ಉಪೇಂದ್ರ ಯುಐ ಸಿನಿಮಾದ ಟ್ರೋಲಾಗುತ್ತೆ ಹಾಡು ಬಿಡುಗಡೆ: ರೀಷ್ಮಾ ನಾಣಯ್ಯ ನೃತ್ಯದ ಜತೆ ಗಮನಸೆಳೆದ ಲವ್ವಲ್ಲಿ ಗುಮ್ಮಿಸ್ಕೊಂಡು ತಗಡಾಗೋದ ಸಾಹಿತ್ಯ-sandalwood news real star upendra ui movie troll song released reeshma nanaiah dance trollagutte idu troll agutte pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಉಪೇಂದ್ರ ಯುಐ ಸಿನಿಮಾದ ಟ್ರೋಲಾಗುತ್ತೆ ಹಾಡು ಬಿಡುಗಡೆ: ರೀಷ್ಮಾ ನಾಣಯ್ಯ ನೃತ್ಯದ ಜತೆ ಗಮನಸೆಳೆದ ಲವ್ವಲ್ಲಿ ಗುಮ್ಮಿಸ್ಕೊಂಡು ತಗಡಾಗೋದ ಸಾಹಿತ್ಯ

ಉಪೇಂದ್ರ ಯುಐ ಸಿನಿಮಾದ ಟ್ರೋಲಾಗುತ್ತೆ ಹಾಡು ಬಿಡುಗಡೆ: ರೀಷ್ಮಾ ನಾಣಯ್ಯ ನೃತ್ಯದ ಜತೆ ಗಮನಸೆಳೆದ ಲವ್ವಲ್ಲಿ ಗುಮ್ಮಿಸ್ಕೊಂಡು ತಗಡಾಗೋದ ಸಾಹಿತ್ಯ

Upendra UI Movie Troll Song: ಉಪೇಂದ್ರ ನಟನೆ ಮತ್ತು ನಿರ್ದೇಶನದ ಯುಐ ಸಿನಿಮಾದ ಟ್ರೋಲಾಗುತ್ತೆ ಇದು ಟ್ರೋಲಾಗುತ್ತೆ ಹಾಡು ಬಿಡುಗಡೆಯಾಗಿದೆ. ಟ್ರೋಲ್‌ ವಿಷಯದ ಮೇಲೆ ಬರೆದಿರುವ ಬುದ್ಧಿವಂತ ಹಾಡು ನೆಟ್ಟಿಗರ ಗಮನಸೆಳೆದಿದೆ. ಜತೆಗೆ, ಈ ಹಾಡಿನಲ್ಲಿ ಬರುವ ಲವ್ವಲ್ಲಿ ಗುಮ್ಮಿಸ್ಕೊಂಡು ತಗಡಾಗೋನು ಇತ್ಯಾದಿ ಸಾಲುಗಳು ಹೊಸ ಚರ್ಚೆಗೆ ನಾಂದಿ ಹಾಡಿವೆ.

ಉಪೇಂದ್ರ ಯುಐ ಸಿನಿಮಾದ ಟ್ರೋಲಾಗುತ್ತೆ ಹಾಡು ಬಿಡುಗಡೆ: ಮನಸೆಳೆದ ರೀಷ್ಮಾ ನಾಣಯ್ಯ ನೃತ್ಯ
ಉಪೇಂದ್ರ ಯುಐ ಸಿನಿಮಾದ ಟ್ರೋಲಾಗುತ್ತೆ ಹಾಡು ಬಿಡುಗಡೆ: ಮನಸೆಳೆದ ರೀಷ್ಮಾ ನಾಣಯ್ಯ ನೃತ್ಯ

ಬೆಂಗಳೂರು: ಸ್ಯಾಂಡಲ್‌ವುಡ್‌ನ ಬುದ್ಧಿವಂತ ನಟ, ನಿರ್ದೇಶಕ ಉಪೇಂದ್ರರ ಮುಂಬರುವ ಯುಐ ದಿ ಮೂವಿ ಸಿನಿಮಾದ “ಟ್ರೋಲಾಗುತ್ತೆ ಟ್ರೋಲಾಗುತ್ತೆ” ಹಾಡು ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ ಹೊಸ ಟ್ರೆಂಡ್‌ ಸೆಟ್‌ ಮಾಡುತ್ತಿದೆ. ಈ ಹಾಡಿನಲ್ಲಿ ರೀಷ್ಮಾ ನಾಣಯ್ಯ ಡ್ಯಾನ್ಸ್‌ ಎಲ್ಲರ ಮನಸೆಳೆದಿದೆ. ಇದೇ ಸಮಯದಲ್ಲಿ ಈ ಹಾಡಿನಲ್ಲಿ ಬಳಸಿರುವ ಕೆಲವೊಂದು ಪದಗಳು ಗಮನ ಸೆಳೆದಿವೆ. ದರ್ಶನ್‌, ಯಶ್‌, ಉಮಾಪತಿ ಮುಂತಾದ ಸೆಲೆಬ್ರಿಟಿಗಳನ್ನೂ ಈ ಹಾಡು ಪರೋಕ್ಷವಾಗಿ ನೆನಪಿಸಿದೆ.

