Ranganayaka: ಎಡಗೈನಲ್ಲಿ ಹೊಡೆದರೆ ವಿಷ್ಣುವರ್ಧನ್‌, ಬಲಗೈನಲ್ಲಿ ಹೊಡೆದರೆ ರಾಜ್‌ಕುಮಾರ್‌, ನಡುವಲ್ಲಿ ಹೊಡೆದರೆ; ರಂಗನಾಯಕ ಟ್ರೇಲರ್‌ ಬಿಡುಗಡೆ-sandalwood news ranganayaka kannada movie trailer released movie release date march 8 jaggesh guruprasad film pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Ranganayaka: ಎಡಗೈನಲ್ಲಿ ಹೊಡೆದರೆ ವಿಷ್ಣುವರ್ಧನ್‌, ಬಲಗೈನಲ್ಲಿ ಹೊಡೆದರೆ ರಾಜ್‌ಕುಮಾರ್‌, ನಡುವಲ್ಲಿ ಹೊಡೆದರೆ; ರಂಗನಾಯಕ ಟ್ರೇಲರ್‌ ಬಿಡುಗಡೆ

Ranganayaka: ಎಡಗೈನಲ್ಲಿ ಹೊಡೆದರೆ ವಿಷ್ಣುವರ್ಧನ್‌, ಬಲಗೈನಲ್ಲಿ ಹೊಡೆದರೆ ರಾಜ್‌ಕುಮಾರ್‌, ನಡುವಲ್ಲಿ ಹೊಡೆದರೆ; ರಂಗನಾಯಕ ಟ್ರೇಲರ್‌ ಬಿಡುಗಡೆ

Jaggesh Ranganayaka Kannada Movie: ಗುರುಪ್ರಸಾದ್‌ ನಿರ್ದೇಶನದ, ನವರಸ ನಾಯಕ ಜಗ್ಗೇಶ್‌ ಅಭಿನಯದ ರಂಗನಾಯಕ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ರಂಗನಾಯಕ ಸಿನಿಮಾ ಮಾರ್ಚ್‌ 8ರಂದು ಬಿಡುಗಡೆಯಾಗಲಿದೆ. ಶಿವಣ್ಣ, ಸುದೀಪ್‌, ಡಿಬಾಸ್‌, ಯಶ್‌, ಉಪೇಂದ್ರ, ಸಾಯಿ ಪ್ರಕಾಶ್‌, ಕಲ್ಪನರ ಹೆಸರು ಟ್ರೇಲರ್‌ನಲ್ಲಿದೆ.

Ranganayaka: ಎಡಗೈನಲ್ಲಿ ಹೊಡೆದರೆ ವಿಷ್ಣುವರ್ಧನ್‌, ರಂಗನಾಯಕ ಟ್ರೇಲರ್‌ ಬಿಡುಗಡೆ
Ranganayaka: ಎಡಗೈನಲ್ಲಿ ಹೊಡೆದರೆ ವಿಷ್ಣುವರ್ಧನ್‌, ರಂಗನಾಯಕ ಟ್ರೇಲರ್‌ ಬಿಡುಗಡೆ

ಬೆಂಗಳೂರು: ನವರಸ ನಾಯಕ ಜಗ್ಗೇಶ್‌ ಅಭಿನಯದ ರಂಗನಾಯಕ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ರಂಗನಾಯಕ ಸಿನಿಮಾ ಮಾರ್ಚ್‌ 8ರಂದು ಬಿಡುಗಡೆಯಾಗಲಿದೆ. ಈ ಟ್ರೇಲರ್‌ನಲ್ಲಿ ವಿಷ್ಣುವರ್ಧನ್‌, ಡಾ. ರಾಜ್‌ಕುಮಾರ್‌, ಅಂಬರೀಷ್‌, ಸಾಯಿ ಪ್ರಕಾಶ್‌ರಿಂದ ಹಿಡಿದು ಶಿವಣ್ಣ, ಸುದೀಪ್‌, ಡಿಬಾಸ್‌, ಯಶ್‌ ಸೇರಿದಂತೆ ಕನ್ನಡ ಚಿತ್ರರಂಗದ ಹಲವು ನಟರು, ನಟಿಯರ ಹೆಸರು ಟ್ರೇಲರ್‌ನಲ್ಲಿದೆ. ಜಗ್ಗೇಶ್‌- ಗುರುಪ್ರಸಾದ್‌ ಕಾಂಬಿನೇಷನ್‌ನಲ್ಲಿ ರಂಗನಾಯಕ ಸಿನಿಮಾ ಸಿದ್ಧವಾಗಿದೆ. ಮಠ, ಎದ್ದೇಳು ಮಂಜುನಾಥ ಬಳಿಕ ಜಗ್ಗೇಶ್‌ ಇದೀಗ ಗುರುಪ್ರಸಾದ್‌ ನಿರ್ದೇಶನದ ರಂಗನಾಯಕ ಸಿನಿಮಾದಲ್ಲಿ ನಟಿಸಿದ್ದಾರೆ.

