ಕನ್ನಡ ಸುದ್ದಿ  /  ಮನರಂಜನೆ  /  ಸುದೀಪಣ್ಣನ ಫಿಲ್ಮ್‌ ರಿಲೀಸ್‌ ಆದಾಗ ದರ್ಶನ್‌ ಫ್ಯಾನ್ಸ್‌ ನೋಡ್ತಾರೆ, ಸ್ಟಾರ್‌ ವಾರ್‌ ಏನೂ ಇಲ್ಲ; ರಕ್ಷಕ್‌ ಬುಲೆಟ್‌ ಹೀಗಂದ್ರು

ಸುದೀಪಣ್ಣನ ಫಿಲ್ಮ್‌ ರಿಲೀಸ್‌ ಆದಾಗ ದರ್ಶನ್‌ ಫ್ಯಾನ್ಸ್‌ ನೋಡ್ತಾರೆ, ಸ್ಟಾರ್‌ ವಾರ್‌ ಏನೂ ಇಲ್ಲ; ರಕ್ಷಕ್‌ ಬುಲೆಟ್‌ ಹೀಗಂದ್ರು

ದರ್ಶನ್‌, ಸುದೀಪ್‌ ಫ್ಯಾನ್ಸ್‌ ವಾರ್‌ ಬಗ್ಗೆ ದಿವಂಗತ ಬುಲೆಟ್‌ ಪ್ರಕಾಶ್‌ ಪುತ್ರ ರಕ್ಷಕ್‌ ಬುಲೆಟ್‌ ಮಾತನಾಡಿದ್ದಾರೆ. "ಈ ಫ್ಯಾನ್‌ ವಾರ್‌ ಗೀರು ಏನೂ ಇಲ್ಲ. ಎಲ್ಲರ ಸಿನಿಮಾ ಬಿಡುಗಡೆಯಾದಗ ಎಲ್ಲರೂ ನೋಡುತ್ತಾರೆ" ಎಂದು ಹೇಳಿದ್ದಾರೆ.

ಸ್ಟಾರ್‌ ವಾರ್‌ ಏನೂ ಇಲ್ಲ; ರಕ್ಷಕ್‌ ಬುಲೆಟ್‌ ಅಭಿಪ್ರಾಯ
ಸ್ಟಾರ್‌ ವಾರ್‌ ಏನೂ ಇಲ್ಲ; ರಕ್ಷಕ್‌ ಬುಲೆಟ್‌ ಅಭಿಪ್ರಾಯ

ಬೆಂಗಳೂರು: ಕನ್ನಡ ನಟ ದರ್ಶನ್‌, ಸುದೀಪ್‌ ಫ್ಯಾನ್ಸ್‌ ವಾರ್‌ ಬಗ್ಗೆ ದಿವಂಗತ ಬುಲೆಟ್‌ ಪ್ರಕಾಶ್‌ ಪುತ್ರ ರಕ್ಷಕ್‌ ಬುಲೆಟ್‌ ಮಾತನಾಡಿದ್ದಾರೆ. "ಈ ಫ್ಯಾನ್‌ ವಾರ್‌ ಗೀರು ಏನೂ ಇಲ್ಲ. ಎಲ್ಲರ ಸಿನಿಮಾ ಬಿಡುಗಡೆಯಾದಗ ಎಲ್ಲರೂ ನೋಡುತ್ತಾರೆ. ಉದಾಹರಣೆಗೆ ಸುದೀಪಣ್ಣನ ಸಿನಿಮಾ ರಿಲೀಸ್‌ ಆದಾಗ ಬಾಸ್‌ (ದರ್ಶನ್‌) ಫ್ಯಾನ್ಸ್‌ ನೋಡ್ತಾರೆ. ಶಿವಣ್ಣನ ಅಭಿಮಾನಿಗಳೂ ನೋಡ್ತಾರೆ. ಅಂಬರೀಶ್‌ ಫ್ಯಾನ್ಸ್‌ ಹೋಗಿ ಸಿನಿಮಾ ನೋಡಿಕೊಂಡು ಬರ್ತಾರೆ.. ಎಲ್ಲರೂ ಎಲ್ಲರ ಸಿನಿಮಾ ನೋಡ್ತಾರೆ. ಫ್ಯಾನ್ಸ್‌ ವಾರ್‌ ಏನೂ ಇಲ್ಲ" ಎಂದು ಯೂಟ್ಯೂಬ್‌ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಕ್ಷಕ್‌ ಬುಲೆಟ್‌ ಹೇಳಿದ್ದಾರೆ.

