ದರ್ಶನ್‌, ಯಶ್‌ ಪಾಕೆಟ್‌ ತುಂಬಿದೆ! ಅವರಿಗೆ ಒತ್ತಾಯ ಮಾಡಬೇಡಿ; ಕನ್ನಡ ಚಿತ್ರರಂಗದ ಕಟು ವಾಸ್ತವ ಸ್ಥಿತಿ ವಿವರಿಸಿದ ರವಿಚಂದ್ರನ್‌
ಕನ್ನಡ ಸುದ್ದಿ  /  ಮನರಂಜನೆ  /  ದರ್ಶನ್‌, ಯಶ್‌ ಪಾಕೆಟ್‌ ತುಂಬಿದೆ! ಅವರಿಗೆ ಒತ್ತಾಯ ಮಾಡಬೇಡಿ; ಕನ್ನಡ ಚಿತ್ರರಂಗದ ಕಟು ವಾಸ್ತವ ಸ್ಥಿತಿ ವಿವರಿಸಿದ ರವಿಚಂದ್ರನ್‌

ದರ್ಶನ್‌, ಯಶ್‌ ಪಾಕೆಟ್‌ ತುಂಬಿದೆ! ಅವರಿಗೆ ಒತ್ತಾಯ ಮಾಡಬೇಡಿ; ಕನ್ನಡ ಚಿತ್ರರಂಗದ ಕಟು ವಾಸ್ತವ ಸ್ಥಿತಿ ವಿವರಿಸಿದ ರವಿಚಂದ್ರನ್‌

ದಿ ಜಡ್ಜ್‌ಮೆಂಟ್‌ ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ಕನ್ನಡ ಚಿತ್ರೋದ್ಯಮದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಕ್ರೇಜಿಸ್ಟಾರ್‌ ರವಿಚಂದ್ರನ್‌ ಮಾತನಾಡಿದ್ದಾರೆ. ಸ್ಟಾರ್‌ ನಟರು ಹೆಚ್ಚೆಚ್ಚು ಸಿನಿಮಾ ಮಾಡಬೇಕೆನ್ನುವ ಒತ್ತಾಯಕ್ಕೆ ಚಿತ್ರರಂಗದ ವಾಸ್ತವ ಸ್ಥಿತಿ ವಿವರಿಸಿದ್ದಾರೆ ರವಿಚಂದ್ರನ್‌.

ದರ್ಶನ್‌, ಯಶ್‌ ಪಾಕೆಟ್‌ ತುಂಬಿದೆ! ಅವರಿಗೆ ಒತ್ತಾಯ ಮಾಡಬೇಡಿ; ಕನ್ನಡ ಚಿತ್ರರಂಗದ ಕಟು ವಾಸ್ತವ ಸ್ಥಿತಿ ವಿವರಿಸಿದ ರವಿಚಂದ್ರನ್‌
ದರ್ಶನ್‌, ಯಶ್‌ ಪಾಕೆಟ್‌ ತುಂಬಿದೆ! ಅವರಿಗೆ ಒತ್ತಾಯ ಮಾಡಬೇಡಿ; ಕನ್ನಡ ಚಿತ್ರರಂಗದ ಕಟು ವಾಸ್ತವ ಸ್ಥಿತಿ ವಿವರಿಸಿದ ರವಿಚಂದ್ರನ್‌

