ಪ್ರಜ್ವಲ್‌ ದೇವರಾಜ್ ಕರಾವಳಿ ಚಿತ್ರಕ್ಕೆ ದೊಡ್ಡವರ ಎಂಟ್ರಿ; ಖಡಕ್‌ ಖಳನ ಪಾತ್ರದಲ್ಲಿ ರಮೇಶ್‌ ಇಂದಿರಾ
ಕನ್ನಡ ಸುದ್ದಿ  /  ಮನರಂಜನೆ  /  ಪ್ರಜ್ವಲ್‌ ದೇವರಾಜ್ ಕರಾವಳಿ ಚಿತ್ರಕ್ಕೆ ದೊಡ್ಡವರ ಎಂಟ್ರಿ; ಖಡಕ್‌ ಖಳನ ಪಾತ್ರದಲ್ಲಿ ರಮೇಶ್‌ ಇಂದಿರಾ

ಪ್ರಜ್ವಲ್‌ ದೇವರಾಜ್ ಕರಾವಳಿ ಚಿತ್ರಕ್ಕೆ ದೊಡ್ಡವರ ಎಂಟ್ರಿ; ಖಡಕ್‌ ಖಳನ ಪಾತ್ರದಲ್ಲಿ ರಮೇಶ್‌ ಇಂದಿರಾ

Karavali Movie: ಪ್ರಜ್ವಲ್‌ ದೇವರಾಜ್‌ ನಾಯಕನಾಗಿ ನಟಿಸುತ್ತಿರುವ ಕರಾವಳಿ ಚಿತ್ರದಿಂದ ಮತ್ತೊಂದು ಹೊಸ ಪಾತ್ರದ ಪರಿಚಯವಾಗಿದೆ. ರಮೇಶ್‌ ಇಂದಿರಾ ಖಡಕ್‌ ಖಳನಾಯಕನಾಗಿ ಈ ಚಿತ್ರದಲ್ಲಿ ನಟಿಸುತ್ತಿದ್ದು, ದೊಡ್ಡವ್ರು ಎಂಬ ಪಾತ್ರ ನಿರ್ವಹಿಸಿದ್ದಾರೆ. ಈಗ ಆ ಪಾತ್ರದ ಫಸ್ಟ್‌ ಲುಕ್‌ ರಿಲೀಸ್‌ ಆಗಿದೆ.

ಕರಾವಳಿ ಚಿತ್ರದ ದೊಡ್ಡವರು ಪಾತ್ರದ ಪರಿಚಯ
ಕರಾವಳಿ ಚಿತ್ರದ ದೊಡ್ಡವರು ಪಾತ್ರದ ಪರಿಚಯ

Karavali Movie: ಪ್ರಜ್ವಲ್‌ ದೇವರಾಜ್‌ ನಟನೆಯ ಕರಾವಳಿ ಸಿನಿಮಾ ಪೋಸ್ಟರ್‌, ಟೀಸರ್‌ಗಳಿಂದಲೇ ಸಾಕಷ್ಟು ಸದ್ದು ಮಾಡುತ್ತಿದೆ. ಗುರುದತ್‌ ಗಾಣಿಗ, ಈ ಸಲ ಬೇರೆಯ ಲೋಕವನ್ನೇ ತೋರಿಸಲು ಸಜ್ಜಾದಂತಿದೆ. ಅದರಂತೆ, ಈಗಾಗಲೇ ಹೊರಬಂದಿರುವ ಕರಾವಳಿ ಸಿನಿಮಾದ ಒಂದಷ್ಟು ಲುಕ್‌ಗಳು ನೋಡುಗರ ಗಮನ ಸೆಳೆದಿವೆ. ಇದೀಗ, ದೀಪಾವಳಿ ಹಬ್ಬದ ನಿಮಿತ್ತ ಇದೇ ಸಿನಿಮಾದ ಇನ್ನೊಂದು ಖಡಕ್‌ ಪಾತ್ರದ ಪರಿಚಯವಾಗಿದೆ.

ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಇಂಟ್ರಸ್ಟಿಂಗ್ ವಿಚಾರವನ್ನು ಹಂಚಿಕೊಂಡಿದೆ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ 'ಕರಾವಳಿ' ಗುರುದತ್ ಗಾಣಿಗ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ನಾಯಕಿಯಾಗಿ ಸಂಪದಾ ಕಾಣಿಸಿಕೊಂಡರೆ ವಿಭಿನ್ನ ಪಾತ್ರದಲ್ಲಿ ಮಿತ್ರ ಬಣ್ಣ ಹಚ್ಚಿದ್ದಾರೆ. ಈ ನಡುವೆ ಕರಾವಳಿ ತಂಡ ಮತ್ತೊಂದು ಭರ್ಜರಿ ಪೋಸ್ಟರ್ ಅನಾವರಣ ಮಾಡುವ ಮೂಲಕ ಮತ್ತೋರ್ವ ನಟನ ಪಾತ್ರವನ್ನು ರಿವೀಲ್ ಮಾಡಿದೆ.

ಮತ್ತೊಮ್ಮೆ ಖಳನ ಗತ್ತು

ಕರಾವಳಿ ಸಿವಿಮಾದಲ್ಲಿ ಕನ್ನಡದ ಖ್ಯಾತ ನಟ ರಮೇಶ್ ಇಂದಿರಾ ನಟಿಸುತ್ತಿದ್ದಾರೆ. ಈಗಾಗಲೇ ರಕ್ಷಿತ್ ಶೆಟ್ಟಿ ಅವರ ಸಪ್ತಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಅಬ್ಬರಿಸಿ ಅಭಿಮಾನಿಗಳ ಹೃದಯ ಗೆದ್ದಿದ್ದ ರಮೇಶ್ ಇಂದಿರಾ, ಧನಂಜಯ್‌ ಅವರ ಕೋಟಿ ಸಿನಿಮಾದಲ್ಲಿಯೂ ಮೋಡಿ ಮಾಡಿದ್ದರು. ಈ ಎರಡು ಸಿನಿಮಾಗಳಲ್ಲಿ ಖಳನ ಪಾತ್ರದಿಂದಲೇ ಅವರು ಗಮನ ಸೆಳೆದಿದ್ದರು. ಈಗ ಅದೇ ಖಳನ ಗತ್ತನ್ನು ಕರಾವಳಿ ಸಿನಿಮಾದಲ್ಲಿಯೂ ತೋರಿಸಲಿದ್ದಾರೆ.

