ಮೊದಲ ಬಾರಿಗೆ Vlog ಆರಂಭಿಸಿದ ರಕ್ಷಕ್‌ ಬುಲೆಟ್‌; ಕ್ರಿಸ್ಟಿಯಾನೊ ರೊನಾಲ್ಡೊ ಯೂಟ್ಯೂಬ್‌ ದಾಖಲೆ ಉಡೀಸ್‌ ಮಾಡ್ತಿ ಅಂದ ನೆಟ್ಟಿಗರು-sandalwood news rakshak bullet first vlog netizens says you will break cristiano ronaldo youtube record pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಮೊದಲ ಬಾರಿಗೆ Vlog ಆರಂಭಿಸಿದ ರಕ್ಷಕ್‌ ಬುಲೆಟ್‌; ಕ್ರಿಸ್ಟಿಯಾನೊ ರೊನಾಲ್ಡೊ ಯೂಟ್ಯೂಬ್‌ ದಾಖಲೆ ಉಡೀಸ್‌ ಮಾಡ್ತಿ ಅಂದ ನೆಟ್ಟಿಗರು

ಮೊದಲ ಬಾರಿಗೆ Vlog ಆರಂಭಿಸಿದ ರಕ್ಷಕ್‌ ಬುಲೆಟ್‌; ಕ್ರಿಸ್ಟಿಯಾನೊ ರೊನಾಲ್ಡೊ ಯೂಟ್ಯೂಬ್‌ ದಾಖಲೆ ಉಡೀಸ್‌ ಮಾಡ್ತಿ ಅಂದ ನೆಟ್ಟಿಗರು

Cristiano Ronaldo youtube record: ಬಿಗ್‌ಬಾಸ್‌ ಕನ್ನಡ 10ರ ಸ್ಪರ್ಧಿಯಾಗಿದ್ದ ರಕ್ಷಕ್‌ ಬುಲೆಟ್‌ ಆರಂಭಿಸಿದ ಮೊದಲ ವ್ಲಾಗ್‌ಗೆ ಸೋಷಿಯಲ್‌ ಮೀಡಿಯಾ ಬಳಕೆದಾರರು ಸಾಕಷ್ಟು ಕಾಮೆಂಟ್‌ ಮಾಡಿದ್ದಾರೆ. ಕೆಲವರು ನೀನು ಕ್ರಿಸ್ಟಿಯಾನೊ ರೊನಾಲ್ಡೊ ದಾಖಲೆ ಮೀರಿಸ್ತಿ ಎಂದು ಹೇಳಿದ್ದಾರೆ.

ಮೊದಲ ಬಾರಿಗೆ Vlog ಆರಂಭಿಸಿದ ರಕ್ಷಕ್‌ ಬುಲೆಟ್‌
ಮೊದಲ ಬಾರಿಗೆ Vlog ಆರಂಭಿಸಿದ ರಕ್ಷಕ್‌ ಬುಲೆಟ್‌

ಬೆಂಗಳೂರು: ಇನ್‌ಸ್ಟಾಗ್ರಾಂ, ಫೇಸ್‌ಬುಕ್‌, ಯೂಟ್ಯೂಬ್‌ನಲ್ಲಿ ವ್ಲಾಗ್‌ ಮೂಲಕ ಪ್ರತಿನಿತ್ಯ ಅಪ್‌ಡೇಟ್‌ ನೀಡುವ ಅಭ್ಯಾಸವನ್ನು ಸಾಕಷ್ಟು ಜನರು ಬೆಳೆಸಿಕೊಂಡಿದ್ದಾರೆ. ಕೆಲವು ಸೆಲೆಬ್ರಿಟಿಗಳು ತಮ್ಮ ಪ್ರತಿನಿತ್ಯದ ದಿನಚರಿಯ ಅಪ್‌ಡೇಟ್‌ ಅನ್ನು ವ್ಲಾಗ್‌ ಮೂಲಕ ನೀಡುತ್ತಾರೆ. ದಿವಂಗತ ಬುಲೆಟ್‌ ಪ್ರಕಾಶ್‌ ಪುತ್ರ ರಕ್ಷಕ್‌ ಬುಲೆಟ್‌ ಕೂಡ ಇಂತಹ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಇವರ ಮೊದಲ ದಿನದ ವ್ಲಾಗ್‌ಗೆ ಕ್ರಿಸ್ಟಿಯಾನೊ ರೊನಾಲ್ಡೊ ಯೂಟ್ಯೂಬ್‌ ದಾಖಲೆ (Cristiano Ronaldo youtube record) ನೀನು ಉಡೀಸ್‌ ಮಾಡಬಹುದು ಎಂದು ಸಾಕಷ್ಟು ಜನರು ಕಾಮೆಂಟ್‌ ಮಾಡಿದ್ದಾರೆ.

