ಪವಿತ್ರಾ ಗೌಡ ತುಂಬಾ ಇನೋಸೆಂಟ್, ಅಷ್ಟೇ ಕೋಪಿಷ್ಠೆ ಕೂಡ ಹೌದು; ಮಾಜಿ ಪತ್ನಿ ಬಗ್ಗೆ ಸಂಜಯ್‌ ಸಿಂಗ್‌ ಪ್ರತಿಕ್ರಿಯೆ
ಕನ್ನಡ ಸುದ್ದಿ  /  ಮನರಂಜನೆ  /  ಪವಿತ್ರಾ ಗೌಡ ತುಂಬಾ ಇನೋಸೆಂಟ್, ಅಷ್ಟೇ ಕೋಪಿಷ್ಠೆ ಕೂಡ ಹೌದು; ಮಾಜಿ ಪತ್ನಿ ಬಗ್ಗೆ ಸಂಜಯ್‌ ಸಿಂಗ್‌ ಪ್ರತಿಕ್ರಿಯೆ

ಪವಿತ್ರಾ ಗೌಡ ತುಂಬಾ ಇನೋಸೆಂಟ್, ಅಷ್ಟೇ ಕೋಪಿಷ್ಠೆ ಕೂಡ ಹೌದು; ಮಾಜಿ ಪತ್ನಿ ಬಗ್ಗೆ ಸಂಜಯ್‌ ಸಿಂಗ್‌ ಪ್ರತಿಕ್ರಿಯೆ

ಕೊಲೆ ಪ್ರಕರಣದಲ್ಲಿ ನಟ ದರ್ಶನ್‌, ಪವಿತ್ರಾ ಗೌಡ ಸೇರಿ ಒಟ್ಟು 17 ಮಂದಿ ಮೇಲೆ ಕೇಸ್‌ ಬುಕ್‌ ಆಗಿದೆ. ಇದೀಗ ಇದೇ ಘಟನೆ ಬಗ್ಗೆ ದೂರದ ಉತ್ತರ ಪ್ರದೇಶದಲ್ಲಿರುವ ಪವಿತ್ರಾ ಗೌಡ ಅವರ ಮೊದಲ ಪತಿ ಸಂಜಯ್‌ ಸಿಂಗ್‌ ಪ್ರತಿಕ್ರಿಯಿಸಿದ್ದಾರೆ.

ಪವಿತ್ರಾ ಗೌಡ ತುಂಬಾ ಇನೋಸೆಂಟ್, ಅಷ್ಟೇ ಕೋಪಿಷ್ಠೆ ಕೂಡ ಹೌದು; ಮಾಜಿ ಪತ್ನಿ ಬಗ್ಗೆ ಸಂಜಯ್‌ ಸಿಂಗ್‌ ಪ್ರತಿಕ್ರಿಯೆ
ಪವಿತ್ರಾ ಗೌಡ ತುಂಬಾ ಇನೋಸೆಂಟ್, ಅಷ್ಟೇ ಕೋಪಿಷ್ಠೆ ಕೂಡ ಹೌದು; ಮಾಜಿ ಪತ್ನಿ ಬಗ್ಗೆ ಸಂಜಯ್‌ ಸಿಂಗ್‌ ಪ್ರತಿಕ್ರಿಯೆ

Pavitra Gowda Husband: ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾರೆ ಎಂಬ ಒಂದು ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ನಟ ದರ್ಶನ್‌ ಅಂಡ್‌ ಗ್ಯಾಂಗ್‌ ಹತ್ಯೆ ಮಾಡಿದೆ. ಈ ಕೇಸ್‌ಗೆ ಸಂಬಂಧಿಸಿದಂತೆ ಈಗಾಗಲೇ 13 ಜನರನ್ನು ಕಸ್ಟಡಿಗೆ ಪಡೆದಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ. ವಿಚಾರಣೆ ವೇಳೆ ಎಲ್ಲರಿಂದಲೂ ಪ್ರತ್ಯೇಕವಾಗಿ ಹೇಳಿಕೆಗಳನ್ನು ಪಡೆದು, ಸ್ಥಳ ಮಹಜರನ್ನೂ ಪೂರ್ಣಗೊಳಿಸಿದ್ದಾರೆ. ಕಣ್ಮರೆಸಿಕೊಂಡ ಇನ್ನೂ ನಾಲ್ವರ ಹುಡುಕಾಟಕ್ಕೂ ಬಲೆ ಬೀಸಿದ್ದಾರೆ.

