ಕನ್ನಡ ಸುದ್ದಿ  /  ಮನರಂಜನೆ  /  Rashmika Movies: ಕಿರಿಕ್‌ ಪಾರ್ಟಿಯಿಂದ ಅನಿಮಲ್‌ವರೆಗೆ; ರಶ್ಮಿಕಾ ಮಂದಣ್ಣರ ಈ 6 ಸಿನಿಮಾ ಮಿಸ್‌ ಮಾಡದೆ ನೋಡಿ

Rashmika Movies: ಕಿರಿಕ್‌ ಪಾರ್ಟಿಯಿಂದ ಅನಿಮಲ್‌ವರೆಗೆ; ರಶ್ಮಿಕಾ ಮಂದಣ್ಣರ ಈ 6 ಸಿನಿಮಾ ಮಿಸ್‌ ಮಾಡದೆ ನೋಡಿ

Rashmika Mandanna Birthday: ನ್ಯಾಷನಲ್‌ ಕ್ರಶ್‌ ಖ್ಯಾತಿಯ ರಶ್ಮಿಕಾ ಮಂದಣ್ಣರಿಗೆ ಇಂದು (ಏಪ್ರಿಲ್‌ 5) ಹುಟ್ಟುಹಬ್ಬದ ಸಂಭ್ರಮ. ರಶ್ಮಿಕಾ ಮಂದಣ್ಣ ನಟಿಸಿದ ಸಿನಿಮಾಗಳ ಸಂಖ್ಯೆ 16ಕ್ಕೂ ಹೆಚ್ಚು. ಈ ಸಿನಿಮಾಗಳಲ್ಲಿ ಮಿಸ್‌ ಮಾಡದೆ ನೋಡಬಹುದಾದ ಆರು ಸಿನಿಮಾಗಳ ಪಟ್ಟಿ ಇಲ್ಲಿದೆ.

ರಶ್ಮಿಕಾ ಮಂದಣ್ಣ ನಟನೆಯ ಪ್ರಮುಖ ಸಿನಿಮಾಗಳು
ರಶ್ಮಿಕಾ ಮಂದಣ್ಣ ನಟನೆಯ ಪ್ರಮುಖ ಸಿನಿಮಾಗಳು

ರಶ್ಮಿಕಾ ಮಂದಣ್ಣ ಇಲ್ಲಿಯವರೆಗೆ ಸುಮಾರು ಹದಿನಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ಕಿರಿಕ್‌ ಪಾರ್ಟಿಯಿಂದ ಇತ್ತೀಚಿನ ಅನಿಮಲ್‌ವರೆಗೆ ಬಹುತೇಕ ಹಿಟ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾ ನಿರ್ಮಾಪಕರ ಪಾಲಿಗೆ ಭರವಸೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಕರ್ನಾಟಕದ ವಿರಾಜಪೇಟೆ ಮೂಲದ ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್‌ ಕ್ರಶ್‌, ಇವರು ನಟಿಸಿದ ಹತ್ತು ಹಲವು ಸಿನಿಮಾಗಳಲ್ಲಿ ತಪ್ಪದೇ ನೋಡಿ ಎನ್ನಬಹುದಾದ ಆರು ಸಿನಿಮಾಗಳ ವಿವರ ಇಲ್ಲಿದೆ. ಜತೆಗೆ ಯಾವ ಒಟಿಟಿಯಲ್ಲಿ ಈ ಸಿನಿಮಾಗಳನ್ನು ನೋಡಬಹುದು ಎಂಬ ವಿವರವೂ ಇದೆ.

ಟ್ರೆಂಡಿಂಗ್​ ಸುದ್ದಿ

ಕಿರಿಕ್‌ ಪಾರ್ಟಿ (2016)

