Rajamartanda Trailer: ಚಿರಂಜೀವಿ ಸರ್ಜಾರ ಕೊನೆಯ ಚಿತ್ರ ರಾಜಮಾರ್ತಾಂಡದ ಟ್ರೈಲರ್‌ ಬಿಡುಗಡೆ; ಮಿಸ್‌ ಯು ಚಿರು ಅಣ್ಣಾ ಎಂದ ಅಭಿಮಾನಿಗಳು
ಕನ್ನಡ ಸುದ್ದಿ  /  ಮನರಂಜನೆ  /  Rajamartanda Trailer: ಚಿರಂಜೀವಿ ಸರ್ಜಾರ ಕೊನೆಯ ಚಿತ್ರ ರಾಜಮಾರ್ತಾಂಡದ ಟ್ರೈಲರ್‌ ಬಿಡುಗಡೆ; ಮಿಸ್‌ ಯು ಚಿರು ಅಣ್ಣಾ ಎಂದ ಅಭಿಮಾನಿಗಳು

Rajamartanda Trailer: ಚಿರಂಜೀವಿ ಸರ್ಜಾರ ಕೊನೆಯ ಚಿತ್ರ ರಾಜಮಾರ್ತಾಂಡದ ಟ್ರೈಲರ್‌ ಬಿಡುಗಡೆ; ಮಿಸ್‌ ಯು ಚಿರು ಅಣ್ಣಾ ಎಂದ ಅಭಿಮಾನಿಗಳು

Rajamartanda Trailer Review: ಸ್ಯಾಂಡಲ್‌ವುಡ್‌ ನಟ ದಿ. ಚಿರಂಜೀವಿ ಸರ್ಜಾ ಅವರ ಕೊನೆಯ ಸಿನಿಮಾ ರಾಜಮಾರ್ತಾಂಡದ ಟ್ರೈಲರ್‌ ಬಿಡುಗಡೆಯಾಗಿದ್ದಾರೆ. ಸಖತ್‌ ಆಕ್ಷನ್‌ ಸೀನ್‌ಗಳಿರುವ ಈ ಟ್ರೈಲರ್‌ನಲ್ಲಿ ಚಿರಂಜೀವಿ ಸರ್ಜಾಗೆ ತಮ್ಮ ಧ್ರುವ ಸರ್ಜಾ ಧ್ವನಿ ನೀಡಿದ್ದಾರೆ. ಟ್ರೈಲರ್‌ನಲ್ಲಿ ಏನಿದೆ, ಅಭಿಮಾನಿಗಳ ಪ್ರತಿಕ್ರಿಯೆ ಹೇಗಿದೆ? ಇಲ್ಲಿದೆ ವಿವರ.

Rangamarthanda Trailer: ಚಿರಂಜೀವಿ ಸರ್ಜಾರ ಕೊನೆಯ ಚಿತ್ರ ರಾಜಮಾರ್ತಾಂಡದ ಟ್ರೈಲರ್‌ ಬಿಡುಗಡೆ
Rangamarthanda Trailer: ಚಿರಂಜೀವಿ ಸರ್ಜಾರ ಕೊನೆಯ ಚಿತ್ರ ರಾಜಮಾರ್ತಾಂಡದ ಟ್ರೈಲರ್‌ ಬಿಡುಗಡೆ

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ದಿವಂಗತ ಚಿರಂಜೀವಿ ಸರ್ಜಾ ಅವರ ಕೊನೆಯ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಚಿತ್ರತಂಡವು ರಾಜಮಾರ್ತಾಂಡ ಚಿತ್ರದ ಟ್ರೈಲರ್‌ ಬಿಡುಗಡೆ ಮಾಡಿದೆ. ಈ ಚಿತ್ರದಲ್ಲಿ ಅಣ್ಣ ಚಿರಂಜೀವಿ ಸರ್ಜಾ ಅವರಿಗೆ ತಮ್ಮ ಧ್ರುವ ಸರ್ಜಾ ಧ್ವನಿ ನೀಡಿದ್ದಾರೆ. ಸಾಹಸಮಯ ದೃಶ್ಯಗಳಿರುವ ಟ್ರೈಲರ್‌ ಕುರಿತು ಆನ್‌ಲೈನ್‌ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಕಷ್ಟು ಅಭಿಮಾನಿಗಳು ಈ ಟ್ರೈಲರ್‌ಗೆ "ಮಿಸ್‌ ಯು ಚಿರು ಅಣ್ಣಾ" ಎಂದು ಕಾಮೆಂಟ್‌ ಮಾಡಿದ್ದಾರೆ.

