ಕನ್ನಡ ಸುದ್ದಿ  /  ಮನರಂಜನೆ  /  ಪವಿತ್ರಾ ಗೌಡಗೆ ಗುಪ್ತಾಂಗದ ಫೋಟೋ ಕಳಿಸಿ, ದರ್ಶನ್‌ಗಿಂತ ನಾನೇನು ಕಡಿಮೆ ಬಾ ಎಂದಿದ್ದ ರೇಣುಕಾಸ್ವಾಮಿ!

ಪವಿತ್ರಾ ಗೌಡಗೆ ಗುಪ್ತಾಂಗದ ಫೋಟೋ ಕಳಿಸಿ, ದರ್ಶನ್‌ಗಿಂತ ನಾನೇನು ಕಡಿಮೆ ಬಾ ಎಂದಿದ್ದ ರೇಣುಕಾಸ್ವಾಮಿ!

ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕಾಗಿಯೇ ರೇಣುಕಾಸ್ವಾಮಿಯ ಹತ್ಯೆ ನಡೆದಿದೆ. ಗುಪ್ತಾಂಗದ ಫೋಟೋ ಕಳಿಸಿ, ದರ್ಶನ್‌ಗಿಂತ ನಾನೇನು ಕಮ್ಮಿ ಎಂದು ಸಂದೇಶ ಕಳುಹಿಸಿದ್ದ ಎಂಬ ಬಗ್ಗೆ ಪವಿತ್ರಾ ವಿಚಾರಣೆ ವೇಳೆ ಹೇಳಿಕೊಂಡಿದ್ದಾರೆ.

ಪವಿತ್ರಾ ಗೌಡಗೆ ಗುಪ್ತಾಂಗದ ಫೋಟೋ ಕಳಿಸಿ, ದರ್ಶನ್‌ಗಿಂತ ನಾನೇನು ಕಡಿಮೆ ಬಾ ಎಂದಿದ್ದ ರೇಣುಕಾಸ್ವಾಮಿ!
ಪವಿತ್ರಾ ಗೌಡಗೆ ಗುಪ್ತಾಂಗದ ಫೋಟೋ ಕಳಿಸಿ, ದರ್ಶನ್‌ಗಿಂತ ನಾನೇನು ಕಡಿಮೆ ಬಾ ಎಂದಿದ್ದ ರೇಣುಕಾಸ್ವಾಮಿ!

Renuka Swamy Murder Case: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್‌ ನಟ ದರ್ಶನ್‌ ಮತ್ತವರ ಸಹಚರರು ಸೇರಿ ಒಟ್ಟು 13 ಮಂದಿಯ ಬಂಧನವಾಗಿದೆ. ದರ್ಶನ್‌ ಆಪ್ತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ ಎಂಬ ಕಾರಣಕ್ಕೆ ರೇಣುಕಾಸ್ವಾಮಿಯ ಹತ್ಯೆ ನಡೆದಿದೆ. ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಸಿ, ದರ್ಶನ್‌ ಮತ್ತವರ ಸಹಚರರು ಸೇರಿ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಹೀಗೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ಅಚ್ಚರಿಯ ವಿಚಾರಗಳು ತನಿಖೆ ವೇಳೆ ಹೊರಬೀಳುತ್ತಿವೆ.

ಟ್ರೆಂಡಿಂಗ್​ ಸುದ್ದಿ

ನಟ ದರ್ಶನ್‌ ಮತ್ತು ವಿಜಯಲಕ್ಷ್ಮೀ ಮದುವೆಯಾದರೂ, ಕಳೆದ ಕೆಲ ವರ್ಷಗಳಿಂದ ನಟಿ ಪವಿತ್ರಾ ಗೌಡ ಅವರ ಜತೆಗೂ ದರ್ಶನ್‌ ಒಡನಾಟ ಇಟ್ಟುಕೊಂಡಿದ್ದಾರೆ. ಈ ವಿಚಾರವನ್ನು ಸ್ವತಃ ಪವಿತ್ರಾ ಗೌಡ ಅವರೇ ಸೋಷಿಯಲ್‌ ಮೀಡಿಯಾದಲ್ಲಿ ದರ್ಶನ್‌ ಜತೆಗಿನ ಒಂದು ದಶಕದ ಪಯಣವನ್ನು ಬಗೆಬಗೆ ಫೋಟೋಗಳ ಮೂಲಕ ಹಂಚಿಕೊಂಡಿದ್ದರು. ಇದು ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಅವರ ಗಮನಕ್ಕೂ ಬಂದಿತ್ತು. ಅದಾದ ಮೇಲೆ ಜಾಲತಾಣದಲ್ಲಿ ಇಬ್ಬರ ನಡುವೆ ದೊಡ್ಡ ವಾಕ್ಸಮರವೇ ನಡೆದಿತ್ತು. ಇವರಿಬ್ಬರ ಕಿತ್ತಾಟಕ್ಕೆ ಮಾತ್ರ ದರ್ಶನ್‌ ಕ್ಯಾರೆ ಎಂದಿರಲಿಲ್ಲ.

ಪವಿತ್ರಾಗೆ ರೇಣುಕಾಸ್ವಾಮಿಯಿಂದ ಮೆಸೇಜ್‌..

ಆದರೆ, ಸೋಷಿಯಲ್‌ ಮೀಡಿಯಾದಲ್ಲಿ ಅಭಿಮಾನಿ ಬಳಗ ಮಾತ್ರ ಪವಿತ್ರಾ ಗೌಡ ಅವರ ಬಗ್ಗೆ ಕೊಂಚ ಬೇಸರ ವ್ಯಕ್ತಪಡಿಸಿತ್ತು. ನಮ್ಮ ಬಾಸ್‌ ಜೀವನದಲ್ಲಿ ಬರಬೇಡಿ, ಅವರಿಗೆ ಈಗಾಗಲೇ ಮದುವೆಯಾಗಿದೆ ಎಂಬ ಕಾಮೆಂಟ್‌ ಮೂಲಕವೇ ಎಚ್ಚರಿಸುವ ಕೆಲಸ ಮಾಡಿದ್ದರು. ಆ ಪೈಕಿ ಕೊಲೆಯಾದ ರೇಣುಕಾಸ್ವಾಮಿಯೂ ಪವಿತ್ರಾ ಗೌಡ ಅವರಿಗೆ ಸಾಕಷ್ಟು ಕಾಮೆಂಟ್ ಸಹ ಮಾಡಿದ್ದರು. ಒಂದು ಹೆಜ್ಜೆ ಮುಂದೆ ಹೋಗಿ, ತಮ್ಮ ಖಾಸಗಿ ಫೋಟೋಗಳನ್ನೂ ಪವಿತ್ರಾಗೆ ಕಳಿಸಿದ್ದರಂತೆ ರೇಣುಕಾಸ್ವಾಮಿ.

ಕೆಟ್ಟ ಮೆಸೆಜ್‌ಗಳಿಂದ ಮಾನಸಿಕ ಹಿಂಸೆ

ಫೆಬ್ರವರಿ 27ರಿಂದ ಪವಿತ್ರಾ ಗೌಡಗೆ ಅಶ್ಲೀಲ ಮೆಸೆಜ್‌ಗಳನ್ನು ಕಳುಹಿಸಲು ಶುರು ಮಾಡಿದ್ದರು ರೇಣುಕಾಸ್ವಾಮಿ. ಒಂದಾದ ಮೇಲೊಂದು ಕೆಟ್ಟ ಕೆಟ್ಟ ಸಂದೇಶಗಳನ್ನು ಕಳುಹಿಸಿದ್ದಕ್ಕೆ, ಅವರ ಖಾತೆಯನ್ನೇ ಪವಿತ್ರಾ ಬ್ಲಾಕ್‌ ಮಾಡಿದ್ದರು. ಬೇರೆ ಬೇರೆ ಅಕೌಂಟ್‌ನಿಂದಲೂ ಸಾಕಷ್ಟು ಸಂದೇಶಗಳನ್ನು ಕಳುಹಿಸಿ ಮಾನಸಿಕ ಹಿಂಸೆ ನೀಡಿದ್ದರಂತೆ ಎಂದು ವಿಚಾರಣೆ ವೇಳೆ ಪವಿತ್ರಾ ಅಸಲಿ ಕಾರಣವನ್ನು ಹೇಳಿಕೊಂಡಿದ್ದಾರೆ.

