ಲವ್ವಲ್ಲಿ ನೋವು; 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ನೋಡಿ ಜನರು ಹೇಳಿದ್ದೇನು? ಇಲ್ಲಿದೆ ರಿವ್ಯೂ
ಕನ್ನಡ ಸುದ್ದಿ  /  ಮನರಂಜನೆ  /  ಲವ್ವಲ್ಲಿ ನೋವು; 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ನೋಡಿ ಜನರು ಹೇಳಿದ್ದೇನು? ಇಲ್ಲಿದೆ ರಿವ್ಯೂ

ಲವ್ವಲ್ಲಿ ನೋವು; 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ನೋಡಿ ಜನರು ಹೇಳಿದ್ದೇನು? ಇಲ್ಲಿದೆ ರಿವ್ಯೂ

ಆಸೆಗಳ ಹಿಂದೆ ಹೋಗಬಾರದು ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಮಾಸ್ಟರ್‌ ಆಫ್‌ ಆಲ್‌ ಲವ್‌ ಸ್ಟೋರಿಸ್‌ ಎಂದೆಲ್ಲಾ ಸಿನಿಪ್ರಿಯರು ಚಿತ್ರವನ್ನು ಹೊಗಳುತ್ತಿದ್ದಾರೆ. ಎಲ್ಲರೂ ಸಿನಿಮಾ ನೋಡಿ, ಆದರೆ ಸಿನಿಮಾ ನೋಡಲು ಹೋಗುವಾಗ ಮರೆಯದೆ ಕರ್ಚೀಫ್‌ ಹಿಡಿದು ಹೋಗಿ ಎಂದೂ ಕೆಲವರು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

 'ಸಪ್ತ ಸಾಗರದಾಚೆ ಎಲ್ಲೋ' ಸೋಷಿಯಲ್‌ ಮೀಡಿಯಾ ರಿವ್ಯೂ
'ಸಪ್ತ ಸಾಗರದಾಚೆ ಎಲ್ಲೋ' ಸೋಷಿಯಲ್‌ ಮೀಡಿಯಾ ರಿವ್ಯೂ

ರಕ್ಷಿತ್‌ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್‌ ಅಭಿನಯದ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಇಂದು (ಸೆಪ್ಟೆಂಬರ್‌ 1) ರಿಲೀಸ್‌ ಆಗಿದೆ. ಸಿನಿಮಾ ನೋಡಿದವರು ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಬಹಳ ದಿನಗಳ ನಂತರ ಮತ್ತೊಂದು ಲವ್‌ ಸ್ಟೋರಿ ನೋಡಿ ಯುವ ಜನತೆ ಖುಷಿಯಾಗಿದ್ಧಾರೆ.

ಸಿನಿಮಾ ನೋಡಿ ಭಾವುಕರಾದ ಯುವ ಜನತೆ

ಗುರುವಾರವೇ ಮೈಸೂರು, ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಪೇಯ್ಡ್‌ ಪ್ರೀಮಿಯರ್‌ ಏರ್ಪಡಿಸಲಾಗಿತ್ತು. 300 ರಿಂದ 900 ರೂಪಾಯಿವರೆಗೂ ಟಿಕೆಟ್‌ ದರ ನಿಗದಿ ಆಗಿತ್ತು. ಟಿಕೆಟ್‌ ದುಬಾರಿ ಆದರೂ ಸಿನಿ ಪ್ರಿಯರು ಸಿನಿಮಾ ನೋಡಿದ್ದಾರೆ. ಪೇಯ್ಡ್‌ ಪ್ರೀಮಿಯರ್‌ ಎಲ್ಲಾ ಕಡೆ ಹೌಸ್‌ ಫುಲ್‌ ಪ್ರದರ್ಶನಗೊಂಡಿತ್ತು. ಸಿನಿಮಾ ನೋಡಿ ಹುಡುಗಿಯರ ಕಣ್ಣಂಚು ಒದ್ದೆಯಾಗುವುದಲ್ಲದೆ ಹುಡುಗರು ಕೂಡಾ ಭಾವುಕರಾಗಿ ಹೊರ ಬರುತ್ತಿದ್ದಾರೆ. ಹೇಮಂತ್‌ ರಾವ್‌ ಅವರ ಕಥೆ, ರಕ್ಷಿತ್‌ ಶೆಟ್ಟಿ, ರುಕ್ಮಿಣಿ ವಸಂತ್‌ ಅಭಿನಯ, ಮೇಕಿಂಗ್‌, ಡೈಲಾಗ್‌, ಹಾಡುಗಳು ಎಲ್ಲವೂ ನೋಡುವವರನ್ನು ಕಾಡುತ್ತಿದೆ.

