ಕನ್ನಡ ಸುದ್ದಿ  /  Entertainment  /  Sandalwood News Rocking Star Yash Toxic Movie Kvn Production Casting Call Apply For Acting Auditions Men Women Kids Pcp

Acting Auditions: ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಟಾಕ್ಸಿಕ್‌ ಸಿನಿಮಾಕ್ಕೆ ಕಲಾವಿದರು ಬೇಕಾಗಿದ್ದಾರೆ; ಆಸಕ್ತರು ತಕ್ಷಣ ಅರ್ಜಿ ಸಲ್ಲಿಸಿ

Yash Toxic Movie Acting Auditions: ಯಶ್‌ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್‌ ಸಿನಿಮಾಕ್ಕೆ ಕಲಾವಿದರು ಬೇಕಾಗಿದ್ದಾರೆ. ಈ ಸಿನಿಮಾಕ್ಕೆ 12-16 ವರ್ಷದ ಮಕ್ಕಳಿಂದ, 25-75 ವಯೋಮಿತಿಯ 23-65 ವರ್ಷ ವಯೋಮಿತಿಯ ಮಹಿಳೆಯರಿಂದ ಕೆವಿಎನ್‌ ಪ್ರೊಡಕ್ಷನ್‌ ಅರ್ಜಿ ಆಹ್ವಾನಿಸಿದೆ.

Acting Auditions: ಯಶ್‌ ಅಭಿನಯದ ಟಾಕ್ಸಿಕ್‌ ಸಿನಿಮಾಕ್ಕೆ ಕಲಾವಿದರ ಆಡಿಷನ್‌
Acting Auditions: ಯಶ್‌ ಅಭಿನಯದ ಟಾಕ್ಸಿಕ್‌ ಸಿನಿಮಾಕ್ಕೆ ಕಲಾವಿದರ ಆಡಿಷನ್‌

ಬೆಂಗಳೂರು: ಕೆಜಿಎಫ್‌ ನಟ ಯಶ್‌ ಅಭಿನಯದ ಟಾಕ್ಸಿಕ್‌ ಸಿನಿಮಾ ರಿಲೀಸ್‌ಗೆ ಇಡೀ ಜಗತ್ತೇ ಕಾಯುತ್ತಿದೆ. ಈಗಾಗಲೇ ಟಾಕ್ಸಿಕ್‌ ಸಿನಿಮಾದ ಶೂಟಿಂಗ್‌ ಆರಂಭವಾಗಿದೆ. ಇದೇ ಸಮಯದಲ್ಲಿ ಟಾಕ್ಸಿಕ್‌ ಚಿತ್ರತಂಡಕ್ಕೆ ಮಕ್ಕಳು, ಪುರುಷರು, ಮಹಿಳೆಯರು ಸೇರಿದಂತೆ ಕಲಾವಿದರಿಂದ ಕೆವಿಎನ್‌ ಪ್ರೊಡಕ್ಷನ್‌ ಅರ್ಜಿ ಆಹ್ವಾನಿಸಿದೆ. ಯಶ್‌ ಸಿನಿಮಾದಲ್ಲಿ ನಟಿಸಲು ಬಯಸುವವರು ಟಾಕ್ಸಿಕ್‌ ಸಿನಿಮಾದ ಅಡಿಷನ್‌ನಲ್ಲಿ ಹೇಗೆ ಪಾಲ್ಗೊಳ್ಳಬೇಕು? ವಯೋಮಿತಿ ಏನು? ಇತ್ಯಾದಿ ವಿವರವನ್ನು ಇಲ್ಲಿ ನೀಡಲಾಗಿದೆ.

ಟಾಕ್ಸಿಕ್‌ ಸಿನಿಮಾಕ್ಕೆ ಅಡಿಷನ್‌

ಗೀತು ಮೋಹನ್‌ದಾಸ್‌ ನಿರ್ದೇಶನದ ಟಾಕ್ಸಿಕ್‌ ಸಿನಿಮಾಕ್ಕೆ ಕಲಾವಿದರು ಬೇಕಾಗಿದ್ದಾರೆ ಎಂದು ಕೆವಿಎನ್‌ ಪ್ರೊಡಕ್ಷನ್‌ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ. ಆಸಕ್ತ ಪುರುಷರು, ಮಕ್ಕಳು ಮತ್ತು ಮಹಿಳೆಯರು ಅರ್ಜಿ ಸಲ್ಲಿಸಬಹುದು.

ಟಾಕ್ಸಿಕ್‌ ಸಿನಿಮಾ ಅಡಿಷನ್‌: ವಯೋಮಿತಿ ಎಷ್ಟು?