ಪವಿತ್ರಾ ಗೌಡ ಮಾಜಿ ಪತಿ ಪ್ರತಿಕ್ರಿಯೆ

ಈ ನಡುವೆ ಪವಿತ್ರಾ ಗೌಡ ಅವರ ಮಾಜಿ ಪತಿ ಸಂಜಯ್‌ ಸಿಂಗ್‌ ಇದೀಗ ಈ ಪ್ರಕರಣರದ ಬಗ್ಗೆ ಮಾತನಾಡಿದ್ದಾರೆ. "ನಾನು ಉತ್ತರ ಪ್ರದೇಶದವನು. 2002ರಲ್ಲಿ ನಾನು ಬೆಂಗಳೂರಿಗೆ ಬಂದೆ. ಆ ಸಮಯದಲ್ಲಿಯೇ ನನಗೆ ಪವಿತ್ರಾ ಗೌಡ ಅವರ ಪರಿಚಯ ಆಯ್ತು. ಆ ಪರಿಚಯ ಪ್ರೀತಿಗೆ ತಿರುಗಿತು. ಬಳಿಕ ಮದುವೆಯೂ ಆಯ್ತು. ಮಗಳ ಜತೆಗೆ ವರ್ಷಕ್ಕೆ ಒಂದು ಸಲ ಫೋನ್‌ನಲ್ಲಿ ಮಾತನಾಡ್ತೀನಿ. ಆದರೆ, ನೇರವಾಗಿ ಇಲ್ಲಿಯವರೆಗೂ ನಾನು ಮಾತನಾಡಿಲ್ಲ. ಪವಿತ್ರಾ ಅವರನ್ನೂ ನಾನು ಮಾತನಾಡಿಸಿಲ್ಲ"

ಪವಿತ್ರಾ ಗೌಡ ಇನೋಸೆಂಟ್‌..

"ಅತ್ತೆ ಮಾವನ ಬಳಿ ನನ್ನ ಮಗಳಿದ್ದರೆ, ಆಕೆ ಜತೆಗೆ ಮಾತನಾಡುತ್ತೇನೆ. ಆದರೆ, ಈ ಘಟನೆ ಆದ ಬಳಿಕ ನಾನು ಮಾತನಾಡಲು ಹೋಗಿಲ್ಲ. ಆಕೆಯ ಪರಿಸ್ಥಿತಿ ನನಗೆ ಗೊತ್ತಿರುವುದರಿಂದ ಈ ಸಮಯದಲ್ಲಿ ಮಾತನಾಡಿ ಅವರಿಗೆ ಡಿಸ್ಟರ್ಬ್‌ ಮಾಡಲ ನನಗೆ ಮನಸಿಲ್ಲ. ಅವಳಿಗೆ ಕೋಪ ಬಂದರೆ ಅವಳು ಏನು ಮಾಡುತ್ತಾಳೋ ಅವಳಿಗೇ ಗೊತ್ತಿಲ್ಲ. ಈಗ ಪವಿತ್ರಾ ಗೌಡ ಈ ಕೊಲೆ ಮಾಡಿದ್ದಾಳೆ ಅಂದರೆ ನಾನು ನಂಬಲ್ಲ. ಈ ಕೃತ್ಯ ನಡೆದ ಸಮಯದಲ್ಲಿ ಅವರ ಪತಿ ದರ್ಶನ್‌ ಜತೆಗೆ ಪವಿತ್ರಾ ಇದ್ದಿರಬಹುದು. ಆಕೆ ತುಂಬ ಸ್ಟಾಂಗ್‌ ಜತೆಗೆ ಅಷ್ಟೇ ಕೋಪಿಷ್ಠೆ ಕೂಡ ಹೌದು. ಸಿಟ್ಟು ಬಂದರೆ ಅವಳು ಏನು ಮಾಡ್ತಾಳೆ ಅಂತ ಅವಳಿಗೂ ಗೊತ್ತಿಲ್ಲ" ಎಂದಿದ್ದಾರೆ ಪವಿತ್ರಾ ಗೌಡ ಮಾಜಿ ಪತಿ ಸಂಜಯ್‌ ಸಿಂಗ್.‌ ‌