ರಾಜಮಾರ್ತಾಂಡ ಚಿತ್ರ ಅಕ್ಟೋಬರ್‌ 6ರಂದು ಬಿಡುಗಡೆ

ಈ ವಾರ ರಾಜಮಾರ್ತಾಂಡ ಚಿತ್ರವು ತೆರೆ ಕಾಣಲಿದೆ. ಧ್ರುವ ಸರ್ಜಾರ ಹುಟ್ಟುಹಬ್ಬದಂದೇ ಅಣ್ಣ ಚಿರಂಜೀವಿ ಸರ್ಜಾರ ಚಿತ್ರ ಬಿಡುಗಡೆಯಾಗುತ್ತಿರುವುದು ವಿಶೇಷ. ಇದಕ್ಕೆ ಪೂರ್ವಭಾವಿಯಾಗಿ ಚಿತ್ರತಂಡವು ಟ್ರೈಲರ್‌ ಬಿಡುಗಡೆ ಮಾಡಿದೆ. ರಾಮ್‌ನಾರಾಯಣ್‌ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಅವರ ಧ್ವನಿಯಿದೆ. ಅಣ್ಣ ಅಕಾಲಿಕವಾಗಿ ಮೃತಪಟ್ಟ ಬಳಿಕ ತಮ್ಮ ಧ್ರುವ ಸರ್ಜಾ ಈ ಚಿತ್ರದ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದರು.

ಹೇಗಿದೆ ರಾಜಮಾರ್ತಾಂಡ ಟ್ರೈಲರ್‌

"ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ. ರಾಜನ ಸ್ನೇಹಿತನೊಬ್ಬ ತಾನೇ ಆ ಊರಿಗೆ ರಾಜ ಆಗಬೇಕು ಎಂದು ಹೊಂಚು ಹಾಕಿ ಸಂಚು ಮಾಡಿದ. ಮುಂದೆ ಏನಾಯ್ತು ಹೇಳು ಅಜ್ಜಿ" ಎಂದು ಕಥೆ ಹೇಳುವ ಶೈಲಿಯಲ್ಲಿ ಟ್ರೈಲರ್‌ ಆರಂಭವಾಗುತ್ತದೆ. ದೇವರಾಜ್‌, ಶಂಕರ್‌ ಅಶ್ವಥ್‌ ಮೊದಲಾದವರೂ ಕಾಣಿಸುತ್ತಾರೆ. ಬಳಿಕ "ಈ ಯುವ ಸಾಮ್ರಾಟನ ಮುಂದೆ ನಿಂತು ಸಮರ ಸಾರುತ್ತಿರುವ ಸಿಂಗಳಿಕನೇ" ಎಂದು ಚಿರಂಜೀವಿ ಸರ್ಜಾರ ಆಕ್ಷನ್‌ ಸೀನ್‌ಗಳು ಆರಂಭವಾಗುತ್ತದೆ. "ನಿನ್ನ ಶವ ಯಾತ್ರೆ ಅಲ್ಲಿ ಸಿದ್ಧವಾಗಿದೆ" ಎಂದು ಶತ್ರುಗಳನ್ನು ಚಿಂದಿ ಚಿತ್ರಾನ್ನ ಮಾಡುವ ಸೀನ್‌ಗಳಿವೆ. ಫೈಟಿಂಗ್‌ ಸೀನ್‌ ಆದ ಬಳಿಕ "ಮೀಸೆ ತಿರುವುವ ಜಟ್ಟಿ ಫೈಲ್ವಾನ್‌" ಹಾಡಿನ ತುಣುಕು ಇದೆ. ನಂತರ ನಾಯಕಿ ದೀಪ್ತಿ ಸಾಥಿ ಎಂಟ್ರಿ ಆಗುತ್ತದೆ. "ನಿನ್ನನ್ನು ನೋಡಿದ ಬಳಿಕ ನನಗೆಲ್ಲ ಒಳ್ಳೆಯದೇ ಆಗುತ್ತದೆ" ಎಂದು ಪ್ರೇಮಯಾನ ಆರಂಭವಾಗುತ್ತದೆ. "ಸಂಭಾಳಿಸು, ಸಂಭಾಳಿಸು, ನೀನು ಚೂರಾದರೂ ನನ್ನ ಸಂಭಾಳಿಸು" ಹಾಡಿನ ದೃಶ್ಯವಿದೆ. ಈ ಜಾಗದ ನಿಜವಾದ ಓನರ್‌ ಬಂದಿದ್ದಾನೆ ಎಂದು ಚಿಕ್ಕಣ್ಣನ ಎಂಟ್ರಿ ಆಗುತ್ತದೆ. ಇಲ್ಲಿಂದ ಬಳಿಕ ಮೆಂಟಲ್‌ ಶಿವನಾಗಿ ಭಜರಂಗಿ ಲೋಕಿಯ ಎಂಟ್ರಿ ಆಗುತ್ತದೆ. ಮತ್ತೆ ಫೈಟಿಂಗ್‌ ಮೇಲೈಸುತ್ತದೆ. ಹೆಡ್‌ಫೋನ್‌ ಹಾಕಿಕೊಂಡು ಟ್ರೈಲರ್‌ ನೋಡಿದರೆ ಬಿಜಿಎಂ ಕೂಡ ಇಷ್ಟವಾಗುತ್ತದೆ.