Ravichandran on Kannada Film industry: ಕಳೆದ ಕೆಲ ದಿನಗಳಿಂದ ಸ್ಯಾಂಡಲ್‌ವುಡ್‌ನಲ್ಲಿ (Sandalwood) ಸ್ಟಾರ್‌ಗಳ ಸಿನಿಮಾಗಳು ಬರುತ್ತಿಲ್ಲ ಎಂಬ ಚರ್ಚೆ ಶುರುವಾಗಿದೆ. ಈ ಬಗ್ಗೆ ಕನ್ನಡ ಚಿತ್ರೋದ್ಯಮವನ್ನೇ ಬಂದ್‌ ಮಾಡುವ ವಿಚಾರವೂ ಮುನ್ನೆಲೆಗೆ ಬಂದಿತ್ತು. ಕರ್ನಾಟಕದಲ್ಲಿನ ಏಕಪರದೆ ಚಿತ್ರಮಂದಿರಗಳು ನಷ್ಟ ಎದುರಿಸುತ್ತಿರುವ ಬಗ್ಗೆಯೂ ಚರ್ಚೆ ನಡೆದಿದೆ. ಒಂದು ಹೆಜ್ಜೆ ಮುಂದೆ ಹೋಗಿ, ಸ್ಟಾರ್‌ ನಟರಿಗೆ ವರ್ಷಕ್ಕೆ ಎರಡ್ಮೂರು ಸಿನಿಮಾ ನೀಡುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film chamber of commerce) ಮನವಿ ಮಾಡಿದೆ. ಇಲ್ಲದಿದ್ದರೆ, ಚಿತ್ರೋದ್ಯಮ ಬಂದ್‌ ಮಾಡುವ ನಿರ್ಧಾರವೂ ಇದೇ ಚೇಂಬರ್‌ ಅಂಗಳದಿಂದಲೇ ತೇಲಿಬಂದಿತ್ತು. ಈಗ ಇದೇ ವಿಚಾರವಾಗಿ ಹಿರಿಯ ನಟ, ಕ್ರೇಜಿಸ್ಟಾರ್‌ ರವಿಚಂದ್ರನ್‌ (Ravichandran) ಗರಂ ಆಗಿದ್ದಾರೆ.

ಶುಕ್ರವಾರವಷ್ಟೇ ಗುರುರಾಜ್‌ ಕುಲಕರ್ಣಿ (ನಾಡಗೌಡ) ನಿರ್ದೇಶನದ, ರವಿಚಂದ್ರನ್‌ ನಟನೆಯ ದಿ ಜಡ್ಜ್‌ಮೆಂಟ್‌ ಸಿನಿಮಾ ಬಿಡುಗಡೆ ಆಗಿದೆ. ರಾಜ್ಯದಾದ್ಯಂತ ಈ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್‌ ಸಿಗುತ್ತಿದೆ. ಈ ವೇಳೆ ಮಾತನಾಡಿರುವ ರವಿಚಂದ್ರನ್‌, ಇತ್ತೀಚಿನ ಈ ಬೆಳವಣಿಗೆಗಳ ಬಗ್ಗೆ ಮಾತನಾಡಿದ್ದಾರೆ. ಎಲ್ಲದಕ್ಕೂ ಮಲಯಾಳಂ ಚಿತ್ರರಂಗವನ್ನೇ ಹೋಲಿಕೆ ಮಾಡುತ್ತಿದ್ದರೆ, ಅಲ್ಲಿನ ಕಥೆಗಳನ್ನು ತಂದು ಇಲ್ಲಿ ಸಿನಿಮಾ ಮಾಡಲಿ. ಸ್ಟಾರ್‌ ನಟರಿಗೆ ಅವರದೇ ಆದ ಬ್ರಾಂಡ್‌ ಇರುತ್ತದೆ. ಅದಕ್ಕೆ ತಕ್ಕದಾಗಿಯೇ ಸಿನಿಮಾ ಮಾಡಬೇಕೇ ಹೊರತು. ವರ್ಷಕ್ಕೆ ಮೂರು ಸಿನಿಮಾ ಮಾಡಲೇಬೇಕು ಎಂದು ಫೋರ್ಸ್‌ ಮಾಡಿದರೆ, ಅದು ಸಾಧ್ಯವಿಲ್ಲ ಎಂದು ಎಂದು ಕೊಂಚ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಹೀಗಿದೆ ರವಿಚಂದ್ರನ್‌ ಮಾತಿನ ಪೂರ್ತಿ ವಿವರ.

ಹಾಗಾದ್ರೆ ಮಲಯಾಳಿ ಕಥೆಯನ್ನೇ ತಂದು ಸಿನಿಮಾ ಮಾಡಿ..

