ಕನ್ನಡ ಸುದ್ದಿ  /  ಮನರಂಜನೆ  /  ನಾದಯೋಗಿ ಯೂಟ್ಯೂಬ್‌ ಚಾನೆಲ್‌ ಆರಂಭಿಸಿದ ಚಂದನ್‌ ಶೆಟ್ಟಿ; ಏನಿದರ ವೈಶಿಷ್ಟ್ಯತೆ?

ನಾದಯೋಗಿ ಯೂಟ್ಯೂಬ್‌ ಚಾನೆಲ್‌ ಆರಂಭಿಸಿದ ಚಂದನ್‌ ಶೆಟ್ಟಿ; ಏನಿದರ ವೈಶಿಷ್ಟ್ಯತೆ?

ಜೀರೋ ಸಬ್‌ಸ್ಕ್ರೈಬರ್‌ನೊಂದಿಗೆ ನಾದಯೋಗಿ ಎಂಬ ಯೂಟ್ಯೂಬ್ ಚಾನೆಲ್‌ ಆರಂಭಿಸಿದ್ದೇನೆ. ಈ ಚಾನೆಲ್ ಭಕ್ತಿಗೀತೆಗಳಿಗೆ ಮಾತ್ರ ಮೀಸಲಾಗಿರುತ್ತದೆ. ಈ ಯೂಟ್ಯೂಬ್‌ ಚಾನೆಲ್‌ ಮೂಲಕ ಈಗಿನ ಯುವ ಜನತೆಗೆ ಆಧ್ಯಾತ್ಮಿಕತೆಯನ್ನು ಪರಿಚಯಿಸುವುದು ನನ್ನ ಉದ್ಧೇಶ ಎಂದು ಚಂದನ್‌ ಶೆಟ್ಟಿ ಮಾಹಿತಿ ನೀಡಿದ್ದಾರೆ.

ನಾದಯೋಗಿ ಯೂಟ್ಯೂಬ್‌ ಚಾನೆಲ್‌ ಆರಂಭಿಸಿದ ಚಂದನ್‌ ಶೆಟ್ಟಿ
ನಾದಯೋಗಿ ಯೂಟ್ಯೂಬ್‌ ಚಾನೆಲ್‌ ಆರಂಭಿಸಿದ ಚಂದನ್‌ ಶೆಟ್ಟಿ

ಕನ್ನಡ ರಾಪರ್‌, ಸಂಗೀತ ನಿರ್ದೇಶಕ, ಗಾಯಕ, ಈಗ ನಾಯಕನಾಗಿಯೂ ಗುರುತಿಸಿಕೊಂಡಿರುವ ಚಂದನ್‌ ಶೆಟ್ಟಿ 2 ದಿನಗಳ ಹಿಂದೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಸುಮಾರು 8 ವರ್ಷಗಳ ಹಿಂದೆ ಚಂದನ್‌ ಶೆಟ್ಟಿ ತಮ್ಮ ಮೊದಲ ಹಾಡನ್ನು ರಿಲೀಸ್‌ ಮಾಡಿದ್ದರು. ಈ ಬಾರಿ ಅವರು ಬರ್ತ್‌ಡೇಗೆ ಯೂಟ್ಯೂಬ್‌ ಚಾನೆಲ್‌ವೊಂದನ್ನು ಆರಂಭಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ನಾದಯೋಗಿ ಯೂಟ್ಯೂಬ್‌ ಚಾನೆಲ್‌

ತಮ್ಮ ಯೂಟ್ಯೂಬ್‌ ಚಾನೆಲ್‌ಗೆ ಚಂದನ್‌ ಶೆಟ್ಟಿ ನಾದಯೋಗಿ ಎಂದು ಹೆಸರಿಟ್ಟಿದ್ದಾರೆ. ಯೂಟ್ಯೂಬ್ ಚಾನಲ್‌ಗೆ ಚಂದನ್‌ ಶೆಟಿ ಪತ್ನಿ ನಿವೇದಿತಾ ಗೌಡ ಚಾಲನೆ ನೀಡಿದರು. ಚಂದನ್‌ ಶೆಟ್ಟಿ ಬರ್ತ್‌ಡೇ ಮರುದಿನ ಗಣೇಶ ಚತುರ್ಥಿ ಆಗಿರುವುದರಿಂದ ಗಣಪತಿ ಕುರಿತಾದ ಗಂ ಗಣಪತಿ ಹಾಡಿನೊಂದಿಗೆ ಯೂಟ್ಯೂಬ್‌ ಚಾನೆಲ್ ಆರಂಭವಾಗಿದೆ. 2 ದಿನಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ಈ ಲಿರಿಕಲ್‌ ವಿಡಿಯೋ ಹಾಡನ್ನು ನೋಡಿದ್ದಾರೆ.