ಈ ಹಾಡಿನಲ್ಲಿ ಬಳಕೆಯಾದ ಸಾಹಿತ್ಯ ಇತ್ತೀಚಿನ ವಿದ್ಯಮಾನಗಳನ್ನೂ ನೆನಪಿಸಿದೆ. ಒಂದೆಡೆ ಲವ್ವಲ್ಲಿ ಗುಮ್ಮಿಸ್ಕೊಂಡು ತಗಡಾಗೋದ ಎಂಬ ಸಾಲನ್ನು ಕೇಳಿದಾಗ ಇತ್ತೀಚೆಗೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರು "ತಗಡು" "ಗುಮ್ಮಿಸ್ಕೋತೀಯಾ" ಎಂಬ ಪದಗಳನ್ನು ಬಳಸಿದ್ದು ನೆನಪಿಗೆ ಬರಬಹುದು. ಇದೇ ರೀತಿ "ಒಟ್ಟಾಗಿ ನಿಂತ್ರೆ ಜೋಡೆತ್ತಿನಂಗೆ ಗೆಲುವು ನಮ್ದೆ" ಎಂದು ಯಶ್‌ ಮತ್ತು ದರ್ಶನ್‌ರನ್ನು ಮತ್ತೆ ಈ ಹಾಡು ನೆನಪಿಸಿಕೊಂಡಂತೆ ಇದೆ.

ಹೇಗಿದೆ ಟ್ರೋಲಾಗುತ್ತೆ ಹಾಡು?

ಈ ಹಾಡಿನಲ್ಲಿ ರೀಷ್ಮಾ ನಾಣಯ್ಯ ಅಭಿನಯ ಮತ್ತು ಡ್ಯಾನ್ಸ್‌ ಗಮನ ಸೆಳೆದಿದೆ. ಟ್ರೋಲ್‌ ಆಗಲು ಹುಚ್ಚೆದ್ದು ಕುಣಿಯುವ ನಟಿಯಾಗಿ ಅವರು ಸಖತ್‌ ಸ್ಟೆಪ್‌ ಹಾಕಿದ್ದಾರೆ. ಹಾಡಿನ ಸಾಹಿತ್ಯಕ್ಕೆ ತಕ್ಕಂತೆ ನಟಿಸಿದ್ದಾರೆ. " ಟ್ರೋಲಾಗುತ್ತೆ ಇದು ಟ್ರೋಲಾಗುತ್ತೆ, ಇನ್‌ಸ್ಟಾದಲ್ಲಿ ತುಂಬಾ ರೀಲ್ಸ್‌ ಆಗುತ್ತೆ, ಕೆಲ್ಸ ಇಲ್ಲದವರಿಗೆ ಟೈಂಪಾಸ್‌ ಆಗುತ್ತೆ...., ಫೇಮಸ್‌ ಆಗಲು ಟ್ರೋಲ್‌ ಆಗೋದು ಸಹಜ ಕಣೇ, ಇಲ್ದಿದ್ರೆ ನೋವು ಕಣೇ, ಟ್ರೆಂಡ್‌ ಆಗ್ಲಿ, ಲೈಕ್ಸ್‌ ಬರ್ಲಿ, ಇನ್ನು ಜಾಸ್ತಿ ಶೇರ್‌ ಆಗ್ಲಿ, ಇದು ಅವನಿಗೂ ರೀಚ್‌ ಆಗ್ಲಿ ಎಂದು ರೀಷ್ಮಾ ನಾಣಯ್ಯ ಕುಣಿದಿದ್ದಾರೆ.

ಒಟ್ಟಾಗಿ ನಿಂತ್ರೆ ನಾವು ಜೋಡೆತ್ತು

"ಅವನೊಬ್ಬ ಏನ್‌ ಹಾರ್‌ ಹೀರೋನಾ.. ಯಾಕೆ..., ಅವನು ಕರಿಮಣಿ ಮಾಲೀಕನ... ಅಲ್ಲ, ಬೆಳ್ಳುಳ್ಳಿ ಕಬಾಬ್‌ ಒನ್‌ಮೋರ್‌ ಒನ್‌ಮೋರ್‌ ನಾನು ಹೆಂಗೆಹೆಂಗೆ ಪುಂಗ್ಲಿ, ಆಲ್‌ರೈಟ್‌ ಮುಂದಕ್ಕೆ ಹೋಗೋಣ... ಯಾಕೆ... ರಾಂಗ್‌ ಆಗ್ತಾನೆ ರಂಗಣ್ಣ, ಒಟ್ಟಾಗಿ ನಿಂತ್ರೆ ನಾವು ಜೋಡೆತ್ತಿನಂಗೆ, ಗೆಲುವು ಅಕ್ಕಂದೇ" ಎಂಬ ಸಾಲುಗಳು ಇತ್ತೀಚಿನ ಬೆಳ್ಳುಳ್ಳಿ ಕಬಾಬ್‌ ಟ್ರೆಂಡ್‌ ಅನ್ನು ನೆನಪಿಸಿಕೊಂಡಿದೆ. ಜತೆಗೆ ಯಶ್‌ ಮತ್ತು ದರ್ಶನ್‌ ಜೋಡೆತ್ತು ವಿಷಯವನ್ನೂ ನೆನಪಿಸಿದೆ.

