ಕನ್ನಡ ಸುದ್ದಿ  /  Entertainment  /  Sandalwood News Rishi Starrer Rudra Garuda Purana Movie Launched Ninasam Sathish Ninasam Wishes Kannada Movie Mnk

Rudra Garuda Purana: ಪಾಪ, ಪುಣ್ಯ, ಕರ್ಮದ ಕಥೆಯಲ್ಲಿ ರಿಷಿ; ರುದ್ರ ಗರುಡ ಪುರಾಣ ಚಿತ್ರಕ್ಕೆ ನೀನಾಸಂ ಸತೀಶ್ ಹಾರೈಕೆ

ನಟಿ ರಿಷಿ ಇದೀಗ ರುದ್ರನ ಅವತಾರದಲ್ಲಿ ಎದುರಾಗಲು ಸಿದ್ಧತೆ ನಡೆಸಿದ್ದಾರೆ. ಗರುಡ ಪುರಾಣದ ಅಂಶವನ್ನು ಒಳಗೊಂಡ ರುದ್ರ ಗರುಡ ಪುರಾಣ ಚಿತ್ರದಲ್ಲಿ ಪೊಲೀಸ್‌ ಅಧಿಯಾಗಿ ನಟಿಸಲಿದ್ದಾರೆ. ಇತ್ತೀಚೆಗಷ್ಟೇ ಆ ಚಿತ್ರದ ಮುಹೂರ್ತವೂ ನೆರವೇರಿದೆ.

ಪಾಪ, ಪುಣ್ಯ, ಕರ್ಮದ ಕಥೆಯಲ್ಲಿ ರಿಷಿ; ರುದ್ರ ಗರುಡ ಪುರಾಣ ಚಿತ್ರಕ್ಕೆ ನೀನಾಸಂ ಸತೀಶ ಹಾರೈಕೆ
ಪಾಪ, ಪುಣ್ಯ, ಕರ್ಮದ ಕಥೆಯಲ್ಲಿ ರಿಷಿ; ರುದ್ರ ಗರುಡ ಪುರಾಣ ಚಿತ್ರಕ್ಕೆ ನೀನಾಸಂ ಸತೀಶ ಹಾರೈಕೆ

Rudra Garuda Purana: ಸ್ಯಾಂಡಲ್‌ವುಡ್‌ನ ಯುವ ನಟ ರಿಷಿ ತಮ್ಮ ನಟನೆ ಮೂಲಕವೇ ಎಲ್ಲರ ಗಮನ ಸೆಳೆದಿದ್ದಾರೆ. ಆಪರೇಷನ್‌ ಅಲಮೇಲಮ್ಮಮ್ಮ, ಕವಲುದಾರಿ ಹೀಗೆ ನಟಿಸಿದ್ದು ಕಡಿಮೆ ಸಿನಿಮಾಗಳಾದರೂ, ಆ ಚಿತ್ರಗಳಲ್ಲಿ ತಮ್ಮ ನಟನೆ ಎಂಥದ್ದು ಎಂಬುದನ್ನು ಈಗಾಗಲೇ ಅವರು ಸಾಬೀತುಪಡಿಸಿದ್ದಾರೆ. ಇನ್ನೇನು ಅವರ ಚೊಚ್ಚಲ ಬಹುಭಾಷಾ ವೆಬ್‌ಸಿರೀಸ್‌ ಶೈತಾನ್‌ ಸಹ ಬಿಡುಗಡೆಯ ಸನಿಹದಲ್ಲಿದೆ. ಹೀಗಿರುವಾಗಲೇ ಇವರ ಸಿನಿಮಾ ಬತ್ತಳಿಕೆಯನ್ನು ಇನ್ನೊಂದು ಚಿತ್ರ ಅಲಂಕರಿಸಿದೆ. ಆ ಚಿತ್ರದ ಹೆಸರೇ ರುದ್ರ ಗರುಡ ಪುರಾಣ.

ಕನ್ನಡದಲ್ಲಿ ಈಗಾಗಲೇ ಚಂಬಲ್, ಡಿಯರ್ ವಿಕ್ರಮ್ ಸಿನಿಮಾ ನಿರ್ದೇಶಿಸಿರುವ ಕೆ.ಎಸ್ ನಂದೀಶ್ ರುದ್ರ ಗರುಡ ಪುರಾಣ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಕಥೆ ಹಾಗೂ ಚಿತ್ರಕಥೆಯನ್ನು ನಿರ್ದೇಶಕರೇ ಬರೆದಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನ ಕಾರಂಜಿ ಆಂಜನೇಯ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ಮತ್ತು ಶೀರ್ಷಿಕೆ ಅನಾವರಣ ಕಾರ್ಯಕ್ರಮ ನೆರವೇರಿದೆ. ನಟ ನೀನಾಸಂ ಸತೀಶ್ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿ, ಶೀರ್ಷಿಕೆ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಇದನ್ನೂ ಓದಿ: ಶೈತಾನ್‌ನಲ್ಲಿ ಕಡು ಕ್ರೂರಿ ಈ ರಿಷಿ, ವೆಬ್ ಸಿರೀಸ್‌ ಲೋಕಕ್ಕೆ ಕವಲುದಾರಿ ನಟ ಎಂಟ್ರಿ; ಜೂನ್‌ 15ರಿಂದ ಈ ಒಟಿಟಿಯಲ್ಲಿ ಸ್ಟ್ರೀಮಿಂಗ್‌

ನಿರ್ದೇಶಕರು ಹೇಳುವುದೇನು?

