ಕನ್ನಡ ಸುದ್ದಿ  /  ಮನರಂಜನೆ  /  ಶಿಳ್ಳೆ, ಕೇಕೆ, ಚಪ್ಪಾಳೆ.. ಬೆಳ್ಳಿತೆರೆ ಮೇಲೆ ಮತ್ತೆ ಮಿನುಗಿದ ಕಲ್ಟ್‌ ಕ್ಲಾಸಿಕ್‌ A ಚಿತ್ರ; ಥಿಯೇಟರ್‌ ಮುಂದೆ ಹಬ್ಬ ಮಾಡಿದ ಉಪ್ಪಿ ಫ್ಯಾನ್ಸ್

ಶಿಳ್ಳೆ, ಕೇಕೆ, ಚಪ್ಪಾಳೆ.. ಬೆಳ್ಳಿತೆರೆ ಮೇಲೆ ಮತ್ತೆ ಮಿನುಗಿದ ಕಲ್ಟ್‌ ಕ್ಲಾಸಿಕ್‌ A ಚಿತ್ರ; ಥಿಯೇಟರ್‌ ಮುಂದೆ ಹಬ್ಬ ಮಾಡಿದ ಉಪ್ಪಿ ಫ್ಯಾನ್ಸ್

ಉಪೇಂದ್ರ ನಟಿಸಿ ನಿರ್ದೇಶಿಸಿದ A ಸಿನಿಮಾ ಬರೋಬ್ಬರಿ 25 ವರ್ಷಗಳ ಬಳಿಕ ಮತ್ತೆ ಮರು ಬಿಡುಗಡೆ ಆಗಿದೆ. ಈ ಕಲ್ಟ್‌ ಕ್ಲಾಸಿಕ್‌ ಚಿತ್ರವನ್ನು ಕಣ್ತುಂಬಿಕೊಂಡ ಫ್ಯಾನ್ಸ್‌ ಥಿಯೇಟರ್‌ ಮುಂದೆ ಹಬ್ಬ ಮಾಡುತ್ತಿದ್ದಾರೆ.

ಶಿಳ್ಳೆ, ಕೇಕೆ, ಚಪ್ಪಾಳೆ.. ಬೆಳ್ಳಿತೆರೆ ಮೇಲೆ ಮತ್ತೆ ಮಿನುಗಿದ ಕಲ್ಟ್‌ ಕ್ಲಾಸಿಕ್‌ A ಚಿತ್ರ; ಥಿಯೇಟರ್‌ ಮುಂದೆ ಹಬ್ಬ ಮಾಡಿದ ಉಪ್ಪಿ ಫ್ಯಾನ್ಸ್
ಶಿಳ್ಳೆ, ಕೇಕೆ, ಚಪ್ಪಾಳೆ.. ಬೆಳ್ಳಿತೆರೆ ಮೇಲೆ ಮತ್ತೆ ಮಿನುಗಿದ ಕಲ್ಟ್‌ ಕ್ಲಾಸಿಕ್‌ A ಚಿತ್ರ; ಥಿಯೇಟರ್‌ ಮುಂದೆ ಹಬ್ಬ ಮಾಡಿದ ಉಪ್ಪಿ ಫ್ಯಾನ್ಸ್

A Re-Release: ರಿಯಲ್‌ ಸ್ಟಾರ್‌ ಉಪೇಂದ್ರ ಸಿನಿಮಾ ಕೆರಿಯರ್‌ನಲ್ಲಿ A ಚಿತ್ರಕ್ಕೆ ಅದರದೇ ಆದ ತೂಕವಿದೆ. ಇದೀಗ ದಶಕಗಳ ಹಿಂದೆ ತೆರೆಗೆ ಬಂದಿದ್ದ ಅದೇ ಸಿನಿಮಾ ಮರು ಬಿಡುಗಡೆ ಆಗಿದೆ. ಟಿಪಿಕಲ್‌ ಉಪ್ಪಿ ಸಿನಿಮಾ ನೋಡದೇ ತುಂಬ ದಿನಗಳಿಂದ ಕಾದಿದ್ದ ಅಭಿಮಾನಿಗಳಿಗೆ A ಚಿತ್ರ ಬಾಡೂಟವನ್ನೇ ಬಡಿಸಿದೆ. ಬೆಂಗಳೂರು ಸೇರಿ ರಾಜ್ಯದ ಹಲವೆಡೆ A ಸಿನಿಮಾ ಬಿಡುಗಡೆ ಆಗಿದೆ. ಹಾಗೇ ಬಿಡುಗಡೆ ಆಗಿದ್ದೇ ತಡ, ಹೊಸ ಸಿನಿಮಾ ರಿಲೀಸ್‌ ಆಗಿದೆಯೇನೋ ಅನ್ನೂ ಭಾವ ಚಿತ್ರಮಂದಿರಗಳ ಮುಂದೆ ಆವರಿಸಿದೆ.

