Rishab Shetty: ಪತಿ ರಿಷಬ್‌ ಶೆಟ್ಟಿ ಹುಟ್ಟುಹಬ್ಬಕ್ಕೆ ಮರೆಯಲಾರದ ಉಡುಗೊರೆ ನೀಡಿದ ಪತ್ನಿ ಪ್ರಗತಿ ಶೆಟ್ಟಿ
ಕನ್ನಡ ಸುದ್ದಿ  /  ಮನರಂಜನೆ  /  Rishab Shetty: ಪತಿ ರಿಷಬ್‌ ಶೆಟ್ಟಿ ಹುಟ್ಟುಹಬ್ಬಕ್ಕೆ ಮರೆಯಲಾರದ ಉಡುಗೊರೆ ನೀಡಿದ ಪತ್ನಿ ಪ್ರಗತಿ ಶೆಟ್ಟಿ

Rishab Shetty: ಪತಿ ರಿಷಬ್‌ ಶೆಟ್ಟಿ ಹುಟ್ಟುಹಬ್ಬಕ್ಕೆ ಮರೆಯಲಾರದ ಉಡುಗೊರೆ ನೀಡಿದ ಪತ್ನಿ ಪ್ರಗತಿ ಶೆಟ್ಟಿ

ನಟ ರಿಷಬ್‌ ಶೆಟ್ಟಿ ಬರ್ತ್‌ಡೇಗೆ ಪತ್ನಿ ಪ್ರಗತಿ ಶೆಟ್ಟಿ ಅವರಿಂದ ವಿಶೇಷ ಉಡುಗೊರೆ ಸಿಕ್ಕಿದೆ. ಸರ್ಕಾರಿ ಶಾಲೆ ದತ್ತು, ಶಿಕ್ಷಣಕ್ಕೆ ಒತ್ತು ನೀಡುವ ಕೆಲಸವನ್ನು ತೆರೆಮರೆಯಲ್ಲಿಯೇ ಮಾಡುತ್ತಿದ್ದರು ರಿಷಬ್.‌ ಇದೀಗ ಪತಿ ಹೆಸರಲ್ಲೇ ಫೌಂಡೇಶನ್‌ ತೆರೆದು ಆ ಕೆಲಸಗಳನ್ನು ಮತ್ತಷ್ಟು ವ್ಯವಸ್ಥಿತವಾಗಿ ಮಾಡಲು ಮುಂದಾಗಿದ್ದಾರೆ ಪ್ರಗತಿ ಶೆಟ್ಟಿ.

ಪತಿ ರಿಷಬ್‌ ಶೆಟ್ಟಿ ಹುಟ್ಟುಹಬ್ಬಕ್ಕೆ ಮರೆಯಲಾರದ ಉಡುಗೊರೆ ನೀಡಿದ ಪತ್ನಿ ಪ್ರಗತಿ, ಪ್ರಮೋದ್‌ ಶೆಟ್ಟಿ ಸಾಥ್‌
ಪತಿ ರಿಷಬ್‌ ಶೆಟ್ಟಿ ಹುಟ್ಟುಹಬ್ಬಕ್ಕೆ ಮರೆಯಲಾರದ ಉಡುಗೊರೆ ನೀಡಿದ ಪತ್ನಿ ಪ್ರಗತಿ, ಪ್ರಮೋದ್‌ ಶೆಟ್ಟಿ ಸಾಥ್‌

Rishab Shetty: ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ, ನಿರ್ಮಾಪಕ ರಿಷಬ್‌ ಶೆಟ್ಟಿ ನಿನ್ನೆಯಷ್ಟೇ (ಜುಲೈ 7) ಅದ್ದೂರಿ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ. ಮೊದಲ ಸಲ ಅಭಿಮಾನಿಗಳ ಸಮ್ಮುಖದಲ್ಲಿ, ಬೆಂಗಳೂರಿನ ಹೊಸಕೆರೆಹಳ್ಳಿ ಬಳಿಯ ನಂದಿ ಲಿಂಕ್ಸ್‌ ಗ್ರೌಂಡ್‌ನಲ್ಲಿ ಸಾವಿರಾರು ಫ್ಯಾನ್ಸ್‌ ಜತೆಗೆ ಹುಟ್ಟುಹಬ್ಬ ಸೆಲೆಬ್ರೇಟ್‌ ಮಾಡಿದ್ದಾರೆ. ಕರಾವಳಿ ಭಾಗದ ಸಾಂಪ್ರದಾಯಿಕ ಹುಲಿ ಕುಣಿತ, ಚೆಂಡೆ ಮೇಳ ಕಾರ್ಯಕ್ರಮದಲ್ಲಿ ಮೇಳೈಸಿತ್ತು.

