ಕನ್ನಡ ಸುದ್ದಿ  /  ಮನರಂಜನೆ  /  ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಚಿಕ್ಕಣ್ಣನಿಗೂ ನೋಟಿಸ್‌? ದರ್ಶನ್‌ ಕೇಸ್‌ನಲ್ಲಿ ಕನ್ನಡ ಹಾಸ್ಯ ನಟನಿಗೆ ಏನು ನಂಟು

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಚಿಕ್ಕಣ್ಣನಿಗೂ ನೋಟಿಸ್‌? ದರ್ಶನ್‌ ಕೇಸ್‌ನಲ್ಲಿ ಕನ್ನಡ ಹಾಸ್ಯ ನಟನಿಗೆ ಏನು ನಂಟು

Renuka Swamy Murder Case: ಕನ್ನಡ ನಟ ದರ್ಶನ್‌ ಪ್ರಕಣದಲ್ಲಿ ಹಾಸ್ಯ ನಟ ಚಿಕ್ಕಣ್ಣನಿಗೂ ಪೊಲೀಸರು ನೋಟಿಸ್‌ ನೀಡಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ದರ್ಶನ್‌ ಶೆಡ್‌ಗೆ ಹೋಗುವ ಮೊದಲು ಖಾಸಗಿ ರೆಸ್ಟೂರೆಂಟ್‌ನಲ್ಲಿ ಪಾರ್ಟಿ ಮಾಡಿದ್ದರು.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಚಿಕ್ಕಣ್ಣನಿಗೂ ನೋಟಿಸ್‌?
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಚಿಕ್ಕಣ್ಣನಿಗೂ ನೋಟಿಸ್‌?

ಬೆಂಗಳೂರು: ಕನ್ನಡ ನಟ ದರ್ಶನ್‌ ಪ್ರಕಣದಲ್ಲಿ ಹಾಸ್ಯ ನಟ ಚಿಕ್ಕಣ್ಣನಿಗೂ ಪೊಲೀಸರು ನೋಟಿಸ್‌ ನೀಡಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ದರ್ಶನ್‌ ಶೆಡ್‌ಗೆ ಹೋಗುವ ಮೊದಲು ಖಾಸಗಿ ರೆಸ್ಟೂರೆಂಟ್‌ನಲ್ಲಿ ಪಾರ್ಟಿ ಮಾಡಿದ್ದರು. ಅಲ್ಲಿ ಚಿಕ್ಕಣ್ಣ ಸೇರಿದಂತೆ ಇನ್ನೂ ಹಲವಾರು ಜನರು ಭಾಗಿಯಾಗಿದ್ದರು. ಈ ಪಾರ್ಟಿಯಲ್ಲಿ ರೇಣುಕಾ ಸ್ವಾಮಿಗೆ ಹಲ್ಲೆ ನಡೆಸುವ ಕುರಿತು ಏನಾದರೂ ಚರ್ಚೆ ನಡೆದಿದೆಯೇ ಎಂದು ತನಿಖೆ ಮಾಡುವ ಸಲುವಾಗಿ ಚಿಕ್ಕಣ್ಣ ಅವರಿಗೂ ಪೊಲೀಸರು ನೋಟಿಸ್‌ ನೀಡಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ಜೂನ್‌ 17ರಂದು ಅಂದರೆ ಇಂದು ಸಂಜೆಯೇ ಚಿಕ್ಕಣ್ಣ ಅವರಿಗೆ ನೋಟಿಸ್‌ ನೀಡಲು ಸಿದ್ಧತೆ ನಡೆದಿದೆ ಎಂದು ಹೇಳಲಾಗಿದೆ. ಈಗಾಗಲೇ ಪೊಲೀಸರು ನಟ ದರ್ಶನ್‌, ಪವಿತ್ರಾ ಗೌಡ ಸೇರಿದಂತೆ 19 ಜನರನ್ನು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಮತೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಂಬಂಧಪಟ್ಟವರನ್ನು ವಿಚಾರಣೆ ನಡೆಸಲು ಪೊಲೀಸರು ಉದ್ದೇಶಿಸಿದ್ದಾರೆ. ಈ ಕೃತ್ಯ ನಡೆಯುವ ಮೊದಲು ಪಾರ್ಟಿ ನಡೆದಿತ್ತು. ಆ ಪಾರ್ಟಿಯಲ್ಲಿ ಭಾಗಿಯಾದವರಿಗೂ ನೋಟಿಸ್‌ ನೀಡುವ ಕುರಿತು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ದರ್ಶನ್‌ ಜತೆ ಚಿಕ್ಕಣ್ಣ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಉಪಾಧ್ಯಕ್ಷ ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ದರ್ಶನ್‌ ಆ ಸಿನಿಮಾ ನೋಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ದರ್ಶನ್‌ ಜತೆ ಹಲವು ಪಾರ್ಟಿಗಳಲ್ಲಿ ಚಿಕ್ಕಣ್ಣ ಭಾಗಿಯಾಗಿದ್ದಾರೆ. ಇದೀಗ ರೇಣುಕಾ ಸ್ವಾಮಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಿಕ್ಕಣ್ಣ ಅವರಿಗೂ ನೋಟಿಸ್‌ ನೀಡುವ ಸಾಧ್ಯತೆ ದಟ್ಟವಾಗಿದೆ.

