ಭೂತ ಹಾಗೂ ಭವಿಷ್ಯತ್ತಿನ ಎರಡು ಕೊಲೆಗಳು; ಪ್ರಸ್ತುತತೆ ಕಂಡು ಬೇಸರ ವ್ಯಕ್ತಪಡಿಸಿದ ಸ್ಯಾಂಡಲ್‌ವುಡ್‌ ನಿರ್ದೇಶಕ
ಕನ್ನಡ ಸುದ್ದಿ  /  ಮನರಂಜನೆ  /  ಭೂತ ಹಾಗೂ ಭವಿಷ್ಯತ್ತಿನ ಎರಡು ಕೊಲೆಗಳು; ಪ್ರಸ್ತುತತೆ ಕಂಡು ಬೇಸರ ವ್ಯಕ್ತಪಡಿಸಿದ ಸ್ಯಾಂಡಲ್‌ವುಡ್‌ ನಿರ್ದೇಶಕ

ಭೂತ ಹಾಗೂ ಭವಿಷ್ಯತ್ತಿನ ಎರಡು ಕೊಲೆಗಳು; ಪ್ರಸ್ತುತತೆ ಕಂಡು ಬೇಸರ ವ್ಯಕ್ತಪಡಿಸಿದ ಸ್ಯಾಂಡಲ್‌ವುಡ್‌ ನಿರ್ದೇಶಕ

ನಟ ದರ್ಶನ್‌ ಕೊಲೆ ಪ್ರಕರಣದಲ್ಲಿ ಸಿಲುಕಿ ವಿಚಾರಣೆ ಎದುರಿಸುತ್ತಿದ್ದಾರೆ. ಈ ನಡುವೆ ನಿರ್ದೇಶಕ ಮಂಸೋರೆ ಸೋಷಿಯಲ್‌ ಮೀಡಿಯಾದಲ್ಲಿ ಭೂತ ಹಾಗೂ ಭವಿಷ್ಯತ್ತಿನ ಎರಡು ಕೊಲೆಗಳು ಎಂಬ ಶೀರ್ಷಿಕೆಯಡಿ ಬರಹವೊಂದನ್ನು ಪೋಸ್ಟ್‌ ಮಾಡಿದ್ದಾರೆ.

ಭೂತ ಹಾಗೂ ಭವಿಷ್ಯತ್ತಿನ ಎರಡು ಕೊಲೆಗಳು; ಪ್ರಸ್ತುತತೆ ಕಂಡು ಬೇಸರ ವ್ಯಕ್ತಪಡಿಸಿದ ಸ್ಯಾಂಡಲ್‌ವುಡ್‌ ನಿರ್ದೇಶಕ
ಭೂತ ಹಾಗೂ ಭವಿಷ್ಯತ್ತಿನ ಎರಡು ಕೊಲೆಗಳು; ಪ್ರಸ್ತುತತೆ ಕಂಡು ಬೇಸರ ವ್ಯಕ್ತಪಡಿಸಿದ ಸ್ಯಾಂಡಲ್‌ವುಡ್‌ ನಿರ್ದೇಶಕ

Director Mansore reacts on Darshan arrest case: ನಟ ದರ್ಶನ್‌ ಮತ್ತು ಅವರ ಗ್ಯಾಂಗ್‌ ಸದ್ಯ ಪೊಲೀಸ್‌ ಕಸ್ಟಡಿಯಲ್ಲಿ ವಿಚಾರಣೆ ಎದುರಿಸುತ್ತಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬ ಕಾರಣಕ್ಕೆ ಬಿರುಸಿನ ವಿಚಾರಣೆ ನಡೆಯುತ್ತಿದೆ. ಈವರೆಗೂ ತನಗೇನೂ ಗೊತ್ತೇ ಇಲ್ಲ ಎನ್ನುತ್ತಿದ್ದ ದರ್ಶನ್‌, ಇದೀಗ ಒಂದೊಂದೆ ವಿಚಾರವನ್ನು ತನಿಖೆ ವೇಳೆ ಬಾಯ್ಬಿಡುತ್ತಿದ್ದಾರೆ. ರೇಣುಕಾಸ್ವಾಮಿ ಸಾವನ್ನಪ್ಪುತ್ತಿದ್ದಂತೆ, ತನ್ನ ಹೆಸರು ಎಲ್ಲಿಯೂ ಬರಬಾರದೆಂಬ ಕಾರಣಕ್ಕೆ ಪೊಲೀಸರನ್ನು ಮ್ಯಾನೇಜ್‌ ಮಾಡಲು ಪ್ರದೋಶ್‌ಗೆ 30 ಲಕ್ಷ ನೀಡಿದ್ದರು ಎಂಬ ವಿಚಾರ ಇದೀಗ ಮುನ್ನೆಲೆಗೆ ಬಂದಿದೆ.

