ಕನ್ನಡ ಸುದ್ದಿ  /  ಮನರಂಜನೆ  /  ದರ್ಶನ್‌ಗೆ ನಾನ್ಯಾಕೆ ಟಾಂಗ್ ಕೊಡಲಿ, ವಿಜಯಲಕ್ಷ್ಮೀ ಮತ್ತವರ ಪುತ್ರನಿಗೆ ದೇವ್ರು ಶಕ್ತಿ ನೀಡಲಿ; ಇಂದ್ರಜಿತ್ ಲಂಕೇಶ್

ದರ್ಶನ್‌ಗೆ ನಾನ್ಯಾಕೆ ಟಾಂಗ್ ಕೊಡಲಿ, ವಿಜಯಲಕ್ಷ್ಮೀ ಮತ್ತವರ ಪುತ್ರನಿಗೆ ದೇವ್ರು ಶಕ್ತಿ ನೀಡಲಿ; ಇಂದ್ರಜಿತ್ ಲಂಕೇಶ್

ನಟ ದರ್ಶನ್‌ ಬಗ್ಗೆ ಹುಬ್ಬಳ್ಳಿಯಲ್ಲಿ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಮಾತನಾಡಿದ್ದಾರೆ. ಗೌರಿ ಚಿತ್ರದ ಹಾಡಿನ ಬಿಡುಗಡೆ ವೇಳೆ, ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.

ದರ್ಶನ್‌ಗೆ ನಾನ್ಯಾಕೆ ಟಾಂಗ್ ಕೊಡಲಿ, ವಿಜಯಲಕ್ಷ್ಮೀ ಮತ್ತವರ ಪುತ್ರನಿಗೆ ದೇವ್ರು ಶಕ್ತಿ ನೀಡಲಿ; ಇಂದ್ರಜಿತ್ ಲಂಕೇಶ್
ದರ್ಶನ್‌ಗೆ ನಾನ್ಯಾಕೆ ಟಾಂಗ್ ಕೊಡಲಿ, ವಿಜಯಲಕ್ಷ್ಮೀ ಮತ್ತವರ ಪುತ್ರನಿಗೆ ದೇವ್ರು ಶಕ್ತಿ ನೀಡಲಿ; ಇಂದ್ರಜಿತ್ ಲಂಕೇಶ್

Indrajit Lankesh on Darshan: ಯುವ ನಟ ಸಮರ್ಜಿತ್ ಲಂಕೇಶ್ ಹಾಗೂ ನಾಯಕಿ ಸಾನ್ಯಾ ಅಯ್ಯರ್ ಅಭಿನಯದ ಗೌರಿ ಸಿನಿಮಾ ರಾಜ್ಯದಾದ್ಯಂತ ಜುಲೈನಲ್ಲಿ ತೆರೆಗೆ ಬರಲಿದೆ. ಸದ್ಯ ಚಿತ್ರದ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಈ ನಡುವೆಯೇ ಇದೀಗ ಸಿನಿಮಾತಂಡ ಹುಬ್ಬಳ್ಳಿಯಲ್ಲಿ ಚಿತ್ರದ ಹಾಡನ್ನು ರಿಲೀಸ್ ಮಾಡಿ ಸಂಭ್ರಮಿಸಿದೆ.

ಹಾಡನ್ನು ರಿಲೀಸ್ ಮಾಡಿ ಮಾತನಾಡಿದ ನಿರ್ದೇಶಕ ಇಂದ್ರಜಿತ್, 'ನನ್ನ ಪುತ್ರ ಸಮರ್ಜಿತ್ ಹಾಗೂ ಸಾನ್ಯ ಅಯ್ಯರ್ ಗೆ ಇದು ಚೊಚ್ಚಲ ಸಿನಿಮಾವಾಗಿದ್ದು, ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿದ ಕಡೆ ಚಿತ್ರೀಕರಣ ಮಾಡಲಾಗಿದೆ. ಅಕ್ಕ ಗೌರಿಯ ಸಿದ್ದಾಂತ ಇದರಲ್ಲಿ ಇಲ್ಲ. ಇದು ಅಕ್ಕ ಗೌರಿಯ ಕಥೆಯೂ ಅಲ್ಲ. ಅಕ್ಕನ ಮೇಲಿನ ಅಭಿಮಾನದಿಂದ ಸಿನಿಮಾಗೆ ಆಕೆಯ ಹೆಸರು ಇಟ್ಟಿದ್ದೇನೆ. ಈ ಚಿತ್ರದಲ್ಲಿ ಲೂಸ್ ಮಾದ ಯೋಗಿ, ಪ್ರಿಯಾಂಕಾ ಉಪೇಂದ್ರ, ಅಕುಲ್ ಬಾಲಾಜಿ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ ಎಂದರು.