ಟ್ರೆಂಡಿಂಗ್​ ಸುದ್ದಿ

ದರ್ಶನ್‌ಗೆ ಹಲವು ನಟರು ಆಪ್ತರಿದ್ದಾರೆ. ಅವರ ಜತೆ ಆಗಾಗ ಪಾರ್ಟಿ ಮಾಡುತ್ತಿದ್ದಾರೆ. ನಟ ಧನ್ವಿರ್‌, ಅಭಿಷೇಕ್‌ ಅಂಬರೀಶ್‌, ಯಶಸ್‌ ಸೂರ್ಯ ಸೇರಿದಂತೆ ಹಲವು ನಟರು ದರ್ಶನ್‌ ಆಪ್ತ ವಲಯದಲ್ಲಿದ್ದಾರೆ. ಘಟನೆ ನಡೆಯುವ ಮುನ್ನ ಸ್ಟೋನಿ ಬ್ರೂಕ್‌ ರೆಸ್ಟೂರೆಂಟ್‌ನಲ್ಲಿ ಪಾರ್ಟಿ ನಡೆದಿತ್ತು. ನಿರ್ಮಾಪಕರೊಬ್ಬರ ಜತೆ ಚಿಕ್ಕಣ್ಣ ಕೂಡ ಅಲ್ಲಿದ್ದರು ಎನ್ನಲಾಗಿದೆ. ಕಾಮಾಕ್ಷಿಪಾಳ್ಯ ಪೊಲೀಸರು ನಮ್ಮನ್ನು ಸಂಪರ್ಕಿಸಬಹುದು ಎಂಬ ಭಯದಲ್ಲಿ ನಿರ್ಮಾಪಕರು ಮತ್ತು ಚಿಕ್ಕಣ್ಣ ಇದ್ದಾರೆ ಎನ್ನಲಾಗಿದೆ. ಚಿಕ್ಕಣ್ಣ ಅವರಿಗೆ ನೋಟಿಸ್‌ ನೀಡಿ ಕರೆಸುವ ಕುರಿತು ಪೊಲೀಸರು ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸುತ್ತ ಇದ್ದಾರೆ ಎನ್ನಲಾಗಿದೆ.

ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸರು ಪವಿತ್ರಾ ಗೌಡರನ್ನು ಎ1 ಆರೋಪಿಯನ್ನಾಗಿ ಮಾಡಿದ್ದಾರೆ. ದರ್ಶನ್‌ ಎ2 ಆರೋಪಿಯಾಗಿದ್ದಾನೆ. ಉಳಿದಂತೆ, ಎಫ್‌ಐಆರ್‌ನಲ್ಲಿ ರಾಘವೇಂದ್ರ ಎ4, ನಂದೀಶ್ ಎ5, ಜಗದೀಶ್ ಅಲಿಯಾಸ್ ಜಗ್ಗ ಎ6, ಅನು ಎ7, ರವಿ ಎ8, ರಾಜು ಎ9, ವಿನಯ್ ಎ10, ನಾಗರಾಜ್ ಎ11, ಲಕ್ಷ್ಮಣ್ ಎ12, ದೀಪಕ್ ಎ13, ಪ್ರದೋಶ್​ ಎ14, ಕಾರ್ತಿಕ್ ಎ15, ಕೇಶವ ಮೂರ್ತಿ ಎ16, ನಿಖಿಲ್ ನಾಯಕ್ ಎ17 ಆರೋಪಿಗಳನ್ನಾಗಿ ಮಾಡಲಾಗಿದೆ.