ಮೇಲಿನ ಭಗವಂತ ಎಲ್ಲದಕ್ಕೂ ಲೆಕ್ಕ ಇಟ್ಟಿದ್ದಾನೆ, ನಾವೆಲ್ಲ ತಗಡುಗಳು ಅಷ್ಟೇ; ದರ್ಶನ್‌ ಮಾತಿಗೆ ಟಾಂಗ್‌ ನೀಡಿದ ಉಮಾಪತಿ
ಕನ್ನಡ ಸುದ್ದಿ  /  ಮನರಂಜನೆ  /  ಮೇಲಿನ ಭಗವಂತ ಎಲ್ಲದಕ್ಕೂ ಲೆಕ್ಕ ಇಟ್ಟಿದ್ದಾನೆ, ನಾವೆಲ್ಲ ತಗಡುಗಳು ಅಷ್ಟೇ; ದರ್ಶನ್‌ ಮಾತಿಗೆ ಟಾಂಗ್‌ ನೀಡಿದ ಉಮಾಪತಿ

ಮೇಲಿನ ಭಗವಂತ ಎಲ್ಲದಕ್ಕೂ ಲೆಕ್ಕ ಇಟ್ಟಿದ್ದಾನೆ, ನಾವೆಲ್ಲ ತಗಡುಗಳು ಅಷ್ಟೇ; ದರ್ಶನ್‌ ಮಾತಿಗೆ ಟಾಂಗ್‌ ನೀಡಿದ ಉಮಾಪತಿ

Darshan Kaatera Movie: ಕಾಟೇರ ಸಿನಿಮಾದ ಕತೆ, ಟೈಟಲ್​ಗೆ ಸಂಬಂಧಿಸಿದಂತೆ ತಮ್ಮ ದರ್ಶನ್ ಆಡಿರುವ ಕಠು ಮಾತುಗಳ ಬಗ್ಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಪ್ರತಿಕ್ರಿಯಿಸಿದ್ದಾರೆ. ಮೇಲಿನ ಭಗವಂತ ಎಲ್ಲದಕ್ಕೂ ಲೆಕ್ಕ ಇಟ್ಟಿದ್ದಾನೆ, ನಾವೆಲ್ಲ ತಗಡುಗಳು ಅಷ್ಟೇ ಎಂದು ಮಾರ್ಮಿಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಕಾಟೇರ ನಟ ದರ್ಶನ್‌ ತಗಡು ಹೇಳಿಕೆಗೆ ಉಮಾಪತಿ ಪ್ರತಿಕ್ರಿಯೆ
ಕಾಟೇರ ನಟ ದರ್ಶನ್‌ ತಗಡು ಹೇಳಿಕೆಗೆ ಉಮಾಪತಿ ಪ್ರತಿಕ್ರಿಯೆ

ಬೆಂಗಳೂರು: ಕಾಟೇರ ಸಿನಿಮಾ 50 ದಿನ ಪೂರೈಸಿದ ಖುಷಿಯಲ್ಲಿ ಪ್ರಸನ್ನ ಚಿತ್ರಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ದರ್ಶನ್, ಮಾಜಿ ಗೆಳೆಯ ಉಮಾಪತಿ ಶ್ರೀನಿವಾಸ್​ ಅವರ ಬಗ್ಗೆ ಕೆಲ ಕಠು ಪದಗಳನ್ನು ಬಳಸಿದ್ದರು. ‘ಕಾಟೇರ’ ಸಿನಿಮಾದ ಕತೆಯನ್ನು ತಾವು ಮಾಡಿಸಿದ್ದಾಗಿ ಉಮಾಪತಿ ಶ್ರೀನಿವಾಸ್ ಈ ಹಿಂದೆ ಒಂದು‌ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಆದರೆ ಅದನ್ನು ಅಪಮಾನವೆಂಬಂತೆ ತೆಗೆದುಕೊಂಡಂತಿರುವ ದರ್ಶನ್, ಉಮಾಪತಿಯನ್ನುದ್ದೇಶಿಸಿ ‘ತಗಡು’ ಇನ್ನಿತರೆ ಕಠು ಪದಗಳನ್ನು ಬಳಸಿ ನಿಂದಿಸಿದ್ದಾರೆ. ಅಲ್ಲದೆ ‘ಕಾಟೇರ’ ಸಿನಿಮಾದ ಟೈಟಲ್ ರಿಜಿಸ್ಟರ್ ನಾನೇ ಮಾಡಿಸಿದ್ದಿನಿ , ಕಾಟೇರ ಟೈಟಲ್ ನಂದು ಎಂದು ಹೇಳಿದ್ದರು ಅದಕ್ಕೆ ಈಗ ಉಮಾಪತಿ ಶ್ರೀನಿವಾಸ್‌ ಪ್ರತಿಕ್ರಿಯೆ ನೀಡಿದ್ದಾರೆ.

