ಕನ್ನಡ ಸುದ್ದಿ  /  ಮನರಂಜನೆ  /  ವಿಜಯಲಕ್ಷ್ಮಿ ದರ್ಶನ್‌ ಇನ್‌ಸ್ಟಾಗ್ರಾಂ ಸ್ತಬ್ಧ, ದರ್ಶನ್‌ ಬೇಡ ಯಾರೂ ಬೇಡ ಝೀರೋ ಫಾಲೋವಿಂಗ್‌; ಪತ್ನಿಗೆ ಫೋನ್‌ ಮಾಡಿದ ಚಾಲೆಂಜಿಂಗ್‌ ಸ್ಟಾರ್‌

ವಿಜಯಲಕ್ಷ್ಮಿ ದರ್ಶನ್‌ ಇನ್‌ಸ್ಟಾಗ್ರಾಂ ಸ್ತಬ್ಧ, ದರ್ಶನ್‌ ಬೇಡ ಯಾರೂ ಬೇಡ ಝೀರೋ ಫಾಲೋವಿಂಗ್‌; ಪತ್ನಿಗೆ ಫೋನ್‌ ಮಾಡಿದ ಚಾಲೆಂಜಿಂಗ್‌ ಸ್ಟಾರ್‌

ಚಿತ್ರದುರ್ಗದ ರೇಣುಕಾ ಸ್ವಾಮಿ (renuka swamy chitradurga) ಕೊಲೆ ಪ್ರಕರಣದಲ್ಲಿ ಕನ್ನಡ ನಟ ದರ್ಶನ್‌ ಬಂಧನಕ್ಕೆ ಒಳಗಾಗಿದ್ದಾರೆ. ಇದೇ ಸಮಯದಲ್ಲಿ ವಿಜಯಲಕ್ಷ್ಮಿ ದರ್ಶನ್‌ (Vijaya lakshmi Darshan) "ದರ್ಶನ್‌ ಬೇಡ, ಯಾರೂ ಬೇಡ" ಎಂಬಂತೆ ಇನ್‌ಸ್ಟಾಗ್ರಾಂನಲ್ಲಿ ತಾನು ಫಾಲೋ ಮಾಡುತ್ತಿದ್ದ ದರ್ಶನ್‌ ಸೇರಿದಂತೆ ಇತರರನ್ನು ಅನ್‌ಫಾಲೋ ಮಾಡಿದ್ದಾರೆ.

ವಿಜಯಲಕ್ಷ್ಮಿ ದರ್ಶನ್‌ ಇನ್‌ಸ್ಟಾಗ್ರಾಂ ಸ್ತಬ್ಧ, ದರ್ಶನ್‌ ಬೇಡ ಯಾರೂ ಬೇಡ ಝೀರೋ ಫಾಲೋವಿಂಗ್‌
ವಿಜಯಲಕ್ಷ್ಮಿ ದರ್ಶನ್‌ ಇನ್‌ಸ್ಟಾಗ್ರಾಂ ಸ್ತಬ್ಧ, ದರ್ಶನ್‌ ಬೇಡ ಯಾರೂ ಬೇಡ ಝೀರೋ ಫಾಲೋವಿಂಗ್‌

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ (renuka swamy chitradurga) ಕೊಲೆ ಪ್ರಕರಣದಲ್ಲಿ ಕನ್ನಡ ನಟ ದರ್ಶನ್‌ ಬಂಧನಕ್ಕೆ ಒಳಗಾಗಿದ್ದಾರೆ. ಇದೇ ಸಮಯದಲ್ಲಿ ವಿಜಯಲಕ್ಷ್ಮಿ ದರ್ಶನ್‌ (Vijaya lakshmi Darshan) ಇನ್‌ಸ್ಟಾಗ್ರಾಂನಲ್ಲಿ ದರ್ಶನ್‌ ಸೇರಿದಂತೆ ಇತರರನ್ನು ಅನ್‌ಫಾಲೋ ಮಾಡಿದ್ದು, ಈಗ ಝೀರೋ ಫಾಲೋವಿಂಗ್‌ ಹೊಂದಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ವಿಜಯಲಕ್ಷ್ಮೀ ಅವರು ತನ್ನ ಪ್ರೊಫೈಲ್‌ ಫೋಟೋವನ್ನು ಡಿಲೀಟ್‌ ಮಾಡಿದ್ದಾರೆ. ಉಳಿದಂತೆ ಹಳೆಯ ಇನ್‌ಸ್ಟಾಗ್ರಾಂ ಸ್ಟೋರಿಗಳು ಹಾಗೆಯೇ ಇವೆ. ಆದರೆ, ಇನ್‌ಸ್ಟಾಗ್ರಾಂ ಹೈಲೈಟ್‌ ವಿಭಾಗವನ್ನು ಡಿಲೀಟ್‌ ಮಾಡಿದ್ದಾರೆ.

