ಉಪೇಂದ್ರ A ಚಿತ್ರದ ಮರು ಬಿಡುಗಡೆಗೆ ಪಕ್ಕದ ರಾಜ್ಯದಲ್ಲೂ ಹೆಚ್ಚಿತು ಬೇಡಿಕೆ; ಜೂನ್‌ 21ರಂದು ಹಬ್ಬ ಮಾಡಲು ಸಜ್ಜಾದ ಫ್ಯಾನ್ಸ್‌
ಕನ್ನಡ ಸುದ್ದಿ  /  ಮನರಂಜನೆ  /  ಉಪೇಂದ್ರ A ಚಿತ್ರದ ಮರು ಬಿಡುಗಡೆಗೆ ಪಕ್ಕದ ರಾಜ್ಯದಲ್ಲೂ ಹೆಚ್ಚಿತು ಬೇಡಿಕೆ; ಜೂನ್‌ 21ರಂದು ಹಬ್ಬ ಮಾಡಲು ಸಜ್ಜಾದ ಫ್ಯಾನ್ಸ್‌

ಉಪೇಂದ್ರ A ಚಿತ್ರದ ಮರು ಬಿಡುಗಡೆಗೆ ಪಕ್ಕದ ರಾಜ್ಯದಲ್ಲೂ ಹೆಚ್ಚಿತು ಬೇಡಿಕೆ; ಜೂನ್‌ 21ರಂದು ಹಬ್ಬ ಮಾಡಲು ಸಜ್ಜಾದ ಫ್ಯಾನ್ಸ್‌

ಮೇ 17ರಂದು ಕರ್ನಾಟಕದಲ್ಲಿ ಮರು ಬಿಡುಗಡೆ ಆಗಿದ್ದ ಉಪೇಂದ್ರ ನಟಿಸಿ ನಿರ್ದೇಶಿಸಿದ್ದ ಸ್ಯಾಂಡಲ್‌ವುಡ್‌ ಕಲ್ಟ್‌ ಕ್ಲಾಸಿಕ್‌ A ಸಿನಿಮಾ ಇದೀಗ ಪಕ್ಕದ ರಾಜ್ಯಗಳಲ್ಲೂ ಅಲ್ಲಿನ ಭಾಷೆಯಲ್ಲಿ ಮರು ಬಿಡುಗಡೆ ಆಗುತ್ತಿದೆ.

ಉಪೇಂದ್ರ A ಚಿತ್ರದ ಮರು ಬಿಡುಗಡೆಗೆ ಪಕ್ಕದ ರಾಜ್ಯದಲ್ಲೂ ಹೆಚ್ಚಿತು ಬೇಡಿಕೆ; ಜೂನ್‌ 21ರಂದು ಹಬ್ಬ ಮಾಡಲು ಸಜ್ಜಾದ ಫ್ಯಾನ್ಸ್‌
ಉಪೇಂದ್ರ A ಚಿತ್ರದ ಮರು ಬಿಡುಗಡೆಗೆ ಪಕ್ಕದ ರಾಜ್ಯದಲ್ಲೂ ಹೆಚ್ಚಿತು ಬೇಡಿಕೆ; ಜೂನ್‌ 21ರಂದು ಹಬ್ಬ ಮಾಡಲು ಸಜ್ಜಾದ ಫ್ಯಾನ್ಸ್‌

Upendra A Re-Release: ರಿಯಲ್‌ ಸ್ಟಾರ್‌ ಉಪೇಂದ್ರ ಸದ್ಯ UI ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಈಗಾಗಲೇ ಪೋಸ್ಟರ್‌, ಹಾಡಿನ ಮೂಲಕವೇ ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದ್ದಾರೆ. ಹೀಗಿರುವಾಗಲೇ ಸ್ಯಾಂಡಲ್‌ವುಡ್‌ನ ಕಲ್ಟ್‌ ಕ್ಲಾಸಿಕ್‌ A ಚಿತ್ರ ಮೇ 17ರಂದು ಮರು ಬಿಡುಗಡೆ ಆಗಿತ್ತು. ಕರ್ನಾಟಕದಲ್ಲಿಒಳ್ಳೆಯ ರೆಸ್ಪಾನ್ಸ್‌ ಸಹ ಸಿಕ್ಕಿತ್ತು. ಇದೀಗ ಈ ಚಿತ್ರ ಪಕ್ಕದ ರಾಜ್ಯದಲ್ಲೂ ಅಲ್ಲಿನ ಭಾಷೆಯಲ್ಲಿಯೇ ಮರು ಬಿಡುಗಡೆ ಆಗಲಿದೆ.

