ಕನ್ನಡ ಸುದ್ದಿ  /  Entertainment  /  Sandalwood News Rishab Shetty Starrer Kantara Movie Completed One Year Hombale Films Special Update Rsm

ಕಾಂತಾರ ಚಿತ್ರಕ್ಕೆ ವರ್ಷದ ಸಂಭ್ರಮ; ವಿಶೇಷ ಅಪ್‌ಡೇಟ್‌ ಕೊಟ್ಟ ಹೊಂಬಾಳೆ ಫಿಲ್ಮ್ಸ್‌

'ಕಾಂತಾರ' ಚಿತ್ರಕ್ಕೆ ಈಗ ಒಂದು ವರ್ಷದ ಸಂಭ್ರಮ. ಇಂದಿಗೆ (ಸೆಪ್ಟೆಂಬರ್‌ 30) ಕಾಂತಾರ ರಿಲೀಸ್‌ ಆಗಿ ಒಂದು ವರ್ಷ ಕಳೆದಿದೆ. ಈ ವಿಶೇಷ ದಿನವನ್ನು ಹೊಂಬಾಳೆ ಫಿಲ್ಮ್ಸ್‌ ವಿಶೇಷವಾಗಿ ಆಚರಿಸಲು ನಿರ್ಧರಿಸಿದೆ.

ಕಾಂತಾರ ಚಿತ್ರಕ್ಕೆ ವರ್ಷದ ಸಂಭ್ರಮ
ಕಾಂತಾರ ಚಿತ್ರಕ್ಕೆ ವರ್ಷದ ಸಂಭ್ರಮ

'ಕಾಂತಾರ' ಸಿನಿಮಾ ಹೆಸರು ಕೇಳಿದರೇನೇ ಸಿನಿಪ್ರಿಯರು ಎಕ್ಸೈಟ್‌ ಆಗುತ್ತಾರೆ. ಸಿನಿಮಾ ಕಥೆ, ಹಾಡುಗಳು, ಪಾತ್ರಗಳು ಒಟ್ಟಾರೆ ಮೇಕಿಂಗ್‌ನಿಂದ ಸಿನಿಮಾ ಬ್ಲಾಕ್‌ ಬಸ್ಟರ್‌ ಲಿಸ್ಟ್‌ಗೆ ಸೇರಿದೆ. ಕನ್ನಡಿಗರಿಗೆ ಮಾತ್ರವಲ್ಲ ತೆಲುಗು, ತಮಿಳು, ಹಿಂದಿ, ಮಲಯಾಳಂ ಸಿನಿಪ್ರಿಯರು ಕೂಡಾ ಸಿನಿಮಾ ನೋಡಿ ಮೆಚ್ಚಿದ್ದಾರೆ. ಚಿತ್ರವನ್ನು, ರಿಷಬ್‌ ಶೆಟ್ಟಿ ನಿರ್ದೇಶನವನ್ನು ಹಾಡಿ ಹೊಗಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಹೊಂಬಾಳೆ ಫಿಲ್ಮ್ಸ್‌ನಿಂದ ವಿಶೇಷ ಅಪ್‌ಡೇಟ್

ಕಾಂತಾರ ಸಿನಿಮಾ, ರಿಷಬ್‌ ಶೆಟ್ಟಿಗೆ ಡಿವೈನ್‌ ಸ್ಟಾರ್‌ ಬಿರುದು ತಂದುಕೊಟ್ಟಿತು. ನ್ಯಾಷನಲ್‌ ಸ್ಟಾರ್‌ನನ್ನಾಗಿ ಮಾಡಿತು. ಹೈದರಾಬಾದ್‌, ಚೆನ್ನೈ, ಮುಂಬೈ, ದುಬೈ ಎಲ್ಲೆಲ್ಲೂ ರಿಷಬ್‌ ಶೆಟ್ಟಿಗೆ ಅಭಿಮಾನಿಗಳಿದ್ದಾರೆ. ನಾಯಕಿ ಸಪ್ತಮಿ ಗೌಡ ಕೂಡಾ ಈ ಚಿತ್ರದ ನಂತರ ಅಭಿಷೇಕ್‌ ಅಂಬರೀಶ್‌ ಹಾಗೂ ಯುವ ರಾಜ್‌ಕುಮಾರ್‌ ಜೊತೆ ನಟಿಸುವ ಅವಕಾಶ ಪಡೆದರು. ಹಿಂದಿಯಲ್ಲಿ ವಿವೇಕ್‌ ರಂಜನ್‌ ಅಗ್ನಿಹೋತ್ರಿ ನಿರ್ದೇಶನದ ದಿ ವ್ಯಾಕ್ಸಿನ್‌ ವಾರ್‌ ಚಿತ್ರದಲ್ಲಿ ಕೂಡಾ ನಟಿಸಿದರು. ಒಟ್ಟಿನಲ್ಲಿ ಸಿನಿಮಾ ಬಿಡುಗಡೆಯಾದ ನಂತರ ರಿಷಬ್‌ ಶೆಟ್ಟಿ, ಸಪ್ತಮಿಗೌಡ ಇಮೇಜ್‌ ಬಹಳ ಬದಲಾಯ್ತು.