ಕನ್ನಡಿಗರು ರಶ್ಮಿಕಾ ಮಂದಣ್ಣ ಎಂದಾಗ ನೆನಪಿಸಿಕೊಳ್ಳುವುದು ಕಿರಿಕ್‌ ಪಾರ್ಟಿಯ ಸಾನ್ವಿಯನ್ನು. ಕರ್ಣನ ಜತೆಗಿನ ಸುಂದರ ಪ್ರೇಮಕಥೆಗೆ ಜೀವ ತುಂಬಿದ ಸಾನ್ವಿ ಎಲ್ಲರಿಗೂ ಅಚ್ಚುಮೆಚ್ಚಿನ ನಟಿಯಾಗಿ ಹೊರಹೊಮ್ಮಿದ್ದರು. ಕಿರಿಕ್‌ ಪಾರ್ಟಿ ಸಿನಿಮಾವು ರಿಷಬ್‌ ಶೆಟ್ಟಿ ನಿರ್ದೇಶನದ, ಜಿಎಸ್‌ ಗುಪ್ತಾ ಮತ್ತು ರಕ್ಷಿತ್‌ ಶೆಟ್ಟಿ ನಿರ್ಮಾಣದ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ರಕ್ಷಿತ್‌ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ, ಸಂಯುಕ್ತ ಹೆಗ್ಡೆ, ಅಚ್ಚುತ್‌ ಕುಮಾರ್‌, ಅರವಿಂದ್‌ ಅಯ್ಯರ್‌ ಮುಂತಾದ ಕಲಾವಿದರು ನಟಿಸಿದ್ದಾರೆ. ರಕ್ಷಿತ್‌ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣರನ್ನು ನಿಜ ಜೀವನದಲ್ಲಿ ಪ್ರೇಮಿಗಳಾಗಿಸಿದ ಸಿನಿಮಾವಿದು. ಇವರಿಬ್ಬರಿಗೆ ಎಂಗೇಜ್‌ಮೆಂಟ್‌ ಕೂಡ ಆಗಿತ್ತು. ಆದರೆ, ಈ ಸಂಬಂಧ ಮದುವೆ ಹಂತಕ್ಕೆ ತಲುಪಲಿಲ್ಲ.

ಎಲ್ಲಿ ನೋಡಬಹುದು?: ಈ ಸಿನಿಮಾ ಜಿಯೋ ಸಿನಿಮಾ ಒಟಿಟಿಯಲ್ಲಿದೆ.

ಗೀತಾ ಗೋವಿಂದಂ (2018)

ತೆಲುಗಿನಲ್ಲಿ ಕ್ಲಾಸಿಕ್‌ ಲವ್‌ ಸ್ಟೋರಿಯಾಗಿ ಗೀತಾ ಗೋವಿದಂ ಬಿಡುಗಡೆಯಾಗಿತ್ತು. ಈ ಸಿನಿಮಾದ ಹೀರೋ ವಿಜಯ್‌ ದೇವರಕೊಂಡ. ಈಗ ಈತನೇ ರಶ್ಮಿಕಾ ಮಂದಣ್ಣರ ಬಾಯ್‌ಫ್ರೆಂಡ್‌ ಎಂಬ ವದಂತಿಗಳಿವೆ. ತೆಲುಗು ಸಿನಿಮೋದ್ಯಮದಲ್ಲಿ ರಶ್ಮಿಕಾ ಮಂದಣ್ಣರಿಗೆ ದೊಡ್ಡ ಮಟ್ಟದಲ್ಲಿ ಯಶಸ್ಸು ತಂದುಕೊಟ್ಟ ಸಿನಿಮಾವಿದು. ಈ ಸಿನಿಮಾದ ಹಾಡುಗಳು, ಕಥೆ, ರಶ್ಮಿಕಾ ಪಾತ್ರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ, ವಿಜಯ್‌ ದೇವರಕೊಂಡ, ಸುಬ್ಬರಾಜು, ವಿನೆಲಾ ಕಿಶೋರ್‌, ಅನು ಇಮ್ಯುನೆಲ್‌ ಮುಂತಾದವರು ನಟಿಸಿದ್ದಾರೆ.

ಎಲ್ಲಿ ನೋಡಬಹುದು?: ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಮತ್ತು ಝೀ5 ಒಟಿಟಿಯಲ್ಲಿ ಗೀತಾ ಗೋವಿಂದಂ ಸಿನಿಮಾ ನೋಡಬಹುದು.

ಪುಷ್ಪಾ: ದಿ ರೈಸ್‌ (2021)

ಗೀತಾ ಗೋವಿದಂ ಬಳಿಕ ದೇವದದಾಸ್‌, ಯಜಮಾನ, ಡಿಯರ್‌ ಕಾಮ್ರೆಡ್‌, ಸರಿಲೇರು ನೀಕೆವರು, ಭೀಷ್ಮ, ಪೊಗರು, ಸುಲ್ತಾನ್‌ ಮುಂತಾದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವುಗಳಲ್ಲಿ ಬಹುತೇಕ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಒಳ್ಳೆ ಫಸಲು ತಂದುಕೊಟ್ಟಿವೆ. ಆದರೆ, ರಶ್ಮಿಕಾ ಮಂದಣ್ಣರಿಗೆ ನ್ಯಾಷನಲ್‌ ಕ್ರಶ್‌ ಸ್ಥಾನವನ್ನು ತಮದುಕೊಟ್ಟದ್ದು ಪುಷ್ಪಾ ದಿ ರೈಸ್‌ ಸಿನಿಮಾ. ಅಲ್ಲು ಅರ್ಜುನ್‌ ಜತೆ ಶ್ರೀವಲ್ಲಿಯಾಗಿ ರಶ್ಮಿಕಾ ನಟಿಸಿದ್ದರು. ಅಲ್ಲು ಅರ್ಜುನ್‌ನ ಪ್ರಬಲ ಕ್ಯಾರೆಕ್ಟರ್‌ಗೆ ಸರಿಸಾಟಿಯಾಗಿ ನಟಿಸಿದ್ದರು. ಸಾಮಿ ಸಾಮಿ, ಶ್ರೀವಲ್ಲಿ ಹಾಡುಗಳ ಮೂಲಕ ಪ್ರೇಕ್ಷಕರಿಗೆ ಮೋಡಿ ಮಾಡಿದ್ದರು.