ಚಿತ್ರದ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ನಂದೀಶ್‌, ರುದ್ರ ಗರುಡ ಪುರಾಣ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಇಂದಿನಿಂದ (ಜೂ. 3) ಚಿತ್ರೀಕರಣ ಆರಂಭವಾಗಲಿದೆ. ಸಿನಿಮಾ ಜನರ ಮೇಲೆ ಉತ್ತಮ ಪ್ರಭಾವ ಬೀರಬೇಕು. ಅಂತಹ ಸಿನಿಮಾವನ್ನು ಜನರಿಗೆ ಕೊಡುವ ಆಸೆ ನನ್ನದು. 2022 UPSC ಪರೀಕ್ಷೆಯಲ್ಲಿ 265ನೇ ರ‍್ಯಾಂಕ್‌ ಪಡೆದಿರುವ ಮೈಸೂರು ಮೂಲದ ಕೆ‌. ಸೌರಭ್ ಅವರು ಸಂದರ್ಶನವೊಂದರಲ್ಲಿ ನಾನು UPSC ಪಾಸ್‌ ಮಾಡಲು ನನಗೆ ಪುನೀತ್ ರಾಜಕುಮಾರ್ ಅಭಿನಯದ ಪೃಥ್ವಿ ಚಿತ್ರ ಪ್ರೇರಣೆ ಎಂದಿದ್ದರು. ಪೃಥ್ವಿ ಚಿತ್ರ ಸೌರಭ್ ಅವರಿಗಷ್ಟೆ ಅಲ್ಲ. ಸಾಕಷ್ಟು ಜನರಿಗೆ ಸ್ಪೂರ್ತಿಯಾಗಿದೆ‌. ನಾನು ಆ ಚಿತ್ರದ ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೆ.‌ ನಾವು ಮಾಡುವ ಚಿತ್ರ, ಈ ರೀತಿ ಜನರಿಗೆ ತಲುಪಿದಾಗ ಮುಂದೆ ಇಂತಹ ಹೆಚ್ಚುಹೆಚ್ಚು ಚಿತ್ರಗಳನ್ನು ಮಾಡುವ ಹುಮ್ಮಸ್ಸು ನಿರ್ದೇಶಕನಿಗೆ ಹೆಚ್ಚಾಗುತ್ತದೆ ಎಂದರು.

ಇದನ್ನೂ ಓದಿ: ಟಾಲಿವುಡ್‌ ನಟ ಚಿರಂಜೀವಿಗೆ ಕ್ಯಾನ್ಸರ್‌! ಭಯ ಏಕೆ, ನಾನು ಅದರಿಂದ ಹೊರ ಬಂದಿದ್ದೇನೆ; ಸ್ಪಷ್ಟನೆ ನೀಡಿದ ತೆಲುಗು ಮೆಗಾಸ್ಟಾರ್‌

ನಾಯಕ ರಿಷಿ ಮಾತು

ನಾನು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಹಿಂದೆ ಕವಲುದಾರಿ ಚಿತ್ರದಲ್ಲೂ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದೆ. ಹಾಗಾಗಿ, ಅದೇ ಜಾನರ್‌ನ ಇನ್ನೊಂದು ಚಿತ್ರ ಮಾಡುವುದಕ್ಕೆ ಇಷ್ಟವಿರಲಿಲ್ಲ. ಆದರೆ ನಂದೀಶ್ ಅವರು ಈ ಚಿತ್ರದ ಕಥೆ ಕೇಳಿದಾಗ ಬಹಳ ಇಷ್ಟವಾಯಿತು. ಎರಡೂ ಚಿತ್ರಗಳ ಮಧ್ಯೆ ಯಾವುದೇ ಹೋಲಿಕೆ ಇಲ್ಲ. ಇದರಲ್ಲಿ ನಾನು ಪೊಲೀಸ್ ಅಧಿಕಾರಿಯಾದರೂ ಬಹಳ ವಿಭಿನ್ನವಾಗಿದೆ. ಜೊತೆಗೆ ಕರ್ಮ, ಪಾಪ, ಪುಣ್ಯಕ್ಕೆ ಸಂಬಂಧಿಸಿದ ಗರುಡ ಪುರಾಣದ ಸಾಕಷ್ಟು ಅಂಶಗಳು ಈ ಚಿತ್ರದಲ್ಲಿದೆ. ಈ ಚಿತ್ರಕ್ಕೆ ಗರುಡ ಪುರಾಣ ಎಂದು ಹೆಸರಿಡಲು ನಿರ್ಧರಿಸಿದ್ದೆವು. ಚಿತ್ರದಲ್ಲಿ ನನ್ನ ಪಾತ್ರದ ಹೆಸರು ರುದ್ರ. ಹಾಗಾಗಿ ರುದ್ರ ಗರುಡ ಪುರಾಣ ಅಂತ ಶೀರ್ಷಿಕೆ ಇಡಲಾಗಿದೆ" ಎಂದರು.

ಉದ್ಯಮಿ ಲೋಹಿತ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ನಾಯಕಿ ಪ್ರಿಯಾಂಕ ಕುಮಾರ್ ರಿಷಿಗೆ ಜೋಡಿಯಾಗಲಿದ್ದಾರೆ. ನಟರಾದ ಶಿವರಾಜ್ ಕೆ ಆರ್ ಪೇಟೆ, ಪವನ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು. ಚಿತ್ರಕ್ಕೆ ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ.

IPL_Entry_Point