ಮೊಟ್ಟೆ ತಂಡದ ಜತೆಗೆ ‘ರೂಪಾಂತರ’ಕ್ಕಿಳಿದ ರಾಜ್ ಬಿ ಶೆಟ್ಟಿ; ಶೀಘ್ರದಲ್ಲಿ ಹೊಸ ಸಿನಿಮಾ ಜತೆಗೆ ಶೆಟ್ರ ಆಗಮನ
ಕನ್ನಡ ಸುದ್ದಿ  /  ಮನರಂಜನೆ  /  ಮೊಟ್ಟೆ ತಂಡದ ಜತೆಗೆ ‘ರೂಪಾಂತರ’ಕ್ಕಿಳಿದ ರಾಜ್ ಬಿ ಶೆಟ್ಟಿ; ಶೀಘ್ರದಲ್ಲಿ ಹೊಸ ಸಿನಿಮಾ ಜತೆಗೆ ಶೆಟ್ರ ಆಗಮನ

ಮೊಟ್ಟೆ ತಂಡದ ಜತೆಗೆ ‘ರೂಪಾಂತರ’ಕ್ಕಿಳಿದ ರಾಜ್ ಬಿ ಶೆಟ್ಟಿ; ಶೀಘ್ರದಲ್ಲಿ ಹೊಸ ಸಿನಿಮಾ ಜತೆಗೆ ಶೆಟ್ರ ಆಗಮನ

ನಟ, ನಿರ್ದೇಶಕ ರಾಜ್‌ ಬಿ ಶೆಟ್ಟಿ ಇದೀಗ ಮತ್ತೊಂದು ಕತೆಯ ಮೂಲಕ ಆಗಮಿಸುತ್ತಿದ್ದಾರೆ. ರೂಪಾಂತರ ಹೆಸರಿನ ಸಿನಿಮಾ ಮೂಲಕ ಅವರ ಆಗಮನವಾಗುತ್ತಿದ್ದು, ಫಸ್ಟ್‌ ಲುಕ್‌ ಸಹ ರಿಲೀಸ್‌ ಮಾಡಿದ್ದಾರೆ.

ಮೊಟ್ಟೆ ತಂಡದ ಜತೆಗೆ ‘ರೂಪಾಂತರ’ಕ್ಕಿಳಿದ ರಾಜ್ ಬಿ ಶೆಟ್ಟಿ; ಶೀಘ್ರದಲ್ಲಿ ಹೊಸ ಸಿನಿಮಾ ಜತೆಗೆ ಶೆಟ್ರ ಆಗಮನ
ಮೊಟ್ಟೆ ತಂಡದ ಜತೆಗೆ ‘ರೂಪಾಂತರ’ಕ್ಕಿಳಿದ ರಾಜ್ ಬಿ ಶೆಟ್ಟಿ; ಶೀಘ್ರದಲ್ಲಿ ಹೊಸ ಸಿನಿಮಾ ಜತೆಗೆ ಶೆಟ್ರ ಆಗಮನ

Raj B Shetty Roopantara: ಇತ್ತೀಚೆಗಷ್ಟೆ ಟರ್ಬೋ ಎಂಬ ಮಲಯಾಳಂ ಚಿತ್ರದಲ್ಲಿ ವೆಟ್ರಿವೇಲ್ ಶನ್ಮುಗ ಸುಂದರಂ ಎಂಬ ಪಾತ್ರದಲ್ಲಿ ಮಮ್ಮೂಟ್ಟಿಯವರಿಗೆ ಟಕ್ಕರ್ ಕೊಡುವ ಖಳನಾಯಕನಾಗಿ ಮಿಂಚಿದ ರಾಜ್ ಬಿ ಶೆಟ್ಟಿ, ಇದೀಗ ಹೊಸ ಸಿನಿಮಾದ ಸುಳಿವು ನೀಡಿದ್ದಾರೆ. ಚಿತ್ರಕ್ಕೆ ರೂಪಾಂತರ ಎಂಬ ಶೀರ್ಷಿಕೆಯೂ ಅಂತಿಮವಾಗಿದ್ದು, ಫಸ್ಟ್‌ ಲುಕ್‌ ಬಿಡುಗಡೆ ಮಾಡುವ ಮೂಲಕ ಕುತೂಹಲ ಮೂಡಿಸಿದ್ದಾರೆ.

ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರೂಪಾಂತರ ಚಿತ್ರದ ಫಸ್ಟ್‌ ಲುಕ್ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಮತ್ತೊಮ್ಮೆ ಸಿನಿ ರಸಿಕರ ಗಮನವನ್ನು ಸೆಳೆದಿದ್ದಾರೆ ರಾಜ್‌ ಬಿ ಶೆಟ್ಟಿ. ಈ ಬಗ್ಗೆ ಹೇಳಿಕೊಳ್ಳುವ ರಾಜ್‌ ಶೆಟ್ಟಿ, 'ಕೆಲ ಸಿನಿಮಾಗಳು ಮನಸ್ಸಿಗೆ ಬಲು ಹತ್ತಿರ. ಅಂತಹ ಒಂದು ಸುಂದರವಾದ ಚಿತ್ರ ರೂಪಾಂತರ. ಈ ಸಿನಿಮಾದ ಭಾಗವಾಗಿರುವುದು, ಜೊತೆಗೆ ಈ ಚಿತ್ರವನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುವ ಜವಾಬ್ದಾರಿ ನನಗೆ ಲಭಿಸಿರುವುದು ನನ್ನ ವೃತ್ತಿ ಜೀವನದ ಭಾಗ್ಯ' ಎಂದು ಬರೆದುಕೊಂಡಿದ್ದಾರೆ ರಾಜ್‌ ಬಿ ಶೆಟ್ಟಿ. ಸದಾ ಹೊಸ ಪ್ರಯೋಗಗಳಿಗೆ ತಮ್ಮನ್ನು ತೊಡಗಿಸಿಕೊಳ್ಳುವ ಗುಣವನ್ನು ಮತ್ತೊಮ್ಮೆ ಅವರು ಸಾಬೀತುಪಡಿಸಿದ್ದಾರೆ.