ರಂಗನಾಯಕ ಟ್ರೇಲರ್‌ನಲ್ಲಿ ಏನಿದೆ?

ಓಂ ಜನಾರ್ಧನಾಯ ನಮಃ, ಓಂ ಉಪೇಂದ್ರಾಯ ನಮಃ ಎಂದು ಮಂತ್ರ ಹೇಳಲಾಗುತ್ತದೆ. ಈ ಮೂಲಕ ಓಂ ಮತ್ತು ಉಪೇಂದ್ರರ ಹೆಸರನ್ನು ಆರಂಭದಲ್ಲಿಯೇ ತರಲಾಗಿದೆ. ಇದಾದ ಬಳಿಕ ಜಗ್ಗೇಶ್‌ ಡೈಲಾಗ್‌ ಬರುತ್ತದೆ. "ನಿಮಗೆ ರಾಜ್ಯದಲ್ಲಿ ಯಾರಾದರೂ ತೊಂದರೆ ಕೊಟ್ಟರೆ ಹೇಳಿ. ಎಡಗೈನಲ್ಲಿ ಹೊಡೆದರೆ ವಿಷ್ಣುವರ್ಧನ್‌, ಬಲಗೈನಲ್ಲಿ ಹೊಡೆದರೆ ರಾಜ್‌ಕುಮಾರ್‌, ನಡುವಲ್ಲಿ ಹೊಡೆದರೆ ಅಂಬರೀಷ್‌, ಅದೇ ಅಕ್ಕನ ಸೆಂಟರ್‌ಗೆ ಕಳುಹಿಸಿಲ್ವ?" ಎಂದು ಜಗ್ಗೇಶ್‌ ಡೈಲಾಗ್‌ ಇದೆ. ಇದಾದ ಬಳಿಕ ಹೆಚ್ಚು ಕಂಟೆಂಟ್‌, ಹೆಚ್ಚು ಮನರಂಜನೆ ಎಂಬ ಸಿನಿಮಾ ತಯಾರಕರ ಸಂಭಾಷಣೆ ಇರುತ್ತದೆ. ಬುದ್ದಿವಂತರಿಗೆ ಮಾತ್ರ, ಕೇಳು ಸಿಹಿಚಂದ್ರು ಎಂದು ಹೇಳಲಾಗುತ್ತದೆ.

ಇದಾದ ಬಳಿಕ ಮಹಿಳೆಯೊಬ್ಬರು ಜಗ್ಗೇಶ್‌ ಬಳಿ "ನಿಮಗೆ ಹಾಡೋಕ್ಕೆ ಬರುತ್ತಾ?" ಎಂದು ಕೇಳುತ್ತಾರೆ. ಅದಕ್ಕೆ ಉತ್ತರವಾಗಿ "ಕಾಸರವಳ್ಳಿ ಸಿನಿಮಾದಲ್ಲಿ ಐಟಂ ಸಾಂಗ್‌ ಹುಡುಕಿದ ಹಾಗಾಯ್ತು" ಅಂತಾರೆ ಜಗ್ಗೇಶ್‌. "ಇಲ್ಲಿ ಕೆಲವರು ಇನ್‌ಸ್ಟಾಗ್ರಾಂನಲ್ಲಿ, ಫೇಸ್‌ಬುಕ್‌ನಲ್ಲಿ ಹಾಕಿಕೊಂಡು ಹಿಂಸೆ ಕೊಡ್ತಾರೆ, ಅಪಪ್ರಚಾರ ನಡೀತಾ ಇದೆ" ಎಂದು ನಿರ್ದೇಶಕರ ಮಾತು ಇರುತ್ತದೆ. ಇದಾದ ಬಳಿಕ ಜಗ್ಗೇಶ್‌ ಯುವತಿ ಬಳಿ "ಹೃದಯದ ಪಾಸ್‌ವರ್ಡ್‌" ಕೇಳುವ ಸೀನ್‌ ಇದೆ. "ನಾನೇನಾದರೂ ರಂಗನಾಯಕ ಆಗಿದ್ರೆ ಅವಳ ಕೊರಳಿಗೆ ಇದನ್ನ ಕಟ್ಟಿಬಿಡ್ತಾ ಇದ್ದೆ" ಎನ್ನುತ್ತಾಳೆ. ಇದಾದ ಬಳಿಕ ಸಾಯಿ ಪ್ರಕಾಶ್‌, ಕಲ್ಪನಾ ಹೆಸರೂ ಬರುತ್ತದೆ.