ಫಿಲ್ಮ್‌ ಚೇಂಬರ್‌ನಲ್ಲಿ ಉತ್ತರ ದೊರಕುತ್ತದೆ: ನಿರ್ಮಾಪಕ ಉಮಾಪತಿ

‘ರಾಬರ್ಟ್’ ಸಿನಿಮಾ ಬಿಡುಗಡೆ ಆಗುವ ಮುಂಚೆಯೇ ‘ಕಾಟೇರ’ ಸಿನಿಮಾದ ಕತೆಯನ್ನು ನಾನು ಮಾಡಿಸಿದ್ದೆ. ಎಲ್ಲರೂ ಒಟ್ಟಿಗೆ ಸೇರಿ ಡಿಸ್ಕಸ್ ಮಾಡಿ ಕತೆ ಮಾಡಿದೆವು. ಆದರೆ ಅದರಲ್ಲಿ ಪ್ರಮುಖ ಪಾತ್ರ ನನ್ನದಾಗಿತ್ತು. ಈಗ ಆ ಸಿನಿಮಾದ ನಿರ್ದೇಶಕರು ಅವರ ಕಡೆ ಇದ್ದಾರೆ. ನಿರ್ಮಾಪಕರು ಸಿನಿಮಾ ನಿರ್ಮಾಣ ಮಾಡಿದ್ದಾರೆ, ಇವರು (ದರ್ಶನ್) ಆಕ್ಟ್ ಮಾಡಿದ್ದಾರೆ, ಸಿನಿಮಾ ಗೆದ್ದಿದೆ. ಆ ಖುಷಿಯಲ್ಲಿ ಏನೇನೋ ಮಾತನಾಡುತ್ತಿದ್ದಾರೆ. ನನ್ನ ಅಕ್ಕಪಕ್ಕ ಇರೋರು ನಾನು ಹೇಳಿದ್ದು ಸರಿ ಅಂತಾರೆ, ಹಾಗೆಯೇ ಅವರ ಅಕ್ಕ-ಪಕ್ಕ ಇರೋರು ಅವರು ಹೇಳಿದ್ದು ಸರಿ ಅಂತಾರೆ. ಮೇಲಿರುವ ಭಗವಂತನ ಬಳಿ ಎಲ್ಲದಕ್ಕೂ ಲೆಕ್ಕ ಇದೆ. ನಾವೆಲ್ಲ ತಗಡುಗಳು ಅಷ್ಟೆ’ ಎಂದಿದ್ದಾರೆ ಉಮಾಪತಿ.

ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತದೆ

‘ಅವರ (ದರ್ಶನ್) ಸರಿ ಸಮಾನಕ್ಕೆ ನಾನು ಬರೋಕಾಗಲ್ಲ. ನನಗೆ ಮಾಡೋ ಕೆಲಸ ಸಾಕಷ್ಟಿದೆ, ಅವರ ಮಟ್ಟಕ್ಕೆ ನಾನು ಇನ್ನೂ ಬೆಳೆದಿಲ್ಲ. ಬೆಳೆದಾಗ ಉತ್ತರ ಕೊಡೋಣ. ಖಂಡಿತ ಉತ್ತರ ಕೊಡ್ತೀನಿ, ಕಾಲಯ ತಸ್ಮೈ ನಮಃ, ಎಲ್ಲಾದಕ್ಕೂ ಉತ್ತರ ಕೊಡಲೇ ಬೇಕು ಎಂದೇನಿಲ್ಲ. ಅವರು ಗೆದ್ದಿದ್ದಾರೆ ಖುಷಿಯಾಗಿದ್ದಾರೆ. ಮಾತನಾಡಿದ್ದಾರೆ. ನಮ್ಮ ನಿರ್ಮಾಣ ಸಂಸ್ಥೆಗೆ ಒಂದು ಸಿನಿಮಾ ಮಾಡಿಕೊಟ್ಟಿದ್ದಾರೆ ಅದರ ಬಗ್ಗೆ ಗೌರವ ಇದೆ, ಅವರು ಮೇರು ನಟರು, ನಾನು ಸಾಮಾನ್ಯ ವ್ಯಕ್ತಿ, ಭೂಮಿ-ಆಕಾಶದ ಅಂತರ ಇದೆ. ಇರಲಿ ದೇವರು ಚೆನ್ನಾಗಿ ಇಟ್ಟಿರಲಿ. ಭಗವಂತ ಇಂದು ಅವರಿಗೆ ಕೊಟ್ಟಿದ್ದಾನೆ. ನಾಳೆ ನಮಗೆ ಕೊಡ್ತಾನೆ’ ಎಂದಿದ್ದಾರೆ ಉಮಾಪತಿ ಶ್ರೀನಿವಾಸ್.

ಹಿಂದೆಯೇ ಒಮ್ಮೆ ಮಾತನಾಡಿ ಸಿಕ್ಕಿ ಹಾಕಿಕೊಂಡಿದ್ದ ಎಂದು ದರ್ಶನ್ ಹೇಳಿದ ಮಾತಿಗೆ ಉಮಾಪತಿ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಯಾರು, ಯಾರಿಗೆ ಸಿಕ್ಕಿ ಬಿದ್ದಿದ್ದರು. ಏನು ಮಾಡಿಕೊಂಡರು. ನಾನು ತಪ್ಪು ಮಾಡಿದ್ದಾಗಿದ್ದರೆ ಲೀಗಲಿ ಮೂವ್ ಮಾಡಬಹುದಿತ್ತು, ಯಾಕೆ ಮಾಡಲಿಲ್ಲ’ ಎಂದು ಪ್ರಶ್ನೆ ಮಾಡಿದ ಉಮಾಪತಿ, ‘ಕಾಟೇರ’ ಸಿನಿಮಾದ ಕತೆ ಬಗ್ಗೆ ಮಾತನಾಡಿ, ‘ಬಾಯಲ್ಲಿ ಏನು ಬೇಕಾದರೂ ಹೇಳಬಹುದು. ಆದರೆ ಮನಸಾಕ್ಷಿಗೆ ಮೋಸ ಮಾಡಿಕೊಳ್ಳಲು ಸಾಧ್ಯವಿಲ್ಲ. ಕತೆ ಮಾಡಿಸಬೇಕಾದರೆ ಯಾರು ಮಾಡಿಸಿದ್ದು ಎಂಬುದು ಎಲ್ಲರಿಗೂ ಗೊತ್ತಿದೆ. ದೊಡ್ಡ ವ್ಯಕ್ತಿ ತರುಣ್​ ಸುಧೀರ್​ಗೆ ಸಹ ಗೊತ್ತಿದೆ’ ಎಂದಿದ್ದಾರೆ ಉಮಾಪತಿ ಶ್ರೀನಿವಾಸ್.

ವರದಿ: ಮನೋಜ್ ವಿಜಯೀಂದ್ರ

Whats_app_banner