Upendra UI Movie: ರಿಯಲ್‌ ಸ್ಟಾರ್‌ ಉಪೇಂದ್ರ ಯುಐ ಸಿನಿಮಾದ ಸೌಂಡ್‌ ಆಫ್‌ ಯುಐ ಇಂದು ರಿಲೀಸ್‌; ಉಪ್ಪಿ ಅಭಿಮಾನಿಗಳ ಹೃದಯಗಳಲ್ಲಿ ಕಂಪನ
ಕನ್ನಡ ಸುದ್ದಿ  /  ಮನರಂಜನೆ  /  Upendra Ui Movie: ರಿಯಲ್‌ ಸ್ಟಾರ್‌ ಉಪೇಂದ್ರ ಯುಐ ಸಿನಿಮಾದ ಸೌಂಡ್‌ ಆಫ್‌ ಯುಐ ಇಂದು ರಿಲೀಸ್‌; ಉಪ್ಪಿ ಅಭಿಮಾನಿಗಳ ಹೃದಯಗಳಲ್ಲಿ ಕಂಪನ

Upendra UI Movie: ರಿಯಲ್‌ ಸ್ಟಾರ್‌ ಉಪೇಂದ್ರ ಯುಐ ಸಿನಿಮಾದ ಸೌಂಡ್‌ ಆಫ್‌ ಯುಐ ಇಂದು ರಿಲೀಸ್‌; ಉಪ್ಪಿ ಅಭಿಮಾನಿಗಳ ಹೃದಯಗಳಲ್ಲಿ ಕಂಪನ

Upendra UI The Movie Sound of UI BGM: ರಿಯಲ್‌ ಸ್ಟಾರ್‌ ಉಪೇಂದ್ರ ನಟನೆಯ ಯುಐ ಸಿನಿಮಾದ ಸೌಂಡ್‌ ಆಫ್‌ ಯುಐ ಬಿಜಿಎಂ ಶುಕ್ರವಾರ ಸಂಜೆ 6.03 ಗಂಟೆಗೆ ಬಿಡುಗಡೆಯಾಗಲಿದೆ. ಇದು ನಿಮ್ಮ ಪ್ಲೇಲಿಸ್ಟ್‌ನಲ್ಲಿ ಆಡಳಿತ ನಡೆಸಲಿದೆ ಎಂದು ಉಪೇಂದ್ರ ತಿಳಿಸಿದ್ದಾರೆ.

Upendra UI Movie: ಯುಐ ಸಿನಿಮಾದ ಸೌಂಡ್‌ ಆಫ್‌ ಯುಐ ಬ್ಯಾಕ್‌ ಗ್ರೌಂಡ್‌ ಮ್ಯೂಸಿಕ್‌ ಇಂದು ರಿಲೀಸ್‌
Upendra UI Movie: ಯುಐ ಸಿನಿಮಾದ ಸೌಂಡ್‌ ಆಫ್‌ ಯುಐ ಬ್ಯಾಕ್‌ ಗ್ರೌಂಡ್‌ ಮ್ಯೂಸಿಕ್‌ ಇಂದು ರಿಲೀಸ್‌

ಬೆಂಗಳೂರು: ಉಪೇಂದ್ರ ಸಿನಿಮಾ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದು ಬಂದಿದೆ. ಇಂದು ಸಂಜೆ 6 ಗಂಟೆ 3 ನಿಮಿಷಕ್ಕೆ ಯುಐ ಸಿನಿಮಾದ (Upendra UI The Movie) ಬಿಜಿಎಂ (ಬ್ಯಾಕ್‌ ಗ್ರೌಂಡ್‌ ಮ್ಯೂಸಿಕ್‌) ಸೌಂಡ್‌ ಆಫ್‌ ಯುಐ (Sound of UI BGM) ಬಿಡುಗಡೆಯಾಗಲಿದೆ. ಇದೇ ಅಕ್ಟೋಬರ್‌ ತಿಂಗಳಿನಲ್ಲಿ ಯುಐ ಸಿನಿಮಾ ರಿಲೀಸ್‌ ಆಗಲಿದ್ದು, ಶುಕ್ರವಾರ ಸಂಜೆ ಬಿಜಿಎಂನ ಅಬ್ಬರ ಕೇಳಿಸಲಿದೆ. ಸ್ಯಾಂಡಲ್‌ವುಡ್‌ಗೆ ಡಿಫರೆಂಟ್‌ ಸಿನಿಮಾಗಳನ್ನು ಪರಿಚಯಿಸಿದ್ದ ಉಪೇಂದ್ರ ಇದೀಗ ಯುಐ ಮೂಲಕ ದೇಶಕ್ಕೆ ಚಂದದ ಸಿನಿಮಾವೊಂದನ್ನು ನೀಡುವ ಸೂಚನೆ ನೀಡಿದ್ದಾರೆ. ಯುಐ ಸಿನಿಮಾ ಸಮ್‌ಥಿಂಗ್‌ ಡಿಫರೆಂಟ್‌ ಇರುವ ಸೂಚನೆಯನ್ನು ಈಗಾಗಲೇ ಫಸ್ಟ್‌ಲುಕ್‌, ಟೀಸರ್‌, ಪೋಸ್ಟರ್‌ಗಳ ಮೂಲಕ ಉಪೇಂದ್ರ ನೀಡಿದ್ದಾರೆ. ಇದೀಗ ಬಿಜಿಎಂ ಹೇಗಿರಲಿದೆ ಎಂಬ ಕಾತರ ಅಭಿಮಾನಿಗಳಲ್ಲಿ ಮೂಡಿದೆ.

