ಕನ್ನಡ ಸುದ್ದಿ  /  ಮನರಂಜನೆ  /  ದರ್ಶನ್‌ ಪರ ನಿಂತ ರಚಿತಾ ರಾಮ್‌ ವಿರುದ್ಧ ಕಿಡಿ, ‘ಪಾರ್ವತಮ್ಮ ಆಯ್ಕೆಯಲ್ಲಿ ರಮ್ಯಾ ಒಬ್ಬರೇ ಕೊಹಿನೂರ್ ವಜ್ರ!’

ದರ್ಶನ್‌ ಪರ ನಿಂತ ರಚಿತಾ ರಾಮ್‌ ವಿರುದ್ಧ ಕಿಡಿ, ‘ಪಾರ್ವತಮ್ಮ ಆಯ್ಕೆಯಲ್ಲಿ ರಮ್ಯಾ ಒಬ್ಬರೇ ಕೊಹಿನೂರ್ ವಜ್ರ!’

ಕೊಲೆ ಕೇಸ್‌ನಲ್ಲಿ ವಿಚಾರಣೆ ಎದುರಿಸುತ್ತಿರುವ ನಟ ದರ್ಶನ್‌ ಪರವಾಗಿ ಸೋಷಿಯಲ್‌ ಮೀಡಿಯಾದಲ್ಲಿ ರಚಿತಾ ರಾಮ್ ಪೋಸ್ಟ್‌ ಹಾಕುತ್ತಿದ್ದಂತೆ, ಕೆಲವರು ಅವರ ಮಾತಿಗೆ ಟಾಂಗ್‌ ಕೊಟ್ಟಿದ್ದಾರೆ. ನಟಿ ರಮ್ಯಾ ಅವರನ್ನು ಹೋಲಿಕೆ ಮಾಡಿ ಚಾಟಿ ಬೀಸಿದ್ದಾರೆ.

ದರ್ಶನ್‌ ಪರ ನಿಂತ ರಚಿತಾ ರಾಮ್‌ ವಿರುದ್ಧ ಕಿಡಿ, ‘ಪಾರ್ವತಮ್ಮ ಆಯ್ಕೆಯಲ್ಲಿ ರಮ್ಯಾ ಒಬ್ಬರೇ ಕೊಹಿನೂರ್ ವಜ್ರ!’
ದರ್ಶನ್‌ ಪರ ನಿಂತ ರಚಿತಾ ರಾಮ್‌ ವಿರುದ್ಧ ಕಿಡಿ, ‘ಪಾರ್ವತಮ್ಮ ಆಯ್ಕೆಯಲ್ಲಿ ರಮ್ಯಾ ಒಬ್ಬರೇ ಕೊಹಿನೂರ್ ವಜ್ರ!’

Rachita Ram on Darshan: ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಮತ್ತವರ ಗ್ಯಾಂಗ್‌ ಕಸ್ಟಡಿಯಲ್ಲಿದೆ. ಹತ್ಯೆ ಹಿನ್ನೆಲೆಯ ಸತ್ಯಾಸತ್ಯತೆಯನ್ನು ಪೊಲೀಸ್‌ ತಂಡ ಕಲೆಹಾಕುತ್ತಿದೆ. ಈ ನಡುವೆ ಸೋಷಿಯಲ್‌ ಮೀಡಿಯಾದಲ್ಲಿ ನಟ ದರ್ಶನ್‌ ಪರವಾಗಿ ಸಾಕಷ್ಟು ಮಂದಿ ಪೋಸ್ಟ್‌ ಹಂಚಿಕೊಳ್ಳುತ್ತಿದ್ದಾರೆ. ಏನೇ ಆಗಲಿ ನಾವು ಸದಾ ನಿಮ್ಮ ಜತೆ ನಿಲ್ಲುತ್ತೇವೆ ಎನ್ನುತ್ತಿದ್ದಾರೆ. ಇನ್ನು ಕೆಲವರು ಇದಕ್ಕೆ ತದ್ವಿರುದ್ಧವಾಗಿ ತಪ್ಪು ಯಾರೇ ಮಾಡಿದರೂ ತಪ್ಪೇ, ಕೊಲೆ ಮಾಡಿದ್ದೇ ಸಾಬೀತಾದರೆ ಶಿಕ್ಷೆಯಾಗಲಿ ಎಂದೂ ಹೇಳುತ್ತಿದ್ದಾರೆ. ಈ ನಡುವೆ ನಟಿ ರಚಿತಾ ರಾಮ್‌ ಸಹ ನಟ ದರ್ಶನ್‌ ಬೆಂಬಲಕ್ಕೆ ನಿಂತಿದ್ದರು. ಹಾಗೇ ನಿಂತಿದ್ದೇ ತಡ ನೆಟ್ಟಿಗರು ರಚಿತಾಗೆ ಟಾಂಗ್‌ ಕೊಟ್ಟಿದ್ದಾರೆ.