ಹಳೇ ಸಿನಿಮಾಗಳಿಗೆ ಮರು ಬಿಡುಗಡೆ ಭಾಗ್ಯ ದೊರೆಯುತ್ತಿರುವುದು ಹೊಸ ವಿಚಾರವೇನಲ್ಲ. ಈ ಹಿಂದಿನಿಂದಲೂ ಈ ಪದ್ಧತಿ ಚಾಲ್ತಿಯಲ್ಲಿದೆ. 4K ಮೂಲಕ ತಾಂತ್ರಿಕವಾಗಿ ಸಿನಿಮಾವನ್ನು ಇನ್ನಷ್ಟು ಶ್ರೀಮಂತಗೊಳಿಸಿ ನೋಡುಗರನ್ನು ಸೆಳೆಯುವ ಕೆಲಸಗಳಾಗುತ್ತಿವೆ. ಅದರಂತೆ A ಸಿನಿಮಾ ಸಹ ಮೇ 17ರಂದು ಮರುಬಿಡುಗಡೆಯಾಗಿ ಸದ್ದು ಮಾಡಿತ್ತು. ಇದೀಗ ಇದೇ ಸಿನಿಮಾ ಪಕ್ಕದ ತೆಲುಗು ರಾಜ್ಯಗಳಲ್ಲೂ ರೀ ರಿಲೀಸ್‌ ಆಗಲಿದೆ.

ತೆಲುಗು ನಾಡಿನಲ್ಲೂ ಉಪ್ಪಿ ಹವಾ..

ಉಪೇಂದ್ರ ಅಭಿನಯದ A ಚಿತ್ರ ಆಗಿನ ಕಾಲದಲ್ಲಿಯೇ ಟ್ರೆಂಡ್ ಸೆಟ್ ಮಾಡಿತ್ತು. ನೂರು ದಿನಗಳ ಕಾಲ ಪ್ರದರ್ಶನ ಕಂಡಿದ್ದ ಈ ಸಿನಿಮಾ, ಆರಂಭದ ಮೂರ್ನಾಲ್ಕು ವಾರ ಟಿಕೆಟ್‌ ಸಿಗಲಾರದಷ್ಟು ಮ್ಯಾಜಿಕ್‌ ಮಾಡಿತ್ತು. ಸುಮಾರು 26 ವರ್ಷಗಳ ಹಿಂದೆ ಅಂದರೆ, 1998ರಲ್ಲಿ ಬಿಡುಗಡೆಯಾದ ಈ ಸಿನಿಮಾ ಇಂದಿಗೂ ಅದೇ ಕ್ರೇಜ್‌ ಉಳಿಸಿಕೊಂಡಿದೆ. ಇದೀಗ ಇದೇ ಚಿತ್ರವನ್ನು ತೆಲುಗು ರಾಜ್ಯಗಳಲ್ಲಿ ತೆರೆಗೆ ತರಲು ನಿರ್ಮಾಪಕ ಲಿಂಗಂ ಯಾದವ್‌ ನಿರ್ಧರಿಸಿದ್ದಾರೆ. ಈ ಮೂಲಕ ವಿಂಟೇಜ್‌ ದಿನಗಳನ್ನು ಮತ್ತೆ ಅನಾವರಣಗೊಳಿಸುತ್ತಿದ್ದಾರೆ.

ಹಾಗಾದರೆ ಯಾವಾಗ ರಿಲೀಸ್‌?

ಉಪೇಂದ್ರ ನಟನೆಯ ಈ ಚಿತ್ರ ಪ್ರೇಕ್ಷಕರ ಮುಂದೆ ಯಾವಾಗ ಬರುತ್ತಿದೆ? ಈಗಾಗಲೇ ಕನ್ನಡದಲ್ಲಿ ರೀ ರಿಲೀಸ್ ಆಗಿರುವ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಈ ಬೆನ್ನಲ್ಲೇ ಜೂನ್ 21 ರಂದು ಆಂಧ್ರಪ್ರದೇಶ ಮತ್ತು ತೆಲಂಗಾಣ ಎರಡೂ ರಾಜ್ಯಗಳಲ್ಲಿ A ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಉಪೇಂದ್ರ ಎದುರು ಚಾಂದಿನಿ ನಾಯಕಿಯಾಗಿ ನಟಿಸಿದ್ದರು. 1 ಕೋಟಿ 25 ಲಕ್ಷ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ 20 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಸೃಷ್ಟಿಸಿತ್ತು. ಬಿ ಜಗನ್ನಾಥ್, ಬಿ. ಜಿ ಮಂಜುನಾಥ್‌ ಈ ಸಿನಿಮಾ ನಿರ್ಮಾಣ ಮಾಡಿದ್ದರು.

Whats_app_banner