚಾಗಿ ನವರಸನಾಯಕ ಜಗ್ಗೇಶ್‌ (Jaggesh) ಈ ಚಿತ್ರದ ನಾಯಕ ಎಂಬುದು ಆ ವಿಶೇಷತೆಯನ್ನೂ ಮೀರಿಸುವಂಥದ್ದು!

ಸಿಂಗಲ್‌ ಸುಂದ್ರ ಹಾಡಿನ ಮೂಲಕ ಸದ್ದು ಮಾಡಿ, ಟ್ರೇಲರ್‌ ಮೂಲಕ ಕಾಮಿಡಿಯ ರಸಗವಳದ ಜತೆಗೆ 40 ದಾಟಿದ ವಯಸ್ಕನಿಗೆ ಹೆಣ್ಣು ಹುಡುಕೋ ಪ್ರಸಂಗವನ್ನು ಈ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಒಂದಷ್ಟು ಸೆಂಟಿಮೆಂಟ್, ನಗು ಉಕ್ಕಿಸುವ ಕಾಮಿಡಿ, ಕೊನೆಗೊಂದು ನೆನಪಿನಲ್ಲಿ ಉಳಿಯುವ ಸಂದೇಶ ಇದೆಲ್ಲದರ ಮಿಶ್ರಣ ಈ ಸಿನಿಮಾದಲ್ಲಿದೆ ಎಂಬುದನ್ನು ಟ್ರೇಲರ್‌ ಹೇಳಿದೆ.

ಹೀಗೆ ಬಿಡುಗಡೆಗೆ ಸಿದ್ಧವಾಗಿರುವ ‘ರಾಘವೇಂದ್ರ ಸ್ಟೋರ್ಸ್‌’ ಸಿನಿಮಾ ಪ್ರಚಾರ ಕೆಲಸದಲ್ಲಿ ಜಗ್ಗೇಶ ಬಿಜಿಯಾಗಿದ್ದಾರೆ. ಹೀಗಿರುವಾಗಲೇ ಡಾ. ರಾಜ್‌ ಕುಟುಂಬದ ಬಗ್ಗೆಯೂ ಮಾತನಾಡಿದ್ದಾರೆ. ಮೊದಲೇ ರಾಜ್‌ ಕುಟುಂಬದ ಮೇಲೆ ಜಗ್ಗೇಶ್‌ ಅವರಿಗೆ ಅಪಾರ ಅಭಿಮಾನ. ಆ ಅಭಿಮಾನವನ್ನು ಮಗದೊಮ್ಮೆ ಹೊರಹಾಕಿದ್ದಾರೆ. ಅಣ್ಣಾವ್ರು ಊಟದ ವಿಚಾರದಲ್ಲಿ ಹೇಗಿದ್ದರು? ಅಪ್ಪು ಹೇಗೆ? ಶಿವರಾಜ್‌ಕುಮಾರ್‌ ಹೇಗೆ ಎಂಬುದನ್ನು ಹೇಳಿಕೊಂಡಿದ್ದಾರೆ.

ಕನ್ನಡ ಪಿಚ್ಚರ್‌ (Kannada Pichchar) ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಜಗ್ಗೇಶ್‌, "ಊಟದ ವಿಚಾರದಲ್ಲಿ ನಾನು ಅಣ್ಣಾವ್ರಿಂದ ತುಂಬ ಕಲಿತಿದ್ದೇನೆ. ಒಂದು ದಿನ ಊಟಕ್ಕೆ ಕುಳಿತಿದ್ವಿ. ಅವರ ಸ್ಟೈಲೇ ಬೇರೆ. ಆ ಥರ ನಾನು ಯಾರನ್ನೂ ನೋಡಿಲ್ಲ. ಒಂದು ಕಾಲು ಮಡಚಿ, ಇನ್ನೊಂದನ್ನು ಮಡಚಿ ಅದನ್ನು ಬಗಲಿಗೆ ಆನಿಸಿಕೊಂಡು ಊಟ ಮಾಡೋರು. ನಾನೂ ಕುತೂಹಲದಿಂದ ಕೇಳಿಯೇ ಬಿಟ್ಟೆ, ಅಣ್ಣ ನೀವು ಏನೂ ಅಂದುಕೊಳ್ಳಲ್ಲ ಅಂದ್ರೆ ಒಂದು ಮಾತು, ಹೀಗೆಕೆ ಕುಳಿತುಕೊಳ್ತಿರಿ ಎಂದರೆ, ಚಕ್ಕಳ ಮಕ್ಕಳ ಹಾಕಿ ಕೂತ್ರೆ ಸಂತೃಪ್ತಿಯಾಗಿ ಊಟ ಒಳಹೋಗುತ್ತೆ. ಕಾಲನ್ನು ಹೀಗೆ ಮೇಲೆ ಇಟ್ಟುಕೊಂಡ್ರೆ ಹೊಟ್ಟೆ ಭಾಗ ಇನ್ನೂ ವಿಶಾಲವಾಗುತ್ತೆ ಎಂದಿದ್ರು.

ಅವರ ಮಗೆ ಅಪ್ಪು ಅಪ್ಪನಂತೆ ಊಟ ಮಾಡೋರು. ಅದನ್ನು ನೋಡಿದ್ದೇವೆ. ಆದರೆ, ಶಿವಣ್ಣ ಊಟದ ವಿಚಾರದಲ್ಲಿ ಅಷ್ಟಕಷ್ಟೇ. ನಾನು ಅವರ ಜೊತೆ ಒಂದು ಸಿನಿಮಾ ಮಾಡಿ ನನಗೆ ಗಾಬರಿ ಆಯ್ತು, ಈ ಮನುಷ್ಯ ಏನು ತಿನ್ನೋದೆ ಇಲ್ವಲ್ಲ, ಅದ್ಹೇಗೆ ಬದುಕ್ತಾರೆ ಎಂದುಕೊಂಡಿದ್ದೆ. ಕೊನೆಗೆ ಅದನ್ನೂ ಕೇಳಿಯೇ ಬಿಟ್ಟೆ. ಅಲ್ಲ ಶಿವಣ್ಣ ಹೀಗೆ ಊಟ ಮಾಡಿದ್ರೆ ಅದ್ಹೇಗೆ ಎನರ್ಜಿ ಬರುತ್ತೆ? ಅದಕ್ಕೆ ಅವರು ಮಾತನಾಡೋಕೆ ಹೋಗಿರಲಿಲ್ಲ. ಅಣ್ಣಾವ್ರಿಗೂ ಈ ವಿಚಾರ ಹೇಳಿದ್ದೆ. ಊಟ ಮಾಡೋದು ನಮಗು ನಿಮಗೂ ಆಗಿಬಂದಿದೆ. ನಾವು ತಿನ್ನೋಣ ಬಿಡಿ ಎಂದಿದ್ದರು.. ಎಂದು ಜಗ್ಗೇಶ್‌ ಹಳೇ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.

IPL_Entry_Point