ಇಡೀ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದು, ನಟ ಪ್ರಮೋದ್‌ ಶೆಟ್ಟಿ. ಸ್ನೇಹಿತನ ಬರ್ತ್‌ಡೇಯನ್ನು ಅದ್ದೂರಿಯಾಗಿಯೇ ಮಾಡಬೇಕೆಂಬ ನಿಟ್ಟಿನಲ್ಲಿ ಬೃಹತ್‌ ಪೆಂಡಾಲ್, ಲೈಟಿಂಗ್‌ ವ್ಯವಸ್ಥೆ ಮಾಡಲಾಗಿತ್ತು. ಬಂದವರಿಗೆ ಊಟದ ವ್ಯವಸ್ಥೆ ಸಹ ಮಾಡಲಾಗಿತ್ತು. ಬೇರೆ ಬೇರೆ ರಾಜ್ಯಗಳಿಂದ ಬಂದ ಅಭಿಮಾನಿಗಳ ಜತೆಗೆ ಕೇಕ್‌ ಕತ್ತರಿಸಿ ಸಂಭ್ರಮಿಸಿದರು ರಿಷಬ್‌ ಶೆಟ್ಟಿ. ಅಭಿಮಾನಿಗಳನ್ನು ಕಂಡು, ಕೊಂಚ ಭಾವುಕವಾಗಿಯೇ ಮಾತನಾಡಿದ ರಿಷಬ್‌, ಎಲ್ಲರೂ ತೋರಿಸುತ್ತಿರುವ ಪ್ರೀತಿಗೆ ಧನ್ಯವಾದ ತಿಳಿಸಿದರು.

ಇದನ್ನೂ ಓದಿ: ನಿಧಾನಕ್ಕೆ ತಿನ್ನೋ.. ಒಂದೇ ತಟ್ಟೆಯಲ್ಲಿ ಚಿಕನ್‌ ಬಿರಿಯಾನಿ ಸವಿದ ರಿಷಬ್‌, ರಕ್ಷಿತ್, ಪ್ರಮೋದ್;‌ ತ್ರಿವಳಿ ಶೆಟ್ರ ಬಾಡೂಟ

ಜನಸಾಗರ ಕಂಡು ರಿಷಬ್‌ ಹೇಳಿದ್ದೇನು?

ನನ್ನಂತ ಸಣ್ಣ ಹಳ್ಳಿಯಿಂದ ಬಂದ ಮಧ್ಯಮ ವರ್ಗದ ಹುಡುಗ ಸಿನಿಮಾ ಕನಸು ಕಂಡು ನಿಮ್ಮ ಮನದಲ್ಲಿ ಜಾಗ ಮಾಡಿಕೊಳ್ಳಬಹುದೆಂದು ನೀವು ಸಾಬೀತುಪಡಿಸಿದ್ದೀರಾ. ಕಾಂತಾರ ಸಿನಿಮಾಕ್ಕೆ ಕನ್ನಡಿಗರು ತೋರಿಸಿದ ಪ್ರೀತಿಯಿಂದ ಇವತ್ತು ಅದು ಜಗತ್ತಿನ ಸಿನಿಮಾವಾಗಿದೆ. ಆದ್ದರಿಂದ ನಿಮ್ಮನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಬೇಕೆಂದು ಬಹಳ ದಿನಗಳಿಂದ ಕಾಯುತ್ತಿದ್ದೆ. ಆ ದಿನ ಇವತ್ತು ನನ್ನ ಹುಟ್ಟುಹಬ್ಬದ ಮೂಲಕ ಒದಗಿ ಬಂದಿದೆ. ಮಳೆ ಬಂದರು ತಾವೆಲ್ಲ ಇಲ್ಲಿಗೆ ಬಂದು ತೋರಿಸುತ್ತಿರುವ ಪ್ರೀತಿಯ ಋಣವನ್ನು ನಾನು ಸಾಯುವವರೆಗೂ ನನ್ನ ಸಿನಿಮಾ ಮತ್ತು ಕೆಲಸದ ಮೂಲಕ ತೀರುಸುತ್ತಲೇ ಇರುತ್ತೇನೆ ಎಂದರು.