ಈಗ ಕರಾವಳಿ ಸಿನಿಮಾದಲ್ಲೂ ಖಳನಾಗಿ ನಟಿಸುತ್ತಿದ್ದಾರೆ. ಹಿಂದೆದೂ ಮಾಡಿರದ ಪಾತ್ರಕ್ಕೆ ಬಣ್ಣ ಹಚ್ಚಿರುವ ರಮೇಶ್‌, ಇಡೀ ಕರಾವಳಿಯೇ ಇವರನ್ನು ದೊಡ್ಡವರು ಎಂದು ಗುರುತಿಸುತ್ತೆ, ಇಡೀ ಕಂಬಳ ಪ್ರಪಂಚ ಇವರನ್ನು ಗೌರವಿಸುತ್ತೆ ಹಾಗೂ ಇಡೀ ಕರಾವಳಿಯೇ ಇವರೆಂದರೆ ಭಯ ಮತ್ತು ಭಕ್ತಿ. ಅಂದರೆ ಈ ಚಿತ್ರದಲ್ಲಿ ದೊಡ್ಡವ್ರು ಎಂಬ ಪಾತ್ರದಲ್ಲಿ ರಮೇಶ್‌ ಇಂದಿರಾ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ರಿಲೀಸ್ ಆಗಿರುವ ಪೋಸ್ಟರ್‌ನಲ್ಲಿ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ ರಮೇಶ್ ಇಂದಿರಾ. ಕೈಯಲ್ಲಿ ಗನ್ ಹಿಡಿದು ಕಾರ್ ಮೇಲೆ ಕುಳಿತು ಶೂಟ್ ಮಾಡುತ್ತಿರುವ ಭಂಗಿಯಲ್ಲಿ ಎದುರಾಗಿದ್ದಾರೆ.

ಶೇ 60 ಭಾಗ ಚಿತ್ರೀಕರಣ ಮುಕ್ತಾಯ

ಅಂದಹಾಗೆ ಕರಾವಳಿ ಈಗಾಗಲೇ 60ರಷ್ಟು ಚಿತ್ರೀಕರಣ ಮುಗಿಸಿದೆ. ಸಿನಿಮಾದಲ್ಲಿ ಪ್ರಜ್ವಲ್‌ಗೆ ನಾಯಕಿಯಾಗಿ ನಟಿ ಸಂಪದಾ ಕಾಣಿಸಿಕೊಂಡಿದ್ದಾರೆ. ಬಹುತೇಕ ಸಿನಿಮಾ ಕರಾವಳಿಯ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣವಾಗಿದೆ.

ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ಅವರದೇ ಗಾಣಿಗ ಫಿಲ್ಮ್ಸ್ ಹಾಗೂ ವಿಕೆ ಫಿಲ್ಮಂ ಅಸೋಸಿಯೇಷನ್‌ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಕರಾವಳಿ, ಮನುಷ್ಯ ಹಾಗೂ ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕಥೆ ಈ ಚಿತ್ರದ್ದು. ಪಕ್ಕಾ ಹಳ್ಳಿ ಬ್ಯಾಕ್ ಡ್ರಾಪ್‌ನಲ್ಲಿ ಸಿನಿಮಾ ಮೂಡಿ ಬರಲಿರುವ ಈ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ನೀಡುತ್ತಿದ್ದಾರೆ.

ಪ್ರಜ್ವಲ್‌ ದೇವರಾಜ್‌ ಸಿನಿಮಾಗಳು

ಕಳೆದ ವರ್ಷ ವೀರಂ ಸಿನಿಮಾದಲ್ಲಿ ನಟಿಸಿದ್ದ ಪ್ರಜ್ವಲ್‌ ದೇವರಾಜ್‌ ಅದಾದ ಬಳಿಕ ಅದೇ ವರ್ಷ ತತ್ಸಮ ತದ್ಭವ ಸಿನಿಮಾ ಮೂಲಕ ನಟಿ ಮೇಘನಾ ರಾಜ್‌ ಅವರ ಚಿತ್ರದಲ್ಲಿಯೂ ಪೊಲೀಸ್‌ ಪಾತ್ರದಲ್ಲಿ ನಟಿಸಿದ್ದರು. ಅದರ ಜತೆಗೆ ಮಾಫಿಯಾ ಸಿನಿಮಾದ ಚಿತ್ರೀಕರಣವನ್ನೂ ಪ್ರಜ್ವಲ್‌ ಮುಗಿಸಿದ್ದಾರೆ. ಈ ನಡುವೆ ಕರಾವಳಿ ಸಿನಿಮಾದ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ. ಪ್ರಜ್ವಲ್‌ ಸಿನಿಮಾ ಕೆರಿಯರ್‌ನಲ್ಲಿ ಈ ಸಿನಿಮಾ ಒಂದು ಹೊಸ ಜಾನರ್‌ ಜತೆಗೆ ಹೊಸ ಅವತಾರದಲ್ಲಿಯೂ ಅವರು ಎದುರಾಗಲಿದ್ದಾರೆ.

Whats_app_banner