ಇದು ಸಾಮಾನ್ಯ ಸಂಗತಿ, ಇದಕ್ಯಾಕೆ ಇಷ್ಟೊಂದು ಹೈಪ್‌; ದರ್ಶನ್‌ ಕೊಲೆ ಆರೋಪದ ಬಗ್ಗೆ ಮೊದಲ ಸಲ ಪ್ರತಿಕ್ರಿಯೆ ನೀಡಿದ ನಟ ಅನಂತ್‌ ನಾಗ್‌-sandalwood news renukaswamy murder case veteran actor ananth nag reacted to darshan thoogudeepas arrest mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಇದು ಸಾಮಾನ್ಯ ಸಂಗತಿ, ಇದಕ್ಯಾಕೆ ಇಷ್ಟೊಂದು ಹೈಪ್‌; ದರ್ಶನ್‌ ಕೊಲೆ ಆರೋಪದ ಬಗ್ಗೆ ಮೊದಲ ಸಲ ಪ್ರತಿಕ್ರಿಯೆ ನೀಡಿದ ನಟ ಅನಂತ್‌ ನಾಗ್‌

ಇದು ಸಾಮಾನ್ಯ ಸಂಗತಿ, ಇದಕ್ಯಾಕೆ ಇಷ್ಟೊಂದು ಹೈಪ್‌; ದರ್ಶನ್‌ ಕೊಲೆ ಆರೋಪದ ಬಗ್ಗೆ ಮೊದಲ ಸಲ ಪ್ರತಿಕ್ರಿಯೆ ನೀಡಿದ ನಟ ಅನಂತ್‌ ನಾಗ್‌

ಕೊಲೆ ಆರೋಪದ ಮೇಲೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ ಅವರ ಬಗ್ಗೆ ಮೊದಲ ಸಲ ಹಿರಿಯ ನಟ ಅನಂತ್‌ ನಾಗ್‌ ಮಾತನಾಡಿದ್ದಾರೆ. ಇದು ಸರ್ವೇ ಸಾಮಾನ್ಯ ಸಂಗತಿ, ಇದನ್ಯಾಕೆ ಹೈಪ್‌ ಮಾಡಲಾಗ್ತಿದೆ ಅಂತಲೇ ಗೊತ್ತಾಗ್ತಿಲ್ಲ ಎಂದಿದ್ದಾರೆ.

ಇದು ಸಾಮಾನ್ಯ ಸಂಗತಿ, ಇದಕ್ಯಾಕೆ ಇಷ್ಟೊಂದು ಹೈಪ್‌; ದರ್ಶನ್‌ ಕೊಲೆ ಆರೋಪದ ಬಗ್ಗೆ ಮೊದಲ ಸಲ ಪ್ರತಿಕ್ರಿಯೆ ನೀಡಿದ ನಟ ಅನಂತ್‌ನಾಗ್‌
ಇದು ಸಾಮಾನ್ಯ ಸಂಗತಿ, ಇದಕ್ಯಾಕೆ ಇಷ್ಟೊಂದು ಹೈಪ್‌; ದರ್ಶನ್‌ ಕೊಲೆ ಆರೋಪದ ಬಗ್ಗೆ ಮೊದಲ ಸಲ ಪ್ರತಿಕ್ರಿಯೆ ನೀಡಿದ ನಟ ಅನಂತ್‌ನಾಗ್‌