"ಎಲ್ಲದಕ್ಕೂ ಸಮಯ ಬೇಕು. ಹೆಚ್ಚೆಚ್ಚು ಸಿನಿಮಾ ಮಾಡಿ. ಮಾತೆತ್ತಿದರೆ ಮಲಯಾಳಂ ಸಿನಿಮಾ ಅಂತೀರಲ್ಲ. ಅಲ್ಲಿನವರ ಕಡೆ ಹೀಗಿ ಸ್ಕ್ರಿಪ್ಟ್‌ ಬರೆಸಿ ಕನ್ನಡದಲ್ಲಿ ಸಿನಿಮಾ ಮಾಡಿ ನೋಡೋಣ. ನಿಮಗೆ ಇಲ್ಲಿ ಕಥೆಗಳು ಸಿಗಲಿಲ್ಲ ಅಂದರೆ, ಬೇರೆ ಕಡೆ ಹೋಗಿ ಹುಡುಕಿ. ಎಲ್ಲಿ ಸಿಗುತ್ತೋ ಅಲ್ಲಿ ಮಾಡಿಸಿಕೊಂಡು ಬನ್ನಿ. ಪ್ರೇಕ್ಷಕ ಒಳ್ಳೆಯ ಸಿನಿಮಾಗೆ ಪ್ರೋತ್ಸಾಹ ಕೊಟ್ಟಿದ್ದಾನೆ. ಕೊಡುತ್ತಲೇ ಬಂದಿದ್ದಾನೆ. ಎಲ್ಲರಿಗೂ ಯಶೇ ಬೇಕು, ದರ್ಶನ್ನೇ ಬೇಕು ಎಂದಾದರೆ, ಸಿಗಬೇಕಲ್ಲ. ಅದು ಅವರವರ ಇಷ್ಟ. ಕಥೆ ಓಕೆ ಆಗಬೇಕಲ್ಲವಾ? ನಾಳೆ ಯಶ್‌ ವರ್ಷಕ್ಕೆ ಮೂರು ಸಿನಿಮಾ, ದರ್ಶನ್‌ ಮೂರು ಸಿನಿಮಾ ಮಾಡಿದ್ರೆ, ಎರಡು ವರ್ಷಕ್ಕೆ ಅವ್ರನ್ನ ಮನೆಗೆ ಕಳಿಸಿ ಬಿಡ್ತೀರಾ"

ಅವರದೇ ಆದ ಬ್ರಾಂಡ್‌ ಇರುತ್ತೆ.. ಒತ್ತಾಯ ಏಕೆ

"ಅವರಿಗೇ ಆದ ಬ್ರಾಂಡ್‌, ಅವರಿಗೆ ಆದ ತಾಕತ್ತು, ಅವರಿಗೆ ಆದ ಬಜೆಟ್‌, ಅವರಿಗೆ ಆದ ಸ್ಟೇಟಸ್‌ ಇರುತ್ತದೆ. ಸಿನಿಮಾ ಸಲುವಾಗಿ ಯಾರನ್ನೂ ಒತ್ತಾಯ ಮಾಡಬೇಡಿ. ನೀವು ಇಷ್ಟೇ ಸಿನಿಮಾ ಮಾಡಬೇಕು, ಅಷ್ಟೇ ಸಿನಿಮಾ ಮಾಡಬೇಕು ಎಂಬುದು ಅಸಾಧ್ಯವಾದ ಮಾತು. ಅದು ಅವರ ಆಯ್ಕೆ. ಸ್ಟೋರಿ ಡಿಸೈಡ್‌ ಮಾಡೋದು ಯಾರು? ಒಬ್ಬ ಹೀರೋ ಅಂದ ಮೇಲೆ ಅವನದೇ ಆದ ಬ್ರಾಂಡ್‌ ಉಳಿಸಿಕೊಳ್ಳಬೇಕಾಗುತ್ತದೆ. ಕೆಜಿಎಫ್‌ ಆದಮೇಲೆ ಯಶ್‌ ಯಾವ ಥರದ ಸಿನಿಮಾ ಮಾಡಬೇಕು? ಎಲ್ಲರ ನಿರೀಕ್ಷೆ ಏನಿರುತ್ತದೆ? ದರ್ಶನ್‌ ಕಾಟೇರ ಆದಮೇಲೆ ಏನು ಮಾಡಬೇಕು? ಅವರಿಗೆ ಆದ ಒಂದು ಇಮೇಜ್‌ ಇರುತ್ತೆ, ಬಜೆಟ್‌ ಇರುತ್ತೆ, ಅದರ ಪ್ರಕಾರ ಅವ್ರು ಲೆಕ್ಕ ಹಾಕ್ತಾರೆ"