ರಾಜಮಾರ್ತಾಂಡ ತಾರಾಗಣ

ಚಿರಂಜೀವಿ ಸರ್ಜಾ ಅವರ ಕೊನೆಯ ಚಿತ್ರದಲ್ಲಿ ಭಜರಂಗಿ ಲೋಕಿ, ಚಿಕ್ಕಣ್ಣ, ದೇವರಾಜ್, ಸುಮಿತ್ರಾ, ಶಂಕರ್ ಅಶ್ವತ್ಥ್‌, ವಿನೀತ್ ಕುಮಾರ್ (ಬಾಂಬೆ) ಮೊದಲಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ದೀಪ್ತಿ‌ ಸಾಥಿ, ಮೇಘಶ್ರೀ, ರುಷಿಕಾ ರಾಜ್ ನಾಯಕಿಯರು. ಕೆ. ರಾಮ್‌ ನಾರಾಯಣ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯಿದೆ. ಪ್ರಣವ್ ಗೌಡ. ಎನ್, ನಿವೇದಿತಾ ಹಾಗೂ ಶಿವಕುಮಾರ್ ನಿರ್ಮಾಣದ ಈ ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತವಿದೆ. ಧನು ವಿಶ್‌ ಹಿನ್ನೆಲೆ ಸಂಗೀತ, ಕೆ. ಗಣೇಶ್‌ ಛಾಯಾಗ್ರಹಣವಿದೆ.

ರಾಜಮಾರ್ತಾಂಡ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದ ಚಿರು, ಸಿನಿಮಾದ ಚಿತ್ರೀಕರಣವನ್ನೂ ಮುಗಿಸಿದ್ದರು. ಆದರೆ, ಅವರ ಅಕಾಲಿಕ ನಿಧನದಿಂದ ಸಿನಿಮಾ ಕೆಲಸಗಳು ಕೆಲ ತಿಂಗಳು ಸ್ಥಗಿತಗೊಂಡವು. ಬಳಿಕ ಅದೇ ಚಿತ್ರದ ಬಾಕಿ ಉಳಿದಿದ್ದ ಡಬ್ಬಿಂಗ್ ಕೆಲಸವನ್ನು ಧ್ರುವ ಸರ್ಜಾ ನೆರವೇರಿಸಿಕೊಟ್ಟಿದ್ದರು.

ಟ್ರೈಲರ್‌ಗೆ ಅಭಿಮಾನಿಗಳ ಪ್ರತಿಕ್ರಿಯೆ

ರಾಜಮಾರ್ತಾಂಡ ಟ್ರೈಲರ್‌ಗೆ ಯೂಟ್ಯೂಬ್‌ನಲ್ಲಿ ನೂರಾರು ಕಾಮೆಂಟ್‌ಗಳು ಬಂದಿವೆ. "ಅಪ್ಪು ಚಿರು ಯಾವಾಗ್ಲೂ ಕನ್ನಡಿಗರ ಹೃದಯದಲ್ಲಿ ಇರ್ತಾರೆ. ಚಿರು ಚಂದ್ರಲೇಖ ಮೂವಿ ನನ್ ಫೇವರಿಟ್ ಮೂವಿ" ಎಂದು ಧನುಶ್‌ ಎಂಬವರು ಕಾಮೆಂಟ್‌ ಮಾಡಿದ್ದಾರೆ. "ಕಣ್ಣಲ್ಲಿ ನೀರು ಬರುತ್ತೆ. ಶುಭವಾಗಲಿ ಚಿರಂಜೀವ" ಎಂದು ಸಾಕಷ್ಟು ಜನರು ಕಾಮೆಂಟ್‌ ಮಾಡಿದ್ದಾರೆ. "ಬರುತ್ತಿದ್ದಾರೆ ಚಿರು ಬಾಸ್ ದಾರಿ ಬಿಡ್ರೋ" ಎಂಬ ಹಲವು ಕಾಮೆಂಟ್‌ಗಳು ಬಂದಿವೆ. ಒಟ್ಟಾರೆ, ಚಿರು ಸಿನಿಮಾ ಈ ಶುಕ್ರವಾರ ಚಿತ್ರಮಂದಿರಗಳಲ್ಲಿ ದೊಡ್ಡ ಸದ್ದು ಮಾಡುವ ಸೂಚನೆ ದಟ್ಟವಾಗಿದೆ.ರಾಜಮಾರ್ತಾಂಡ ತಾರಾಗಣ