Veteran actor Ananth nag on Darshan Case: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಸೇರಿ ಒಟ್ಟು 17 ಮಂದಿ ಜೈಲಿನಲ್ಲಿದ್ದಾರೆ. ಜೂನ್‌ ತಿಂಗಳಲ್ಲಿಯೇ ಕೊಲೆ ನಡೆದರೂ, ಸಾಕ್ಷ್ಯ ನಾಶದ ಸಾಧ್ಯತೆ ಹಿನ್ನೆಲೆಯಲ್ಲಇಂದಿಗೂ ಆರೋಪಿಗಳಿಗೆ ಕೋರ್ಟ್‌ ಜಾಮೀನು ನೀಡಿಲ್ಲ. ಜತೆಗೆ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಣೆ ಮಾಡುತ್ತಲೇ ಬರುತ್ತಿದೆ ಕೋರ್ಟ್.‌ ಮೂರು ದಿನಗಳ ಹಿಂದಷ್ಟೇ ಅಂದರೆ, ಆಗಸ್ಟ್‌ 1ರಂದು ವಿಚಾರಣೆ ನಡೆಸಿ, ಮುಂದಿನ ಆಗಸ್ಟ್‌ 14ರ ವರೆಗೂ ಬಂಧನದ ಅವಧಿಯನ್ನು ವಿಸ್ತರಣೆ ಮಾಡಿದೆ. ಇತ್ತ ದರ್ಶನ್‌ ಅವರಿಂದ ಮನೆ ಊಟದ ವಿಚಾರಕ್ಕೂ ಸಲ್ಲಿಕೆಯಾಗಿದ್ದ ಅರ್ಜಿಯೂ ತಿರಸ್ಕೃತಗೊಂಡಿದೆ.

ಈ ನಡುವೆ ಸಿನಿಮಾ ಸೆಲೆಬ್ರಿಟಿಗಳು, ಅವರ ಆಪ್ತರು ದರ್ಶನ್‌ ಅವರನ್ನು ನೋಡಲು ಆಗಾಗ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡುತ್ತಲೇ ಬಂದಿದ್ದಾರೆ. ಮಾಧ್ಯಮಗಳಲ್ಲಿ ಕೆಲವರು ಮಾತನಾಡಿದರೆ, ಇನ್ನು ಕೆಲವರು ಇದಕ್ಕೂ ನಮಗೂ ಸಂಬಂಧವೇ ಇಲ್ಲ ಅನ್ನೋ ರೀತಿ ಮಾತನಾಡದೇ ಹೋದವರಿದ್ದಾರೆ. ಇದೀಗ ಹಿರಿಯ ನಟ ಅನಂತ್‌ನಾಗ್‌, ದರ್ಶನ್‌ ಕೊಲೆ ಆರೋಪದ ಬಗ್ಗೆ ಮಾತನಾಡಿದ್ದಾರೆ. ಇಂಥ ಘಟನೆಗಳು ನಡೆಯುವುದು ಸಾಮಾನ್ಯ, ಇದಕ್ಕ್ಯಾಕೆ ಇಷ್ಟೊಂದು ಹೈಪ್‌ ಕೊಡಲಾಗ್ತಿದೆ ಅಂತಾನೇ ಗೊತ್ತಾಗ್ತಿಲ್ಲ ಎಂದಿದ್ದಾರೆ.

ಇದು ಸಾಮಾನ್ಯ ಘಟನೆ...

ಇದು ಎಂಥಾ ಕಾಲವಯ್ಯ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅನಂತ್‌ನಾಗ್‌, "ಇಂಥ ಘಟನೆಗಳು ಎಲ್ಲ ಕಡೆಯಲ್ಲೂ ಆಗುತ್ತವೆ. ಬರೀ ಸಿನಿಮಾ ಸೆಲೆಬ್ರಿಟಿಗಳ ಜೀವನದಲ್ಲಿ ಮಾತ್ರ ನಡೆಯುತ್ತಿಲ್ಲ. ಅದೇ ತರಹದ ಅನೇಕ ಮತ್ತು ಸಾವಿರ ಪಟ್ಟು ದೊಡ್ಡದಾದ, ದೇಶ ದೇಶಗಳ ಮಧ್ಯೆ, ರಾಜ್ಯ ರಾಜ್ಯಗಳ ಮಧ್ಯೆ ಇಂಥ ಹಿಂಸೆಗಳು ನಡೆಯುತ್ತಲೇ ಇರುತ್ತವೆ. ಇದೂ ಒಂದು ಘಟನೆ ಅಷ್ಟೇ. ಆ ವ್ಯಕ್ತಿಯಿಂದ ಇದಕ್ಕೆ ಹೆಚ್ಚು ಪ್ರಚಾರ ಸಿಕ್ಕಿರಬಹುದು ಅಷ್ಟೇ" ಎಂದಿದ್ದಾರೆ.