ವರಾಹ ರೂಪಂ ವಿಡಿಯೋ ಹಾಡು ಬಿಡುಗಡೆ

'ಕಾಂತಾರ' ಚಿತ್ರಕ್ಕೆ ಈಗ ಒಂದು ವರ್ಷದ ಸಂಭ್ರಮ. ಇಂದಿಗೆ (ಸೆಪ್ಟೆಂಬರ್‌ 30) ಕಾಂತಾರ ರಿಲೀಸ್‌ ಆಗಿ ಒಂದು ವರ್ಷ ಕಳೆದಿದೆ. ಈ ವಿಶೇಷ ದಿನವನ್ನು ಹೊಂಬಾಳೆ ಫಿಲ್ಮ್ಸ್‌ ವಿಶೇಷವಾಗಿ ಆಚರಿಸಲು ನಿರ್ಧರಿಸಿದೆ. ಜನ ಮೆಚ್ಚಿದ, ಅಜನೀಶ್‌ ಲೋಕನಾಥ್‌ ಸಂಗೀತವಿರುವ ವರಾಹ ರೂಪಂ ವಿಡಿಯೋ ಹಾಡನ್ನು ಹೊರ ತರಲು ಚಿತ್ರತಂಡ ನಿರ್ಧರಿಸಿದೆ. ವಿಡಿಯೋ ಸಾಂಗ್‌ ನೋಡಲು ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ಕಾಂತಾರ ಒಂದು ವರ್ಷದ ಖುಷಿಯನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ರಿಷಬ್‌ ಶೆಟ್ಟಿ, ''ನಾವೆಲ್ಲರೂ ಮೆಚ್ಚುವ ವಿಶೇಷ ಚಿತ್ರ ಇದು. ಕಾಂತಾರ ಚಿತ್ರವನ್ನು ಎಪಿಕ್‌ ಬ್ಲಾಕ್‌ ಬಸ್ಟರ್‌ ಆಗಿ ಮಾಡಿದ ನಿಮ್ಮೆಲ್ಲರಿಗೂ ನನ್ನ ಹೃದಯಪೂರ್ವ ಕೃತಜ್ಞತೆಗಳು. ಈ ಪ್ರಯಾಣ ಮುಂದುವರೆಯುವುದು'' ಎಂದು ರಿಷಬ್‌ ಶೆಟ್ಟಿ ಬರೆದುಕೊಂಡಿದ್ದಾರೆ.‌

ಪ್ರೀಕ್ವೆಲ್‌ನಲ್ಲಿ ರಿಷಬ್‌ ಶೆಟ್ಟಿ ಬ್ಯುಸಿ

'ಕಾಂತಾರ' ಸಿನಿಮಾ ನಂತರ ಹೊಂಬಾಳೆ ಫಿಲ್ಮ್ಸ್‌ ತೆಲುಗು, ಮಲಯಾಳಂ, ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದೆ. ತೆಲುಗಿನಲ್ಲಿ ಪ್ರಭಾಸ್‌ ಜೊತೆ 'ಸಲಾರ್‌' ಸಿನಿಮಾ ನಿರ್ಮಿಸುತ್ತಿದೆ. ತಮಿಳಿನಲ್ಲಿ 'ರಘು ತಾತ' ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್‌ ನಿರ್ಮಿಸುತ್ತಿದೆ. ಮಲಯಾಳಂನಲ್ಲಿ 'ಫಹಾದ್‌ ಫಾಸಿಲ್‌' ನಾಯಕನಾಗಿ ನಟಿಸಿದ್ದ ಧೂಮಂ ಈಗಾಗಲೇ ರಿಲೀಸ್‌ ಆಗಿದೆ. ಇನ್ನು ರಿಷಬ್‌ ಶೆಟ್ಟಿ ಕಾಂತಾರ ಪ್ರೀಕ್ವೆಲ್‌ನಲ್ಲಿ ಬ್ಯುಸಿ ಇದ್ದಾರೆ. ಸ್ಕ್ರಿಪ್ಟ್‌ ಕೆಲಸ ಬಹುತೇಕ ಮುಗಿದಿದ್ದು ಕೆಲವೇ ದಿನಗಳಲ್ಲಿ ಸಿನಿಮಾ ಕೆಲಸಗಳು ಆರಂಭವಾಗಲಿವೆ.

ಮನರಂಜನೆ, ಬಿಗ್‌ಬಾಸ್ ಕನ್ನಡ 10 ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, ಹಿಂದೂಸ್ತಾನ್ ಟೈಮ್ಸ್ ಕನ್ನಡ ,ನೋಡಿ.