ಕನ್ನಡ ಸುದ್ದಿ  /  Entertainment  /  Sandalwood News Ranganayaka Box Office Collection Jaggesh Guruprasad Movie Mints Few Lakhs In Theaters Pcp

Ranganayaka: ಬಾಕ್ಸ್‌ ಆಫೀಸ್‌ನಲ್ಲಿ ರಂಗನಾಯಕ ಕಲೆಕ್ಷನ್‌ ಹೇಗಿದೆ ಗುರು? ಲಕ್ಷಾಂತರ ಗಳಿಕೆ ಮಾಡಿದ ಜಗ್ಗೇಶ್‌ - ಗುರುಪ್ರಸಾದ್‌ ಸಿನಿಮಾ

Ranganayaka box office collection: ನವರಸ ನಾಯಕ ಜಗ್ಗೇಶ್‌ ಅಭಿನಯದ, ಗುರುಪ್ರಸಾದ್‌ ನಿರ್ದೇಶಿಸಿ ನಟಿಸಿದ ರಂಗನಾಯಕ ಕನ್ನಡ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಕಳೆದ ನಾಲ್ಕು ದಿನದಲ್ಲಿ ಕೆಲವು ಲಕ್ಷ ರೂಪಾಯಿ ಗಳಿಕೆ ಮಾಡಿದೆ. ರಂಗನಾಯಕ ಸಿನಿಮಾದ ಬಾಕ್ಸ್‌ ಆಫೀಸ್‌ ವರದಿ ಇಲ್ಲಿದೆ.

ರಂಗನಾಯಕ ಸಿನಿಮಾದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ವರದಿ
ರಂಗನಾಯಕ ಸಿನಿಮಾದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ವರದಿ

ನವರಸ ನಾಯಕ ಜಗ್ಗೇಶ್‌ ಮತ್ತು ನಿರ್ದೇಶಕ ಗುರುಪ್ರಸಾದ್‌ ಕಾಂಬಿನೇಷನ್‌ನ ರಂಗನಾಯಕ ಸಿನಿಮಾವು ಕಳೆದ ವಾರ ಬಹುನಿರೀಕ್ಷೆ ಹುಟ್ಟುಹಾಕಿತ್ತು. ಈಗಾಗಲೇ ಮಠ, ಎದ್ದೇಳು ಮಂಜುನಾಥದ ಮೂಲಕ ಪ್ರೇಕ್ಷಕರಿಗೆ ಬೇರೆಯದ್ದೇ ರೀತಿಯಲ್ಲಿ ಸಿನಿ ರಸದೌತಣ ನೀಡಿದ್ದ ಈ ಜೋಡಿಯ ರಂಗನಾಯಕ ಸಿನಿಮಾದ ಕುರಿತು ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ, ರಂಗನಾಯಕ ಬಿಡುಗಡೆಯಾದ ಬಳಿಕ ಎಲ್ಲರ ನಿರೀಕ್ಷೆ ಠುಸ್‌ ಆಗಿತ್ತು.

ಇದು ಗುರುಪ್ರಸಾದ್‌ ಸಿನಿಮಾ. ಅವರು ಹೇಳಿದಂತೆ ನಟಿಸಿದ್ದೇನೆ ಎಂದು ಸಿನಿಮಾ ಬಿಡುಗಡೆಗೆ ಮುನ್ನವೇ ಜಗ್ಗೇಶ್‌ ಹೇಳಿದ್ದರು. ಸಿನಿಮಾ ಬಿಡುಗಡೆಯಾದ ಬಳಿಕ "ಇದು ಜಗ್ಗೇಶ್‌ ಸಿನಿಮಾವಲ್ಲ, ಗುರುಪ್ರಸಾದ್‌ ಸಿನಿಮಾ" ಎಂದು ಪ್ರೇಕ್ಷಕರಿಗೆ ಅರ್ಥವಾಗಿತ್ತು. ಈ ಸಿನಿಮಾದ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಕಳೆದ ಹಲವು ದಿನಗಳಿಂದ ಸಾಕಷ್ಟು ಟ್ರೋಲ್‌ಗಳು, ಟೀಕೆಗಳು ಕೇಳಿಬರುತ್ತಿವೆ. ಇದೇ ಸಮಯದಲ್ಲಿ ರಂಗನಾಯಕ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಹೇಗೆ ಗಳಿಕೆ ಮಾಡುತ್ತಿದೆ? ಕಳೆದ ನಾಲ್ಕು ದಿನಗಳಲ್ಲಿ ಎಷ್ಟು ಗಳಿಕೆ ಮಾಡಿದೆ ಎಂಬ ವರದಿ ಇಲ್ಲಿದೆ.