ವಿಜಯಲಕ್ಷ್ಮಿ ದರ್ಶನ್‌ ಇನ್‌ಸ್ಟಾಗ್ರಾಂ
ವಿಜಯಲಕ್ಷ್ಮಿ ದರ್ಶನ್‌ ಇನ್‌ಸ್ಟಾಗ್ರಾಂ

ದರ್ಶನ್‌ ಬಂಧನ ವಿಷಯಕ್ಕೆ ಸಂಬಂಧಪಟ್ಟಂತೆ ವಿಜಯಲಕ್ಷ್ಮೀ ದರ್ಶನ್‌ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಿನ್ನೆ ಕರ್ಮ ರಿಟರ್ನ್ಸ್‌ ಎಂಬ ಸ್ಟೇಟಸ್‌ ಹಾಕಿಕೊಂಡರೂ ಪ್ರಕರಣದ ಗಂಭೀರತೆಯನ್ನು ಅರಿತು ಮೌನಕ್ಕೆ ಜಾರಿದ್ದಾರೆ. ನಿನ್ನೆ ಸಂಜೆಯವರೆಗೆ ಪೊಲೀಸರ ವಶದಲ್ಲಿದ್ದ ದರ್ಶನ್‌ ಮತ್ತು ಇತರೆ ಆರೋಪಿಗಳನ್ನು ಸಂಜೆಯ ವೇಳೆಗೆ 24ನೇ ಎಸಿಎಂಎಂ ಕೋರ್ಟ್‌ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯವು ಒಟ್ಟು 13 ಆರೋಪಿಗಳನ್ನು ಪೊಲೀಸ್‌ ಕಸ್ಟಡಿಗೆ ನೀಡಿದೆ.

ಟ್ರೆಂಡಿಂಗ್​ ಸುದ್ದಿ

ಪೊಲೀಸರು ಪವಿತ್ರಾ ಗೌಡರನ್ನು ಎ 1 ಆರೋಪಿಯಾಗಿ ಮತ್ತು ದರ್ಶನ್‌ ಅವರನ್ನು ಎ2 ಆರೋಪಿಯನ್ನಾಗಿ ಮಾಡಿ ಎಫ್‌ಐಆರ್‌ ದಾಖಲಿಸಿದ್ದಾರೆ. ಆರು ದಿನಗಳ ಕಾಲ ಪೊಲೀಸ್‌ ಕಸ್ಟಡಿಯಲ್ಲಿ ಇವರು ಇರಲಿದ್ದಾರೆ. ಈ ಸಮಯದಲ್ಲಿ ಪೊಲೀಸರಿಗೆ ಇನ್ನಷ್ಟು ಸಾಕ್ಷಿಗಳು ಲಭಿಸುವ ನಿರೀಕ್ಷೆಯಿದೆ. ಆರೋಪಿಗಳ ಮೊಬೈಲ್‌ ಫೋನ್‌ನಲ್ಲಿರುವ ದಾಖಲೆಗಳು, ಡಿಲೀಟ್‌ ಆಗಿರುವ ವಿಡಿಯೋಗಳು, ಆಡಿಯೋ ಇತ್ಯಾದಿಗಳನ್ನು ರಿಟ್ರೈವ್‌ ಮಾಡಿ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುವ ನಿರೀಕ್ಷೆಯಿದೆ.

ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಅನ್ನಪೂರ್ಣೇಶ್ವರಿ ನಗರ ಠಾಣೆಯ ಲಾಕಪ್​ನಲ್ಲಿ ನಿನ್ನೆ ರಾತ್ರಿ ದರ್ಶನ್‌ ಸರಿಯಾಗಿ ನಿದ್ದೆ ಮಾಡಿಲ್ಲ. ರಾತ್ರಿ ವೇಳೆ ಸೆಲ್‌ನಲ್ಲಿ ಚಿಂತಾಕ್ರಾಂತವಾಗಿ ಕುಳಿತಿದ್ದರಂತೆ. ರಾತ್ರಿ ದರ್ಶನ್‌ಗೆ ಹೋಟೆಲ್‌ನಿಂದ ದೊನ್ನೆ ಬಿರಿಯಾನಿ ತರಿಸಿ ನೀಡಲಾಗಿದೆ. ಭದ್ರತೆಯ ದೃಷ್ಟಿಯಿಂದ ಪೊಲೀಸ್‌ ಠಾಣೆ ಮುಂದೆ ಕೆಎಸ್‌ಆರ್‌ಪಿ ತುಕುಡಿ ನಿಯೋಜಿಸಲಾಗಿದೆ. ದರ್ಶನ್​, ಪವಿತ್ರಾ ಗೌಡ, ವಿ. ವಿನಯ್, ಎಸ್​. ಪ್ರದೋಶ್​, ಆರ್. ನಾಗರಾಜು, ಕೆ. ಪವನ್, ಎಂ. ಲಕ್ಷ್ಮಣ್​, ದೀಪಕ್​ ಕುಮಾರ್, ನಂದೀಶ್​, ನಿಖಿಲ್ ನಾಯಕ್​, ಕಾರ್ತಿಕ್​, ರಾಘವೇಂದ್ರ ಅಲಿಯಾಸ್​ ರಾಘು, ಕೇಶವಮೂರ್ತಿ ಪೊಲೀಸ್‌ ಬಂಧನದಲ್ಲಿದ್ದಾರೆ.

ಈ ಆರು ದಿನಗಳಲ್ಲಿ ಪೊಲೀಸರು ಸಾಕಷ್ಟು ಮಾಹಿತಿ ಕಲೆಹಾಕಬೇಕಿದೆ. ಅಪರಾಧ ನಡೆದ ಸ್ಥಳ, ಶವ ಬಿಸಾಕಿದ ಸ್ಥಳ ಸೇರಿದಂತೆ ವಿವಿಧ ಕಡೆಗಳಲ್ಲಿ ಆರೋಪಿಗಳನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಬೇಕಿದೆ. ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸ ಕಾರಣಕ್ಕೆ ಅಪಹರಣ ಮಾಡಿ ಬೆಂಗಳೂರಿನಲ್ಲಿ ಕೊಲೆ ಮಾಡಲಾಗಿತ್ತು. ಶವನವನ್ನು ಕಾಮಕ್ಷಿಪಾಳ್ಯ ವ್ಯಾಪ್ತಿಯ ಸುಮನಹಳ್ಳಿ ದೊಡ್ಡ ಮೋರಿಯಲ್ಲಿ ಎಸೆಯಲಾಗಿತ್ತು.

ಪತ್ನಿಗೆ ಫೋನ್‌ ಮಾಡಿದ ಚಾಲೆಂಜಿಂಗ್‌ ಸ್ಟಾರ್‌

ದರ್ಶನ್‌ ನಿನ್ನೆ ಪೊಲೀಸರಿಂದ ಅನುಮತಿ ಪಡೆದು ಪತ್ನಿ ಮತ್ತು ಮಗನಲ್ಲಿ ಫೋನ್‌ನಲ್ಲಿ ಮಾತನಾಡಿದ್ದಾರೆ. ನನ್ನದ್ದೇನೂ ತಪ್ಪಿಲ್ಲ ಎಂದು ಇವರು ಮಾತನಾಡಿದ್ದಾರೆ.