ಮೊದಲ ವ್ಲಾಗ್‌ ವಿಡಿಯೋ ಆರಂಭಿಸಿದ ರಕ್ಷಕ್‌ ಬುಲೆಟ್‌

ಮೊದಲ ವ್ಲಾಗ್‌ನಲ್ಲಿ ತನ್ನ ಎಂದಿನ ಶೈಲಿಯಲ್ಲಿ ಮಾತನಾಡಿದ್ದಾರೆ ರಕ್ಷಕ್‌ ಬುಲೆಟ್‌. ಪ್ಲಾಸ್ಕ್‌ನಲ್ಲಿ ಕಾಫಿ ಮಾಡಲು ಹೋದದ್ದು, ಅನ್ನ ಮಾಡುವ ಸಮಯದಲ್ಲಿ ಅಣ್ಣಾವ್ರ ಸಾಂಗ್‌ ಹಾಕ್ತಾ ಇರ್ತಿನಿ, ನಮಗೂ ಟೈಂ ಬರುತ್ತೆ, ಆಮೇಲೆ ನಾವೂ ಹೇಳ್ತಿವಿ ಎಂದೆಲ್ಲ ವ್ಲಾಗ್‌ನಲ್ಲಿ ತನ್ನ ಆಪ್ತರ ಜತೆ ವಿಡಿಯೋ ಮಾಡಿದ್ದಾರೆ. ವಿಡಿಯೋದಲ್ಲಿ ಅಂತಹ ಕಂಟೆಂಟ್‌ ಇಲ್ಲದೆ ಇದ್ದರೂ ಇವರ ಪೋಸ್ಟ್‌ಗೆ ಬಂದಿರುವ ಕೆಲವು ಕಾಮೆಂಟ್‌ಗಳು ಎಲ್ಲರ ಗಮನ ಸೆಳೆದಿವೆ.

ಒಬ್ಬರು "ಉತ್ತಮ ಪ್ರಯತ್ನ, ಇನ್ನೊಮ್ಮೆ ಪ್ರಯತ್ನಿಸಬೇಡಿ" ಎಂದಿದ್ದಾರೆ. ಅದಕ್ಕೆ ಪ್ರತಿಯಾಗಿ ರಕ್ಷಕ್‌ "ಉತ್ತಮ ಕಾಮೆಂಟ್‌, ಇನ್ನೊಮ್ಮೆ ಕಾಮೆಂಟ್‌ ಮಾಡಬೇಡಿ" ಎಂದು ಉತ್ತರ ನೀಡಿದ್ದಾರೆ. "ರೊನಾಲ್ಡ್‌ ರೆಕಾರ್ಡ್‌ ಮುರಿಯುವ ಏಕೈಕ ವ್ಯಕ್ತಿ ರಕ್ಷಕ್‌ ಕೋಟೆ ಕಣೋ" ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. "ರೋನಾಲ್ಡೊ ಯೂಟೂಬ್ ದಾಖಲೆ ಪುಡಿ ಪುಡಿ ಮಾಡಿ ಮುನ್ನುಗ್ಗುತಿರುವ ರಕ್ಷಕ್ ಅಣ್ಣನಿಗೆ ಅಭಿನಂದನೆಗಳು" ಎಂದೆಲ್ಲ ಸಾಕಷ್ಟು ಜನರು ಕಾಮೆಂಟ್‌ ಮಾಡಿದ್ದಾರೆ.

