Toxic Yash Look: ಯಶ್ ಹೊಸ ಟಾಕ್ಸಿಕ್ ಲುಕ್ ಫೋಟೋಗಳು ವೈರಲ್; ಹೊಸ ವಿಡಿಯೋದಲ್ಲಿ ರಾಕಿಂಗ್ ಸ್ಟಾರ್‌ನ ನಡಿಗೆಯ ಗತ್ತೆ ಬೇರೆ
Toxic Yash Look Video Viral: ಕೆಜಿಎಫ್ ಖ್ಯಾತಿಯ ರಾಕಿಂಗ್ ಸ್ಟಾರ್ ಯಶ್ ಅವರ ಹೊಸ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕಪ್ಪು ಪ್ಯಾಂಟ್ ಮತ್ತು ಕಂದುಬಣ್ಣದ ಹಾಫ್ ಟೀ ಶರ್ಟ್ ಧರಿಸಿ ಠೀವಿಯಲ್ಲಿ ನಡೆಯುವ ಯಶ್ ಲುಕ್‌ಗೆ ಅಭಿಮಾನಿಗಳು ವಾಹ್ ಎಂದಿದ್ದಾರೆ.

ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಈಗ ಯಶ್ ಅವರ ಹೊಸ ಲುಕ್‌ನ ಫೋಟೋಗಳು, ವಿಡಿಯೋಗಳು ವೈರಲ್ ಆಗುತ್ತಿವೆ. ಕೆಜಿಎಫ್‌ಗೆ ದಾಡಿ ಬ್ರಾಂಡ್ ಆದಂತೆ ಟಾಕ್ಸಿಕ್ ಸಿನಿಮಾಕ್ಕೆ ದಾಡಿ ಮತ್ತು ಹೇರ್‌ಕಟ್ ಬ್ರಾಂಡ್ ಆಗುವ ಎಲ್ಲಾ ಸೂಚನೆಗಳು ಇವೆ ಎಂದು ಯಶ್ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಈ ಭಾನುವಾರ ಯಶ್ ನಡಿಗೆಯ ಹೊಸ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗುತ್ತಿದೆ.
ಯಶ್ ವಿಡಿಯೋ ವೈರಲ್
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಯಶ್ ಅವರು ಗತ್ತಿನಿಂದ ನಡೆಯುವ ವಿಡಿಯೋವೊಂದು ವೈರಲ್ ಆಗಿದೆ. ರಾಕಿಂಗ್ ಸ್ಟಾರ್ ಯಶ್ ಅವರ ಫಿಟ್ನೆಸ್ ಮತ್ತು ನಡಿಗೆಯ ಗತ್ತಿಗೆ ಅಭಿಮಾನಿಗಳು ವಾಹ್ ಎಂದಿದ್ದಾರೆ. ಈ ವಿಡಿಯೋ ಬೆಂಗಳೂರಿನ ಲೀಲಾ ಪ್ಯಾಲೆಸ್ ಎಂದು ಕೆಲವರು ಗುರುತಿಸಿದ್ದಾರೆ. ಲೀಲಾ ಪ್ಯಾಲೇಸ್‌ನಲ್ಲಿ ಶೂಟಿಂಗ್ ನಡೆಯುತ್ತಿರುವುದೇ ಅಥವಾ ಇತರೆ ಬಿಸ್ನೆಸ್ ಭೇಟಿಗಾಗಿ ಭೇಟಿ ನೀಡಿದ್ದಾರೆಯೇ ಎಂದು ಖಚಿತವಾಗಿಲ್ಲ.
ಈ ವಿಡಿಯೋದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಕಪ್ಪು ಪ್ಯಾಂಟ್ ಮತ್ತು ಕಂದುಬಣ್ಣದ ಹಾಫ್ ಟೀ ಶರ್ಟ್ ಧರಿಸಿದ್ದಾರೆ. ಯಶ್ ಮುಂಭಾಗದಲ್ಲಿ ಕಟುಮಸ್ತಾದ ಬಾಡಿಗಾರ್ಡ್‌ವೊಬ್ಬರು ನಡೆದಾಡುತ್ತಿದ್ದಾರೆ. ಟಾಕ್ಸಿಕ್ ಸಿನಿಮಾದ ಶೂಟಿಂಗ್ ಆರಂಭವಾಗಿದೆಯೇ? ಕೆವಿಎನ್ ಪ್ರೊಡಕ್ಷನ್ ಸಂಸ್ಥೆಯು ಬೆಂಗಳೂರಿನಲ್ಲಿ ಹಾಕಿರುವ ಅದ್ಧೂರಿ ಸೆಟ್‌ನಲ್ಲಿ ಶೂಟಿಂಗ್ ನಡೆಯುತ್ತಿದೆಯೇ? ಇತ್ಯಾದಿ ಮಾಹಿತಿ ಸದ್ಯ ಲಭ್ಯವಿಲ್ಲ.
ಟಾಕ್ಸಿಕ್ ಸಿನಿಮಾದಲ್ಲಿ 4 ನಾಯಕಿಯರು
ಟಾಕ್ಸಿಕ್ ಸಿನಿಮಾದಲ್ಲಿ ಯಶ್‌ಗೆ ನಾಲ್ವರು ಹೀರೋಯಿನ್‌ಗಳು ಇರಲಿದ್ದಾರೆ ಎಂದು ಸುದ್ದಿಯಾಗಿದೆ. ಬಾಲಿವುಡ್ ನಟಿ ಕಿಯಾರ ಅಡ್ವಾಣಿ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಾರಾ ಸುತಾರಿಯಾ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಯಶ್ ಸಹೋದರಿ ಪಾತ್ರದಲ್ಲಿ ನಯನತಾರಾ ಕೂಡ ನಟಿಸುತ್ತಿದ್ದಾರೆ ಎನ್ನಲಾಗಿದೆ. ಒಟ್ಟು ನಾಲ್ಕು ಪ್ರಮುಖ ನಟಿಯರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ಟಾಕ್ಸಿಕ್ ಸಿನಿಮಾವನ್ನು ಗೀತು ಮೋಹನ್‌ದಾಸ್ ನಿರ್ದೇಶಿಸುತ್ತಿದ್ದಾರೆ. 2025ರ ಬೇಸಿಗೆಯಲ್ಲಿ ಟಾಕ್ಸಿಕ್ ರಿಲೀಸ್ ಮಾಡುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ. ಈ ಪ್ಯಾನ್ ಇಂಡಿಯಾ ಸಿನಿಮಾವು ನಿರೀಕ್ಷೆಯಂತೆ ಶೆಡ್ಯೂಲ್‌ನಲ್ಲಿ ಶೂಟಿಂಗ್ ನಡೆಸಿದರೆ ಮುಂದಿನ ವರ್ಷ ಯಶ್ ಅಭಿಮಾನಿಗಳಿಗೆ ಹಬ್ಬ ರೆಡಿಯಾಗಲಿದೆ.
ಆದರೆ, ಇತ್ತೀಚೆಗೆ ಕೆವಿಎನ್ ಸಂಸ್ಥೆಯ ಸಿನಿಮಾ ಶೂಟಿಂಗ್ ಸೆಟ್‌ಗೆ ಹೈಕೋರ್ಟ್ ನೋಟಿಸ್ ನೀಡಿತ್ತು. ಅರಣ್ಯ ಭೂಮಿಯಲ್ಲಿ ಈ ದೊಡ್ಡ ಸೆಟ್ ಹಾಕಿರುವುದು ಹೊಸ ವಿವಾದಕ್ಕೆ ಕಾರಣವಾಗಿತ್ತು. ವಕೀಲರಾದ ಜಿ. ಬಾಲಾಜಿ ಈ ಕುರಿತು ಪಿಐಎಲ್ ಸಲ್ಲಿಸಿದ್ದರು. ಈ ಪಿಐಎಲ್ ಆಧರಿಸಿ ಕರ್ನಾಟಕ ಹೈಕೋರ್ಟ್ ಕೆವಿಎನ್ ಸಂಸ್ಥೆ ಮತ್ತು ಎಚ್‌ಎಂಟಿ ಸಂಸ್ಥೆಗೆ ನೋಟಿಸ್ ಜಾರಿ ಮಾಡಿತ್ತು.

ವಿಭಾಗ