ಕನ್ನಡ ಸುದ್ದಿ  /  Entertainment  /  Sandalwood News Raj B Shetty Talked About Movie Competition With Rakshit Shetty Toby Trailer Launch Event Mnk

Raj b Shetty: ರಕ್ಷಿತ್‌ ಶೆಟ್ಟಿ, ರಾಜ್‌ ಶೆಟ್ಟಿ ನಡುವೆ ವರ್ಕೌಟ್‌ ಆಯ್ತು C ಫಾರ್ಮುಲಾ; ಸಿ ಅಂದ್ರೆ ಕಾಂಪಿಟೇಷನ್ನಾ ಕೊಲಾಬರೇಷನ್ನಾ?

ಟೋಬಿ ಚಿತ್ರದ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯಲ್ಲಿ ರಾಜ್‌ ಶೆಟ್ಟಿ, ರಕ್ಷಿತ್‌ ಶೆಟ್ಟಿ ಮತ್ತು ರಿಷಬ್‌ ಶೆಟ್ಟಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಇದೇ ವೇಳೆ ಕಾಂಪಿಟೇಷನ್‌ ಅನ್ನೋ ಪದದ ಬಗ್ಗೆ ಹೇಳಿಕೊಂಡರು ರಾಜ್‌ ಶೆಟ್ಟಿ. ಹೀಗಿದೆ ಅವರ ವಿವರಣೆ.

ರಕ್ಷಿತ್‌ ಶೆಟ್ಟಿ, ರಾಜ್‌ ಶೆಟ್ಟಿ ನಡುವೆ ವರ್ಕೌಟ್‌ ಆಯ್ತು C ಫಾರ್ಮುಲಾ; ಹಾಗಾದ್ರೆ ಸಿ ಅಂದ್ರೆ ಕಾಂಪಿಟೇಷನ್ನಾ ಕೊಲಾಬರೇಷನ್ನಾ?
ರಕ್ಷಿತ್‌ ಶೆಟ್ಟಿ, ರಾಜ್‌ ಶೆಟ್ಟಿ ನಡುವೆ ವರ್ಕೌಟ್‌ ಆಯ್ತು C ಫಾರ್ಮುಲಾ; ಹಾಗಾದ್ರೆ ಸಿ ಅಂದ್ರೆ ಕಾಂಪಿಟೇಷನ್ನಾ ಕೊಲಾಬರೇಷನ್ನಾ?

Raj b Shetty: ರಾಜ್‌ ಬಿ ಶೆಟ್ಟಿ ನಟನೆಯ ಟೋಬಿ ಸಿನಿಮಾದ ಟ್ರೇಲರ್‌ ಸದ್ಯ ಕನ್ನಡದ ಮಟ್ಟಿಗೆ ಮಾತ್ರವಲ್ಲ ಸೌತ್‌ ಸಿನಿಮಾ ಮಂದಿಯ ಕಣ್ಣು ಕುಕ್ಕಿದೆ. ಯಾವುದಿದು ಅಪರೂಪದ ಸಿನಿಮಾ? ಎಂದು ದಿಟ್ಟಿಸಿ ನೋಡುವಂತಾಗಿದೆ. ಆ ಮಟ್ಟದ ಹವಾ ಟೋಬಿಯದ್ದು. ಬರೋಬ್ಬರಿ 3 ನಿಮಿಷದ ಟ್ರೇಲರ್‌ನಲ್ಲಿ ಹತ್ತು ಹಲವು ವಿಚಾರಗಳನ್ನು ತುಂಬಿದ್ದಾರೆ ನಿರ್ದೇಶಕರು. ಹಾಗಾಗಿ ನೋಡುಗರಿಗೆ ಈ ಸಿನಿಮಾ ಮೇಲಿನ ನಿರೀಕ್ಷೆ ಮತ್ತಷ್ಟು ಮಗದಷ್ಟು ಹೆಚ್ಚಾಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಈ ನಡುವೆ ವಿಶೇಷ ಎಂಬಂತೆ ಟೋಬಿ ಚಿತ್ರದ ಟ್ರೇಲರ್‌ ಬಿಡುಗಡೆಯನ್ನೂ ಅದ್ದೂರಿಯಾಗಿ ಮಾಡಿದೆ ಈ ತಂಡ. ಆಪ್ತ ಬಳಗವೇ ಆದ, ಸದಾ ಒಳಿತನ್ನೇ ಬಯಸುವ ಹಿತೈಷಿ ಸ್ನೇಹಿತರೇ ರಾಜ್‌ ಶೆಟ್ಟಿ ಅವರ ಟೋಬಿ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿಕೊಟ್ಟಿದ್ದಾರೆ. ರಕ್ಷಿತ್‌ ಶೆಟ್ಟಿ, ರಿಷಬ್‌ ಶೆಟ್ಟಿ ಆಗಮಿಸಿ ಟೋಬಿಯ ಟ್ರೇಲರ್‌ ಕಣ್ತುಂಬಿಕೊಂಡು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಈ ಇಬ್ಬರೂ ಹೀರೋಗಳಿಗೆ ಪರಭಾಷೆಯಲ್ಲೂ ಅಭಿಮಾನಿಗಳಿದ್ದಾರೆ. ಇದೀಗ ಟೋಬಿಯಿಂದ ರಾಜ್‌ಗೂ ಹೊರಗಡೆಯಿಂದ ಫ್ಯಾನ್ಸ್‌ ಸೃಷ್ಟಿಯಾಗುತ್ತಿದ್ದಾರೆ.