ಚಿರಂಜೀವಿ ಸರ್ಜಾ ಅವರ ಕೊನೆಯ ಚಿತ್ರದಲ್ಲಿ ಭಜರಂಗಿ ಲೋಕಿ, ಚಿಕ್ಕಣ್ಣ, ದೇವರಾಜ್, ಸುಮಿತ್ರಾ, ಶಂಕರ್ ಅಶ್ವತ್ಥ್‌, ವಿನೀತ್ ಕುಮಾರ್ (ಬಾಂಬೆ) ಮೊದಲಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ದೀಪ್ತಿ‌ ಸಾಥಿ, ಮೇಘಶ್ರೀ, ರುಷಿಕಾ ರಾಜ್ ನಾಯಕಿಯರು. ಕೆ. ರಾಮ್‌ ನಾರಾಯಣ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯಿದೆ. ಪ್ರಣವ್ ಗೌಡ. ಎನ್, ನಿವೇದಿತಾ ಹಾಗೂ ಶಿವಕುಮಾರ್ ನಿರ್ಮಾಣದ ಈ ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತವಿದೆ. ಧನು ವಿಶ್‌ ಹಿನ್ನೆಲೆ ಸಂಗೀತ, ಕೆ. ಗಣೇಶ್‌ ಛಾಯಾಗ್ರಹಣವಿದೆ.

ರಾಜಮಾರ್ತಾಂಡ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದ ಚಿರು, ಸಿನಿಮಾದ ಚಿತ್ರೀಕರಣವನ್ನೂ ಮುಗಿಸಿದ್ದರು. ಆದರೆ, ಅವರ ಅಕಾಲಿಕ ನಿಧನದಿಂದ ಸಿನಿಮಾ ಕೆಲಸಗಳು ಕೆಲ ತಿಂಗಳು ಸ್ಥಗಿತಗೊಂಡವು. ಬಳಿಕ ಅದೇ ಚಿತ್ರದ ಬಾಕಿ ಉಳಿದಿದ್ದ ಡಬ್ಬಿಂಗ್ ಕೆಲಸವನ್ನು ಧ್ರುವ ಸರ್ಜಾ ನೆರವೇರಿಸಿಕೊಟ್ಟಿದ್ದರು.

ಟ್ರೈಲರ್‌ಗೆ ಅಭಿಮಾನಿಗಳ ಪ್ರತಿಕ್ರಿಯೆ

ರಾಜಮಾರ್ತಾಂಡ ಟ್ರೈಲರ್‌ಗೆ ಯೂಟ್ಯೂಬ್‌ನಲ್ಲಿ ನೂರಾರು ಕಾಮೆಂಟ್‌ಗಳು ಬಂದಿವೆ. "ಅಪ್ಪು ಚಿರು ಯಾವಾಗ್ಲೂ ಕನ್ನಡಿಗರ ಹೃದಯದಲ್ಲಿ ಇರ್ತಾರೆ. ಚಿರು ಚಂದ್ರಲೇಖ ಮೂವಿ ನನ್ ಫೇವರಿಟ್ ಮೂವಿ" ಎಂದು ಧನುಶ್‌ ಎಂಬವರು ಕಾಮೆಂಟ್‌ ಮಾಡಿದ್ದಾರೆ. "ಕಣ್ಣಲ್ಲಿ ನೀರು ಬರುತ್ತೆ. ಶುಭವಾಗಲಿ ಚಿರಂಜೀವ" ಎಂದು ಸಾಕಷ್ಟು ಜನರು ಕಾಮೆಂಟ್‌ ಮಾಡಿದ್ದಾರೆ. "ಬರುತ್ತಿದ್ದಾರೆ ಚಿರು ಬಾಸ್ ದಾರಿ ಬಿಡ್ರೋ" ಎಂಬ ಹಲವು ಕಾಮೆಂಟ್‌ಗಳು ಬಂದಿವೆ. ಒಟ್ಟಾರೆ, ಚಿರು ಸಿನಿಮಾ ಈ ಶುಕ್ರವಾರ ಚಿತ್ರಮಂದಿರಗಳಲ್ಲಿ ದೊಡ್ಡ ಸದ್ದು ಮಾಡುವ ಸೂಚನೆ ದಟ್ಟವಾಗಿದೆ.

Whats_app_banner