ಕ್ರಿಸ್ಟಿಯಾನೊ ರೊನಾಲ್ಡೊ ದಾಖಲೆ ಏನು?

ಇತ್ತೀಚೆಗೆ ಖ್ಯಾತ ಫುಟ್‌ಬಾಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಯೂಟ್ಯೂಬ್‌ನಲ್ಲಿ ಖಾತೆ ಆರಂಭಿಸಿದ್ದರು. ಈಗಾಗಲೇ ಎಕ್ಸ್‌, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ ಮುಂತಾದ ಕಡೆ ದಾಖಲೆ ಪ್ರಮಾಣದಲ್ಲಿ ಇವರು ಇತ್ತೀಚೆಗೆ ಯೂಟ್ಯೂಬ್‌ಗೆ ಆಗಮಿಸಿದ್ದರು. ಯೂಟ್ಯೂಬ್‌ ಆರಂಭಿಸಿರುವ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಒಂದೇ ಗಂಟೆಯಲ್ಲಿ 10 ಲಕ್ಷ ಚಂದಾದಾರರನ್ನು ಇವರು ಪಡೆದು ದಾಖಲೆ ನಿರ್ಮಿಸಿದ್ದರು. 24 ಗಂಟೆಯಲ್ಲಿ ಒಂದು ಕೋಟಿ ಸಬ್‌ಸ್ಕ್ರೈಬರ್‌ಗಳನ್ನು ಪಡೆದಿದರು. ಒಂದೇ ದಿನದಲ್ಲಿ ಗೂಲ್ಡನ್‌ ಯೂಟ್ಯೂಬ್‌ ಪ್ಲೇ ಬಟನ್‌ ಪಡೆದಿದ್ದರು. ಇದೇ ದಾಖಲೆಯನ್ನು ನೆನಪಿಸಿಕೊಂಡು ಸೋಷಿಯಲ್‌ ಮೀಡಿಯಾ ಬಳಕೆದಾರರು ರಕ್ಷಕ್‌ ಬುಲೆಟ್‌ ಮೊದಲ ವ್ಲಾಗ್‌ಗೆ ಕಾಮೆಂಟ್‌ ಮಾಡಿದ್ದಾರೆ.

ಇದೀಗ ಬಂದ ಅಪ್‌ಡೇಟ್‌ ಪ್ರಕಾರ Cristiano Ronaldo ಅವರು ಯೂಟ್ಯೂಬ್‌ ಆರಂಭಿಸಿದ ಎರಡೇ ದಿನದಲ್ಲಿ 30 ದಶಲಕ್ಷ ಅಂದರೆ 3 ಕೋಟಿ ಚಂದಾದಾರರನ್ನು ಹೊಂದಿದ್ದಾರೆ.

ರಕ್ಷಕ್‌ ಬುಲೆಟ್‌ ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಸ್ಪರ್ಧಿಯಾಗಿದ್ದರು. ಕೆಲವು ವಾರ ಮನೆಯಲ್ಲಿದ್ದ ಇವರು ಹಲವು ಕಾರಣಗಳಿಂದ ಸುದ್ದಿಯಲ್ಲಿದ್ದಾರೆ. ಬಿಗ್‌ಬಾಸ್‌ನಿಂದ ಹೊರನಡೆದ ಬಳಿಕವೂ ಕೆಲವೊಂದು ಕಾರಣಗಳಿಂದ ಸುದ್ದಿಯಲ್ಲಿದ್ದರು. ಇತ್ತೀಚೆಗೆ ತನ್ನ ಆರ್‌ಬಿ 01 ಎಂಬ ಹೆಸರಿಡದ ಸಿನಿಮಾದ ಕುರಿತು ಘೋಷಿಸಿದ್ದರು. ದಿವಂಗತ “ಬುಲೆಟ್ ಪ್ರಕಾಶ್” ರವರ 47ನೇ ಜನ್ಮದಿನದ ಸಮಯದಲ್ಲಿ ಈ ಹೊಸ ಚಿತ್ರದ ಕುರಿತು ಮಾಹಿತಿ ನೀಡಿದ್ದರು.