ಬುಡಕಟ್ಟು ಜನರ ‘ಕೋರ’ ಕಥೆ ಹೇಳಲು ಬಂದ ಸುನಾಮಿ ಕಿಟ್ಟಿ! ಮಹರ್ಷಿ ಆನಂದ ಗುರೂಜಿಯಿಂದ ಸಿಕ್ತು ಆಶೀರ್ವಾದ-sandalwood news reality show fame tsunami kitty starrer kora movie first song released by maharshi anand guruji mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಬುಡಕಟ್ಟು ಜನರ ‘ಕೋರ’ ಕಥೆ ಹೇಳಲು ಬಂದ ಸುನಾಮಿ ಕಿಟ್ಟಿ! ಮಹರ್ಷಿ ಆನಂದ ಗುರೂಜಿಯಿಂದ ಸಿಕ್ತು ಆಶೀರ್ವಾದ

ಬುಡಕಟ್ಟು ಜನರ ‘ಕೋರ’ ಕಥೆ ಹೇಳಲು ಬಂದ ಸುನಾಮಿ ಕಿಟ್ಟಿ! ಮಹರ್ಷಿ ಆನಂದ ಗುರೂಜಿಯಿಂದ ಸಿಕ್ತು ಆಶೀರ್ವಾದ

ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಶೋ ಮೂಲಕವೇ ಸುದ್ದಿ ಮಾಡಿದ್ದ ಸುನಾಮಿ ಕಿಟ್ಟಿ, ವಿವಾದಗಳಿಂದಲೂ ಸದ್ದು ಮಾಡಿದ್ದರು. ಇದೀಗ ಇದೇ ಕಿಟ್ಟಿ ನಟನೆಯ ಕೋರ ಚಿತ್ರದ ಮೊದಲ ಹಾಡು ರಿಲೀಸ್‌ ಆಗಿದೆ. ಮಹರ್ಷಿ ಆನಂದ್‌ ಗುರೂಜಿ ಹಾಡು ಬಿಡುಗಡೆ ಮಾಡಿ ಶುಭಕೋರಿದ್ದಾರೆ.

ಬುಡಕಟ್ಟು ಜನರ ‘ಕೋರ’ ಕಥೆ ಹೇಳಲು ಬಂದ ಸುನಾಮಿ ಕಿಟ್ಟಿ! ಮಹರ್ಷಿ ಆನಂದ ಗುರೂಜಿಯಿಂದ ಸಿಕ್ತು ಆಶೀರ್ವಾದ
ಬುಡಕಟ್ಟು ಜನರ ‘ಕೋರ’ ಕಥೆ ಹೇಳಲು ಬಂದ ಸುನಾಮಿ ಕಿಟ್ಟಿ! ಮಹರ್ಷಿ ಆನಂದ ಗುರೂಜಿಯಿಂದ ಸಿಕ್ತು ಆಶೀರ್ವಾದ

Kora Movie Song: ರಿಯಾಲಿಟಿ ಶೋಗಳಲ್ಲಿ ಸಾಲು ಸಾಲು ಜಯಗಳನ್ನು ಸಾಧಿಸಿ ಒಂದು ಸಮಯದಲ್ಲಿ ರಿಯಾಲಿಟಿ ಸ್ಟಾರ್‌ ಎಂದೇ ಹೆಸರುವಾಸಿಯಾಗಿದ್ದರು ಸುನಾಮಿ ಕಿಟ್ಟಿ. ಬರೀ ಅದಷ್ಟೇ ಅಲ್ಲ ಒಂದಷ್ಟು ವಿವಾದಗಳಿಂದಲೂ ಗುರುತಿಸಿಕೊಂಡಿದ್ದರು. 2022ರಲ್ಲಿ ಪಬ್‌ನಲ್ಲಿ ದಾಳಿ ಮಾಡಿದ ಹಿನ್ನೆಲೆಯಲ್ಲಿ ಕಿಟ್ಟಿ ವಿರುದ್ಧ ದೂರು ದಾಖಲಾಗಿತ್ತು. ಇದೀಗ ಆ ವಿವಾದಗಳಿಂದ ಆಚೆ ಬಂದಿಂತಿದೆ. ಅಂದರೆ, ಈ ಹಿಂದೆಯೇ ಶುರುವಾಗಿದ್ದ ಅವರ ಕೋರ ಹೆಸರಿನ ಸಿನಿಮಾ ಇದೀಗ ಹಾಡಿನ ಮೂಲಕ ಎಂಟ್ರಿ ಕೊಟ್ಟಿದೆ. ಈ ಮೂಲಕ ಸಿನಿಮಾ ತೆರೆಗೆ ಬರುವ ತಯಾರಿಯಲ್ಲಿದೆ.