ಕಾಮೆಂಟ್ಸ್‌ನಲ್ಲಿ ಹಾಕುವುದು ಫ್ಯಾನ್ಸ್‌ ವಾರ್‌ ಅಲ್ಲ. ಕಾಮೆಂಟ್‌ ಒಬ್ಬ ಹಾಕಬಹುದು, ಹತ್ತು ಜನ ಹಾಕಬಹುದು, ಲಕ್ಷ ಹಾಕಬಹುದು. ಕೆಟ್ಟ ಕಾಮೆಂಟ್‌ ಸ್ಟಾಪ್‌ ಮಾಡೋಕ್ಕೆ ಆಗೋಲ್ಲ. ಕಾಮೆಂಟ್ಸ್‌ ಹಾಕೋದೇ ಅವರ ಡ್ಯೂಟಿ. ಈ ವಿಡಿಯೋಗೂ ಹತ್ತು ಕಾಮೆಂಟ್‌ ಬರುತ್ತೆ ನೋಡಿ" ಎಂದು ರಕ್ಷಕ್‌ ಬುಲೆಟ್‌ ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಇದೇ ಸಮಯದಲ್ಲಿ ದರ್ಶನ್‌ ಬಾಸ್‌ ಕಷ್ಟದಲ್ಲಿರುವಾಗ ಸುಮ್ಮನೆ ಕುಳಿತುಕೊಳ್ಳಲು ಆಗೋದಿಲ್ಲ ಎಂದು ಹೇಳಿದ್ದಾರೆ. "ಕಾಮೆಂಟ್‌ ಹಾಕುವವರು ಹಾಕ್ತಾ ಇರ್ತಾರೆ. ಅದನ್ನು ತಡೆಯೋಕ್ಕೆ ಆಗೋದಿಲ್ಲ. ಹಾಗಂತ, ನಾವು ಸುಮ್ಮನಿರಲು ಆಗೋದಿಲ್ಲ. ನಮ್ಮವರು ಯಾರಾದರೂ ಕಷ್ಟದಲ್ಲಿರುವಾಗ ಸುಮ್ಮನೆ ಇರಲು ಆಗೋದಿಲ್ಲ. ಎಲ್ಲೋ ಕುಳಿತುಕೊಂಡು ಬಿಡಪ್ಪ ಹಿಂಗೆ ಆಯ್ತಲ್ಲ ಎಂದು ಸುಮ್ಮನಿದ್ದು ಇರಲು ಆಗುವುದಿಲ್ಲ. ಆಗಿದೆ, ತಪ್ಪು ಆಗಿದೆ, ಅದನ್ನೇ ಪದೇ ಪದೇ ಕಾಮೆಂಟ್‌ ಮಾಡ್ತಾ ಇರೋದು, ಕೆಟ್ಟದಾಗಿ ಟ್ರೋಲ್‌ ಮಾಡೋದು ಇವೆಲ್ಲ ಮಾಡಬಾರದು. ದಯವಿಟ್ಟು ಯಾರೂ ಮಾಡಬೇಡಿ, ಪ್ಲೀಸ್‌" ಎಂದು ರಕ್ಷಕ್‌ ಬುಲೆಟ್‌ ಕೋರಿದ್ದಾರೆ.

