ಕನ್ನಡ ಸುದ್ದಿ  /  ಮನರಂಜನೆ  /  ರೇಣುಕಾ ಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ ಉಳಿದುಕೊಂಡಿದ್ದ ಮೈಸೂರು ಹೋಟೆಲ್‌ ಸ್ಥಳ ಮಹಜರು ಮುಕ್ತಾಯ

ರೇಣುಕಾ ಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ ಉಳಿದುಕೊಂಡಿದ್ದ ಮೈಸೂರು ಹೋಟೆಲ್‌ ಸ್ಥಳ ಮಹಜರು ಮುಕ್ತಾಯ

Renuka Swamy murder case: ಇಂದು (ಮಂಗಳವಾರ) ಪೊಲೀಸರು ನಟ ದರ್ಶನ್‌ ಉಳಿದುಕೊಂಡಿದ್ದ ಮೈಸೂರಿನ ರಾಡಿಸನ್‌ ಬ್ಲೂ ಹೋಟೆಲ್‌ನಲ್ಲಿ ಸ್ಥಳ ಮಹಜರು ನಡೆಸಿದ್ದಾರೆ. ಆರೋಪಿಗಳಾದ ನಾಗರಾಜು ಅಲಿಯಾಸ್ ನಾಗ ಮತ್ತು ಲಕ್ಷ್ಮಣ್ ಜತೆ ಮೈಸೂರಿನ ಹೋಟೆಲ್‌ಗೆ ಬಂದು ಇಂಚಿಂಚು ಸ್ಥಳ ಮಹಜರು ನಡೆಸಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ ಉಳಿದುಕೊಂಡಿದ್ದ ಮೈಸೂರು ಹೋಟೆಲ್‌ ಸ್ಥಳ ಮಹಜರು
ರೇಣುಕಾ ಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ ಉಳಿದುಕೊಂಡಿದ್ದ ಮೈಸೂರು ಹೋಟೆಲ್‌ ಸ್ಥಳ ಮಹಜರು

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸುತ್ತಿದ್ದಾರೆ. ಇದೇ ಸಮಯದಲ್ಲಿ ಈ ಪ್ರಕರಣಕ್ಕೆ ಸಂಬಂಧಪಟ್ಟ ಕೆಲವೊಂದು ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆ. ಇಂದು ಪೊಲೀಸರು ದರ್ಶನ್‌ ಉಳಿದುಕೊಂಡಿದ್ದ ಮೈಸೂರಿನ ರಾಡಿಸನ್‌ ಬ್ಲೂ ಹೋಟೆಲ್‌ನಲ್ಲಿ ಸ್ಥಳ ಮಹಜರು ನಡೆಸಿದ್ದಾರೆ. ಆರೋಪಿಗಳಾದ ನಾಗರಾಜು ಅಲಿಯಾಸ್ ನಾಗ ಮತ್ತು ಲಕ್ಷ್ಮಣ್ ಜತೆ ಮೈಸೂರಿನ ಹೋಟೆಲ್‌ಗೆ ಬಂದು ಇಂಚಿಂಚು ಸ್ಥಳ ಮಹಜರು ನಡೆಸಿದ್ದಾರೆ.

ಪೊಲೀಸರಿಂದ ತೀವ್ರ ಶೋಧ

ಮೈಸೂರಿಗೆ ಆರೋಪಿಗಳನ್ನು ಕರೆದುಕೊಂಡು ಬಂದ ಪೊಲೀಸರು, ದರ್ಶನ್ ಉಳಿದುಕೊಂಡಿದ್ದ ಕೊಠಡಿಯಲ್ಲಿ ತೀವ್ರ ಶೋಧ ನಡೆಸಿದ್ದಾರೆ.