ಮೊದಲು ಸಮಸ್ಯೆ ಪಟ್ಟಿ ಮಾಡಿ; ಚೇಂಬರ್‌ಗೆ ಚಾಟಿ

"ವರ್ಷಕ್ಕೆ ಮೂರು ಸಿನಿಮಾ ಮಾಡಿ ಎಂಬುದು ಆಗದ ಮಾತು. ಸಿನಿಮಾ ಮಾಡೋದು ಯಾವಾಗ, ಕಥೆ ಓಕೆ ಆದಾಗ. ನಮಗೆ ದುಡ್ಡು ಕೊಡಿ ನಾವು ಸಿನಿಮಾ ಮಾಡ್ತಿವಿ. ಆದರೆ ಅವ್ರ ಪಾಕೆಟ್‌ ತುಂಬಿದೆ, ಅವ್ರು ಕಥೆ ಕೇಳ್ತಾರೆ. ಯಾರೂ ಸಹ ಸಿನಿಮಾ ಮಾಡು ಮಾಡು ಅಂತ ಫೋರ್ಸ್‌ ಮಾಡುವುದು ಸರಿಯಲ್ಲ. ಚೇಂಬರ್‌ನವರಿಗೆ ಯಾರ ಸಮಸ್ಯೆ ಅಂತ ಬೆರಳು ತೋರಿಸಿ ಹೇಳೋಕೆ ಹೇಳಿ, ಆ ಸಮಸ್ಯೆಗೆ ಪರಿಹಾರ ಏನು ಅಂತ ಹೇಳಿ. ಮೊದಲು ಸಮಸ್ಯೆಗಳನ್ನು ಪಟ್ಟಿ ಮಾಡಿ. ಸ್ಟ್ರೈಕ್‌ ಮಾಡಿದ್ರೆ ಸಮಸ್ಯೆ ಆಗೋದು ನಮಗೆ ಅಲ್ವಾ? ಮೊದಲೇ ಕೆಲಸ ಇಲ್ಲ ಅಂತ ಕೂತಿದ್ದೇವೆ. ಸ್ಟ್ರೈಕ್‌ ಮಾಡಿ ಎಲ್ಲಿಗೆ ಹೋಗಬೇಕು. ಇದು ಇಂಡಸ್ಟ್ರಿಗೂ ಒಳ್ಳೆಯದಲ್ಲ"

ಇದು ಈಗಿನ ಸ್ಥಿತಿಯಲ್ಲ..

"ಕನ್ನಡ ಇಂಡಸ್ಟ್ರಿ ದೊಡ್ಡ ದೊಡ್ಡ ಸಿನಿಮಾ ಕೊಟ್ಟಿದೆ. ಹಿಟ್‌ ಸಿನಿಮಾಗಳನ್ನೇ ನೀಡಿದೆ. ಮಧ್ಯ ಒಂದು ಬ್ಯಾಡ್‌ ಟೈಮ್‌ ಬರುತ್ತೆ. ಯಾರು ಬರಲ್ಲ ಅಂದವ್ರು. ನೂರು ಸಿನಿಮಾದಲ್ಲಿ 5 ಸಿನಿಮಾ ದುಡ್ಡು ಮಾಡುತ್ತೆ, 5 ಸಿನಿಮಾ ಅಲ್ಲಲ್ಲಿ ಸೋರಿ ಹೋಗುತ್ತೆ. 95 ಸಿನಿಮಾಗಳು ಪ್ಲಾಪ್‌ ಆಗುತ್ವೆ. ಇದು ಇಂದಿನ ಕಥೆ ಅಲ್ಲ, ಆವತ್ತಿನ ಕಾಲದಿಂದಲೂ ನಡೆದುಕೊಂಡೇ ಬರುತ್ತಿದೆ. ಪ್ರತಿ ಸಲನೂ ಕಾಂಪಿಟೇಷನ್‌ ಮಾಡುತ್ತಲೇ ಬಂದಿದ್ದೇವೆ. ಐದು ಭಾಷೆ ಜತೆಗೆ ನಾವು ಕಾಂಪಿಟೇಷನ್‌ ಮಾಡಲೇಬೇಕು. ಸಿನಿಮಾ ಹೇಗೆ ಗೆಲ್ಲಬೇಕು ಅನ್ನೋದನ್ನ ಮಾಡಿ"

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner