ದರ್ಶನ್ ಜಾತಕದಲ್ಲಿ ಸ್ತ್ರೀ ದೋಷ, ಶನಿದೆಸೆಯಿಂದ ರಾಜಯೋಗವಿದ್ರೂ ಲಕ್ವಾ ಹೊಡೆಯುವ ಸಾಧ್ಯತೆ; ಖ್ಯಾತ ಜ್ಯೋತಿಷಿಯ ಅಚ್ಚರಿಯ ಭವಿಷ್ಯ
ಆಳಿಗೊಂದು ಕಲ್ಲು ಅನ್ನೋ ರೀತಿಯಲ್ಲಿ ದರ್ಶನ್ ಅವರ ಬಗ್ಗೆ ಸ್ಯಾಂಡಲ್‌ವುಡ್ ಮಂದಿ ಪರ ವಿರೋಧ ಹೇಳಿಕೆ ನೀಡುತ್ತಲೇ ಬರುತ್ತಿದ್ದಾರೆ. ಕೆಲವರು ದರ್ಶನ್ ಬಗ್ಗೆ ಶಾಕಿಂಗ್ ಹೇಳಿಕೆಗಳನ್ನು ನೀಡುತ್ತಿದ್ದರೆ, ಇನ್ನು ಕೆಲವರು ಅವರ ಬೆಂಬಲಕ್ಕೆ ನಿಂತಿದ್ದಾರೆ. ಈ ನಡುವೆ ಖ್ಯಾತ ಜ್ಯೋತಿಷಿಯಿಂದ ದರ್ಶನ್ ಬಗ್ಗೆ ಅಚ್ಚರಿಯ ಭವಿಷ್ಯ ಹೊರ ಬಿದ್ದಿದೆ.
astrology prediction on darshan: ನಟ ದರ್ಶನ್ ಮತ್ತವರ ಗ್ಯಾಂಗ್‌ನಿಂದಾದ ಕೊಲೆ ಪ್ರಕರಣದ ತನಿಖೆ ಬಿರುಸಿನಿಂದ ಸಾಗಿದೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಹಿನ್ನೆಲೆಯಲ್ಲಿ ದರ್ಶನ್ ಸೇರಿ ಈ ಕೃತ್ಯದಲ್ಲಿ ಭಾಗಿಯಾದ 17 ಮಂದಿಯನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ನಡುವೆ ಆಳಿಗೊಂದು ಕಲ್ಲು ಅನ್ನೋ ರೀತಿಯಲ್ಲಿ ದರ್ಶನ್ ಅವರ ಬಗ್ಗೆ ಸ್ಯಾಂಡಲ್‌ವುಡ್ ಮಂದಿ ಪರ ವಿರೋಧ ಹೇಳಿಕೆ ನೀಡುತ್ತಲೇ ಬರುತ್ತಿದ್ದಾರೆ. ಕೆಲವರು ದರ್ಶನ್ ಬಗ್ಗೆ ಶಾಕಿಂಗ್ ಹೇಳಿಕೆಗಳನ್ನು ನೀಡುತ್ತಿದ್ದರೆ, ಇನ್ನು ಕೆಲವರು ಅವರ ಬೆಂಬಲಕ್ಕೆ ನಿಂತಿದ್ದಾರೆ. ಈ ನಡುವೆ ಖ್ಯಾತ ಜ್ಯೋತಿಷಿಯಿಂದ ದರ್ಶನ್ ಬಗ್ಗೆ ಅಚ್ಚರಿಯ ಭವಿಷ್ಯ ಹೊರ ಬಿದ್ದಿದೆ.