ಮತ್ತೆ ಒಂದಾದ ಮೊಟ್ಟೆ ತಂಡ

ಈ ಚಿತ್ರದ ಇನ್ನೊಂದು ವಿಶೇಷತೆ ಏನೆಂದರೆ, ಈ ಹಿಂದೆ ಒಂದು ಮೊಟ್ಟೆಯ ಕಥೆ ಎಂಬ ಚಿತ್ರವನ್ನು ನಿರ್ಮಿಸಿ ವಿಶ್ವದಾದ್ಯಂತ ಹೆಸರುವಾಸಿಯಾದ ಅದೇ ತಂಡ ಸೇರಿ ನಿರ್ಮಿಸಿದ ಚಿತ್ರ ಇದಾಗಿದೆ. ರಾಜ್ ಬಿ ಶೆಟ್ಟಿಯವರು ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಅಲ್ಲದೆ, ಸಂಭಾಷಣೆಯನ್ನು ಬರೆದಿದ್ದಾರೆ. ಜೊತೆಗೆ ತಮ್ಮ ನಿರ್ಮಾಣ ಸಂಸ್ಥೆಯಾದ ಲೈಟರ್ ಬುದ್ಧ ಫಿಲಂಸ್‌ನ ಮೂಲಕ ತೆರೆಗೂ ತರುತ್ತಿದ್ದಾರೆ.

ಒಂದು ಮೊಟ್ಟೆಯ ಕಥೆಯ ನಿರ್ಮಾಪಕರಾದ ಸುಹಾನ್ ಪ್ರಸಾದ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪ್ರವೀಣ್ ಶ್ರೀಯಾನ್ ಛಾಯಾಗ್ರಹಣ, ಸಂಕಲನ ಭುವನೇಶ್ ಮಣಿವಣ್ಣನ್, ನಿರ್ಮಾಣ ವಿನ್ಯಾಸ ಪ್ರವೀಣ್ ಮತ್ತು ಅರ್ಷದ್ ನಾಕ್ಕೋತ್ ಅವರದ್ದಾಗಿದೆ. ಮಿಧುನ್ ಮುಕುಂದನ್ ಸಂಗೀತ ನೀಡುವ ಮೂಲಕ ಈ ಜೋಡಿ ಮತ್ತೊಮ್ಮೆ ಪ್ರೇಕ್ಷಕರನ್ನು ರಂಚಿಸಲು ಹೊರಟಿದೆ.

ಕನ್ನಡದಲ್ಲೊಂದು ವಿಭಿನ್ನ ಪ್ರಯತ್ನ

ಕನ್ನಡ ಚಿತ್ರರಂಗದಲ್ಲಿ ಹೊಸತನ ಬರಬೇಕು ಎನ್ನುವ ಕೂಗು ಹೆಚ್ಚಾಗುತ್ತಿರುವ ಈ ಸಂಧರ್ಭದಲ್ಲಿ ರೂಪಾಂತರ ಒಂದು ಪ್ರಮುಖ ಪಾತ್ರ ವಹಿಸಲಿದೆ ಎನ್ನುವುದು ಚಿತ್ರತಂಡದ ಅಭಿಪ್ರಾಯ. ಈ ಚಿತ್ರವು ಮಿಥಿಲೇಶ್ ಎಡವಲತ್ ಎನ್ನುವ ಪ್ರತಿಭಾವಂತ ಯುವಕನ ಪ್ರಥಮ ನಿರ್ದೇಶನದ ಚಿತ್ರವಾಗಿದೆ. ಉಳಿದಂತೆ ಸೋಮಶೇಖರ್ ಬೋಲೇಗಾಂವ್, ಲೇಖಾ ನಾಯ್ಡು, ಹನುಮ್ಮಕ್ಕ, ಭರತ್ ಜಿ.ಬಿ, ಅಂಜನ್ ಭಾರದ್ವಾಜ್ ತಾರಾಗಣದಲ್ಲಿದ್ದಾರೆ.

ಮಲಯಾಳಂನ ಟರ್ಬೋ ಚಿತ್ರವನ್ನು ಕರ್ನಾಟಕದಾದ್ಯಂತ ಯಶಸ್ವಿಯಾಗಿ ಹಂಚಿಕೆ ಮಾಡಿದ ಲೈಟರ್ ಬುದ್ದ ಫಿಲಂಸ್‌ ಈ ಚಿತ್ರವನ್ನೂ ಹಂಚಿಕೆ ಮಾಡುತ್ತಿದೆ ಎಂದು ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾದ ಬಾಲಕೃಷ್ಣ ಅರ್ವನಕರ್ ತಿಳಿಸಿದ್ದಾರೆ.

Whats_app_banner