ನಮ್ಮ ಬಾಸ್‌ನಿಂದ ತಪ್ಪಾಗಿದೆ

"ತಪ್ಪಾಗಿದೆ, ನಮ್ಮ ಬಾಸ್‌ ತಪ್ಪು ಮಾಡಿಲ್ಲ ಎಂದು ಹೇಳಿಕೊಂಡು ನಾವು ತಿರುಗಾಡುತ್ತಿಲ್ಲ. ಯಾವುದೋ ಘಟನೆ ಆಗಬಾರದಿತ್ತು. ಕೆಟ್ಟ ಗಳಿಗೆಯಲ್ಲಿ ಆಗಿ ಹೋಗಿದೆ. ನಮ್ಮ ಮನಸ್ಸಿಗೆ ಹತ್ತಿರವಾಗಿರುವವರು ಯಾರಾದರೂ ಕಷ್ಟಪಡ್ತಾ ಇದ್ರೆ ನಾವು ಸಂಭ್ರಮ ಆಚರಿಸಿಕೊಂಡು ಪಾರ್ಟಿ ಆಚರಿಸಿಕೊಂಡು ಇರಲು ಆಗೋದಿಲ್ಲ. ಇದೇ ಕಾರಣಕ್ಕೆ ನನ್ನ ಹುಟ್ಟುಹಬ್ಬದಂದು ನಾನು ಏನು ಮಾಡಬೇಕೋ, ಅನಾಥಶ್ರಾಮಕ್ಕೆ ಎಲ್ಲ ನೀಡಿದ್ದೇನೆ, ಏನು ಬೇಕೋ ಮಾಡಿದ್ದೇನೆ" ಎಂದು ಇತ್ತೀಚೆಗೆ ರಕ್ಷಕ್‌ ಬುಲೆಟ್‌ ಹೇಳಿದ್ದರು.

ಸದ್ಯ ರಕ್ಷಕ್‌ ಬುಲೆಟ್‌ ಅವರು ಯಾವ ಸಿನಿಮಾ ಮಾಡುತ್ತಿದ್ದಾರೆ? ಈ ಪ್ರಶ್ನೆಗೂ ಉತ್ತರಿಸಿದ್ದಾರೆ. ಈಗಷ್ಟೇ ಫೋಟೋಶೂಟ್‌ ಮಾಡಿಕೊಂಡು ಬಂದಿದ್ದೇನೆ. ಆರ್‌ಬಿ01 ಎಂಬ ಸಿನಿಮಾ ಮಾಡ್ತಾ ಇದ್ದೇವೆ. ಸಿನಿಮಾ ಅರ್ಜೆಂಟಾಗಿ ಮಾಡ್ತಾ ಇಲ್ಲ. ಮೆಲ್ಲಗೆ ಮಾಡೋಣ, ಅರ್ಜೆಂಟಾಗಿ ಮಾಡಿ ಏನಾದರೂ ಆಗೋದು ಬೇಡ ಅಂತ" ಎಂದು ಅವರು ತಿಳಿಸಿದ್ದಾರೆ.

"ನನಗೆ ಮೊದಲ ಬಾಸ್‌ ನಮ್ಮಪ್ಪ. ಎರಡನೇ ಬಾಸ್‌ ಡಿ ಬಾಸ್‌. ಇವತ್ತಿಗೂ ಅದೇ ಇರುತ್ತದೆ. ಯಾವುದೇ ಜಗಳ ಆಗಿರಬಹುದು, ಇನ್ನೊಂದು ಆಗಿರಬಹುದು, ಅದನ್ನು ನೋಡಿ ನಾನು ಫ್ಯಾನ್‌ ಆಗಿಲ್ಲ. ಯಾವತ್ತಿಗೂ ನಾನು ಇದೇ ರೀತಿ ಇರುತ್ತೇನೆ. ಚಿಕ್ಕದಿನಿಂದ ಅವರನ್ನು ನೋಡ್ಕೊಂಡು ಫ್ಯಾನ್‌ ಆಗಿದ್ದೋನು. ಮಜಾ ಟಾಕೀಸ್‌ನಲ್ಲೂ ಬಾಸ್‌ ಅಂದಿದ್ದೆ, ಸೂಪರ್‌ ಮಿನಿಟ್‌ನಲ್ಲೂ ಬಾಸ್‌ ಅಂದಿದ್ದೆ, ಎಲ್ಲಾ ಇಂಟರ್‌ವ್ಯೂನಲ್ಲೂ ಬಾಸ್‌ ಅಂದಿದ್ದೆ. ಇಂದಿಗೂ ಎಂದಿಗೂ ಮುಂದಿಗೂ ಬಾಸ್‌ ಆಗಿರ್ತಾರೆ" ಎಂದು ಅವರು ಹೇಳಿದ್ದಾರೆ.