ಟ್ರೆಂಡಿಂಗ್​ ಸುದ್ದಿ

ಅಷ್ಟೇ ಅಲ್ಲ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಪ್ರಸನ್ನ ಚಿತ್ರಮಂದಿರದಲ್ಲಿ ಬೆಳಗಿನ 6 ಗಂಟೆಯ ಶೋಕ್ಕೆ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದೆ. ಚಿತ್ರಮಂದಿರದ ಮುಂದೆ ಉಪೇಂದ್ರ ಅವರ ಬೃಹತ್‌ ಕಟೌಟ್‌ ನಿಲ್ಲಿಸಲಾಗಿದ್ದು, A ಚಿತ್ರದ ಹಾಡುಗಳಿಗೆ ಸ್ಟೆಪ್ಸ್‌ ಹಾಕುತ್ತಿದ್ದಾರೆ ಸಿನಿಮಾ ಪ್ರೇಮಿಗಳು. ಪಟಾಕಿ ಸಿಡಿಸಿ ಸಂಭ್ರಮಿಸುತ್ತಿರುವುದು ಒಂದೆಡೆಯಾದರೆ, 25 ವರ್ಷಗಳ ಹಿಂದಿನ ಸಿನಿಮಾವನ್ನು ತೆರೆಮೇಲೆ ಕಣ್ತುಂಬಿಕೊಳ್ಳುವ ಮತ್ತೊಂದು ಅವಕಾಶ ಪ್ರೇಕ್ಷಕರಿಗೆ ಸಿಕ್ಕಿದೆ. ಬಿಡುಗಡೆಯಾದ ಕೆಲವು ಚಿತ್ರಮಂದಿರಗಳಲ್ಲಿ ಹೌಸ್‌ಫುಲ್‌ ಪ್ರದರ್ಶನವನ್ನೂ ಕಾಣುತ್ತಿದೆ.

ಥಿಯೇಟರ್‌ ಮುಂದೆ ಸಂಭ್ರಮ

ಚಿತ್ರಮಂದಿರದ ಹೊರಗೆ ಇಷ್ಟೆಲ್ಲ ಕಾಣಿಸಿದರೆ, ಥಿಯೇಟರ್‌ ಒಳಗೆ ಉಪೇಂದ್ರ ಅವರ ಡೈಲಾಗ್‌, ಸ್ಟ್ರೀನ್‌ ಪ್ರಸೆನ್ಸ್‌ಗೆ ಪ್ರೇಕ್ಷಕ ಮತ್ತೊಮ್ಮೆ ಮಾರು ಹೋಗಿದ್ದಾನೆ. ಸ್ಕ್ರೀನ್‌ ಮುಂಭಾಗದಲ್ಲಿ ಹಾಡುಗಳಿಗೆ ಡಾನ್ಸ್‌ ಮಾಡುವುದು, ಪ್ರತಿ ಡೈಲಾಗ್‌ಗಳಿಗೂ ಶಿಳ್ಳೆ ಚಪ್ಪಾಳೆಗಳ ಮಳೆಯೇ ಸುರಿಯುತ್ತಿದೆ. ಹೀಗೆ ಅಭಿಮಾನಿಗಳ ಈ ಸಂಭ್ರಮ ಸೋಷಿಯಲ್‌ ಮೀಡಿಯಾಕ್ಕೂ ಎಂಟ್ರಿಕೊಟ್ಟಿದೆ. ಚಿತ್ರದ ಮಾಸ್‌ ಎಲಿಮೆಂಟ್‌ಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಅಂದಿನ ಕಥೆ ಇಂದಿಗೂ ಪ್ರಸ್ತುತ

ಸದ್ಯ ರಾಜ್ಯ ರಾಜಕೀಯದಲ್ಲಿನ ಎಷ್ಟೋ ವಿಚಾರಗಳನ್ನು ಆವತ್ತೇ A ಸಿನಿಮಾದಲ್ಲಿ ಹೇಳಿ ಮುಗಿಸಿದ್ದಾರೆ ಉಪೇಂದ್ರ. ಅಪಹರಣ, ಭ್ರಷ್ಟಾಚಾರ, ರಾಜಕಾರಣಿಗಳ ಖಾಸಗಿ ವಿಡಿಯೋಗಳ ಬಗ್ಗೆ 25 ವರ್ಷಗಳ ಹಿಂದೆಯೇ ನಿರ್ದೇಶಕ ಉಪೇಂದ್ರ ತೆರೆಮೇಲೆ ತಂದಿದ್ದಾರೆ. ಈಗಲೂ ಪ್ರಜ್ವಲ್‌ ರೇವಣ್ಣ ಅವರ ಖಾಸಗಿ ವಿಡಿಯೋಗಳದ್ದೇ ಸುದ್ದಿ. ಸಿನಿಮಾದಲ್ಲಿಯೇ ಸಿನಿಮಾ ಮಾಡಿ, ಗೆದ್ದು ಬೀಗಿದ್ದರು ಉಪೇಂದ್ರ. 1988ರಲ್ಲಿ ಬಿಡುಗಡೆಯಾಗಿದ್ದ A ಸಿನಿಮಾ ಆಗಿನ ಜಮಾನಾದಲ್ಲಿಯೇ ಕೋಟಿ ಕೋಟಿ ಬಾಚಿಕೊಂಡಿತ್ತು.