ಉಪೇಂದ್ರ ಯುಐ ಸಿನಿಮಾದ ಬಿಜಿಎಂ

ಆಗಸ್ಟ್‌ 23 ಶುಕ್ರವಾರ ಸಂಜೆ 6.03 ಗಂಟೆಗೆ ಯುಐ ದಿ ಮೂವಿ ಸಿನಿಮಾದ ಸೌಂಡ್‌ ಆಫ್‌ ಯುಐ ನಿಮ್ಮ ಪ್ಲೇಲಿಸ್ಟ್‌ನಲ್ಲಿ ಆಡಳಿತ ನಡೆಸಲಿದೆ ಎಂದು ಉಪೇಂದ್ರ ಅವರು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಡೇಟ್‌ ನೀಡಿದ್ದಾರೆ.

ಹಂಗೇರಿಯ ಬುಡಾಪೆಸ್ಟ್‌ನಲ್ಲಿ ಸೃಷ್ಟಿಸಿದ ಯುಐ ಸೌಂಡ್‌ ಆಫ್‌ ಮ್ಯಾಜಿಕ್‌ ಬಿಡುಗಡೆಯಾಗಲು ಸಜ್ಜಾಗಿದೆ. ಉಪೇಂದ್ರ ಅವರು ಪೋಸ್ಟರ್‌ನಲ್ಲಿ ದೊಡ್ಡದೊಂದು ವಯೋಲಿನ್‌ ತೋರಿಸಿ "ಸೌಂಡ್‌ ಆಫ್‌ ಯುಐ" ನಿರೀಕ್ಷೆ ಹೆಚ್ಚಿಸಿದ್ದಾರೆ. ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜನೆಯಲ್ಲಿ ಬುಡಾಪೆಸ್ಟ್‌ನಲ್ಲಿ ಹಾಡು ರೆಕಾರ್ಡ ಮಾಡಲಾಗಿದೆ. ರಿಯಲ್‌ ಸ್ಟಾರ್‌ ಉಪೇಂದ್ರ ಯುಐ ಹಾಡು ಹೇಗಿರಲಿದೆ ಎಂಬ ಕುತೂಹಲ ಎಲ್ಲರಲ್ಲಿಯೂ ಮೂಡಿದೆ.

ಈ ವರ್ಷ ಮಾರ್ಚ್‌ ತಿಂಗಳಲ್ಲಿ ಯುಐ ಸಿನಿಮಾದ "ಟ್ರೋಲಾಗುತ್ತೆ ಟ್ರೋಲಾಗುತ್ತೆ" ಹಾಡು ಬಿಡುಗಡೆಯಾಗಿತ್ತು. ರೀಷ್ಮಾ ನಾಣಯ್ಯ ಡ್ಯಾನ್ಸ್‌ ಮತ್ತು ಟ್ರೋಲ್‌ ಹಾಡು ವೈರಲ್‌ ಆಗಿತ್ತು. ಟ್ರೋಲಾಗುತ್ತೆ ಇದು ಟ್ರೋಲಾಗುತ್ತೆ, ಇನ್‌ಸ್ಟಾದಲ್ಲಿ ತುಂಬಾ ರೀಲ್ಸ್‌ ಆಗುತ್ತೆ, ಕೆಲ್ಸ ಇಲ್ಲದವರಿಗೆ ಟೈಂಪಾಸ್‌ ಆಗುತ್ತೆ...., ಫೇಮಸ್‌ ಆಗಲು ಟ್ರೋಲ್‌ ಆಗೋದು ಸಹಜ ಕಣೇ, ಇಲ್ದಿದ್ರೆ ನೋವು ಕಣೇ, ಟ್ರೆಂಡ್‌ ಆಗ್ಲಿ, ಲೈಕ್ಸ್‌ ಬರ್ಲಿ, ಇನ್ನು ಜಾಸ್ತಿ ಶೇರ್‌ ಆಗ್ಲಿ, ಇದು ಅವನಿಗೂ ರೀಚ್‌ ಆಗ್ಲಿ ಎಂಬ ಹಾಡಿನ ಮೂಲಕ ಯುಐ ಸಿನಿಮಾದ ಕುರಿತು ನಿರೀಕ್ಷೆ ಹೆಚ್ಚಿಸಲಾಗಿತ್ತು.

ಅವನೊಬ್ಬ ಏನ್‌ ಹಾರ್‌ ಹೀರೋನಾ.. ಯಾಕೆ..., ಅವನು ಕರಿಮಣಿ ಮಾಲೀಕನ... ಅಲ್ಲ, ಬೆಳ್ಳುಳ್ಳಿ ಕಬಾಬ್‌ ಒನ್‌ಮೋರ್‌ ಒನ್‌ಮೋರ್‌ ನಾನು ಹೆಂಗೆಹೆಂಗೆ ಪುಂಗ್ಲಿ, ಆಲ್‌ರೈಟ್‌ ಮುಂದಕ್ಕೆ ಹೋಗೋಣ... ಯಾಕೆ... ರಾಂಗ್‌ ಆಗ್ತಾನೆ ರಂಗಣ್ಣ, ಒಟ್ಟಾಗಿ ನಿಂತ್ರೆ ನಾವು ಜೋಡೆತ್ತಿನಂಗೆ, ಗೆಲುವು ಅಕ್ಕಂದೇ" ಎಂದು ಹಾಡಿನ ಮೂಲಕವೇ ಇತ್ತೀಚಿನ ಟ್ರೋಲ್‌ ವಿಷಯಗಳನ್ನೇ ಹಾಡಾಗಿಸಿದ್ದರು.

ಅಕ್ಟೋಬರ್‌ ತಿಂಗಳಿನಲ್ಲಿ ಯುಐ ದಿ ಮೂವಿ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.