ಯಶ್‌ ನಾಯಕ ನಟನಾಗಿ ಅಭಿನಯಿಸುತ್ತಿರುವ ಟಾಕ್ಸಿಕ್‌ ಸಿನಿಮಾದಲ್ಲಿ 25-75 ವಯೋಮಿತಿಯ ಪುರುಷರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಸಿನಿಮಾದ ಅಡಿಷನ್‌ನಲ್ಲಿ ಪಾಲ್ಗೊಳ್ಳಲು 12-16 ವರ್ಷದ ಮಕ್ಕಳಿಂದಲೂ ಅರ್ಜಿ ಆಹ್ವಾನಿಸಿದೆ. 23-65 ವರ್ಷ ವಯೋಮಿತಿಯ ಮಹಿಳೆಯರೂ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಕಲಾವಿದರು ತಮ್ಮ ಪರಿಚಯದ ವಿಡಿಯೋವನ್ನು ಮತ್ತು ಇನ್ನೊಂದು ಒಂದು ನಿಮಿಷ ನಟನೆಯ ವಿಡಿಯೋವನ್ನು ವಾಟ್ಸಪ್‌ ಮಾಡಬೇಕು. ವಿಡಿಯೋಗಳನ್ನು ವಾಟ್ಸಪ್‌ ಮಾಡಬೇಕಾದ ಸಂಖ್ಯೆ: 8618706690

ಅರ್ಜಿ ಸಲ್ಲಿಸಲು ಕೊನೆಯ ದಿನ

ತಮ್ಮ ಪರಿಚಯದ ವಿಡಿಯೋ ಮತ್ತು ಆಕ್ಟಿಂಗ್‌ ವಿಡಿಯೋವನ್ನು ವಾಟ್ಸಪ್‌ ಮೂಲಕ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್‌ 25, 2024

ಟಾಕ್ಸಿಕ್‌ ಸಿನಿಮಾದ ಕುರಿತು

ಯಶ್‌ ನಟನೆಯ ಕೆಜಿಎಫ್‌ ಸಿನಿಮಾ ಜಗತ್ತಿನಾದ್ಯಂತ ಜನಪ್ರಿಯತೆ ಪಡೆದಿತ್ತು. ರಾಕಿಂಗ್‌ ಸ್ಟಾರ್‌ ನಟನೆಯ ಮುಂದಿನ ಸಿನಿಮಾ ಯಾವುದೆಂಬ ಕುತೂಹಲ ಎಲ್ಲರಲ್ಲಿಯೂ ಮನೆ ಮಾಡಿತ್ತು. ಡಿಸೆಂಬರ್‌ ತಿಂಗಳಲ್ಲಿ ಯಶ್‌ ತನ್ನ ಮುಂದಿನ ಸಿನಿಮಾದ ಕುರಿತು ಅಪ್‌ಡೇಟ್‌ ನೀಡಿದ್ದರು. ಗೀತು ಮೋಹನ್‌ದಾಸ್‌ ನಿರ್ದೇಶನದ ಟಾಕ್ಸಿಕ್‌ ಸಿನಿಮಾವನ್ನು ಘೋಷಿಸಲಾಗಿತ್ತು. ಈ ನೂರಾರು ಕೋಟಿ ಬಜೆಟ್‌ನ ಸಿನಿಮಾವನ್ನು ಕೆವಿಎನ್‌ ಪ್ರೊಡಕ್ಷನ್‌ ನಿರ್ಮಾಣ ಮಾಡುತ್ತಿದೆ.

ಟಾಕ್ಸಿಕ್‌ ಸಿನಿಮಾದ ಪಾತ್ರವರ್ಗ

ಯಶ್‌ ಸಿನಿಮಾದಲ್ಲಿ ಬಹುಭಾಷಾ ನಟರು ಇರಲಿದ್ದಾರೆ. ಬಾಲಿವುಡ್‌, ಟಾಲಿವುಡ್‌, ಕಾಲಿವುಡ್‌, ಮಾಲಿವುಡ್‌ನ ಹಲವು ನಟರು ಇರುವ ಸೂಚನೆಗಳಿವೆ. ವರದಿಗಳ ಪ್ರಕಾರ ಕಿಯಾರ ಅಡ್ವಾಣಿಯವರು ಯಶ್‌ ಜತೆ ನಟಿಸಲಿದ್ದಾರೆ. ಇದೀಗ ಟಾಕ್ಸಿಕ್‌ ಸಿನಿಮಾ ತಂಡವು ಕಲಾವಿದರ ಅಡಿಷನ್‌ ಆರಂಭಿಸಿದೆ. ಮುಂದಿನ ದಿನಗಳಲ್ಲಿ ಚಿತ್ರತಂಡದ ಕುರಿತು ಹೆಚ್ಚಿನ ವಿವರ ತಿಳಿದುಬರಲಿದೆ. ಮುಖ್ಯವಾಗಿ ಯಶ್‌ ಜತೆ ನಾಯಕಿಯಾಗಿ ಯಾರು ನಟಿಸಲಿದ್ದಾರೆ ಎಂಬ ಕುರಿತು ಎಲ್ಲರಲ್ಲಿಯೂ ಕುತೂಹಲವಿದೆ.

IPL_Entry_Point