ಪದೇಪದೆ ಇದನ್ನೇ ತೋರಿಸಿದ್ರೆ ಏನಾಗುತ್ತೆ..

ಇದಕ್ಕಿಂತ ದೊಡ್ಡ ಘಟನೆಗಳು, ಆಗುತ್ತಿರುತ್ತವೆ. ಮಾಧ್ಯಮದವರು ಅದನ್ನೇ ಹೈಲೈಟ್‍ ಮಾಡುತ್ತಾ, ಜಗತ್ತಿನಲ್ಲಿ ಬೇರೆ ಸುದ್ದಿಗಳೇ ಇಲ್ಲ ಎನ್ನುವಂತೆ ಅದನ್ನೇ ಬಿಂಬಿಸುತ್ತಿರುವಾಗ, ಟಿವಿ ನೋಡುವ ಜನರ ಮನಸ್ಸುಗಳು ಜಡವಾಗಿ ಬಿಡುತ್ತವೆ. ಇಂಥ ಘಟನೆಗಳಿಂದ ಸಮಾಜದಲ್ಲಿನ ಜನರ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ. ಇದರಿಂದ ಸ್ಫೂರ್ತಿ ಪಡೆದು ಏನೋ ಮಾಡುತ್ತಾರೆ ಎನ್ನುವುದು ಖಂಡಿತಾ ಸುಳ್ಳು’ ಎಂದಿದ್ದಾರೆ ಅನಂತ್‌ನಾಗ್.‌

ಸಮಾಜದ ಮೇಲೆ ಇದು ಪರಿಣಾಮ ಬೀರದು...

ಮುಂದುವರಿದು ಮಾತನಾಡುವ ಅವರು, "ಈ ವಿಷಯದ ಬಗ್ಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದು ಸಮಾಜಕ್ಕೆ ಬಿಟ್ಟಿದ್ದು. ಅಷ್ಟಕ್ಕೂ ಇದು ಸಮಾಜದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ನಾನು ನಂಬುವುದಿಲ್ಲ. ಈ ಹಿಂದೆ ನಾನೂ ಒಂದಷ್ಟು ಸಿನಿಮಾಗಳನ್ನು ಮಾಡಿದ್ದೇನೆ. ಆ ಸಿನಿಮಾಗಳಿಂದ ಜನ ಬದಲಾಗ್ತಾರೆ ಅಂತಲೂ ಕಾದು ನೋಡಿದೆ. ಆದರೆ, ಅದರಿಂದ ಏನೂ ಆಗಲಿಲ್ಲ. ರಾಜಕೀಯ ಚಿತ್ರಗಳಲ್ಲಿ ಆಸೆಪಟ್ಟು ನಟಿಸಿದರೂ, ಈ ಸಿನಿಮಾದಿಂದ ನಮ್ಮ ರಾಜಕೀಯ ಬದಲಾಗಬಹುದು ಎಂದು ನಿರೀಕ್ಷಿಸಿದ್ದೆ. ಆದರೆ, ಅದು ಯಾರ ಮೇಲೆಯೂ ಪರಿಣಾಮ ಬೀರಲಿಲ್ಲ. ಹಾಗಾಗಿ ಇದೀಗ ಈ ಕೊಲೆ ಪ್ರಕರಣದ ವಿಚಾರವೂ ಸಮಾಜದ ಮೇಲೆ ಪರಿಣಾಮ ಬೀರುವುದಿಲ್ಲ" ಎಂದಿದ್ದಾರೆ.