ಲವ್ವಲ್ಲಿ ಗುಮ್ಮಿಸ್ಕೊಂಡು ತಗಡಾಗೋನು

" ಇಡೀ ರಾಜ್ಯಕ್ಕೆ ಖುಷಿ ಕೊಡೋ ಸುದ್ದಿ ಇದೇ... ಲಾರೀ ಡ್ರೈವರಾ? ನನ್ನ ಲವ್ವರಾ? ಲವ್ವಲ್ಲಿ ಗುಮ್ಮಿಸ್ಕೊಂಡು ತಗಡಾಗೋನು.... ಅಯ್ಯೋ ಕರ್ಮಾ ಇದು ಹಂಸಲೇಖ ಟ್ಯೂನ್‌ ಕಣೇ.… ನಿನ್ನ ಮೇಲೆ ಕೇಸ್‌ ಹಾಕ್ತಾರೆ ಕಣೇ... ಟ್ರೋಲಾಗುತ್ತೆ ಇದು ಟ್ರೋಲಾಗುತ್ತೆ, ಇನ್‌ಸ್ಟಾದಲ್ಲಿ ತುಂಬಾ ರೀಲ್ಸ್‌ ಆಗುತ್ತೆ.... ಕೆಲ್ಸ ಇಲ್ಲದವರಿಗೆ ಫುಲ್‌ ಮೀಲ್ಸ್‌ ಆಗುತ್ತೆ... ಇವಳ ಹೀರೋ ಎಲ್ಲಿದ್ಯಾಪೋ, ಜನಗಳ ಮಧ್ಯೆ ಇದ್ದಿನಪ್ಪ?, ನಾನು ನಂದಿನಿ ಪಿಜಿಲ್ಲಿ ಇರ್ತಿನಿ... ಅವನಿಗಾಗಿ ಕಾಯ್ತಿನಿ" ಎಂದೆಲ್ಲ ಈ ಹಾಡಿನ ಸಾಲುಗಳು ಇವೆ.

ಡೋಲಾ 650 ಬಿಸಿ ರಾಗಿ ಹಿಟ್ಟು

ಈ ಹಾಡು ಇನ್ನಷ್ಟು ಟ್ರೋಲ್‌ ವಿಷಯಗಳ ಸುತ್ತ ಸುತ್ತಿದೆ. "ಅವನ ಹತ್ತ ಅಂತಹದ್ದೇನಿದೆ... ಓಹೋ... ಯಾಕೆ ಇಷ್ಟೊಂದು ಗೂಸ್‌ಬಂಪ್ಸ್‌ ಆಗ್ತಿದೆ... ಡೋಲಾ 650 ಬಿಸಿ ರಾಗಿ ಹಿಟ್ಟು ತಿಂದು ಮಲ್ಕೋಳೇ... ಆ ಸುಂದರಿ ಸನ್ಯಾಸಿಯಾಗೋಕ್ಕೆ ಬಿಡೋದಿಲ್ಲ ಈ ಪ್ರೀತಿ ತುಳಿಯೋಕ್ಕೆ ಆಗೋಲ್ಲ, ಇದು ಖಚಿತಾನೇ ಇದು ನಿಶ್ಚಿತಾನೇ, ನನ್ನದೆಲ್ಲ ಅವನಿಗೆ ಫ್ರೀ ಫ್ರೀ ಫ್ರೀ, ಅಯ್ಯೋ ಕರ್ಮಾ ಆ ಚಂದ್ರು ಹೈಪು ಕಣೇ, ನೀನು ತಬಲ ಪೊಂಕ್ಲು ಕಣೇ" ಹೀಗೆ ಹಾಡು ಮುಂದುವರೆಯುತ್ತಿದೆ.

ರಿಯಲ್‌ ಸ್ಟಾರ್‌ ಉಪೇಂದ್ರ ನಿರ್ದೇಶನದ ಈ ಸಿನಿಮಾದ ಹಾಡಿಗೆ ಬಿ ಅಜನೇಶ್‌ ಲೋಕ್‌ನಾಥ್‌ ಸಂಗೀತವಿದೆ. ಐಶ್ವರ್ಯ ರಂಗರಾಜನ್‌, ಹರ್ಷಿಕಾ ದೇವನಾಥ್‌, ಅನುಪ್‌ ಭಂಡಾರಿ, ಬಿ ಅಜನೀಶ್‌ ಲೋಕೇಶ್‌ ಧ್ವನಿ ನೀಡಿದ್ದಾರೆ. ಈ ಹಾಡಿನ ಸಾಹಿತ್ಯವನ್ನು ನರೇಶ್‌ ಕುಮಾರ್‌ ಎಚ್‌ಎನ್‌ ಬರೆದಿದ್ದಾರೆ.

mysore-dasara_Entry_Point