ಕನ್ನಡ ಸುದ್ದಿ  /  ಮನರಂಜನೆ  /  ಜನುಮದ ಜೋಡಿ ಚಿತ್ರದಲ್ಲಿ ದರ್ಶನ್‌ ಲೈಟ್‌ ಬಾಯ್‌ ಆಗಿ ಕೆಲಸ ಮಾಡಿಲ್ಲ! ಸಾಕ್ಷಿ ಸಮೇತ ಬಂದ ಚೇತನ್‌ ಅಹಿಂಸಾ

ಜನುಮದ ಜೋಡಿ ಚಿತ್ರದಲ್ಲಿ ದರ್ಶನ್‌ ಲೈಟ್‌ ಬಾಯ್‌ ಆಗಿ ಕೆಲಸ ಮಾಡಿಲ್ಲ! ಸಾಕ್ಷಿ ಸಮೇತ ಬಂದ ಚೇತನ್‌ ಅಹಿಂಸಾ

ದರ್ಶನ್‌ ಬಗ್ಗೆ ಆಳಿಗೊಂದು ಕಲ್ಲು ಎಂಬಂತೆ ಪ್ರತಿಯೊಬ್ಬರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಕೂಡ ಇದೀಗ ದರ್ಶನ್‌ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್‌ ಲೈಟ್‌ ಬಾಯ್‌ ಆಗಿರಲಿಲ್ಲ ಎಂದು ಚೇತನ್‌ ಸಾಕ್ಷಿ ಸಮೇತ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ದರ್ಶನ್‌ ಜನುಮದ ಜೋಡಿ ಚಿತ್ರದಲ್ಲಿ ಲೈಟ್‌ ಬಾಯ್‌ ಆಗಿ ಕೆಲಸ ಮಾಡಿಲ್ಲ!; ಸಾಕ್ಷಿ ಸಮೇತ ಬಂದ ಚೇತನ್‌ ಅಹಿಂಸಾ
ದರ್ಶನ್‌ ಜನುಮದ ಜೋಡಿ ಚಿತ್ರದಲ್ಲಿ ಲೈಟ್‌ ಬಾಯ್‌ ಆಗಿ ಕೆಲಸ ಮಾಡಿಲ್ಲ!; ಸಾಕ್ಷಿ ಸಮೇತ ಬಂದ ಚೇತನ್‌ ಅಹಿಂಸಾ

Chetan Ahimsa on Darshan: ಸ್ಯಾಂಡಲ್‌ವುಡ್‌ ನಟ ದರ್ಶನ್‌ ಕೊಲೆ ಪ್ರಕರಣದಲ್ಲಿ ಸಿಲುಕಿ ಕಳೆದೊಂದು ವಾರದಿಂದ ಕಸ್ಟಡಿಯಲ್ಲಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಸಿ ದರ್ಶನ್‌ ಅಂಡ್‌ ಗ್ಯಾಂಗ್‌ ಹತ್ಯೆ ಮಾಡಿದೆ. ಹೈ ಪ್ರೋಫೈಲ್‌ ಆಗಿರುವುದರಿಂದ ವಿಚಾರಣೆಯೂ ಅಷ್ಟೇ ತೀವ್ರವಾಗಿ ನಡೆಯುತ್ತಿದೆ. ದರ್ಶನ್‌ ವಿರುದ್ಧ ಬಲವಾದ ಸಾಕ್ಷ್ಯಗಳೂ ಪೊಲೀಸರಿಗೆ ಲಭ್ಯವಾಗಿವೆ ಎಂದೂ ಹೇಳಲಾಗುತ್ತಿದೆ. ನಟ ದರ್ಶನ್‌, ರೇಣುಕಾಸ್ವಾಮಿ ಅವರ ಮರ್ಮಾಂಗಕ್ಕೆ ಒದ್ದು ರೋಷಾವೇಷ ತೋರಿಸಿದ ಸಿಸಿಟಿವಿ ವಿಡಿಯೋ ರೆಕಾರ್ಡ್‌ಗಳೂ ಪೊಲೀಸರಿಗೆ ಸಿಕ್ಕಿವೆ.