ರಚಿತಾ ರಾಮ್‌ ಪೋಸ್ಟ್‌ನಲ್ಲೇನಿದೆ...

ನಟಿ ರಚಿತಾ ರಾಮ್‌ ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ನಟ ದರ್ಶನ್‌ ಪರ ಪೋಸ್ಟ್‌ ಹಾಕಿಕೊಂಡು, ಅವರ ಬೆಂಬಲಕ್ಕೆ ನಿಂತಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಖಂಡಿಸಿ, ದರ್ಶನ್‌ ಅವರಿಂದಲೂ ಚಿತ್ರರಂಗಕ್ಕೆ ಬಂದ ಬಗ್ಗೆಯೂ ನೆನಪಿಸಿಕೊಂಡಿದ್ದಾರೆ. "ನಮಸ್ಕಾರ, ಈ ನೋಟ್‌ ಅನ್ನು ನಾನು ನಟಿಯಾಗಿ ಅಲ್ಲ ಸಾಮಾನ್ಯ ಪ್ರಜೆಯಾಗಿ ಬರೆಯುತ್ತಿದ್ದೇನೆ. ಇತ್ತೀಚೆಗೆ ನಡೆದ ಪ್ರಕರಣದ ಬಗ್ಗೆ ನನ್ನ ಮಾತು. ಮೊದಲನೆಯದಾಗಿ ರೇಣುಕಾ ಸ್ವಾಮಿ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಭಗವಂತ ಧೈರ್ಯ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ. ಈ ಹತ್ಯೆಗೆ ಕಾನೂನಾತ್ಮಕವಾಗಿ ನ್ಯಾಯ ಸಿಗುತ್ತದೆಂಬ ಭರವಸೆ ನಮಗಿದೆ" ಎಂದಿದ್ದರು.

ಟ್ರೆಂಡಿಂಗ್​ ಸುದ್ದಿ

"ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ ದರ್ಶನ್‌ ಸರ್‌ ನನಗೆ ಗುರು ಸಮಾನರು. ನನ್ನ ಜೀವನದ ತಪ್ಪುಗಳನ್ನು ತಿದ್ದಿ ಮಾರ್ಗದರ್ಶನ ನೀಡಿದಂತಹ ವ್ಯಕ್ತಿ ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವುದು ನಂಬಲು ಸ್ವಲ್ಪ ಕಷ್ಟವಾಗುತ್ತದೆ. ಏನಿದ್ದರೂ ಸತ್ಯ ಪೊಲೀಸ್‌ ತನಿಖೆಯಿಂದ ನಮ್ಮ ಮುಂದೆ ಬರಲಿದೆ ಎನ್ನುವುದೇ ನನ್ನ ನಂಬಿಕೆ. ನನ್ನ ಮಾಧ್ಯಮ ಮಿತ್ರರು ಈ ಕೇಸ್‌ನ ವರದಿಯಲ್ಲಿ ಪಾರದರ್ಶಕವಾಗಿರುತ್ತಿರಿ ಎಂದು ಆಶಿಸುತ್ತೇನೆ" ಎಂದು ಪೋಸ್ಟ್‌ ಹಂಚಿಕೊಂಡಿದ್ದರು ರಚಿತಾ.

