ಕನ್ನಡ ಸುದ್ದಿ  /  Entertainment  /  Sandalwood News Rakshit Shetty Rishab Shetty Bags Siima Awards Siima Awards 2023 Kannada Winners Complete List Mnk

SIIMA 2023 Kannada Winners List: ಸ್ಯಾಂಡಲ್‌ವುಡ್‌ ಮಂದಿಗೆ ಸೈಮಾ ಪ್ರಶಸ್ತಿ ಪುಳಕ; ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ

siima Awards 2023 Kannada: 2023ರ ಸಾಲಿನ ಸೈಮಾ ಪ್ರಶಸ್ತಿ ಘೋಷಣೆ ಆಗಿದೆ. ದುಬೈನಲ್ಲಿ ನಡೆದ ಕಲರ್‌ಫುಲ್‌ ಕಾರ್ಯಕ್ರಮದಲ್ಲಿ ಸೌತ್‌ ಸಿನಿಮಾರಂಗದ ತಾರೆಯರ ಮಹಾ ಸಂಗಮವಾಗಿತ್ತು. ಆ ಪೈಕಿ ಸೆ. 15ರಂದು ಕನ್ನಡ ಮತ್ತು ತೆಲುಗು ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಯ್ತು. ಕನ್ನಡದಲ್ಲಿ ಯಾರಿಗೆಲ್ಲ ಸೈಮಾ ಅವಾರ್ಡ್‌ ಸಿಕ್ಕಿತು. ಇಲ್ಲಿದೆ ಸಂಪೂರ್ಣ ವಿಜೇತರ ಪಟ್ಟಿ.

SIIMA Awards 2023 winners list: ಸ್ಯಾಂಡಲ್‌ವುಡ್‌ ಮಂದಿಗೆ ಸೈಮಾ ಪ್ರಶಸ್ತಿ ಪುಳಕ; ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ
SIIMA Awards 2023 winners list: ಸ್ಯಾಂಡಲ್‌ವುಡ್‌ ಮಂದಿಗೆ ಸೈಮಾ ಪ್ರಶಸ್ತಿ ಪುಳಕ; ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ

SIIMA Awards 2023: ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಸೈಮಾ (South Indian International Movie Awards) ಅವಾರ್ಡ್‌ ಕಾರ್ಯಕ್ರಮ ಈ ಬಾರಿ ದುಬೈನಲ್ಲಿ ಆಯೋಜನೆ ಗೊಂಡಿದೆ. ಸೌತ್‌ನ ನಾಲ್ಕೂ ಭಾಷೆಗಳ ತಾರೆಯರು ಒಂದೇ ಕಡೆ ಸೇರಿ ಸೈಮಾ ಸಿನಿಮಾಹಬ್ಬವನ್ನು ಆಚರಿಸಿದರು. 2022ರಲ್ಲಿ ಬಿಡುಗಡೆಯಾದ ಸಿನಿಮಾಗಳಿಗೆ ಈ ಸಲ ಪ್ರಶಸ್ತಿ ನೀಡಲಾಗಿದೆ. ಸೆ. 15ರಂದು ಕನ್ನಡ ಮತ್ತು ತೆಲುಗು ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ. ಸೆ. 16ರಂದು ತಮಿಳು ಮತ್ತು ಮಲಯಾಳಂ ಸಿನಿಮಾಗಳಿಗೆ ಅವಾರ್ಡ್‌ ಘೋಷಣೆ ಆಗಲಿದೆ.

