ಕನ್ನಡ ಸುದ್ದಿ  /  ಮನರಂಜನೆ  /  ಡೇರ್ ಡೆವಿಲ್ ದೇವದಾಸ್‌ನ ಡೆಡ್ಲಿ ಕಹಾನಿ! ದರ್ಶನ್‌ ಪ್ರಕರಣವನ್ನೇ ಹೋಲುವ ಸಂಚಿಕೆ ಹೊರತಂದ ಸೀರಿಯಲ್‌ ತಂಡ

ಡೇರ್ ಡೆವಿಲ್ ದೇವದಾಸ್‌ನ ಡೆಡ್ಲಿ ಕಹಾನಿ! ದರ್ಶನ್‌ ಪ್ರಕರಣವನ್ನೇ ಹೋಲುವ ಸಂಚಿಕೆ ಹೊರತಂದ ಸೀರಿಯಲ್‌ ತಂಡ

ದರ್ಶನ್‌ ಕೊಲೆ ಆರೋಪದ ಪ್ರಕರಣವನ್ನೇ ಹೋಲುವ ಸಂಚಿಕೆಯನ್ನು ಹೊರತಂದಿದೆ ಕಲರ್ಸ್‌ ಕನ್ನಡ ವಾಹಿನಿಯ ಶಾಂತಂ ಪಾಪಂ ಸೀರಿಯಲ್ ತಂಡ.‌ ಡೇರ್ ಡೆವಿಲ್ ದೇವದಾಸ್‌ನ ಡೆಡ್ಲಿ ಕಹಾನಿ! ಎಂಬ ಶೀರ್ಷಿಕೆಯಲ್ಲಿ ಥೇಟ್‌ ದರ್ಶನ್‌ ಅವರ ಈ ಕೊಲೆ ಪ್ರಕರಣವನ್ನೇ ಕಿರು ಪರದೆ ಮೇಲೆ ತಂದಿದ್ದಾರೆ.

ಡೇರ್ ಡೆವಿಲ್ ದೇವದಾಸ್‌ನ ಡೆಡ್ಲಿ ಕಹಾನಿ! ದರ್ಶನ್‌ ಪ್ರಕರಣವನ್ನೇ ಹೋಲುವ ಸಂಚಿಕೆ ಹೊರತಂದ ಸೀರಿಯಲ್‌ ತಂಡ
ಡೇರ್ ಡೆವಿಲ್ ದೇವದಾಸ್‌ನ ಡೆಡ್ಲಿ ಕಹಾನಿ! ದರ್ಶನ್‌ ಪ್ರಕರಣವನ್ನೇ ಹೋಲುವ ಸಂಚಿಕೆ ಹೊರತಂದ ಸೀರಿಯಲ್‌ ತಂಡ

Renukaswamy murder case: ಕೊಲೆ ಆರೋಪದ ಮೇಲೆ ಸ್ಯಾಂಡಲ್‌ವುಡ್‌ ನಟ ದರ್ಶನ್‌ ಸೇರಿ ಒಟ್ಟು 17 ಮಂದಿ ಜೈಲು ಪಾಲಾಗಿದ್ದಾರೆ. ನಟ ದರ್ಶನ್‌ ಪರಪ್ಪನ ಅಗ್ರಹಾರದಲ್ಲಿ ಕಂಬಿ ಹಿಂದೆ ಕಾಲ ಕಳೆಯುತ್ತಿದ್ದರೆ, ಇತ್ತ ಅವರಿಗೆ ಸಿಕ್ಕ ಖೈದಿ ನಂಬರ್‌ ಅನ್ನೇ ಇಟ್ಟುಕೊಂಡು ಸಿನಿಮಾ ಮಾಡಲು ಕೆಲವರು ನಿರ್ಧರಿಸಿ, ನೋಂದಣಿ ಮಾಡಿಸಲೂ ಹೋಗಿದ್ದರು. ಆದರೆ, ವಾಣಿಜ್ಯ ಮಂಡಳಿ ಮಾತ್ರ ಅದಕ್ಕೆ ಒಪ್ಪಿಗೆ ಕೊಟ್ಟಿರಲಿಲ್ಲ. ಇದೀಗ ಗ್ಯಾಪ್‌ನಲ್ಲಿಯೇ ದರ್ಶನ್‌ ಪ್ರಕರಣವನ್ನೇ ಹೋಲುವ ಸಂಚಿಕೆಯನ್ನು ಹೊರತಂದಿದೆ ಸೀರಿಯಲ್‌.

