ಕಡಲೂರ ಕಣ್ಮಣಿ ಚಿತ್ರದ ಟ್ರೇಲರ್ ಬಿಡುಗಡೆ; ವಿಭಿನ್ನ ಪ್ರೇಮಕಥೆಯ ಚಿತ್ರ ಜುಲೈ 19 ರಂದು ತೆರೆಗೆ
ಕನ್ನಡ ಸುದ್ದಿ  /  ಮನರಂಜನೆ  /  ಕಡಲೂರ ಕಣ್ಮಣಿ ಚಿತ್ರದ ಟ್ರೇಲರ್ ಬಿಡುಗಡೆ; ವಿಭಿನ್ನ ಪ್ರೇಮಕಥೆಯ ಚಿತ್ರ ಜುಲೈ 19 ರಂದು ತೆರೆಗೆ

ಕಡಲೂರ ಕಣ್ಮಣಿ ಚಿತ್ರದ ಟ್ರೇಲರ್ ಬಿಡುಗಡೆ; ವಿಭಿನ್ನ ಪ್ರೇಮಕಥೆಯ ಚಿತ್ರ ಜುಲೈ 19 ರಂದು ತೆರೆಗೆ

ರಾಮ್‌ ಪ್ರಸನ್ನ ನಿರ್ದೇಶನದಲ್ಲಿ ಮೂಡಿಬಂದ ಕಡಲೂರ ಕಣ್ಮಣಿ ಸಿನಿಮಾದ ಟ್ರೇಲರ್‌ ಬಿಡುಗಡೆ ಆಗಿದೆ. ಈ ನಡುವೆ ಇದೇ ಚಿತ್ರ ತನ್ನ ಬಿಡುಗಡೆ ದಿನಾಂಕವನ್ನೂ ಘೋಷಣೆ ಮಾಡಿಕೊಂಡಿದೆ. ಜುಲೈ 19ರಂದು ರಿಲೀಸ್ ಆಗಲಿದೆ.

ಕಡಲೂರ ಕಣ್ಮಣಿ ಚಿತ್ರದ ಟ್ರೇಲರ್ ಬಿಡುಗಡೆ; ವಿಭಿನ್ನ ಪ್ರೇಮಕಥೆಯ ಚಿತ್ರ ಜುಲೈ 19 ರಂದು ತೆರೆಗೆ
ಕಡಲೂರ ಕಣ್ಮಣಿ ಚಿತ್ರದ ಟ್ರೇಲರ್ ಬಿಡುಗಡೆ; ವಿಭಿನ್ನ ಪ್ರೇಮಕಥೆಯ ಚಿತ್ರ ಜುಲೈ 19 ರಂದು ತೆರೆಗೆ

Kadalur Kanmani Movie trailer: ಬಹುತೇಕ ಹೊಸಬರೇ ಸೇರಿ ಮಾಡಿರುವ ಸ್ಯಾಂಡಲ್‌ವುಡ್‌ನ ಕಡಲೂರ ಕಣ್ಮಣಿ ಸಿನಿಮಾ ಇದೀಗ ಬಿಡುಗಡೆಯ ಸನಿಹ ಬಂದಿದೆ. ಪ್ರಚಾರ ಕಣಕ್ಕಿಳಿದಿರುವ ತಂಡ ಇದೀಗ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ವೆಂಕಟೇಶ್ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.‌ ರಾಮ್ ಪ್ರೊಡಕ್ಷನ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ.