ಟ್ರೆಂಡಿಂಗ್​ ಸುದ್ದಿ

ನಟ ಸಮರ್ಜಿತ್ ಮಾತನಾಡಿ, ಸಿನಿಮಾವನ್ನು ಕಷ್ಟಪಟ್ಟು ಮಾಡಿದ್ದು, ಅದ್ಭುತವಾಗಿ ಮೂಡಿಬಂದಿದೆ. ಜುಲೈ ತಿಂಗಳಲ್ಲಿ ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರಲಿದೆ. ಎಲ್ಲರೂ ಸಿನಿಮಾ ಚಿತ್ರಮಂದಿರಕ್ಕೆ ಹೋಗಿ ನೋಡಬೇಕು ಎಂದರು‌. ಪತ್ರಿಕಾಗೋಷ್ಠಿಯಲ್ಲಿ ನಟಿ ಸಾನ್ಯ ಅಯ್ಯರ್ ಉಪಸ್ಥಿತರಿದ್ದರು.

ನಾನ್ಯಾಕೆ ದರ್ಶನ್‌ಗೆ ಟಾಂಗ್‌ ಕೊಡಲಿ

ಇದೇ ಸಮಯದಲ್ಲಿ ನಟ ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಇಂದ್ರಜಿತ್, ಈ ಕೇಸ್ ಬಗ್ಗೆ ನಾನು ಈಗ ಏನು ಹೇಳಲ್ಲ, ತನಿಖೆ ನಡೆಯುತ್ತಿದೆ. ಶಿವಮೊಗ್ಗದಲ್ಲಿ ನಾನು ಏನು ಮಾತನಾಡಿಲ್ಲ. ನನ್ನ ತಂದೆ ಹುಟ್ಟಿದ ಸ್ಥಳ ಅದು ಎಂದರು. ದರ್ಶನ್ ಅವರಿಗೆ ನಾನು ಯಾಕೆ ಟಾಂಗ್ ಕೊಡಲಿ. ಬಸವಣ್ಣನ ವಚನ ಹೇಳಿದೆ ಅಷ್ಟೆ. ಅವರ ಜೊತೆ ನಾನು ಸಿನಿಮಾ ಮಾಡಿದ್ದೇನೆ. ಪತ್ರಕರ್ತನಾಗಿ ನಾನು ಕೆಲವು ವಿಚಾರಗಳ ಬಗ್ಗೆ ಧ್ವನಿ ಎತ್ತಿದ್ದೆ ಅಷ್ಟೆ. ಅದು ಬಿಟ್ಟರೆ ನಮ್ಮ ನಡುವೆ ಏನು ಇಲ್ಲ. ಅನ್ಯಾಯ ಆದಾಗ ಧ್ವನಿ ಎತ್ತುವ ಬಗ್ಗೆ ನನ್ನ ತಂದೆ ಲಂಕೇಶ್ ಅವರಿಂದ ಕಲಿತ್ತಿದ್ದು. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು. ವಿಜಯಲಕ್ಷ್ಮಿ ಹಾಗೂ ಅವರ ಮಗನಿಗೆ ದೇವರು ಶಕ್ತಿ ಕೊಡಲಿ ಎಂದರು.

ಸಾಮಾಜಿಕ ಜಾಲತಾಣದ ಬಗ್ಗೆ ಇಂದ್ರಜಿತ್ ಆಕ್ರೋಶ

ಸಾಮಾಜಿಕ ಜಾಲತಾಣ ಅದ್ಭುತವಾದ ಮಾಧ್ಯಮ. ಅದು ತುಂಬ ಕೆಟ್ಟದಾಗಿ ಬಳಕೆಯಾಗುತ್ತಿದೆ ಎಂದು ಸರ್ಕಾರ ಹಾಗೂ ಸೈಬರ್ ಕ್ರೈಮ್ ವಿರುದ್ದ ಇಂದ್ರಜಿತ್ ಆಕ್ರೋಶ ಹೊರಹಾಕಿದರು. ಇದೇ ಸಮಯದಲ್ಲಿ ಸರಿಯಾದ ಕ್ರಮ ಕೈಗೊಳುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ಇದರಿಂದ ಇಂದಿನ ಯುವ ಜನತೆ ಹಾಳಾಗುತ್ತಿದೆ. ಸೈಬರ್ ಕ್ರೈಮ್ ಯಾವತ್ತು ಯಾರಿಗೂ ಉಪಯೋಗ ಆಗಿಲ್ಲ. ಸಾಮಾಜಿಕ ಜಾಲತಾಣದಿಂದನೇ ಅನೇಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ, ಮಂತ್ರಿಗಳ ಮನೆಯಲ್ಲಿ ಇಂಥ ಘಟನೆಗಳು ಆದಾಗ ಗೊತ್ತಾಗುತ್ತೆ ಎಂದರು.