ಬಿಗ್ ಬಾಸ್‌ನ ಮಾಜಿ ಸ್ಪರ್ಧಿಯೂ ಆದ ಮತ್ತು ಜ್ಯೋತಿಷಿಯೂ ಆಗಿರುವ ಆರ್ಯವರ್ಧನ್ ಗುರೂಜಿಗಳು ಇದೀಗ ದರ್ಶನ್ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಅದರಲ್ಲಿ ಅಚ್ಚರಿಯ ಸಂಗತಿಗಳೇ ಹೆಚ್ಚಿವೆ. "ನಟ ದರ್ಶನ್ ಅವರ ಹೆಸರನ್ನು ನೋಡುವುದಾದರೆ, ಅವರ ಹೆಸರಿನ 21 ನಂಬರ್ ಬರುತ್ತೆ. ಅವರ ಹುಟ್ಟಿದ ದಿನಕ್ಕಿದು ತದ್ವಿರುದ್ಧವಾದ ಸಂಖ್ಯೆ. ಆ ಹೆಸರೇ ಅವರಿಗೆ ಸೂಕ್ತ ಅಲ್ಲ. ಆ ಹೆಸರು ಇರೋವರೆಗೂ ಜಗಳಗಳು ನಡೆಯುತ್ತಲೇ ಇರುತ್ತವೆ. ಎಲ್ಲ ಇದ್ದರೂ, ನೆಮ್ಮದಿ ಇರಲ್ಲ" ಎಂದಿದ್ದಾರೆ.
ಸ್ತ್ರೀ ದೋಷ
ದರ್ಶನ್ ಹುಟ್ಟಿನ ಬಗ್ಗೆ ಹೇಳುವುದಾದರೆ, ದರ್ಶನ್ ಅವರ ಡೇಟ್ ಆಫ್ ಬರ್ತ್ ಬಂದು 16ನೇ ದಿನಾಂಕ. ಅವರ ಪೂರ್ತಿ ಡೇಟ್ ಆಫ್ ಬರ್ತ್ ಒಟ್ಟುಗೂಡಿಸಿದರೆ 33 ಅಂಕಿ ಕಾಣಸಿಗುತ್ತದೆ. 7 ಮತ್ತು 6 ಒಳ್ಳೆಯ ಕಾಂಬಿನೇಶನ್ ಆದರೂ ಈ ವರ್ಷ 16, 6, 8 ನಂಬರ್‌ಗಳು ದರ್ಶನ್‌ಗೆ ಸರಿ ಇಲ್ಲ. ಈ ವರ್ಷದ 6ನೇ ತಿಂಗಳು ದರ್ಶನ್‌ಗೆ ಅಪಾಯಕಾರಿ. ಇದಷ್ಟೇ ಅಲ್ಲ ದರ್ಶನ್ ಜಾತಕದಲ್ಲಿ ಸ್ತ್ರೀ ದೋಷವೂ ಇದೆ. ಉಚ್ಛ ಸ್ಥಾನದಲ್ಲಿ ಶುಕ್ರ ನೆಲೆಸಿದ್ದಾನೆ. ಉಚ್ಛ ಶುಕ್ರ ಗ್ರಹ ಇದ್ದರೆ ಹೆಣ್ಮಕ್ಕಳ ರಗಳೆಯೇ ಹೆಚ್ಚು. ಹೆಣ್ಣಿನಿಂದ ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ಒಂದರ್ಥದಲ್ಲಿ ಅವರ ಜಾತಕದಲ್ಲಿ ಹೆಣ್ಣೇ ಶತ್ರು" ಎಂದಿದ್ದಾರೆ ಆರ್ಯವರ್ಧನ್ ಗುರೂಜಿ.
ಲಕ್ವಾ ಹೊಡೆಯುವ ಸಾಧ್ಯತೆ..
ನಟ ದರ್ಶನ್ ಅವರ ಆರೋಗ್ಯದ ಬಗ್ಗೆಯೂ ಭವಿಷ್ಯ ನುಡಿದಿರುವ ಆರ್ಯವರ್ಧನ್ ಗುರೂಜಿ, "ದರ್ಶನ್ ಅವರಿಗರ ರಾಹು ಭುಕ್ತಿಯಲ್ಲಿ ಆರೋಗ್ಯ ಸಮಸ್ಯೆ ಕಾಡಬಹುದು. ಹಾಗೇ ನೋಡಿದರೆ, ಸ್ಟ್ರೋಕ್ (ಲಕ್ವಾ) ಆಗುವ ಸಾಧ್ಯತೆ ಜಾಸ್ತಿ ಇದೆ. ಗಂಡ - ಹೆಂಡತಿ ನಡುವೆ ಒಳ್ಳೆಯ ಬಾಂಧವ್ಯ ಇದ್ದರೂ, ಆಗಾಗ ಕೆಲ ಭಿನ್ನಾಭಿಪ್ರಾಯಗಳು ನಡೆಯುತ್ತಲೇ ಇರುತ್ತವೆ. ಅದು ಈಗಿನಿಂದಲ್ಲ, ಈ ಹಿಂದಿನಿಂದಲೂ ನಡೆಯುತ್ತಲೇ ಬಂದಿದೆ. ಇದರ ನಡುವೆ ಒಂದಷ್ಟು ಮಂದಿ ಹೀಗೆ ಬಂದು ಹಾಗೇ ಹೋಗ್ತಾರೆ. ಇಬ್ಬರೂ ಖುಷಿ ಖುಷಿಯಾಗಿರುವ ಕಾಲ ಮುಂದಿದೆ" ಎಂದಿದ್ದಾರೆ.