ಹಿನ್ನೆಲೆಯಲ್ಲಿ "ಆತ ಕನ್ನಡದ ಬಗ್ಗೆ ಏನೋ ಮಹತ್ತರವಾದದ್ದು ಹೇಳುತ್ತಿದ್ದಾನೆ. ಕನ್ನಡ ಚಲನಚಿತ್ರ ಇತಿಹಾಸದ ಕರಾಳ ವರ್ಷ, ಮುಚ್ಕೊಂಡು ನೋಡಿ" ಎಂಬ ಬರಹ ಮತ್ತು ಮಾತು ಬರುತ್ತದೆ. ಇದೇ ಸಮಯದಲ್ಲಿ ಒಬ್ಬರನ್ನು ಯಾರೋ ಎಳೆದುಕೊಂಡು ಹೋಗುತ್ತಾರೆ. ಆ ಸಂದರ್ಭದಲ್ಲಿ ಶಿವಣ್ಣ, ಸುದೀಪ್‌, ಡಿಬಾಸ್‌, ಯಶ್‌ ಹೀಗೆ ಪ್ರಮುಖ ನಟರನ್ನು ಕರೆದು "ಕನ್ನಡಕ್ಕೆ ತೊಂದರೆಯಾಗುತ್ತಿದೆ, ಬನ್ರೋ" ಎಂದು ಕರೆಯುತ್ತಾರೆ.

ಒಟ್ಟಾರೆ ಈ ಟ್ರೇಲರ್‌ ಎಲ್ಲಾ ಟ್ರೇಲರ್‌ಗಳಂತೆ ಇಲ್ಲ ಎನ್ನುವುದು ಮೊದಲ ವೀಕ್ಷಣೆಯಲ್ಲಿಯೇ ಗೊತ್ತಾಗುತ್ತದೆ. ಮಠ, ಎದ್ದೇಳು ಮಂಜುನಾಥದ ಬಳಿಕ ರಂಗನಾಯಕದಲ್ಲಿ ಜಗ್ಗೇಶ್‌ ಮತ್ತು ಗುರುಪ್ರಸಾದ್‌ ಏನು ಹೇಳಲು ಹೊರಟಿದ್ದಾರೆ ಎಂದು ನೋಡಲು ಮಾರ್ಚ್‌ 8ರವರೆಗೆ ಕಾಯಬೇಕು. ಈಗಾಗಲೇ ರಂಗನಾಯಕ ಸಿನಿಮಾವು ರಂಗಪ್ರಸಾದ್‌ ಅವರ ಪ್ರಸಾದ ಎಂದು ಜಗ್ಗೇಶ್‌ ಹೇಳಿದ್ದಾರೆ. ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಜಗ್ಗೇಶ್‌ ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ.

ರಂಗನಾಯಕ ಟ್ರೇಲರ್‌ ನೋಡಿ

ಪುಷ್ಪಕ ವಿಮಾನ ಖ್ಯಾತಿಯ ನಿರ್ಮಾಪಕ‌ ವಿಖ್ಯಾತ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮಠ , ಎದ್ದೇಳು ಮಂಜುನಾಥ ಚಿತ್ರಗಳ ಮೂಲಕ ಹೊಸ ದಾಖಲೆಯನ್ನೇ‌‌ ಸೃಷ್ಟಿಸಿದ್ದ ‌ಗುರುಪ್ರಸಾದ್- ಜಗ್ಗೇಶ್ ಜೋಡಿ ನಗುವಿನ ಅಲೆ ಎಬ್ಬಿಸಲು ಮತ್ತೊಮ್ಮೆ ಪ್ರೇಕ್ಷಕರೆದುರು ಬರುತ್ತಿದ್ದಾರೆ. ಶಿವರಾತ್ರಿಯ ವಿಶೇಷವಾಗಿ ಈ ಚಿತ್ರ ಬಿಡುಗಡೆಯಾಗುತ್ತಿದೆ. ಇತ್ತೀಚೆಗಷ್ಟೇ ಇದೇ ಚಿತ್ರದ ಹಾಡು ಬಿಡುಗಡೆಯಾಗಿದೆ. ಈ ಹಾಡು ಇಲ್ಲಿದೆ ಕೇಳಿ.

mysore-dasara_Entry_Point