ಶಾಂತಂ ಪಾಪಂನಲ್ಲಿ ದರ್ಶನ್‌ ಸಂಚಿಕೆ

ಇದೀಗ ಇದೇ ಘಟನೆಯನ್ನೇ ಹೋಲುವ ಸಂಚಿಕೆಯನ್ನು ಹೊರತಂದಿದೆ ಕಲರ್ಸ್‌ ಕನ್ನಡ ವಾಹಿನಿಯ ಶಾಂತಂ ಪಾಪಂ ಸೀರಿಯಲ್.‌ ಡೇರ್ ಡೆವಿಲ್ ದೇವದಾಸ್‌ನ ಡೆಡ್ಲಿ ಕಹಾನಿ! ಎಂಬ ಶೀರ್ಷಿಕೆಯಲ್ಲಿ ಥೇಟ್‌ ದರ್ಶನ್‌ ಅವರ ಈ ಕೊಲೆ ಪ್ರಕರಣವನ್ನೇ ಕಿರು ಪರದೆ ಮೇಲೆ ತಂದಿದ್ದಾರೆ. "ನಿನ್ನ ಟೈಮ್‌ ಚೆನ್ನಾಗಿ ಇದ್ದಾಗಲೇ ನೀನು ತಗ್ಗಿ ಬಗ್ಗಿ ನಡೆದಿದ್ದರೆ, ಇವತ್ತು ಈ ರೀತಿ ತಲೆ ತಗ್ಗಿಸೋ ಸಂದರ್ಭ ಬರ್ತಿರಲಿಲ್ಲ. ಬಾಸ್‌ ಮತ್ತೆ ಅಕ್ಕ ಚೆನ್ನಾಗಿಯೇ ಇದ್ರು. ಈ ನಟಿ ಬಂದ ಮೇಲೆಯೇ ಹೀಗಾಗಿದೆ. ಏ ಎಸಿಪಿ ನಾನ್ಯಾರು ಗೊತ್ತ? ನನ್ನನ್ನು ಅರೆಸ್ಟ್‌ ಮಾಡಿದ್ರೆ ನನ್ನ ಫಾಲೋವರ್ಸ್‌ ನಿನ್ನನ್ನ ಸುಮ್ನೆ ಬಿಡ್ತಾರಾ? ಹೀಗೆ ಒಂದಷ್ಟು ಸಂಭಾಷಣೆಗಳು ಸದ್ಯ ಬಿಡುಗಡೆ ಆಗಿರುವ ಪ್ರೋಮೋದಲ್ಲಿ ಕಂಡಿವೆ.

ಟ್ರೆಂಡಿಂಗ್​ ಸುದ್ದಿ

ನಡೆದಿದ್ದೇನು?

ಪವಿತ್ರಾ ಗೌಡ ಅವರಿಗೆ ಚಿತ್ರದುರ್ಗದ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕೆ, ಆತನನ್ನು ಅಲ್ಲಿಂದ ಬೆಂಗಳೂರಿಗೆ ಅಪಹರಣ ಮಾಡಿ ಕರೆತರಲಾಗಿತ್ತು. ಬೆಂಗಳೂರಿನ ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ದರ್ಶನ್‌ ಮತ್ತವರ ಗ್ಯಾಂಗ್‌ ಮೃಗೀಯವಾಗಿ ಹಲ್ಲೆ ನಡಿಸಿತ್ತು. ಬೆನ್ನಿನ ಮೂಳೆ ಮುರಿಯುವಂತೆ ಥಳಿಸಿ, ಮರ್ಮಾಂಗಕ್ಕೂ ಶಾಕ್‌ ನೀಡಲಾಗಿತ್ತು. ಸಿಗರೇಟ್‌ನಿಂದ ರೇಣುಕಾಸ್ವಾಮಿಯ ಮೈಕೈ ಸುಡಲಾಗಿತ್ತು ಎಂದು ಪೊಲೀಸರು ವರದಿಯಲ್ಲಿ ತಿಳಿಸಿದ್ದಾರೆ.

ಎಲ್ಲರ ಒದೆ ಏಟನ್ನು ತಡೆದುಕೊಳ್ಳದ ರೇಣುಕಾಸ್ವಾಮಿ ಕೊನೆಯುಸಿರೆಳೆದಿದ್ದ. ಶವ ಯಾರಿಗೂ ಸಿಗದಂತೆ ನಟ ದರ್ಶನ್‌, ಅವರ ಹುಡುಗರಿಗೆ ಹಣದ ಆಮೀಷವೊಡ್ಡಿದ್ದರು. ತಲಾ 5 ಲಕ್ಷ ಪಡೆದ ಆರು ಮಂದಿ, ರೇಣುಕಾಸ್ವಾಮಿ ಶವವನ್ನು ರಾಜಕಾಲುವೆ ಬಳಿ ಎಸೆದು, ಪರಾರಿಯಾಗಿದ್ದರು. ಮಾರನೇ ದಿನವೇ ಆ ಶವ ಪೊಲೀಸರ ಕಣ್ಣಿಗೆ ಬಿದ್ದಿತ್ತು. ಇದರ ಜಾಲ ಪತ್ತೆ ಮಾಡಿದ ಪೊಲೀಸರು, ಒಂದೇ ದಿನದಲ್ಲಿಯೇ ಪ್ರಕರಣದ ಹಿಂದಿರುವ ಆರೋಪಿಗಳನ್ನು ಅರೆಸ್ಟ್‌ ಮಾಡಿದ್ದರು.

ದರ್ಶನ್‌ ಫ್ಯಾನ್ಸ್‌ ಗರಂ

ಈ ಪ್ರೋಮೋ ಬಿಡುಗಡೆ ಆಗುತ್ತಿದ್ದಂತೆ, ನೂರಾರು ಕಾಮೆಂಟ್‌ಗಳು ಸಂದಾಯವಾಗಿವೆ. ಇದು ದರ್ಶನ್‌ ಅವರ ಪ್ರಕರಣ ಎಂದೇ ಎಲ್ಲರೂ ಕಾಮೆಂಟ್‌ ಹಾಕುತ್ತಿದ್ದಾರೆ. ಇನ್ನು ಕೆಲವು ದರ್ಶನ್‌ ಫ್ಯಾನ್ಸ್‌ ಈ ಸಂಚಿಕೆಯ ಪ್ರೋಮೋಗೆ ಬ್ಯಾಡ್‌ ಕಾಮೆಂಟ್‌ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ನಟ ದರ್ಶನ್‌ ಮತ್ತವರ ಆಪ್ತೆ ಪವಿತ್ರಾ ಗೌಡ ಇದೇ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ೀ ಕೃತ್ಯದಲ್ಲಿ ಭಾಗಿಯಾದ ಎಲ್ಲರೂ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇನ್ನು ಕೆಲವರನ್ನು ತುಮಕೂರು ಜೈಲಿಗೂ ಶಿಫ್ಟ್‌ ಮಾಡಲಿದೆ.