ಎಲ್ಲಿ ನೋಡಬಹುದು?: ಅಮೆಜಾನ್‌ ಪ್ರೈಮ್‌ ವಿಡಿಯೋ

ಸೀತಾ ರಾಮನ್‌ (2022)

ಪಾಕಿಸ್ತಾನಿ ಯುವತಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ಮೃಣಾಲ್‌ ಠಾಕೂರ್‌ ಕೂಡ ನಟಿಸಿದ್ದಾರೆ. ಸೀತಾ ಮತ್ತು ಅಫ್ರೀನ್‌ ಎಂಬ ಎರಡು ಪಾತ್ರಗಳಲ್ಲಿ ಇವರು ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣರಿಗೆ ಇನ್ನಷ್ಟು ಜನಪ್ರಿಯತೆ ತಂದುಕೊಟ್ಟ ಸಿನಿಮಾ ಇದಾಗಿದೆ. ರಶ್ಮಿಕಾ ಮಂದಣ್ಣ, ದುಲ್ಕರ್‌ ಸಲ್ಮಾನ್‌, ಮೃಣಾಲ್‌ ಠಾಕೂರ್‌, ರುಕ್ಮಿಣಿ ವಿಜಯಕುಮಾರ್‌, ಭೂಮಿಕಾ ಚೌಲಾ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಗುಡ್‌ ಬೈ (2022)

ಈ ಸಿನಿಮಾದ ಮೂಲಕ ರಶ್ಮಿಕಾ ಮಂದಣ್ಣ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ಅಮಿತಾಬ್‌ ಬಚ್ಚನ್‌ ಜತೆಗೆ ಈ ಫ್ಯಾಮಿಲಿ ಡ್ರಾಮಾದಲ್ಲಿ ರಶ್ಮಿಕಾ ಮಂದಣ್ಣ ನಟನೆ ಶ್ಲಾಘನೆಗೆ ಪಾತ್ರವಾಗಿದೆ.

ಎಲ್ಲಿ ನೋಡಬಹುದು?: ನೆಟ್‌ಫ್ಲಿಕ್ಸ್‌

ಅನಿಮಲ್‌ (2023)

ಕಳೆದ ವರ್ಷ ಬಿಡುಗಡೆಯಾದ ಬಾಲಿವುಡ್‌ ಸಿನಿಮಾ ಅನಿಮಲ್‌. ಇದು ರಶ್ಮಿಕಾ ಮಂದಣ್ಣರ ಕರಿಯರ್‌ನಲ್ಲಿ ಇನ್ನೊಂದು ಮೈಲಿಗಲ್ಲು. ತನ್ನ ತಂದೆಯ ಪ್ರೀತಿಯ ಹಪಾಹಪಿಯಲ್ಲಿರುವ ಮಗನ ಜತೆ ನಟಿಸುವಂತಹ ಸವಾಲಿನ ಪಾತ್ರ. ರಣಬೀರ್‌ ಕಪೂರ್‌ ಜತೆ ರಶ್ಮಿಕಾ ಮಂದಣ್ಣ ನಟಿಸಿ ಜಗತ್ತಿನ ಗಮನ ಸೆಳೆದರು. ಈ ಸಿನಿಮಾದಲ್ಲಿ ಅನಿಲ್‌ ಕಪೂರ್‌, ಬಾಬಿ ಡಿಯೋಲ್‌, ತೃಪ್ತಿ ದಿಮ್ರಿ ಕೂಡ ನಟಿಸಿದ್ದಾರೆ.

ಎಲ್ಲಿ ನೋಡಬಹುದು: ನೆಟ್‌ಫ್ಲಿಕ್ಸ್‌

IPL_Entry_Point