ತೆರೆಮರೆಯಲ್ಲಿಯೇ ನಡೆಯುತ್ತಿದೆ ಸಾಮಾಜಿಕ ಕಾರ್ಯ

ರಿಷಬ್‌ ಶೆಟ್ಟಿ ಕಳೆದ ಕೆಲ ವರ್ಷಗಳಿಂದ ತೆರೆಮರೆಯಲ್ಲಿಯೇ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಆ ಬಗ್ಗೆ ಎಲ್ಲಿಯೂ ಅವರು ಹೇಳಿಕೊಂಡಿಲ್ಲ. ಇದೀಗ ಬರ್ತ್‌ಡೇ ನಿಮಿತ್ತ ರಿಷಬ್‌ ಸ್ನೇಹಿತ ಪ್ರಮೋದ್‌ ಶೆಟ್ಟಿ ರಿಷಬ್‌ ಬಗ್ಗೆ ಹೇಳಿಕೊಂಡಿದ್ದಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ರಿಲೀಸ್‌ ಆದ ಬಳಿಕ ಅನೇಕ ಸರ್ಕಾರಿ ಶಾಲೆಗಳನ್ನು ರಿಷಬ್‌ ದತ್ತು ಪಡೆದು, ಅವುಗಳ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇದನ್ನು ರಿಷಬ್‌ ಎಲ್ಲಿಯೂ ಹೇಳಿಕೊಂಡಿರಲಿಲ್ಲ ಎಂದು ಪ್ರಮೋದ್‌ ಹೇಳಿಕೊಂಡರು.

ಇದನ್ನೂ ಓದಿ: ಬಜೆಟ್‌ನಲ್ಲಿ ಚಿತ್ರರಂಗಕ್ಕಿಲ್ಲ ನಯಾಪೈಸೆ, ಈ ಸಲವೂ ನಿರಾಸೆಯ ಕಾರ್ಮೋಡ; ವಿಶ್ಲೇಷಣೆ

ಇನ್ನು ಪತ್ನಿ ಪ್ರಗತಿ ಶೆಟ್ಟಿ ಸಹ ಪತಿ ಬಗ್ಗೆ ಮಾತನಾಡಿದರು. ಯಾವುದೇ ಗಿಫ್ಟ್‌ ಇಷ್ಟಪಡದ ರಿಷಬ್‌ಗೆ ಏನಾದರೂ ಉಡುಗೊರೆ ನೀಡಬೇಕಲ್ಲ ಎಂದಾಗ, ಪತ್ನಿ ಪ್ರಗತಿಗೆ ಹೊಳೆದಿದ್ದೇ ರಿಷಬ್‌ ಶೆಟ್ಟಿ ಫೌಂಡೇಷನ್‌. ಈ ಫೌಂಡೇಶನ್‌ ಮೂಲ ಶಿಕ್ಷಣ ಕ್ಷೇತ್ರಕ್ಕೆ ಸಾಧ್ಯವಾದ ಮಟ್ಟಿಗೆ ಸಹಾಯ ಮಾಡುವ ಬಗ್ಗೆ ಅವರು ಹೇಳಿಕೊಂಡಿರು. ಈ ಫೌಂಡೇಶನ್‌ನಿಂದ ಇಂದಿನಿಂದಲೇ ಈ ಕೆಲಸ ಶುರು ಎಂದರು. ಇನ್ನು ಕಾರ್ಯಕ್ರಮದಲ್ಲಿ ಮಂಗಳೂರು ಭಾಗದ ಹುಲಿ ವೇಷ ಮತ್ತು ಚಂಡೆ ವಾದ್ಯಮೇಳ ಸಮಾರಂಭದ ಮೆರುಗನ್ನು ಮತ್ತಷ್ಟು ಹೆಚ್ಚಿಸಿತು.

ಮತ್ತಷ್ಟು ಮನರಂಜನೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Whats_app_banner