ಆಗಿನ ಕಾಲದಲ್ಲಿಯೇ 20 ಕೋಟಿ ಕಲೆಕ್ಷನ್‌

26 ವರ್ಷಗಳ ಹಿಂದೆ ಸ್ವತಃ ಉಪೇಂದ್ರ ನಾಯಕನಾಗಿ ನಟಿಸಿ ನಿರ್ದೇಶಿಸಿದ್ದ A ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿತ್ತು. ಕಲೆಕ್ಷನ್‌ ವಿಚಾರದಲ್ಲಿಯೂ ದಾಖಲೆ ಬರೆದಿತ್ತು. ಆ ಸಿನಿಮಾವನ್ನೇ ತಾಂತ್ರಿಕವಾಗಿ ಮತ್ತಷ್ಟು ಚೆಂದಗೊಳಿಸಿ ತೆರೆಮೇಲೆ ತಂದಿದ್ದಾರೆ ನಿರ್ಮಾಪಕರು. ಅದರಂತೆ, ಇಂದು (ಮೇ 17ರಂದು) A ಸಿನಿಮಾ ಮತ್ತೆ ತೆರೆಮೇಲೆ ಮಿನುಗುತ್ತಿದೆ. ಬಿ ಜಗನ್ನಾಥ್, ಬಿ. ಜಿ ಮಂಜುನಾಥ್‌ ಈ ಸಿನಿಮಾ ನಿರ್ಮಾಣ ಮಾಡಿದ್ದರು. ಆಗಿನ ಕಾಲದಲ್ಲಿ 1ಕೋಟಿ 25 ಲಕ್ಷ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ 20 ಕೋಟಿ ಕಲೆಕ್ಷನ್‌ ಮಾಡಿತ್ತು.

A ಮರು ಬಿಡುಗಡೆ ಬಗ್ಗೆ ಚಾಂದಿನಿ ಮಾತು

"ನನ್ನ ಜೀವನವನ್ನೇ ಬದಲಿಸಿದಂತಹ ಸಿನಿಮಾ ಅದು. ಅದರಿಂದ ನನಗೆ ಸಿಕ್ಕ ಕನ್ನಡ ಜನರ ಪ್ರೀತಿ ಹಾಗೂ ಆ ಸಿನಿಮಾದ ಅ ಒಂದು ಫೇಮಸ್ ಡೈಲಾಗ್ "GOD IS GREAT" ಅನ್ನುವ ಹಾಗೆ, ಈ ಎರಡರ ಆಶೀರ್ವಾದದಿಂದ ನಾನು ಇವತ್ತಿಗೂ A ಚಾಂದಿನಿ ರೀತಿಯಲ್ಲೆ ಇದ್ದೀನಿ. ಕಾಲಘಟ್ಟವನ್ನೂ ಮೀರಿದ ಒಂದು ಅಪ್ರತಿಮ ಪ್ರೇಮ ಕಥೆ A. ಪ್ರಬುದ್ಧ ನಿರ್ದೇಶಕ ಉಪೇಂದ್ರ ಅವರ ನಿರ್ದೇಶನದ ಬಗ್ಗೆ ವರ್ಣಿಸಲು ಪದಗಳೇ ಇಲ್ಲ‌. ಅಂದಿಗೂ ಇಂದಿಗೂ ನನ್ನ ಮೆಚ್ಚಿನ ನಿರ್ದೇಶಕ ಉಪೇಂದ್ರ ಅವರು. ಗುರುಕಿರಣ್ ಅವರ ಸಂಗೀತದಲ್ಲಿ ಮೂಡಿಬಂದಿರುವ A ಚಿತ್ರದ ಹಾಡುಗಳು ಈಗಲೂ ಜನಪ್ರಿಯ. ಕನ್ನಡಿಗರು A ಚಿತ್ರದಿಂದ ಇಲ್ಲಿಯವರೆಗೂ ನನಗೆ ತೋರುತ್ತಿರುವ ಪ್ರೀತಿಗೆ ಚಿರ ಋಣಿ" ಎಂದಿದ್ದಾರೆ ಚಾಂದಿನಿ.

ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.

ಟಿ20 ವರ್ಲ್ಡ್‌ಕಪ್ 2024