"ಇಲ್ಲಿ ಪವಿತ್ರಾ ಗೌಡ ಅವರ ತಪ್ಪೇನು ಇಲ್ಲ. ಇಂಥ ಘಟನೆ ಆದ ಬಳಿಕ ಯಾವುದೇ ಹೆಣ್ಣು ಮಗಳು ತಮ್ಮ ಗಂಡನಿಗೆ ಹೇಳುತ್ತಾರೆ. ಪವಿತ್ರಾ ಸಹ ಈ ವಿಚಾರವನ್ನು ತಮ್ಮ ಗಂಡನ ಗಮನಕ್ಕೆ ತಂದಿದ್ದಾಳೆ. ಆದರೆ, ದರ್ಶನ್‌ ಅವರು ಒಬ್ಬ ಸೆಲೆಬ್ರಿಟಿ ಅನ್ನೋದನ್ನು ಮರೆತು ಈ ರೀತಿ ನಿರ್ಧಾರ ಕೈಗೊಳ್ಳಬಾರದಿತ್ತು. ಇದರಲ್ಲಿ ದರ್ಶನ್‌ ಅವರದ್ದೇ ತಪ್ಪು. ಜತೆಗೆ ಸಂದೇಶ ಕಳುಹಿಸಿದ ವ್ಯಕ್ತಿಯಿಂದಲೇ ಇಷ್ಟೆಲ್ಲ ಆಗಿದ್ದು. ಎಂದೂ ಹೇಳಿದ್ದಾರೆ.

2013ರಲ್ಲಿ ಪವಿತ್ರಾಳಿಂದ ಡಿವೋರ್ಸ್‌

"ಮದುವೆಯಾಗಿ ಮೂರು ವರ್ಷಕ್ಕೆ ಮಗಳು ಹುಟ್ಟಿದಳು. ಪವಿತ್ರಾ ಫಿಲಂ ಇಂಡಸ್ಟ್ರಿಗೆ ಸೇರಿಕೊಂಡಳು. ಇಬ್ಬರ ನಡುವೆ ಅಂತರ ಶುರುವಾಯ್ತು. ಅವಳೇ ಡಿವೋರ್ಸ್‌ ಕೇಸ್‌ ಫೈಲ್‌ ಮಾಡಿದ್ಲು. 2013ರಲ್ಲಿ ವಿಚ್ಛೇದನವಾದರೂ, ಅದಕ್ಕಿಂತ ಒಂದು ವರ್ಷ ಮುಂಚೆಯೇ ನಾವು ಬೇರೆ ಬೇರೆಯಾಗಿದ್ದೆವು. ಇಬ್ಬರ ನಡುವೆ ಮನಸ್ತಾಪವೂ ಇತ್ತು. ಒಮ್ಮೆ ಅವರೇ ಬಂದು ನಾನು ದರ್ಶನ್‌ ಮದುವೆ ಆಗಬೇಕು ಎಂದುಕೊಂಡಿದ್ದೇವೆ ಎಂದು ಹೇಳಿ ಡಿವೋರ್ಸ್‌ ಬೇಕು ಎಂದು ಅರ್ಜಿ ಸಲ್ಲಿಸಿದ್ರು. 2013ರಲ್ಲಿ ನಮ್ಮ ವಿಚ್ಛೇದನ ಆಯ್ತು. ಆದರೆ ದರ್ಶನ್‌ ಮತ್ತು ಪವಿತ್ರಾ ಮದುವೆ ಆಗಿದ್ದಾರಾ, ಇಲ್ಲವಾ ಎಂಬುದು ನನಗೆ ಗೊತ್ತಿಲ್ಲ" ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

Whats_app_banner