ನಿರ್ದೇಶಕ ಮಂಸೋರೆ ಕಳವಳ

ಈ ನಡುವೆ ನಟ ದರ್ಶನ್‌ ಅವರ ಈ ಕ್ಷಣ ಕ್ಷಣದ ಅಪ್‌ಡೇಟ್‌ ಮಾಹಿತಿಯನ್ನು ಘಟನೆ ನಡೆದ ದಿನದಿಂದ ಇಂದಿಗೂ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಲೇ ಇವೆ. ಇದೀಗ ಇದೇ ಘಟನಾವಳಿಯ ಬಗ್ಗೆಯೇ ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾ ನಿರ್ದೇಶಕ ಮಂಸೋರೆ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಅಸಮಾಧಾನವನ್ನು ಮತ್ತು ಕಳವಳ ತೋಡಿಕೊಂಡಿದ್ದಾರೆ. ಮಂಸೋರೆ ಅವರ ಅನಿಸಿಕೆ ಮತ್ತು ಅಭಿಪ್ರಾಯ ಈ ಕೆಳಗಿನಂತಿದೆ.

ಭೂತ ಹಾಗೂ ಭವಿಷ್ಯತ್ತಿನ ಎರಡು ಕೊಲೆಗಳು

1. ಭೂತಕಾಲದ ಕೊಲೆ : ಈ ಕೊಲೆಯೊಂದರಲ್ಲಿ ಖ್ಯಾತ ಸಿನೆಮಾ ನಟ ಮುಖ್ಯ ಆರೋಪಿ. ಪ್ರಕರಣ ತನಿಖಾ ಹಂತದಲ್ಲಿದೆ, ಅಂತಿಮ ತೀರ್ಪನ್ನು ನ್ಯಾಯಾಲಯ ನೀಡುತ್ತದೆ. ಈ ಪ್ರಕರಣಕ್ಕೆ ಮಾಧ್ಯಮಗಳು ಇಪ್ಪತ್ತನಾಲ್ಕು ಗಂಟೆಗಳ ಸ್ಫೋಟಕ ಸಮಯವನ್ನು ನಿಗದಿಪಡಿಸಿದ್ದಾರೆ. ಭವಿಷ್ಯತ್ತಿನಲ್ಲಿ ಈ ಕೊಲೆ ಪ್ರಕರಣದಿಂದಾಗಿ ಸಮಾಜದ ಮೇಲೆ ಉಂಟಾಗಬಹುದಾದ ತೀವ್ರತೆಯನ್ನು ನೀವೇ ನಿರ್ಧರಿಸಿ.

2. ಭವಿಷ್ಯತ್ತಿನಲ್ಲಿ ನಡೆಯಲಿರುವ ಸಾಮೂಹಿಕ ಮರಣ ಹೋಮ : ಒಕ್ಕೂಟದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು, ರಾಜ್ಯದ ಲೋಕಸಭಾ ಸದಸ್ಯರೊಬ್ಬರು ಒಕ್ಕೂಟದ ಸರ್ಕಾರದಲ್ಲಿ ಮಂತ್ರಿಯಾದ ಕೂಡಲೇ, ರಾಜ್ಯದ ಸಂಡೂರಿನ ಬಳಿ ಗಣಿಕಾರಿಕೆಗೆ ಅನುಮತಿ ನೀಡುವ ಕಡತವೊಂದಕ್ಕೆ ಸಹಿ ಮಾಡಿದ್ದಾರೆ. ಇದರಿಂದ ಕೊಲೆಯಾಗುವುದು ಸಾವಿರಾರು ಮರಗಳು. ಪ್ರಕೃತಿಯ ನಾಶ.

"ಇದರಿಂದಾಗಲಿರುವ ಪರಿಣಾಮ ವಾತಾವರಣದಲ್ಲಿ ಅಸಮತೋಲನ, ಮುಂದಿನ ತಲೆಮಾರಿಗೆ ಹಾನಿಕಾರಿಕ ಪರಿಸರ. ಇದಕ್ಕೆ ಮಾಧ್ಯಮಗಳು ಮೀಸಲಿಟ್ಟಿರುವ-ನಿಗಧಿಪಡಿಸಿರುವ ಸಮಯವೆಷ್ಟು? ಈ ಕೊಲೆಗಳಾದರೆ ಆಗಲಿರುವ ದುಷ್ಪರಿಣಾಮದ ತೀವ್ರತೆಯ ಬಗ್ಗೆ ಸಮಾಜದಲ್ಲಿ ಆಗುತ್ತಿರುವ ಚರ್ಚೆಗಳೆಷ್ಟು? ಮಾಧ್ಯಮ ಹಾಗೂ ಸಮಾಜ ಚಿಂತಿಸಿ ಆದ್ಯತೆ ನೀಡಬೇಕಾದ ಇವತ್ತಿನ ತುರ್ತು ವಿಷಯ ಯಾವುದಾಗಬೇಕಿತ್ತು? ಯಾವುದಾಗಿದೆ? ನೀವೇ ನಿರ್ಧರಿಸಿ" ಎಂದಿದ್ದಾರೆ.

Whats_app_banner