ನನ್ನ ಮತ್ತು ರಕ್ಷಿತ್‌ ನಡುವೆ ಕಾಂಪಿಟೇಷನ್ನಾ?

ಹೀಗೆ ಒಂದೇ ವೇದಿಕೆ ಮೇಲೆ ತ್ರಿವಳಿ ಆರ್‌ಆರ್‌ಆರ್‌ಗಳು ನೆರೆದಿದ್ದಾಗ, ಮೈಕ್‌ ಕೈಗೆತ್ತಿಕೊಂಡ ರಾಜ್‌ ಶೆಟ್ಟಿ, ಮಾತಿಗಿಳಿದ್ರು. ಸಿನಿಮಾ ಅಂತ ಬಂದ್ರೆ ಎಲ್ಲರೂ ಜತೆಯಾಗುತ್ತಿದ್ದಾರೆ. ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ ಸಿನಿಮಾ ಇನ್ನೂ ಚಿತ್ರಮಂದಿರದಲ್ಲಿ ಓಡುತ್ತಿದೆ. ಆ ಹುಡುಗರು ಟೋಬಿ ಸಪೋರ್ಟ್‌ ಮಾಡಲು ಇಲ್ಲಿಗೆ ಬಂದಿದ್ದಾರೆ. ಅಲ್ಲಿ ಹೋಗಿ ಅವರ ಸಿನಿಮಾ ಪ್ರಮೋಟ್‌ ಮಾಡಿದ್ದರೆ, ಇನ್ನಷ್ಟು ರೀಚ್‌ ಆಗುತ್ತಿತ್ತು. ಅದನ್ನು ಬಿಟ್ಟು ನಮಗೆ ಬೆಂಬಲಿಸಲು ಬಂದಿದ್ದಾರೆ. ಅದೇ ರೀತಿ ನಮ್ಮ ಟೋಬಿ ಸಿನಿಮಾ ರಿಲೀಸ್‌ ಆದ ಒಂದು ವಾರಕ್ಕೆ ಸಪ್ತ ಸಾಗರದಾಚೆ ಎಲ್ಲೋ ಚಿತ್ರ ರಿಲೀಸ್‌ ಆಗಲಿದೆ. ಆ ಚಿತ್ರ ಬಿಟ್ಟು ನಮ್ಮ ಸಿನಿಮಾಕ್ಕೆ ಬಂದಿದ್ದಾರೆ ರಕ್ಷಿತ್‌ ಶೆಟ್ಟಿ.