ಟ್ರೆಂಡಿಂಗ್​ ಸುದ್ದಿ

ಪ್ರಶಸ್ತಿ ವಿಚಾರಕ್ಕೆ ಬಂದರೆ, ಅಚ್ಚರಿಯ ರೀತಿಯಲ್ಲಿ ಈ ಬಾರಿ ಕಾಂತಾರ ಸಿನಿಮಾ ಹಲವು ಪ್ರಶಸ್ತಿಯನ್ನು ಬಾಚಿಕೊಂಡರೆ, 777 ಚಾರ್ಲಿ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ರಕ್ಷಿತ್‌ ಶೆಟ್ಟಿ ಪಾಲಾಗಿದೆ. ಕೆಜಿಎಫ್‌ ಚಾಪ್ಟರ್‌ 2ದಲ್ಲಿನ ನಟನೆಗಾಗಿ ಶ್ರೀನಿಧಿ ಶೆಟ್ಟಿ ಅತ್ಯುತ್ತಮ ನಾಯಕಿ ಅವಾರ್ಡ್‌ ಲಭಿಸಿದೆ. ಇನ್ನುಳಿದಂತೆ, ಅತ್ಯುತ್ತಮ ನಿರ್ದೇಶಕ ಆಯ್ಕೆಯೂ ರಿಷಬ್‌ ಶೆಟ್ಟಿ ಅಲಂಕರಿಸಿದ್ದಾರೆ. ಹೀಗಿದೆ ಕನ್ನಡದ ಸೈಮಾ ವಿಜೇತರ ಸಂಪೂರ್ಣ ಪಟ್ಟಿ.

ಸೈಮಾ ಪ್ರಶಸ್ತಿ ವಿಜೇತರು

ಅತ್ಯುತ್ತಮ ನಿರ್ದೇಶಕ - ರಿಷಬ್ ಶೆಟ್ಟಿ (ಚಿತ್ರ: ಕಾಂತಾರ)

ಅತ್ಯುತ್ತಮ ಚಿತ್ರ - 777 ಚಾರ್ಲಿ (ನಿರ್ಮಾಣ: ಪರಂವಃ ಸ್ಟುಡಿಯೋಸ್)

ಅತ್ಯುತ್ತಮ ನಟಿ (ವಿಮರ್ಶಕರ ಆಯ್ಕೆ) - ಸಪ್ತಮಿ ಗೌಡ (ಚಿತ್ರ: ಕಾಂತಾರ)

ಅತ್ಯುತ್ತಮ ನಟಿ - ಶ್ರೀನಿಧಿ ಶೆಟ್ಟಿ (ಚಿತ್ರ: ಕೆಜಿಎಫ್ - ಚಾಪ್ಟರ್ 2)

ಅತ್ಯುತ್ತಮ ನಟ - ಯಶ್ (ಚಿತ್ರ: ಕೆಜಿಎಫ್ - ಚಾಪ್ಟರ್ 2)

ಅತ್ಯುತ್ತಮ ನಟ (ವಿಮರ್ಶಕರ ಆಯ್ಕೆ)- ರಿಷಬ್​ ಶೆಟ್ಟಿ (ಕಾಂತಾರ)

ಅತ್ಯುತ್ತಮ ಸಂಗೀತ- ಅಜನೀಶ್​ ಬಿ. ಲೋಕನಾಥ್​ (ಕಾಂತಾರ)

ಅತ್ಯುತ್ತಮ ಹಾಸ್ಯನಟ- ಪ್ರಕಾಶ್​ ತುಮ್ಮಿನಾಡು (ಕಾಂತಾರ)

ಅತ್ಯುತ್ತಮ ಗಾಯಕ- ವಿಜಯ್​ ಪ್ರಕಾಶ್​ (ಸಿಂಗಾರ ಸಿರಿಯೇ)

ಅತ್ಯುತ್ತಮ ಪೋಷಕ ನಟ- ದಿಗಂತ್​ ಮಂಚಾಲೆ (ಗಾಳಿಪಟ 2)

ಅತ್ಯುತ್ತಮ ಖಳನಟ- ಅಚ್ಯುತ್​ ಕುಮಾರ್​ (ಕಾಂತಾರ)ನಾಥ್ (ಚಿತ್ರ: ಕಾಂತಾರ)

ವಿಶೇಷ ಮೆಚ್ಚುಗೆ ಪ್ರಶಸ್ತಿ - ಮುಕೇಶ್ ಲಕ್ಷ್ಮಣ್ (ಚಿತ್ರ: ಕಾಂತಾರ)

ವಿಶೇಷ ಮೆಚ್ಚುಗೆ ಪ್ರಶಸ್ತಿ - ಪಾಥ್ ಬ್ರೇಕಿಂಗ್ ಸ್ಟೋರಿ - ರಿಷಬ್ ಶೆಟ್ಟಿ (ಚಿತ್ರ: ಕಾಂತಾರ)