ಸ್ಥಳ ಮಹಜರಿಗೆ ಪೊಲೀಸರು ಇಬ್ಬರು ಆರೋಪಿಗಳನ್ನು ಕರೆದುಕೊಂಡು ಬಂದಿದ್ದರು. ಕೊಲೆ ನಡೆಯುವ ದಿನ ಮೈಸೂರಿನಲ್ಲಿ ಡೆವಿಲ್ ಚಿತ್ರದ ಶೂಟಿಂಗ್‌ನಲ್ಲಿ ನಟ ದರ್ಶನ್ ಭಾಗಿಯಾಗಿದ್ದರು. ಜೂನ್ 9ರಿಂದ ಈ ಹೋಟೆಲ್‌ನಲ್ಲಿ ತಂಗಿದ್ದರು. ಜೂನ್ 10 ರ ಬೆಳಿಗ್ಗೆ ಕುವೆಂಪುನಗರದ ಗೋಲ್ಡ್ ಜಿಮ್ ನಲ್ಲಿ ವರ್ಕ್ ಔಟ್ ಮಾಡಿದ್ದರು. ವರ್ಕ್ ಔಟ್ ಮುಗಿಸಿಕೊಂಡು ಹೋಟೆಲ್ ಗೆ ಹೊರಡುವ ವೇಳೆ ಪೊಲೀಸರು ದರ್ಶನ್‌ರನ್ನು ಬಂಧಿಸಿದ್ದರು.

ಟ್ರೆಂಡಿಂಗ್​ ಸುದ್ದಿ

ಸ್ಥಳ ಮಹಜರಿಗೆ ಆರೋಪಿ A11 ನಾಗರಾಜ ಅಲಿಯಾಸ್ ನಾಗ ಹಾಗೂ ಆರೋಪಿ ಲಕ್ಷ್ಮಣ್ A12 ಕರೆದುಕೊಂಡು ಪೊಲೀಸರು ಬಂದಿದ್ದರು. ದರ್ಶನ್ ಕಾರ್ ಡ್ರೈವರ್ ಆಗಿರುವ ಲಕ್ಷ್ಮಣ್ ಮತ್ತು ದರ್ಶನ್ ರ ಅನಧಿಕೃತ ಮ್ಯಾನೇಜರ್ ಆಗಿದ್ದ ನಾಗರಾಜ್ ಅವರನ್ನು ಕರೆತಂದಿದ್ದರು. ಹೋಟೆಲ್ ಬಳಿ ಜನ ಹೆಚ್ಚಾಗಿ ಸೇರುವ ಕಾರಣದಿಂದ ಪೊಲೀಸರು ನಟ ದರ್ಶನ್‌ರನ್ನು ಇಂದು ಕರೆತಂದಿರಲಿಲ್ಲ.

ಸ್ಥಳ ಮಹಜರು ಮುಕ್ತಾಯ

ಮೈಸೂರಿನ ರ್ಯಾಡಿಸನ್ ಬ್ಲೂ ಹೋಟೆಲ್ ನಲ್ಲಿ ಪೊಲೀಸರು ನಡೆಸುತ್ತಿದ್ದ ಸ್ಥಳ ಮಹಜರು ಮುಕ್ತಾಯಗೊಂಡಿದೆ. ಸತತ ಎರಡು ಗಂಟೆಗೂ ಹೆಚ್ಚಿನ ಸಮಯ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ನಟ ದರ್ಶನ್ ಉಳಿದುಕೊಂಡಿದ್ದ ಹೋಟೆಲ್ ನ ಕೊಠಡಿಯಲ್ಲಿ ಇಂಚಿಂಚು ಶೋಧಕಾರ್ಯ ನಡೆಸಿದ್ದಾರೆ. ಆರೋಪಿಗಳನ್ನು ಕರೆತಂದ ಸುದ್ದಿ ತಿಳಿದು ನಟ ದರ್ಶನ್‌ರನ್ನೇ ಕರೆ ತಂದಿರಬಹುದು ಎಂದುಕೊಂಡಿದ್ದ ಅಭಿಮಾನಿಗಳು ಹೋಟೆಲ್‌ ಆಸುಪಾಸಿನಲ್ಲಿ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರು.