ಕನ್ನಡ ಸುದ್ದಿ  /  ಮನರಂಜನೆ  /  Rishab Shetty: ಕಾಂತಾರ ಯಶಸ್ಸಿನ ಬಳಿಕ ಎಲ್ಲಿ ಹೋದರು ರಿಷಬ್ ಶೆಟ್ಟಿ, ಅವರ ಪ್ರಾಜೆಕ್ಟ್​​ಗಳ ಬಗ್ಗೆ ಕೇಳಿ ಬರುತ್ತಿರುವ ಮಾತುಗಳಿವು

Rishab Shetty: ಕಾಂತಾರ ಯಶಸ್ಸಿನ ಬಳಿಕ ಎಲ್ಲಿ ಹೋದರು ರಿಷಬ್ ಶೆಟ್ಟಿ, ಅವರ ಪ್ರಾಜೆಕ್ಟ್​​ಗಳ ಬಗ್ಗೆ ಕೇಳಿ ಬರುತ್ತಿರುವ ಮಾತುಗಳಿವು

Sandalwood news: ರಿಷಬ್ ಶೆಟ್ಟಿ ನಿರ್ದೇಶನ- ನಟನೆಯ ‘ಕಾಂತಾರ’ ಬ್ಲಾಕ್ ಬಸ್ಟರ್ ಹಿಟ್ ಆದ ಮೇಲೆ ಸ್ವತಃ ರಿಷಬ್ ಅಭಿನಯಿಸಬೇಕು ಎಂದಿದ್ದ ಹಲವು ಪ್ರಾಜೆಕ್ಟ್ ಗಳು ಡ್ರಾಪ್ ಆಗಿವೆಯಂತೆ. ರಿಷಬ್ ಜತೆಗೆ ಇದ್ದ ಹುಡುಗರು ನಿರ್ದೇಶಕರಾಗಬೇಕಿದ್ದ ಸಿನಿಮಾಗಳವು. ಅವುಗಳಿಗೆ ಜತೆಯಾಗಿ ನಿಲ್ಲುವುದಾಗಿ ಶೆಟ್ಟರು ಭರವಸೆ ಕೂಡ ನೀಡಿದ್ದರಂತೆ.

ಕಾಂತಾರ ಯಶಸ್ಸಿನ ಬಳಿಕ ಎಲ್ಲಿ ಹೋದರು ರಿಷಬ್ ಶೆಟ್ಟಿ?
ಕಾಂತಾರ ಯಶಸ್ಸಿನ ಬಳಿಕ ಎಲ್ಲಿ ಹೋದರು ರಿಷಬ್ ಶೆಟ್ಟಿ?

ಗಾಂಧೀನಗರದಲ್ಲಿ ಹರಿದಾಡುವ ಸುದ್ದಿಗೆ ಮೂಲ ಯಾವುದು ಅಂತ ಎಷ್ಟೋ ಸಲ ಗೊತ್ತಾಗುವುದೇ ಇಲ್ಲ. ಈಗ ರಿಷಬ್ ಶೆಟ್ಟಿ ವಿಚಾರದಲ್ಲಿ ಹಾಗೊಂದು ಸುದ್ದಿ ಹರಿದಾಡುತ್ತಿದೆ. ಇದರ ಮೂಲ ಯಾವುದು ಅಂತ ಗೊತ್ತಾಗದೇ ಇದ್ದರೂ ವಿಚಾರ ಮಾತ್ರ “ಇರಬಹುದಲ್ಲವಾ?” ಎಂದೆನಿಸುವಂತೆಯೇ ಇದೆ. ವಿಷಯ ಏನಪ್ಪಾ ಅಂದರೆ, ರಿಷಬ್ ಶೆಟ್ಟಿ ನಿರ್ದೇಶನ- ನಟನೆಯ ‘ಕಾಂತಾರ’ ಬ್ಲಾಕ್ ಬಸ್ಟರ್ ಹಿಟ್ ಆದ ಮೇಲೆ ಸ್ವತಃ ರಿಷಬ್ ಅಭಿನಯಿಸಬೇಕು ಎಂದಿದ್ದ ಹಲವು ಪ್ರಾಜೆಕ್ಟ್ ಗಳು ಡ್ರಾಪ್ ಆಗಿವೆಯಂತೆ. ರಿಷಬ್ ಜತೆಗೆ ಇದ್ದ ಹುಡುಗರು ನಿರ್ದೇಶಕರಾಗಬೇಕಿದ್ದ ಸಿನಿಮಾಗಳವು. ಅವುಗಳಿಗೆ ಜತೆಯಾಗಿ ನಿಲ್ಲುವುದಾಗಿ ಶೆಟ್ಟರು ಭರವಸೆ ಕೂಡ ನೀಡಿದ್ದರಂತೆ.

ಆದರೆ, ಯಾವಾಗ ಕಾಂತಾರ ಅಷ್ಟು ದೊಡ್ಡ ಪ್ರಮಾಣದಲ್ಲಿ ಹಿಟ್ ಆಯಿತೋ ಆಗ ರಿಷಬ್ ಶೆಟ್ಟಿಯವರ ಬಳಿ ಬರುತ್ತಿರುವ ನಿರ್ಮಾಪಕರ ಸಂಖ್ಯೆ ಹಾಗೂ ಅವರು ಹೂಡುವುದಕ್ಕೆ ಸಿದ್ಧವಾಗುತ್ತಿರುವ ಮೊತ್ತ ದೊಡ್ಡದಾಗಿದೆ. ಶೆಟ್ಟರ ಸಂಭಾವನೆ ಸಹ ಎಲ್ಲೋ ಹೋಗಿದೆ. ಇಂಥ ಸನ್ನಿವೇಶದಲ್ಲಿ ಜತೆಗಿರುವ ಹುಡುಗರಿಗಾಗಿ ಸಣ್ಣ- ಸಣ್ಣ ಸಿನಿಮಾ ಮಾಡುವುದು ಸಾಧ್ಯವಿಲ್ಲ ಎಂಬ ಸ್ಥಿತಿ ನಿರ್ಮಾಣ ಆಗಿದೆ. ಇನ್ನು ಈ ಹುಡುಗರ ಪಾಲಿಗೆ ಮೊದಲ ಸಿನಿಮಾ ಲಾಂಚ್ ಆಗಬೇಕಿದೆ. ಕಾಂತಾರ ಮಾಡುವುದಕ್ಕೆ ಮುಂಚಿನ ರಿಷಬ್ ಶೆಟ್ಟಿ ಸಣ್ಣ ಸಿನಿಮಾಗಳನ್ನು ಮಾಡುವುದು ಇಮೇಜ್ ವಿಷಯವಾಗಿ ಇರಲಿಲ್ಲ. ಏಕೆಂದರೆ ಸ್ವತಃ ಶೆಟ್ಟರು ಸಣ್ಣ ಬಜೆಟ್ ಸಿನಿಮಾಗಳನ್ನೇ ಹೆಚ್ಚೆಚ್ಚು ಮಾಡುತ್ತಿದ್ದರು.

ದೊಡ್ಡ ಮೊತ್ತ ಹೂಡಲು ಸಿದ್ಧರಿರುವ ನಿರ್ಮಾಪಕರು, ಭಾರತದ ಮಟ್ಟದಲ್ಲಿ ಶೆಟ್ಟರ ಮುಂದಿನ ಸಿನಿಮಾ ಯಾವುದು ಎಂಬ ನಿರೀಕ್ಷೆ, ಕಾಂತಾರದಂಥ ದೊಡ್ಡ ಹಿಟ್ ಸಿನಿಮಾದ ಮುಂದಿನ ಸಿನಿಮಾ ಹೇಗೆ ನೀಡಬೇಕು ಇಂಥ ಸಂಗತಿಗಳೆಲ್ಲ ಕಣ್ಣೆದುರು ಬಂದು ನಿಲ್ಲುತ್ತಿವೆ. ಅಂದಹಾಗೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾಗೆ ರಿಷಬ್ ಹಾಗೂ ರಕ್ಷಿತ್ ದೊಡ್ಡ ಮಟ್ಟದಲ್ಲೇ ಬೆಂಬಲವಾಗಿ ನಿಂತು, ಅದು ಇವತ್ತಿಗೆ ಚಿತ್ರಮಂದಿರಗಳಲ್ಲಿ ಜನರನ್ನು ಕಾಣುವಂತೆ ಆಗಿದೆ.

ಟ್ರೆಂಡಿಂಗ್​ ಸುದ್ದಿ

ಆದರೆ, ಅದು ಎರಡು- ಮೂರು ವರ್ಷದ ಹಳೇ ಪ್ರಾಜೆಕ್ಟ್. ಆಗ ರಿಷಬ್ ಈ ಪರಿಯ ಯಶಸ್ಸು ಕಂಡಿರಲಿಲ್ಲ. ಇನ್ನು ಈಗಂತೂ ಖಾಸಗಿ ವಿಮಾನದಲ್ಲೇ ಸಂಚರಿಸಿದರೂ ಸಮಯ ಹೊಂದಿಸುವುದು ಕಷ್ಟ ಎಂಬಷ್ಟು ಬಿಡುವಿಲ್ಲದಂಥ ಷೆಡ್ಯೂಲ್ ನಲ್ಲಿ ರಿಷಬ್ ಕೆಲಸಗಳನ್ನು ಮೈ ಮೇಲೆ ಹಾಕಿಕೊಂಡಿದ್ದಾರೆ.

ಕಾಂತಾರ ಸಿನಿಮಾದ ಯಶಸ್ಸು ಕನ್ನಡ ಚಿತ್ರರಂಗಕ್ಕೆ ಹೊಸ ಹುಮ್ಮಸ್ಸು, ಧೈರ್ಯವನ್ನು ನೀಡಿದ್ದರಲ್ಲಿ ಎರಡು ಮಾತಿಲ್ಲ. ಆದರೆ ರಿಷಬ್ ಜತೆಗಿದ್ದು, ತಮ್ಮ ಸಿನಿಮಾಗಳನ್ನು ಶುರು ಮಾಡುವುದಕ್ಕೆ ಎದುರು ನೋಡುತ್ತಿದ್ದ ಒಂದಷ್ಟು ಯುವ ತಂತ್ರಜ್ಞರಿಗೆ ಈಗ ತಮ್ಮ ದಾರಿಯನ್ನು ನೋಡಿಕೊಳ್ಳಬೇಕಾಗಿದೆ.