ಗುಪ್ತಾಂಗದ ಫೋಟೋ ರವಾನೆ..

ಗುಪ್ತಾಂಗದ ಫೋಟೋ ಕಳಿಸಿ, ದರ್ಶನ್‌ಗಿಂತ ನಾನೇನು ಕಡಿಮೆ ಬಾ ಎಂದೂ ಸಂದೇಶ ಕಳಿಸಿದ್ದರಂತೆ ಮೃತ ರೇಣುಕಾಸ್ವಾಮಿ. ಹೀಗೆ ಸಂದೇಶ ಕಳಿಸುತ್ತಿರುವ ವಿಚಾರವನ್ನು ಮನೆ ಕೆಲಸದ ಪವನ್‌ ಬಳಿಯೂ ಪವಿತ್ರಾ ಗೌಡ ಹೇಳಿಕೊಂಡಿದ್ದರು. ಈ ವಿಚಾರವನ್ನು ಯಾವುದೇ ಕಾರಣಕ್ಕೂ ದರ್ಶನ್‌ ಅವರ ಗಮನಕ್ಕೆ ತರಬೇಡ ಎಂದಿದ್ದರು. ಆದರೆ, ಮನೆ ಕೆಲಸದ ಪವನ್‌, ಈ ವಿಷ್ಯವನ್ನು ದರ್ಶನ್‌ಗೆ ಹೇಳಿದ್ದಾನೆ. ಅದಾದ ಬಳಿಕ ಆಪ್ತರ ಸಹಾಯದಿಂದ ಆತನನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಅಪಹರಿಸಿದ ದರ್ಶನ್‌ ಮತ್ತವರ ಗ್ಯಾಂಗ್‌ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ.

ದರ್ಶನ್‌ ಕಿವಿಗೆ ಈ ವಿಚಾರ ಬೀಳಬಾರದಿತ್ತು..

ಸದ್ಯ ದರ್ಶನ್‌ ಮತ್ತವರ ಗ್ಯಾಂಗ್‌ ಕಳೆದ ಮೂರು ದಿನಗಳಿಂದ ಜೈಲಿನಲ್ಲಿದೆ. ಈ ನಡುವೆ ಪವಿತ್ರಾ ಗೌಡ ಸಣ್ಣ ವಿಚಾರಕ್ಕೆ ಇಷ್ಟೆಲ್ಲ ನಡೆದು ಹೋಯಿತು ಎಂದು ಮರುಕ ವ್ಯಕ್ತಪಡಿಸುತ್ತಿದ್ದಾರೆ. ಅಶ್ಲೀಲ ಫೋಟೋ ಕಳುಹಿಸಿದ ವಿಚಾರ ದರ್ಶನ್‌ ಕಿವಿಗೆ ಬೀಳಬಾರದಿತ್ತು. ಅದು ಅವರ ಗಮನಕ್ಕೆ ಬಂದಿದ್ದರಿಂದಲೇ ಇಷ್ಟೆಲ್ಲ ಆಯ್ತು. ಈ ಸಮಸ್ಯೆಯನ್ನು ನಾನೇ ಬಗೆಹರಿಸಿಕೊಳ್ಳಬೇಕಿತ್ತು ಎಂದು ಕೊರಗುತ್ತಿದ್ದಾರೆ.