ರಂಗನಾಯಕ ಸಿನಿಮಾ ಬಾಕ್ಸ್‌ ಆಫೀಸ್‌ ವರದಿ

ಸಕ್‌ನಿಲ್ಕ್‌.ಕಾಂ ವರದಿ ಪ್ರಕಾರ ರಂಗನಾಯಕ ಸಿನಿಮಾದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಈ ಮುಂದಿನಂತೆ ಇದೆ. ಜಗ್ಗೇಶ್‌- ಗುರುಪ್ರಸಾದ್‌ ಜೋಡಿಯ ರಂಗನಾಯಕ ಸಿನಿಮಾವು ಮೊದಲ ದಿನ ಅಂದರೆ ಶುಕ್ರವಾರ ಮಾರ್ಚ್‌ 8ರಂದು 0.09 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಅಂದರೆ, 9 ಲಕ್ಷ ರೂಪಾಯಿ ಗಳಿಕೆ ಮಾಡಿದೆ. ಎರಡನೇ ದಿನವಾದ ಶನಿವಾರ ರಂಗನಾಯಕವು 0.05 ಕೋಟಿ/5 ಲಕ್ಷ ರೂಪಾಯಿ ಗಳಿಕೆ ಮಾಡಿದೆ. ಭಾನುವಾರ ರಂಗನಾಯಕ ಸಿನಿಮಾದ ಗಳಿಕೆ ತುಸು ಹೆಚ್ಚಾಗಿತ್ತು. ಅಂದರೆ. 0.07 ಕೋಟಿ ಅಥವಾ 7 ಲಕ್ಷ ರೂಪಾಯಿ ಕಲೆಕ್ಷನ್‌ ಮಾಡಿತ್ತು. ದಿನ ನಾಲ್ಕು ಅಂದರೆ ಮೊದಲ ಸೋಮವಾರ ರಂಗನಾಯಕ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ 0.02 ಕೋಟಿ ರೂಪಾಯಿ ಅಥವಾ 2 ಲಕ್ಷ ರೂಪಾಯಿ ಗಳಿಕೆ ಮಾಡಿದೆ.

ರಂಗನಾಯಕ ಸಿನಿಮಾ ವಿಮರ್ಶೆ

ಈ ಸಿನಿಮಾ ಗುರುಪ್ರಸಾದ್ ಅವರಿಂದ ಬಂದಿರುವ ಅಸಹ್ಯದ ಪರಮಾವಧಿ. ಆತ್ಮರತಿಯ ಗಟಾರದಲ್ಲಿ ಬಿದ್ದಿರುವ ಅವರು ಪ್ರೇಕ್ಷಕರನ್ನೂ ಒಳಗೊಂಡಂತೆ ಅದರೊಳಗೆ ಎಲ್ಲರನ್ನೂ ಇಳಿಸಿಕೊಂಡು ಬಿಡುತ್ತಾರೆ. ಕನ್ನಡದಲ್ಲಿ ಬಂದಂಥ ಮೊದಲ ಸಿನಿಮಾ ರಂಗನಾಯಕ, ಅದನ್ನು ಬಾರದಂತೆ ತಡೆದ ಪರಭಾಷಿಕರು, ಇಂದಿಗೂ ಅದು ಅದೇ ಪರಿಸ್ಥಿತಿಯಲ್ಲಿದೆ ಎಂದೆಲ್ಲ ಹೇಳುತ್ತಾ ತಮ್ಮ ಬಗ್ಗೆ ತುತ್ತೂರಿ, ತಮಟೆ, ಜಾಗಟೆ, ಶಂಖ ಎಲ್ಲವನ್ನೂ ಊದಿ, ಬಡಿದು, ಬಾರಿಸಿದ್ದಾರೆ ಎಂದು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ವಿಮರ್ಶೆ ಮಾಡಿತ್ತು.

ರಂಗನಾಯಕ ಸಿನಿಮಾದ ಕುರಿತು

ಜಗ್ಗೇಶ್‌- ಗುರುಪ್ರಸಾದ್‌ ಕಾಂಬಿನೇಷನ್‌ನಲ್ಲಿ ರಂಗನಾಯಕ ಸಿನಿಮಾ ಸಿದ್ಧವಾಗಿದೆ. ಮಠ, ಎದ್ದೇಳು ಮಂಜುನಾಥ ಬಳಿಕ ಜಗ್ಗೇಶ್‌ ಇದೀಗ ಗುರುಪ್ರಸಾದ್‌ ನಿರ್ದೇಶನದ ರಂಗನಾಯಕ ಸಿನಿಮಾದಲ್ಲಿ ನಟಿಸಿದ್ದರು. ಪುಷ್ಪಕ ವಿಮಾನ ಖ್ಯಾತಿಯ ನಿರ್ಮಾಪಕ‌ ವಿಖ್ಯಾತ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

IPL_Entry_Point