8 ವರ್ಷಗಳ ಹಿಂದೆ ಮೊದಲ ಹಾಡು ರಿಲೀಸ್‌ ಆಗಿತ್ತು

ತಮ್ಮ ಯೂಟ್ಯೂಬ್‌ ಚಾನೆಲ್‌ ಬಗ್ಗೆ ಚಂದನ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ''8 ವರ್ಷಗಳ ಹಿಂದೆ ನನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ಮೊದಲ ಹಾಡು ಬಿಡುಗಡೆಯಾಗಿತ್ತು. ಈಗ ಮತ್ತೊಂದು ಹೊಸ ಹೆಜ್ಜೆ ಇಟ್ಟಿದ್ದೇನೆ. ಜೀರೋ ಸಬ್‌ಸ್ಕ್ರೈಬರ್‌ನೊಂದಿಗೆ ನಾದಯೋಗಿ ಎಂಬ ಯೂಟ್ಯೂಬ್ ಚಾನೆಲ್‌ ಆರಂಭಿಸಿದ್ದೇನೆ. ಈ ಚಾನೆಲ್ ಭಕ್ತಿಗೀತೆಗಳಿಗೆ ಮಾತ್ರ ಮೀಸಲಾಗಿರುತ್ತದೆ. ಈ ಯೂಟ್ಯೂಬ್‌ ಚಾನೆಲ್‌ ಮೂಲಕ ಈಗಿನ ಯುವ ಜನತೆಗೆ ಆಧ್ಯಾತ್ಮಿಕತೆಯನ್ನು ಪರಿಚಯಿಸುವುದು ನನ್ನ ಉದ್ಧೇಶ.

ಹೊಸ ಪ್ರತಿಭೆಗಳಿಗೆ ಅವಕಾಶ

ಮೈಸೂರಿನ ಅರ್ಜುನ ಅವಧೂತರು ಇದಕ್ಕೆ ಪ್ರೇರಣೆ. ಇದರ ಮೊದಲ ಗೀತೆಯಾಗಿ ಗಂ ಗಣಪತಿ ಎಂಬ ಹಾಡನ್ನು ಬಿಡುಗಡೆ ಮಾಡಿದ್ದೇವೆ‌. ಮುಂದೆ ಕೂಡಾ ಹನುಮ, ಶಿವ ಸೇರಿದಂತೆ ಅನೇಕ ಭಕ್ತಿಗೀತೆಗಳನ್ನು ಬಿಡುಗಡೆ ಮಾಡುತ್ತೇವೆ‌. ಈಗ ಬಿಡುಗಡೆಯಾಗಿರುವ ಗಣಪತಿ ಹಾಡಿನಲ್ಲಿ ವಿಘ್ನ ನಿವಾರಕನ 48 ನಾಮಗಳಿವೆ. ನನ್ನ ತಮ್ಮ ಪುನೀತ್ ಈ ಹಾಡಿನ ವಿಡಿಯೋವನ್ನು ಅದ್ಭುತವಾಗಿ ಮಾಡಿದ್ದಾನೆ. ಈ ಹಾಡನ್ನು ನಾನೇ ಹಾಡಿದ್ದೇ‌ನೆ. ಮುಂದೆ ನಾದ ಯೋಗಿ ಚಾನೆಲ್‌ನಲ್ಲಿ ಸಾಕಷ್ಟು ಪ್ರತಿಭೆಗಳಿಗೆ ಅವಕಾಶ ನೀಡಲಾಗುವುದು ಎಂದು ಚಂದನ್ ಶೆಟ್ಟಿ ತಮ್ಮ ಯೂಟ್ಯೂಬ್‌ ಚಾನೆಲ್‌ ಬಗ್ಗೆ ಮಾಹಿತಿ ನೀಡಿದರು.

ನಿರ್ಮಾಪಕರಾದ ಸಂಜಯ್ ಗೌಡ, ಗೋವಿಂದರಾಜು, ನವರಸನ್ ಹಾಗೂ ಇನ್ನಿತರರು ಕಾರ್ಯಕ್ರಮಕ್ಕೆ ಆಗಮಿಸಿ ಚಂದನ್ ಶೆಟ್ಟಿ ಅವರ ಹೊಸ ಪ್ರಯತ್ನಕ್ಕೆ ಶುಭ ಕೋರಿದರು. ಸಮಾರಂಭದ ನಂತರ ಕೇಕ್ ಕಟ್ ಮಾಡುವ ಮೂಲಕ ಚಂದನ್ ಶೆಟ್ಟಿ ಅವರ ಹುಟ್ಟುಹಬ್ಬ ಆಚರಿಸಲಾಯಿತು.

2011ರಲ್ಲಿ ಮೊದಲ ಆಲ್ಬಂ ರಿಲೀಸ್

ಚಂದನ್‌ ಶೆಟ್ಟಿ‌ 2011ರಲ್ಲಿ ನನ್ನ ಪ್ರೀತಿ ಸುಳ್ಳಲ ಮೊದಲ ಆಲ್ಬಂ ರಿಲೀಸ್‌ ಮಾಡಿದರು. ನಂತರ 2016ರಲ್ಲಿ ರೈಲ್ವೆ ಚಿಲ್ಡ್ರನ್‌ ಎಂಬ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದರು. ಗಾಂಚಲಿ, ಅಪ್ಪುಗೆ, ಜೋಶಿಲೇ, ಸೀಸರ್‌, ಪೊಗರು, ರಾಣಾ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ ಸದ್ಯಕ್ಕೆ ಸೂತ್ರಧಾರಿ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. ಜೊತೆಗೆ ನನ್ನ ಪ್ರೀತಿ ಸುಳ್ಳಲು, 3 ಪೆಗ್‌, ಟಕೀಲಾ, ಶೋಕಿಲಾಲ, ಕೋಲುಮಂಡೆ, ಸಲಿಗೆ, ಲಕ ಲಕ ಲ್ಯಾಂಬರ್ಗಿನಿ ಆಲ್ಬಂಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.

ಟಿ20 ವರ್ಲ್ಡ್‌ಕಪ್ 2024