2027ರ ವರೆಗೆ ಟೈಮ್ ಸರಿಯಿಲ್ಲ..
ಮುಂದಿನ ಕೆಲ ವರ್ಷಗಳು ದರ್ಶನ್ ಅವರ ಸಿನಿಮಾ ಕೆರಿಯರ್ ಹೇಗಿರಲಿದೆ ಎಂಬುದಕ್ಕೆ ಉತ್ತರ ನೀಡಿದ ಅವರು, "ರಾಹು ಭುಕ್ತಿ ಇಂದಾಗಿ ಮುಂದಿನ ಮೂರು ವರ್ಷ ಅಂದರೆ, 2027ವರೆಗೂ ದರ್ಶನ್ ಅವರಿಗೆ ಒಂದಷ್ಟು ಸಮಸ್ಯೆಗಳು ಎದುರಾಗುತ್ತಲೇ ಇರುತ್ತದೆ. ನೋವುಗಳು ಬರುತ್ತಲೇ ಇರುತ್ತವೆ. ಒಪ್ಪಿಕೊಂಡ ಸಿನಿಮಾಗಳ ವಿಚಾರದಲ್ಲಿಯೂ ಒಂದಷ್ಟು ಏರುಪೇರು ಆಗಬಹುದಾದ ಸಾಧ್ಯತೆಗಳು ಹೆಚ್ಚಿವೆ. ವೈಯಕ್ತಿಕ ಜೀವನದಲ್ಲಿಯೂ ಸಾಕಷ್ಟು ಬದಲಾವಣೆಗಳಾಗಲಿವೆ. ಅಲ್ಲಿಂದ ಶನಿದೆಸೆ ಇವರ ಜೀವನದಲ್ಲಿ ಶುರುವಾಗಲಿದೆ" ಎಂದಿದ್ದಾರೆ.
ರಾಜಯೋಗವೂ ಇವರ ಭವಿಷ್ಯದಲ್ಲಿದೆ..
ನಟ ದರ್ಶನ್ ನಟನಾಗಿ ದೊಡ್ಡ ಹೆಸರು ಮಾಡಿದ್ದಾರೆ. ಆಗಾಗ ರಾಜಕೀಯ ಮಂದಿಯ ಚುನಾವಣಾ ಪ್ರಚಾರದಲ್ಲಿಯೂ ಭಾಗವಹಿಸುತ್ತಿರುತ್ತಾರೆ. ಇದೀಗ ಇದೇ ವ್ಯಕ್ತಿಯ ರಾಜಕೀಯ ಜೀವನದ ಬಗ್ಗೆಯೂ ಆರ್ಯವರ್ಧನ್ ಗುರುಜೀ ಹೇಳಿದ್ದಿಷ್ಟು. ದರ್ಶನ್ ಅವರ ಜಾತಕದಲ್ಲಿ 19 ವರ್ಷಗಳ ಕಾಲ ಶನಿದೆಸೆ ಇರಲಿದೆ. ಈ ಶನಿದೆಸೆ ಅವರಿಗೆ ಹೆಚ್ಚು ಶ್ರೇಯಸ್ಸು. ಅದ್ಯಾವಮಟ್ಟಿಗೆ ಎಂದರೆ ರಾಜಯೋಗ ಸೃಷ್ಟಿಯಾಗಲಿದೆ. ರಾಜಕೀಯಕ್ಕೆ ಬಂದರೆ ಶಾಸಕ, ಸಚಿವ ಆಗುವ ಎಲ್ಲ ಲಕ್ಷಣಗಳಿವೆ ಎಂದಿದ್ದಾರೆ.
ವಿಭಾಗ