ಇತ್ತ ದರ್ಶನ್‌ ಜೈಲಿನಲ್ಲಿದ್ದರೆ, ಮತ್ತೊಂದು ಕಡೆಇದೇ ದರ್ಶನ್‌ ಅವರ ಒಂದೊಂದೇ ಮುಖವಾಡಗಳು ಕಳಚಿ ಬೀಳುತ್ತಿದೆ. ಅವರ ಈ ಕೃತ್ಯದಿಂದ ಹಳೇ ಘಟನೆಗಳೂ ಮುನ್ನೆಲೆಗೆ ಬಂದಿವೆ. ಇದಕ್ಕೂ ಮೀರಿ, ದರ್ಶನ್‌ ಅವರಿಂದ ಅನುಭವಿಸಿದ ಯಾತನೆಯನ್ನು ಕೆಲವರು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಇನ್ನು ಕೆಲವು ದರ್ಶನ್‌ ಆಪ್ತರು ಅವರ ಬಿಡುಗಡೆಗೆ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಅಭಿಮಾನಿ ಬಳಗದಲ್ಲೂ ಇದು ಮುಂದುವರಿದಿದೆ. ನೆಚ್ಚಿನ ನಟನ ರಿಲೀಸ್‌ಗೆ ಅವರ ಫ್ಯಾನ್ಸ್‌ ದೇವರಲ್ಲಿ ವಿಶೇಷ ಪೂಜೆ ನೆರವೇರಿಸುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಇದೆಲ್ಲದರ ನಡುವೆ ನಟ ದರ್ಶನ್‌ ಬಗ್ಗೆ ಆಳಿಗೊಂದು ಕಲ್ಲು ಎಂಬಂತೆ ಪ್ರತಿಯೊಬ್ಬರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಕೂಡ ಇದೀಗ ದರ್ಶನ್‌ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಟ ದರ್ಶನ್‌ ಲೈಟ್‌ ಬಾಯ್‌ ಆಗಿ ಸಿನಿಮಾರಂಗಕ್ಕೆ ಬಂದರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ದರ್ಶನ್‌ ಲೈಟ್‌ ಬಾಯ್‌ ಆಗಿರಲಿಲ್ಲ ಎಂದು ಚೇತನ್‌ ಸಾಕ್ಷಿ ಸಮೇತ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ದರ್ಶನ್‌ ಬಗ್ಗೆ ಚೇತನ್‌ ಅಹಿಂಸಾ ಹೇಳಿದ್ದೇನು?

"ಜನುಮದ ಜೋಡಿ' (1996) ಚಿತ್ರದ ತಂತ್ರಜ್ಞರ ಹೆಸರು ಕಾರ್ಡ್ ಇಲ್ಲಿದೆ, ಇದರಲ್ಲಿ ದರ್ಶನ ಶ್ರೀನಿವಾಸ್ರನ್ನು ಛಾಯಾಗ್ರಾಹಕ ಸಹಾಯಕರಾಗಿ ಪಟ್ಟಿ ಮಾಡಲಾಗಿದೆ. ನಟ ದರ್ಶನ್ ಲೈಟ್ ಬಾಯ್ ಆಗಿರಲಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಚಲನಚಿತ್ರೋದ್ಯಮದ ಉದ್ಯೋಗ ಶ್ರೇಣಿಯಲ್ಲಿ, ಲೈಟ್ ಬಾಯ್ ಟೊಟೆಮ್ ಧ್ರುವದ ಕೆಳಭಾಗದಲ್ಲಿದ್ದರೆ, ಛಾಯಾಗ್ರಾಹಕ ಸಹಾಯಕ ಎಲ್ಲೋ ಮಧ್ಯದಲ್ಲಿ ಇರುತ್ತಾನೆ" ಎಂದು ಪೋಸ್ಟ್‌ ಮಾಡಿದ್ದಾರೆ.

ಸುಮಲತಾ ಮೌನ ಪ್ರಶ್ನಿಸಿದ್ದ ಚೇತನ್

ಇದಕ್ಕೂ ಮೊದಲು ದರ್ಶನ್‌ ಪ್ರಕರಣದಲ್ಲಿ ತುಟಿ ಬಿಚ್ಚದ ಸುಮಲತಾ ಅಂಬರೀಶ್‌ ಬಗ್ಗೆಯೂ ಚೇತನ್‌ ಅಹಿಂಸಾ ಪೋಸ್ಟ್‌ ಹಂಚಿಕೊಂಡಿದ್ದರು. ಹಿರಿಯ ಮಗನ ಬಗ್ಗೆ ಯಾಕಿಷ್ಟು ಮೌನ ಎಂದೂ ಪ್ರಶ್ನಿಸಿದ್ದರು. "ಬಹುತೇಕ ಕೆ. ಎಫ್. ಐ. ವ್ಯಕ್ತಿಗಳು ದರ್ಶನ್ ಪ್ರಕರಣ ಒಂದು ವಾರಕ್ಕೂ ಮೀರಿದ್ದರೂ ಅದರ ಬಗ್ಗೆ ಮೌನವಾಗಿದ್ದಾರೆ. 2019 ರ ಲೋಕಸಭಾ ಚುನಾವಣೆಯಲ್ಲಿ ತನ್ನ ರಾಜಕೀಯ ಲಾಭಕ್ಕಾಗಿ ದರ್ಶನ ಅವರ ಸ್ಟಾರ್ ಪವರ್ ಅನ್ನು ಬಳಸಿದ ಸುಮಲತಾ ಅಂಬರಿಶ್ ಅವರನ್ನು ತಮ್ಮ 'ಹಿರಿಯ ಮಗ' ಎಂದು ಕರೆದಿದ್ದರು. ತನ್ನ ಮಗನ ಇತ್ತೀಚಿನ ಘಟನೆಗಳ ಬಗ್ಗೆ ಸುಮಲತಾ ಏನು ಹೇಳುತ್ತಾರೆ? — ತಲೆ ಮರೆಸಿಕೊಳ್ಳುವುದು ಒಂದು ಆಯ್ಕೆಯಾಗಿರಬಾರದು" ಎಂದಿದ್ದಾರೆ.

ನಟ ಉಪೇಂದ್ರ ಹೇಳಿಕೆಗೆ ಚೇತನ್‌ ವ್ಯಂಗ್ಯ

"ನಟ ಉಪೇಂದ್ರ ಅವರು ದರ್ಶನ ಪ್ರಕರಣದ ಬಗ್ಗೆ ತಮ್ಮ ಟ್ರೇಡ್ಮಾರ್ಕ್ ಅಜ್ಞಾನದ ಹೇಳಿಕೆಯನ್ನು ನೀಡಿದ್ದಾರೆ. ಈ ಪ್ರಕರಣದ ವೀಡಿಯೊ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಪೊಲೀಸರು ಅಧಿಕೃತವಾಗಿ ಸಾರ್ವಜನಿಕರಿಗೆ ಹಂಚಿಕೊಳ್ಳಬೇಕು ಎಂದು ಉಪೇಂದ್ರ ಸಲಹೆ ನೀಡಿದ್ದಾರೆ. ಅಂತಹ ಪೊಲೀಸ್ ಕ್ರಮವು ಆರೋಪಿಗಳ ಗೌಪ್ಯತೆಯ ಹಕ್ಕಿನ ಸಾಂವಿಧಾನಿಕ ಉಲ್ಲಂಘನೆಯಾಗಿದೆ. ಮಾನವ ಹಕ್ಕುಗಳಿಗಿಂತ ಮನರಂಜನೆಯೇ ಉಪೇಂದ್ರ ಅವರ ಕಾರ್ಯವಿಧಾನವೆಂದು ತೋರುತ್ತದೆ.