ಮಾಸ್ಟರ್‌ ಆಫ್‌ ಆಲ್‌ ಲವ್‌ ಸ್ಟೋರೀಸ್

ಸಿನಿಮಾವನ್ನು ಮೊದಲ ಭಾಗದಲ್ಲೇ ಮುಗಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಕ್ಷಿತ್‌ ಶೆಟ್ಟಿ ಆಕ್ಟಿಂಗ್‌ ಇತರ ಸಿನಿಮಾಗಳಿಗಿಂತ ಈ ಸಿನಿಮಾದಲ್ಲಿ ಇನ್ನೂ ಚೆನ್ನಾಗಿದೆ. ಸೈಡ್‌ ಬಿ ನೋಡಲು ಕಾಯುತ್ತಿದ್ದೇವೆ ಎಂದು ಸಿನಿಪ್ರಿಯರು ಚಿತ್ರದ ಬಗ್ಗೆ ಪಾಸಿಟಿವ್‌ ಮಾತುಗಳನ್ನಾಡಿದ್ದಾರೆ. ಆಸೆಗಳ ಹಿಂದೆ ಹೋಗಬಾರದು ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಮಾಸ್ಟರ್‌ ಆಫ್‌ ಆಲ್‌ ಲವ್‌ ಸ್ಟೋರಿಸ್‌ ಎಂದೆಲ್ಲಾ ಸಿನಿಪ್ರಿಯರು ಚಿತ್ರವನ್ನು ಹೊಗಳುತ್ತಿದ್ದಾರೆ. ಎಲ್ಲರೂ ಸಿನಿಮಾ ನೋಡಿ, ಆದರೆ ಸಿನಿಮಾ ನೋಡಲು ಹೋಗುವಾಗ ಮರೆಯದೆ ಕರ್ಚೀಫ್‌ ಹಿಡಿದು ಹೋಗಿ ಎಂದೂ ಕೆಲವರು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಮನು ಹಾಗೂ ಪ್ರಿಯಾ ಸಿನಿಪ್ರಿಯರನ್ನು ಚಿತ್ರಮಂದಿರತ್ತ ಸೆಳೆಯುತ್ತಿದ್ದಾರೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.‌

ಹೇಮಂತ್‌ ರಾವ್‌ ನಿರ್ದೇಶನದ ಸಿನಿಮಾ

'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾವನ್ನು ಪರಮ್ವಃ ಸ್ಟುಡಿಯೋಸ್‌ ಬ್ಯಾನರ್‌ ಅಡಿ ರಕ್ಷಿತ್‌ ಶೆಟ್ಟಿ ನಿರ್ಮಿಸಿದ್ದು ಹೇಮಂತ್‌ ರಾವ್‌ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಕೆವಿಎನ್‌ ಪ್ರೊಡಕ್ಷನ್‌ ಬ್ಯಾನರ್‌ ಚಿತ್ರವನ್ನು ಸಮರ್ಪಿಸುತ್ತಿದೆ. ಚಿತ್ರದ ಹಾಡುಗಳಿಗೆ ಚರಣ್‌ ರಾಜ್‌ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ರಕ್ಷಿತ್‌ ಶೆಟ್ಟಿ, ರುಕ್ಮಿಣಿ ವಸಂತ್‌, ಚೈತ್ರ ಜೆ ಆಚಾರ್‌, ಅವಿನಾಶ್‌, ಶರತ್‌ ಲೋಹಿತಾಶ್ವ, ಅಚ್ಯುತ್‌ ಕುಮಾರ್‌, ಪವಿತ್ರ ಲೋಕೇಶ್‌, ರಮೇಶ್‌ ಇಂದಿರಾ, ಗೋಪಾಲ್‌ ಕೃಷ್ಣ ದೇಶಪಾಂಡೆ ಹಾಗೂ ಇನ್ನಿತರರು ನಟಿಸಿದಿದ್ದಾರೆ. ಅಕ್ಟೋಬರ್‌ 2 ರಂದು ಸೈಡ್‌ ಬಿ ರಿಲೀಸ್‌ ಆಗಲಿದೆ.

Whats_app_banner