ರಚಿತಾ ಪೋಸ್ಟ್‌ಗೆ ನೆಟ್ಟಿಗರು ಗರಂ

ನಟಿ ರಚಿತಾ ರಾಮ್‌ ಹೀಗೆ ತಮ್ಮ ಅನಿಸಿಕೆ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಂತೆ, ದರ್ಶನ್‌ ಅಭಿಮಾನಿಗಳು ನಟಿಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನು ಕೆಲವರಿಂದ ವಿರೋಧವೂ, ಟೀಕೆಯೂ ಕೇಳಿಬಂದಿದೆ. ನಿಮಗಿಂತ ರಮ್ಯಾ ಅವರೇ ಎಷ್ಟೋ ಪಾಲು ಬೆಟರ್‌ ಎಂಬರ್ಥದಲ್ಲಿ ಈ ಇಬ್ಬರು ನಟಿಯರನ್ನು ಹೋಲಿಕೆ ಮಾಡುತ್ತಿದ್ದಾರೆ ನೆಟ್ಟಿಗರು. ನಟಿ ರಮ್ಯಾ ದರ್ಶನ್‌ ಜತೆಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರೂ, ಕೊಲೆ ವಿಚಾರ ಬೆಳಕಿಗೆ ಬರುತ್ತಿದ್ದಂತೆ, ನೇರವಾಗಿ ಇದನ್ನು ಖಂಡಿಸಿದ್ದರು. ಆದರೆ, ರಚಿತಾ ಮಾತ್ರ ಅವರನ್ನೇ ಬೆಂಬಲಿಸುವಂತೆ ಕಾಣ್ತಿದೆ ಎಂದರೆ, ಇನ್ನು ಕೆಲವರು "ನೀನ್ ಹೇಳ್ತಾ ಇರೋದು ನೋಡಿದ್ರೆ ದರ್ಶನ್ ತಪ್ಪು ಮಾಡಿಲ್ಲ. ಪೊಲೀಸ್‌ನವರಿಗೆ ಕೆಲ್ಸ ಇರ್ಲಿಲ್ಲ. ಸುಮ್ನೇ ಕರ್ಕೊಂಡು ಹೋಗಿದ್ದಾರೆ ಅನ್ನೋ ತರ ಇದೆ" ಎಂದೂ ಕಾಮೆಂಟ್‌ ಹಾಕುತ್ತಿದ್ದಾರೆ. ಇನ್ನೊಂದು ಅಚ್ಚರಿಯ ವಿಚಾರ ಏನೆಂದರೆ, ನಟ ದರ್ಶನ್‌ ಬಂಧನದ ಬಳಿಕ ರಮ್ಯಾವೊಬ್ಬರೇ ದರ್ಶನ್‌ ವಿರುದ್ಧ ಪೋಸ್ಟ್‌ ಹಾಕುತ್ತಿದ್ದಾರೆ.

ರಮ್ಯಾ ಒಬ್ಬರೇ ಕೊಹಿನೂರ್ ವಜ್ರ

ರಚಿತಾ ಪೋಸ್ಟ್‌ಗೆ ಕಾಮೆಂಟ್‌ ಮಾಡಿದ ನೆಟ್ಟಿಗರೊಬ್ಬರು, "ಹೊಸಪೇಟೆ ಪ್ರಕರಣದಲ್ಲಿ, ಮತ್ತು ಈಗ ದರ್ಶನ್ ಪರವಾಗಿ ನಿಂತಿದ್ರಿ, ನಿಮ್ಮನ್ನು ದರ್ಶನ್ ಚಿತ್ರರಂಗಕ್ಕೆ ಪರಿಚಯಿಸಿದ್ರು ಎನ್ನುವ ಒಂದು ಕೃತಜ್ಞತೆಗೆ... ಆದ್ರೆ ಹೊಸಪೇಟೆ ಪ್ರಕರಣದಲ್ಲಿ ಅಪ್ಪು ಅಭಿಮಾನಿಗಳ ತಪ್ಪು ಇಲ್ಲದಿದ್ದರೂ, ಪಾರ್ವತಮ್ಮ ನವರು ಪರಿಚಯಿಸಿದ ಹೀರೋಯಿನ್ ಗಳು ದರ್ಶನ್ ಪರವಾಗಿ ನಿಂತ್ರು, ಈಗ ದರ್ಶನ್ ಪರವಾಗಿ ಇದ್ದಾರೆ ಎಂಬುದಕ್ಕೆ ಅವರ ಮೌನವೇ ಸಾಕ್ಷಿ.. ನಿಮ್ಮ ಕಾಲ ಧೂಳಿಗೂ ಸಮ ಇಲ್ಲ ಅವರು, ರಮ್ಯಾ ಒಬ್ರೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ರು, ಅದಕ್ಕೆ ಇವತ್ತಿಗೂ ಇನ್ನು ಮುಂದೆಯೂ ರಮ್ಯಾ ಒಬ್ಬರೇ ಸ್ಯಾಂಡಲ್ವುಡ್ ಕ್ವೀನ್. ಇದ್ದದ್ದನ್ನು ಇದ್ದ ಹಾಗೆ ಹೇಳುವ ರಮ್ಯಾ ನಮಗೆ ಮೊದಲಿನಿಂದಲೂ ಫೇವರಿಟ್ ಈಗಂತೂ ಇನ್ನು ಇಷ್ಟ ಆದ್ರು.. ಪಾರ್ವತಮ್ಮ ನವರ ಆಯ್ಕೆಯಲ್ಲಿ ರಮ್ಯಾ ಒಬ್ಬರೇ ಕೊಹಿನೂರ್ ವಜ್ರ" ಎಂದಿದ್ದಾರೆ.