ರತ್ನಮ್ಮ‌ ಮೂವೀಸ್ ಬ್ಯಾನರ್‌ನಲ್ಲಿ ಪಿ.ಮೂರ್ತಿ ನಿರ್ಮಿಸಿರುವ, ಒರಟ ಶ್ರೀ ನಿರ್ದೇಶನದ ಕೋರ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ಈ ಚಿತ್ರದ ಬಾನಿನಿಂದ.. ಹಾಡನ್ನು ಮಹರ್ಷಿ ಆನಂದ ಗುರೂಜಿ ಅವರು ರಿಲೀಸ್‌ ಮಾಡಿ ಇಡೀ ತಂಡಕ್ಕೆ ಶುಭ ಕೋರಿದ್ದಾರೆ. ಗೊಲ್ಲಹಳ್ಳಿ ಶಿವಪ್ರಸಾದ್ ಬರೆದಿರುವ, ರವೀಂದ್ರ ಸೊರಗಾವಿ ಈ ಹಾಡಿಗೆ ಧ್ವನಿ ನೀಡಿದ್ದಾರೆ. ಬಿ.ಆರ್.ಹೇಮಂತ್ ಕುಮಾರ್ ಈ ಚಿತ್ರದ ಸಂಗೀತ ನಿರ್ದೇಶಕರು.

ಬುಡಕಟ್ಟು ಜನಾಂಗದ ಕಥೆ

"ಕೋರ ಎಂದರೆ ಬುಡಕಟ್ಟು ಜನಾಂಗದ ಹೆಸರು. ಅದರ ಸುತ್ತ ಈ ಸಿನಿಮಾ ಸಾಗುತ್ತದೆ. ಇದೀಗ ಚಿತ್ರೀಕರಣ ಮುಕ್ತಾಯವಾಗಿ ಬಿಡುಗಡೆ ಹಂತ ತಲುಪಿದೆ. ಏಪ್ರಿಲ್‌ನಲ್ಲಿ ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ. ಒರಟ ಶ್ರೀ ಅವರ ನಿರ್ದೇಶನದಲ್ಲಿ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಸುನಾಮಿ ಕಿಟ್ಟಿ ಸೇರಿದಂತೆ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರು ನಮ್ಮ ಚಿತ್ರಕ್ಕಾಗಿ ಬಹಳ ಕಷ್ಟಪಟ್ಟಿದ್ದಾರೆ. ಏಕೆಂದರೆ ನಮ್ಮ ಚಿತ್ರದ ಚಿತ್ರೀಕರಣ ಬಹುತೇಕ ನಡೆದಿರುವುದು ಚಿಕ್ಕಮಗಳೂರು, ಹೊರನಾಡು, ಸಕಲೇಶಪುರದ ಸುತ್ತಲ್ಲಿನ ಅರಣ್ಯ ಪ್ರದೇಶದಲ್ಲಿ" ಎಂದರು ನಿರ್ಮಾಪಕ ಪಿ.ಮೂರ್ತಿ.

"ಆ ಸ್ಥಳಗಳಲ್ಲಿ ಅನುಕೂಲಗಳು ಕಡಿಮೆ. ಅಂತಹ ಸ್ಥಳಗಳಲ್ಲೂ ಯಾವುದೇ ಅಡೆತಡೆ ಇಲ್ಲದೆ ಚಿತ್ರೀಕರಣವಾಗಲು ತಂಡದ ಸಹಕಾರವೇ ಕಾರಣ. ಇನ್ನು ಹೇಮಂತ್ ಕುಮಾರ್ ಅವರು ಸಂಗೀತ ನೀಡಿರುವ ಎಲ್ಲಾ ಹಾಡುಗಳು ಚೆನ್ನಾಗಿವೆ. ವಿಶೇಷವಾಗಿ ಇದೀಗ ಬಿಡುಗಡೆಯಾಗಿರುವ ಬಾನಿನಿಂದ.. ಹಾಡು ಎಲ್ಲರ ಮನಸ್ಸಿಗೂ ಹತ್ತಿರವಾಗುತ್ತದೆ. ಹಾಡು ಬಿಡುಗಡೆ ಮಾಡಿಕೊಟ್ಟ ಆನಂದ್ ಗುರೂಜಿ ಅವರಿಗೆ ಮತ್ತು ಆಗಮಿಸಿರುವ ಗಣ್ಯರಿಗೆ ಧನ್ಯವಾದ" ಎಂದರು ನಿರ್ಮಾಪಕರು.

ಸುನಾಮಿ ಕಿಟ್ಟಿಗೆ ಚರಿಷ್ಮಾ ಜೋಡಿ

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ನಿರ್ದೇಶಿಸಲು ಅವಕಾಶ ಮಾಡಿಕೊಟ್ಟ ನಿರ್ಮಾಪಕರಿಗೆ ಧನ್ಯವಾದ. ನಮ್ಮ ಚಿತ್ರದಲ್ಲಿ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಇದೆ. ಅವರು ಕೊಟ್ಟ ದುಡ್ಡಿಗೆ ಮೋಸ ಮಾಡದ ಚಿತ್ರವಿದು. ಸುನಾಮಿ ಕಿಟ್ಟಿ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಚರಿಷ್ಮಾ ಕೋರ ಚಿತ್ರದ ನಾಯಕಿ. ನಿರ್ಮಾಪಕ‌ ಪಿ. ಮೂರ್ತಿ ಖಳನಾಯಕನಾಗಿ ಅಭಿನಯಿಸಿದ್ದಾರೆ. ಎಲ್ಲರೂ ಚಿತ್ರ ನೋಡಿ. ಪ್ರೋತ್ಸಾಹ ನೀಡಿ ಎಂದರು ನಿರ್ದೇಶಕ ಒರಟ ಶ್ರೀ.

ನನ್ನನ್ನು ನಾಯಕನನ್ನಾಗಿ ಮಾಡಿದ ಪಿ.ಮೂರ್ತಿ ಅವರಿಗೆ ಧನ್ಯವಾದ ತಿಳಿಸುತ್ತಾ, ಹುಟ್ಟುಹಬ್ಬದ ಶುಭಾಶಯ ಕೂಡ ಹೇಳುತ್ತೇನೆ. ಅವರ ಹುಟ್ಟುಹಬ್ಬದ ದಿನ ಈ ಹಾಡು ಬಿಡುಗಡೆಯಾಗಿರುವುದು ವಿಶೇಷ. ರಿಯಾಲಿಟಿ ಶೋ ಮೂಲಕ ಪರಿಚಿತನಾದ ನನಗೆ ಕರುನಾಡ ಜನತೆ ನೀಡಿರುವ ಪ್ರೀತಿ ಅಪಾರ. ಅದೇ ಪ್ರೀತಿ ಈಗಲೂ ಮುಂದುವರೆಯಲಿ ಎಂದು ಸುನಾಮಿ ಕಿಟ್ಟಿ ತಿಳಿಸಿದರು.

ಸಹ ನಿರ್ಮಾಪಕ ಚೆಲುವರಾಜು, ನಾಯಕಿ ಚರಿಷ್ಮಾ, ನಟರಾದ ಎಂ.ಕೆ.ಮಠ, ಮುನಿ, ಸಂಗೀತ ನಿರ್ದೇಶಕ ಹೇಮಂತ್ ಕುಮಾರ್, ಛಾಯಾಗ್ರಾಹಕ ಸೆಲ್ವಂ, ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್, ಗಾಯಕ ರವೀಂದ್ರ ಸೊರಗಾವಿ ಮುಂತಾದ ಚಿತ್ರತಂಡದ ಸದಸ್ಯರು "ಕೋರ" ಚಿತ್ರದ ಕುರಿತು ಮಾತನಾಡಿದರು.

mysore-dasara_Entry_Point