C ಫಾರ್ಮುಲಾ ಬಿಡಿಸಿದ ರಾಜ್‌ ಶೆಟ್ಟಿ

ಎಲ್ಲರೂ ಕೂಡ ಕಾಂಪಿಟೇಷನ್, ಕಾಂಪಿಟೇಷನ್‌ ಎನ್ನುತ್ತಿದ್ದಾರೆ. ಆ ಮನುಷ್ಯ (ರಕ್ಷಿತ್‌ ಶೆಟ್ಟಿ) ನನ್ನ ಜತೆಗೆ ಕುಳಿತು, ಸಿನಿಮಾ ಚೆನ್ನಾಗಿದೆ ದಯವಿಟ್ಟು ಎಲ್ಲರೂ ನೋಡಿ ಅಂತಾರೆ. ನೀವಂದುಕೊಂಡಂತೆ ಇದು ಕಾಂಪಿಟೇಷನ್‌ ಅಲ್ಲ, ಕೊಲಾಬರೇಷನ್.‌ ರಕ್ಷಿತ್‌ ಶೆಟ್ಟಿಯ ತುಂಬ ದೊಡ್ಡ ಅಭಿಮಾನಿಯಲ್ಲಿ ನಾನೂ ಒಬ್ಬ. ರಕ್ಷಿತ್‌ ಶೆಟ್ಟಿ ಯಾವತ್ತು ಕನ್ನಡದಲ್ಲಿ ಉಳಿದವರು ಕಂಡಂತೆ ಸಿನಿಮಾ ಮಾಡಿದ್ರೋ, ಅದರಿಂದ ರಾಜ್‌ ಬಿ ಶೆಟ್ಟಿ ಮಂಗಳೂರು ಶೈಲಿಯಲ್ಲಿ ಸಿನಿಮಾ ಮಾಡೋಕೆ ಶುರು ಮಾಡಿದ. ಹಾಗಾಗಿ ಇಲ್ಲಿ ಕಾಂಪಿಟೇಷನ್‌ ಪ್ರಶ್ನೆಯೇ ಬರಲ್ಲ. ಯಾರ ಬಳಿ ಸ್ಫೂರ್ತಿ ಪಡೆದುಕೊಂಡಿರುತ್ತೇವೋ ಅವರ ಜತೆ ಯಾವ ಕಾಂಪಿಟೇಷನ್‌" ಎಂದು ಹೇಳಿಕೊಂಡಿದ್ದಾರೆ ರಾಜ್‌ ಶೆಟ್ಟಿ.

ಸೆಪ್ಟೆಂಬರ್‌ನಲ್ಲಿ ರಕ್ಷಿತ್‌ ಶೆಟ್ಟಿ ಸಿನಿಮಾ

ಇನ್ನು ರಕ್ಷಿತ್‌ ಶೆಟ್ಟಿ ಮತ್ತು ನಿರ್ದೇಶಕ ಹೇಮಂತ್‌ ರಾವ್‌ ಕಾಂಬಿನೇಷನ್‌ನ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಸಹ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ. ಎರಡು ಭಾಗಗಳಲ್ಲಿ ರಿಲೀಸ್‌ ಆಗಲಿರುವ ಈ ಸಿನಿಮಾದ ಮೊದಲ ಭಾಗ ಸೆಪ್ಟೆಂಬರ್‌ 1ಕ್ಕೆ ಬಿಡುಗಡೆ ಆದರೆ, ಎರಡನೇ ಭಾಗ ಅಕ್ಟೋಬರ್‌ 20ಕ್ಕೆ ಬಿಡುಗಡೆ ಆಗಲಿದೆ. ಹಲವು ಶೇಡ್‌ಗಳಲ್ಲಿ ಕಾಣಿಸಿಕೊಂಡಿರುವ ರಕ್ಷಿತ್‌, ಪಾತ್ರಕ್ಕಾಗಿ ತೂಕವನ್ನೂ ಹೆಚ್ಚಿಸಿಕೊಂಡಿದ್ದಾರೆ. ನಾಯಕಿಯರಾಗಿ, ರುಕ್ಮಿಣಿ ವಸಂತ್‌ ಚೈತ್ರಾ ಆಚಾರ್‌ ನಟಿಸಿದ್ದಾರೆ.

ಮನರಂಜನೆ ಕುರಿತ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಸಂಬಂಧಿತ ಲೇಖನ

ಮನರಂಜನೆ, ಬಿಗ್‌ಬಾಸ್ ಕನ್ನಡ 10 ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, ಹಿಂದೂಸ್ತಾನ್ ಟೈಮ್ಸ್ ಕನ್ನಡ ,ನೋಡಿ.