ಈ ಚಿತ್ರದ ಬಗ್ಗೆ ಸಾಕಷ್ಟು ಕನಸು ಕಟ್ಟಿಕೊಂಡಿರುವ ಯುವ ನಿರ್ದೇಶಕ ರಾಮ್‌ ಪ್ರಸನ್ನ ಚಿತ್ರದ ಬಗ್ಗೆ ಹೇಳಿದ್ದಿಷ್ಟು, ಕಡಲೂರ ಕಣ್ಮಣಿ ಪ್ರೇಮಕಥಾಹಂದರ ಹೊಂದಿರುವ ಚಿತ್ರ. ಈವರೆಗೂ ಸಾಕಷ್ಟು ಪ್ರೇಮಕಥೆಗಳು ಬಂದಿವೆಯಾದರೂ ಇದು ವಿಭಿನ್ನ ಪ್ರೇಮಕಥೆ ಎನ್ನಬಹುದು. ಕಡಲಿನಲ್ಲಿ ಮುತ್ತು ಸಿಗುವುದು ಎಲ್ಲರಿಗೂ ತಿಳಿದ ಸಂಗತಿ. ನನಗೂ ಸಹ ಈ ಚಿತ್ರದಲ್ಲಿ ಮೂರು ಮುತ್ತುಗಳು ಸಿಕ್ಕಿವೆ. ಅದು ನಮ್ಮ ಚಿತ್ರದ ನಾಯಕ, ನಾಯಕಿ ಹಾಗೂ ನಿರ್ಮಾಪಕರು. ಇವರ ಹಾಗೂ ಇಡೀ ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ಇದೇ ಜುಲೈ 19 ರಂದು ಚಿತ್ರ ತೆರೆಗೆ ಬರಲಿದೆ. ಇದೇ ತಂಡದೊಂದಿಗೆ "ಕಡಲೂರ ಕಣ್ಮಣಿ" ಎರಡನೇ ಭಾಗದಲ್ಲಿ ತರುವ ಸಿದ್ದತೆ ನಡೆಯುತ್ತಿದೆ ಎಂದು ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನವನ್ನು ಮಾಡಿರುವ ರಾಮ್ ಪ್ರಸನ್ನ ಹುಣಸೂರು ತಿಳಿಸಿದರು.

ಈ ಹಿಂದೆ "ವರ್ಣಪಟಲ" ಸೇರಿದಂತೆ ಕೆಲವು ಚಿತ್ರಗಳಲ್ಲಿ ಅಭಿನಯಿಸಿರುವ ನನಗೆ ನಾಯಕನಾಗಿ ಇದು ಮೊದಲ ಚಿತ್ರ. ಅವಕಾಶ ನೀಡಿದ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಧನ್ಯವಾದ ಎಂದರು‌ ನಾಯಕ ಅರ್ಜುನ್ ನಗರಕರ್. ನಿರ್ಮಾಪಕರೂ ಇದೇ ವೇಳೆ ತಮ್ಮ ಅನಿಸಿಕೆ ಹಂಚಿಕೊಂಡರು. "ನಾವು ಬ್ಯಾಂಕ್ ಉದ್ಯೋಗಿಗಳು. ಜೊತೆಗೆ ಆಪ್ತಮಿತ್ರರು. ರಾಮ್ ಪ್ರಸನ್ನ ಹೇಳಿದ ಕಥೆ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆವು. ಎಲ್ಲರೂ ನಮ್ಮ ಚಿತ್ರ ನೋಡಿ. ಪ್ರೋತ್ಸಾಹ ನೀಡಿ ಎಂದು ನಿರ್ಮಾಪಕರಾದ ಕೊಳ ಶೈಲೇಶ್ ಆರ್ ಪೂಜಾರಿ, ಬಸವರಾಜ್ ಗಚ್ಚಿ ತಿಳಿಸಿದರು.

ಸಹ ನಿರ್ಮಾಪಕ ಮಹೇಶ್ ಕುಮಾರ್ ಎಂ ಟ್ರೇಲರ್‌ ಲಾಂಚ್‌ ಕಾರ್ಯಕ್ರಮದಲ್ಲಿದ್ದರು. ಚಿತ್ರದ ಆಕ್ಷನ್ ಸನ್ನಿವೇಶಗಳ ಬಗ್ಗೆ ಚಂದ್ರು ಬಂಡೆ ಮಾಹಿತಿ ನೀಡಿದರು. ಚಿತ್ರವನ್ನು 50ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ಡಿಎಸ್‌ಕೆ ಸಿನಿಮಾಸ್ ಸಂಸ್ಥೆಯ ಡಾ. ಸುನೀಲ್ ಕುಂಬಾರ ತಿಳಿಸಿದರು.