Kantara A Legend: ಕಾಂತಾರ ಚಾಪ್ಟರ್‌ 1 ಫಸ್ಟ್‌ ಲುಕ್‌ ಬಿಡುಗಡೆ; ಮೊದಲ ನೋಟದಲ್ಲಿಯೇ ರೋಮಾಂಚನ ಉಂಟುಮಾಡಿದ ತ್ರಿಶೂಲಧಾರಿ
ಕನ್ನಡ ಸುದ್ದಿ  /  ಮನರಂಜನೆ  /  Kantara A Legend: ಕಾಂತಾರ ಚಾಪ್ಟರ್‌ 1 ಫಸ್ಟ್‌ ಲುಕ್‌ ಬಿಡುಗಡೆ; ಮೊದಲ ನೋಟದಲ್ಲಿಯೇ ರೋಮಾಂಚನ ಉಂಟುಮಾಡಿದ ತ್ರಿಶೂಲಧಾರಿ

Kantara A Legend: ಕಾಂತಾರ ಚಾಪ್ಟರ್‌ 1 ಫಸ್ಟ್‌ ಲುಕ್‌ ಬಿಡುಗಡೆ; ಮೊದಲ ನೋಟದಲ್ಲಿಯೇ ರೋಮಾಂಚನ ಉಂಟುಮಾಡಿದ ತ್ರಿಶೂಲಧಾರಿ

Kantara A Legend Chapter-1 First Look: ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶಿಸುವ ಬಹುನಿರೀಕ್ಷಿತ ಕಾಂತಾರ ಚಾಪ್ಟರ್‌ 1ರ ಫಸ್ಟ್‌ ಲುಕ್‌ ವಿಡಿಯೋ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಎ ಲೆಜೆಂಡ್‌ ವಾಸ್‌ ಬಾರ್ನ್‌ ಎಂಬ ಟೈಟಲ್‌ನಡಿ ಈ ಫಸ್ಟ್‌ ಲುಕ್‌ ಬಿಡುಗಡೆ ಮಾಡಲಾಗಿದೆ.

Kantara A Legend: ಕಾಂತಾರ ಚಾಪ್ಟರ್‌ 1 ಫಸ್ಟ್‌ ಲುಕ್‌ ಬಿಡುಗಡೆ
Kantara A Legend: ಕಾಂತಾರ ಚಾಪ್ಟರ್‌ 1 ಫಸ್ಟ್‌ ಲುಕ್‌ ಬಿಡುಗಡೆ

ಬೆಂಗಳೂರು: ರಿಷಬ್‌ ಶೆಟ್ಟಿ ನಿರ್ದೇಶನದ ಕಾಂತಾರದ ಮುಂದಿನ ಆವೃತ್ತಿ "ಕಾಂತಾರ ಎ ಲೆಜೆಂಡ್‌ ಚಾಪ್ಟರ್‌-1" ಫಸ್ಟ್‌ ಲುಕ್‌ ಬಿಡುಗಡೆಯಾಗಿದೆ. ಈ ಹಿಂದಿನ ಕಾಂತಾರದ ದೃಶ್ಯಗಳ ನಿರೀಕ್ಷೆಯಲ್ಲಿದ್ದವರಿಗೆ ಅಚ್ಚರಿಯಾಗುವಂತೆ ರಕ್ತಸಿಕ್ತ ತಪಸ್ವಿಯಂತೆ ಕಾಣಿಸುವ, ಹಳೆ ಕಾಲದ ರಾಜನೋ ಎಂಬಂತೆ ಇರುವ ವ್ಯಕ್ತಿಯೊಬ್ಬರು ಕಾಣಿಸಿದ್ದಾರೆ. ಈ ಲೆಂಜೆಂಡ್‌ ಯಾರು, ಇದು ಕದಂಬರ ಕಾಲದ ಚಿತ್ರಣವೋ ಅಥವಾ ಪರಶುರಾಮ ಸೃಷ್ಟಿಯ ತುಳುನಾಡಿನ ಚಿತ್ರಣವೋ ಎಂಬ ಸಂದೇಹವೂ ಮೂಡಿದೆ.

ಈ ಫಸ್ಟ್‌ಲುಕ್‌ನ ಮೊದಲು ಕಾಂತಾರದ "ಇದು ಬೆಳಕಲ್ಲ ದರ್ಶನ" ಎಂಬ ಚಿತ್ರಣವಿದೆ. ಇದಾದ ಬಳಿಕ ಈ ಲೆಜೆಂಡ್‌ನನ್ನು ತೋರಿಸಲಾಗಿದೆ. ಈತನನ್ನು ತೋರಿಸುವ ರೀತಿಗೆ ರೋಮಾಂಚನ ಉಂಟಾಗುತ್ತಿದೆ. ರಿಷಬ್‌ ಶೆಟ್ಟಿಯನ್ನು ಈ ರೀತಿ ಯಾರೂ ನಿರೀಕ್ಷೆ ಮಾಡದ ರೀತಿ ತೋರಿಸಲಾಗಿದೆ. . ಯೂಟ್ಯೂಬ್‌ ಫಸ್ಟ್‌ಲುಕ್‌ನ ಥಂಬ್‌ನೆಲ್‌ ಚಿತ್ರ ನೋಡಿದಾಗ ಇಂತಹ ಸಂದೇಹವೂ ಕಾಡುತ್ತದೆ.