ವಿಶೇಷ ಮೆಚ್ಚುಗೆ ಪ್ರಶಸ್ತಿ - ಅತ್ಯುತ್ತಮ ನಟ - ರಕ್ಷಿತ್ ಶೆಟ್ಟಿ (ಚಿತ್ರ: 777 ಚಾರ್ಲಿ)

ಅತ್ಯುತ್ತಮ ಛಾಯಾಗ್ರಹಣ- ಭುವನ್ ಗೌಡ (ಚಿತ್ರ: ಕೆಜಿಎಫ್‌ ಚಾಪ್ಟರ್‌ 2)

ಅತ್ಯುತ್ತಮ ಗಾಯಕಿ - ಸುನಿಧಿ ಚೌಹಾಣ್ (ಹಾಡು: ರಾ ರಾ ರಕ್ಕಮ್ಮ, ವಿಕ್ರಾಂತ್ ರೋಣ)

ಅತ್ಯುತ್ತಮ ಗಾಯಕ - ವಿಜಯ್ ಪ್ರಕಾಶ್ (ಹಾಡು: ಸಿಂಗಾರ ಸಿರಿಯೇ, ಕಾಂತಾರ)

ಅತ್ಯುತ್ತಮ ಗೀತರಚನೆಕಾರ - ಪ್ರಮೋದ್ ಮರವಂತೆ (ಹಾಡು: ಸಿಂಗಾರ ಸಿರಿಯೇ, ಕಾಂತಾರ)

ಅತ್ಯುತ್ತಮ ಸಂಗೀತ ನಿರ್ದೇಶನ - ಅಜನೀಶ್ ಲೋಕ

ಅತ್ಯುತ್ತಮ ಪೋಷಕ ನಟಿ - ಶುಭಾ ರಕ್ಷಾ (ಚಿತ್ರ: ಹೋಮ್ ಮಿನಿಸ್ಟರ್‌)

ಅತ್ಯುತ್ತಮ ಪೋಷಕ ನಟ - ದಿಗಂತ್ ಮಂಚಾಲೆ (ಚಿತ್ರ: ಗಾಳಿಪಟ 2)

ಅತ್ಯುತ್ತಮ ಹಾಸ್ಯ ನಟ - ಪ್ರಕಾಶ್ ತುಮಿನಾಡ್ (ಚಿತ್ರ: ಕಾಂತಾರ)

ಅತ್ಯುತ್ತಮ ಖಳ ನಟ - ಅಚ್ಯುತ್ ಕುಮಾರ್ (ಚಿತ್ರ: ಕಾಂತಾರ)

ಅತ್ಯುತ್ತಮ ಉದಯೋನ್ಮುಖ ನಿರ್ಮಾಪಕರು - ಅಪೇಕ್ಷಾ ಪುರೋಹಿತ್, ಪವನ್ ಒಡೆಯರ್ (ಚಿತ್ರ: ಡೊಳ್ಳು)

ಅತ್ಯುತ್ತಮ ಉದಯೋನ್ಮುಖ ನಟ - ಪೃಥ್ವಿ ಶಾಮನೂರು (ಚಿತ್ರ: ಪದವಿ ಪೂರ್ವ)

ಅತ್ಯುತ್ತಮ ಉದಯೋನ್ಮುಖ ನಟಿ - ನೀತಾ ಅಶೋಕ್ (ಚಿತ್ರ: ವಿಕ್ರಾಂತ್ ರೋಣ)

ಅತ್ಯುತ್ತಮ ಉದಯೋನ್ಮುಖ ನಿರ್ದೇಶಕರು - ಸಾಗರ್ ಪುರಾಣಿಕ್ (ಚಿತ್ರ: ಡೊಳ್ಳು)

ಮನರಂಜನೆ, ಬಿಗ್‌ಬಾಸ್ ಕನ್ನಡ 10 ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, ಹಿಂದೂಸ್ತಾನ್ ಟೈಮ್ಸ್ ಕನ್ನಡ ,ನೋಡಿ.