ಇಂದು ರಿಷಬ್‌ ಶೆಟ್ಟಿ ನಿರ್ದೇಶನದ ಕಾಂತಾರ ಪ್ರೀಕ್ವೆಲ್‌ಗೆ ಅದ್ಧೂರಿ ಮುಹೂರ್ತ ನಡೆಯುತ್ತಿದೆ. ಈ ಸಂದರ್ಭದಲ್ಲಿ ಬಿಡುಗಡೆಯಾದ ಈ ಫಸ್ಟ್‌ಲುಕ್‌ನ ಕುರಿತು ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಉಂಟಾಗಿದೆ. ಯೂಟ್ಯೂಬ್‌ನಲ್ಲಿ ಫಸ್ಟ್‌ ಲುಕ್‌ ಬಿಡುಗಡೆಯಾದ ಹದಿನೈದು ನಿಮಿಷದಲ್ಲಿ ಹಲವು ಲಕ್ಷ ಜನರು ಈ ಫಸ್ಟ್‌ಲುಕ್‌ ವಿಡಿಯೋ ವೀಕ್ಷಿಸಿದ್ದಾರೆ. ಇದನ್ನೂ ಓದಿ: Kantara: ಪ್ರತಿಷ್ಠಿತ ಗೋಲ್ಡನ್‌ ಪೀಕಾಕ್‌ ಪ್ರಶಸ್ತಿಗೆ ರಿಷಬ್‌ ಶೆಟ್ಟಿ ನಿರ್ದೇಶನದ ಕಾಂತಾರ ನಾಮನಿರ್ದೇಶನ, ಇಲ್ಲಿದೆ ಹೆಚ್ಚಿನ ವಿವರ

ಕಾಂತಾರ ಎ ಲೆಜೆಂಡ್‌ ಚಾಪ್ಟರ್‌ ಒನ್‌ ಟೀಸರ್‌ ನೋಡಿ

ನಿಜಕ್ಕೂ ಇದು ಭಾರತದ ಸಿನಿಮಾವನ್ನು ಜಾಗತಿಕ ಸ್ಟೇಜ್‌ನಲ್ಲಿ ಜನಪ್ರಿಯಗೊಳಿಸುವ ಸಿನಿಮಾದಂತೆ ಇದೆ ಎಂದು ಫಸ್ಟ್‌ಲುಕ್‌ ನೋಡಿದ ಹಲವು ಜನರು ಅಭಿಪ್ರಾಯಪಟ್ಟಿದ್ದಾರೆ.

ಕಾಂತಾರ 2ನಲ್ಲಿ ತುಳುನಾಡಿನ ದೈವದ ಮೂಲ ಕಥೆ ಇರಲಿದೆಯಂತೆ. ಕ್ರಿಶ 301-400 ಕಾಲದ ಕಥೆ ಇರಲಿದೆ ಎಂದು ಈಗಾಗಲೇ ಹೇಳಲಾಗಿದೆ. ಇತಿಹಾಸದ ಪುಟಗಳನ್ನು ಆಧಾರವಾಗಿಟ್ಟುಕೊಂಡು ನೈಜತೆಗೆ ಧಕ್ಕೆಯಾಗದಂತೆ ಕಾಲ್ಪನಿಕ ಕಥೆಯೊಂದನ್ನು ಕಟ್ಟುವ ಕೆಲಸದಲ್ಲಿ ರಿಷಬ್‌ ಶೆಟ್ಟಿ ನಿರತರಾಗಿದ್ದಾರೆ. ಮುಂದಿನ ವರ್ಷದ ಅಂತ್ಯದ ವೇಳೆಗೆ ಕಾಂತಾರ 2 ತೆರೆಗೆ ಬರುವ ನಿರೀಕ್ಷೆಯಿದೆ. ತುಳುನಾಡಿನ ಇತಿಹಾಸದ ಕಥೆ, ಪಂಜುರ್ಲಿ ದೈವದ ಮೂಲದ ಕಥೆ ಹೇಳುವಾಗ, ಕ್ರಿಶ 301-400ರ ಕಥೆಯನ್ನು ಕಾಂತಾರ ಒಳಗೊಂಡಿದ್ದರೆ ಈ ಸಿನಿಮಾದ ದೃಶ್ಯಗಳು ಬೇರೆ ರೀತಿಯೇ ಇರಬೇಕಾಗುತ್ತದೆ. ಇದೀಗ ಬಿಡುಗಡೆಯಾದ ಫಸ್ಟ್‌ಲುಕ್‌ನಲ್ಲೂ ಇಂತಹದ್ದೇ ಸುಳಿವಿದೆ.

ಈ ಫಸ್ಟ್‌ಲುಕ್‌ ಇಂಗ್ಲಿಷ್‌ ಭಾಷೆ ಸೇರಿದಂತೆ ಒಟ್ಟು ಏಳು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಬಂಗಾಳಿ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಮೂಲ ತುಳುಭಾಷೆಯನ್ನು ಮರೆತಿರುವಂತೆ ಕಾಣಿಸುತ್ತದೆ. ತುಳುವಿನಲ್ಲಿ ಫಸ್ಟ್‌ಲುಕ್‌ ಸದ್ಯ ಬಿಡುಗಡೆಯಾಗಿಲ್ಲ.

Whats_app_banner