ಕನ್ನಡ ಸುದ್ದಿ  /  ಮನರಂಜನೆ  /  ಯಶ್‌ ಟಾಕ್ಸಿಕ್‌ ಸಿನಿಮಾದಲ್ಲಿ ಬಾಲಿವುಡ್‌ ನಟಿ ಕರೀನಾ ಕಪೂರ್‌; ಗೀತು ಮೋಹನ್‌ ದಾಸ್‌ ಸಿನಿಮಾದ ಕುರಿತು ಹೆಚ್ಚಾದ ನಿರೀಕ್ಷೆ

ಯಶ್‌ ಟಾಕ್ಸಿಕ್‌ ಸಿನಿಮಾದಲ್ಲಿ ಬಾಲಿವುಡ್‌ ನಟಿ ಕರೀನಾ ಕಪೂರ್‌; ಗೀತು ಮೋಹನ್‌ ದಾಸ್‌ ಸಿನಿಮಾದ ಕುರಿತು ಹೆಚ್ಚಾದ ನಿರೀಕ್ಷೆ

ಸ್ಯಾಂಡಲ್‌ವುಡ್‌ ನಟ ಯಶ್‌ ನಟನೆಯ ಮುಂಬರುವ ಪ್ಯಾನ್‌ ಇಂಡಿಯಾ ಸಿನಿಮಾ ಟಾಕ್ಸಿಕ್‌ನಲ್ಲಿ ಬಾಲಿವುಡ್‌ನ ಸ್ಟಾರ್‌ ನಟಿಯೊಬ್ಬರು ನಟಿಸುವ ಕುರಿತು ವದಂತಿಗಳಿವೆ. ಇದೀಗ ಫಿಲ್ಮ್‌ಫೇರ್‌ ವೆಬ್‌ಸೈಟ್‌ "ಬಾಲಿವುಡ್‌ನ ಕರೀನಾ ಕಪೂರ್‌ ಯಶ್‌ ಸಿನಿಮಾದಲ್ಲಿ ನಟಿಸಲಿದ್ದಾರೆ" ಎಂದು ಎಕ್ಸ್‌ಕ್ಲೂಸಿವ್‌ ವರದಿ ಪ್ರಕಟಿಸಿದೆ.

ಯಶ್‌ ಟಾಕ್ಸಿಕ್‌ ಸಿನಿಮಾದಲ್ಲಿ ಬಾಲಿವುಡ್‌ ನಟಿ ಕರೀನಾ ಕಪೂರ್‌
ಯಶ್‌ ಟಾಕ್ಸಿಕ್‌ ಸಿನಿಮಾದಲ್ಲಿ ಬಾಲಿವುಡ್‌ ನಟಿ ಕರೀನಾ ಕಪೂರ್‌

ಕೆಜಿಎಫ್‌ ಸಿನಿಮಾದ ಮೂಲಕ ದೇಶವಿದೇಶಗಳಲ್ಲಿ ಅಭಿಮಾನಿಗಳನ್ನು ಗಳಿಸಿರುವ ಸ್ಯಾಂಡಲ್‌ವುಡ್‌ ನಟ ಯಶ್‌ ಅವರ ಮುಂಬರುವ ಟಾಕ್ಸಿಕ್‌ ಸಿನಿಮಾದ ಕುರಿತು ನಿರೀಕ್ಷೆಗಳು ಹೆಚ್ಚಾಗಿವೆ. ಕೆಜಿಎಫ್‌ ಬಳಿಕದ ಟಾಕ್ಸಿಕ್‌ ಸಿನಿಮಾದಲ್ಲಿ ಯಶ್‌ ಹೊರತುಪಡಿಸಿ ಬೇರೆ ಯಾವ ಕಲಾವಿದರು ನಟಿಸಲಿದ್ದಾರೆ ಎಂಬ ಕುರಿತು ವಿವರ ಲಭ್ಯವಿಲ್ಲ. ಆದರೆ, ಈ ಸಿನಿಮಾದಲ್ಲಿ ಬಾಲಿವುಡ್‌ನ ಸ್ಟಾರ್‌ ನಟಿಯೊಬ್ಬರು ನಟಿಸಲಿದ್ದಾರೆ ಎಂದು ವದಂತಿಗಳು ಇದ್ದವು. ಇದೀಗ ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾದಲ್ಲಿ ಬಾಲಿವುಡ್‌ನ ಕರೀನಾ ಕಪೂರ್‌ ನಟಿಸಲಿದ್ದಾರೆ ಎಂದು ಸುದ್ದಿಯಾಗಿದೆ.

ಟ್ರೆಂಡಿಂಗ್​ ಸುದ್ದಿ

ಮಲಯಳ ಚಿತ್ರರಂಗದ ನಿರ್ದೇಶಕಿ ಗೀತು ಮೋಹನ್‌ ದಾಸ್‌ ಜತೆ ಯಶ್‌ ತನ್ನ ಮುಂದಿನ ಪ್ರಾಜೆಕ್ಟ್‌ ನಡೆಸುತ್ತಿದ್ದಾರೆ. ಟಾಕ್ಸಿಕ್‌ ಸಿನಿಮಾ ಟೈಟಲ್‌ ಇತ್ತೀಚೆಗೆ ಬಿಡುಗಡೆಯಾಗಿತ್ತು. ಇದೀಗ ಈ ಚಿತ್ರದಲ್ಲಿ ಕರೀನಾ ಕಪೂರ್‌ ನಟಿಸಲಿದ್ದಾರೆ ಎಂದು ಸುದ್ದಿಯಾಗಿದೆ. "ನಮ್ಮ ಮೂಲಗಳ ಪ್ರಕಾರ ಕರೀನಾ ಕಪೂರ್‌ ಅವರು ಯಶ್‌ ನಟನೆಯ ಟಾಕ್ಸಿಕ್‌ ತಂಡ ಸೇರಲಿದ್ದಾರೆ. ಈ ಚಿತ್ರದ ಮೂಲಕ ಕರೀನಾ ಕಪೂರ್‌ ಕೆಜಿಎಫ್‌ ನಟನ ಜತೆ ಮೊದಲ ಸಿನಿಮಾ ಮಾಡಲಿದ್ದಾರೆ. ಈ ಕುರಿತು ಸಿನಿಮಾ ತಂಡ ಇನ್ನು ಅಧಿಕೃತವಾಗಿ ಘೋಷನೇ ಮಾಡಲಿಲ್ಲ. ಈ ಕುರಿತು ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ" ಎಂದು ಫಿಲ್ಮ್‌ಫೇರ್‌.ಕಾಂ ವರದಿ ಮಾಡಿದೆ.

ಕರೀನಾ ಕಪೂರ್‌ ಅವರು ಈ ಹಿಂದೆ ಜಾನೆ ಜಾನ್‌ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಬಂಕಿಂಗ್‌ಹ್ಯಾಮ್‌ ಮರ್ಡರ್ಸ್‌ ಸಿನಿಮಾವು ಬಿಎಫ್‌ಐ ಲಂಡನ್‌ ಫಿಲ್ಮ್‌ ಫೆಸ್ಟಿವಲ್‌ ಮತ್ತು ಜಿಯೋ ಮಾಮಿ ಮುಂಬೈ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಂಡು ಬಿಡುಗಡೆಯಾಗಲು ಕಾಯುತ್ತಿದೆ. ಈ ಸಿನಿಮಾದಲ್ಲಿ ಅಜಯ್‌ ದೇವಗನ್‌, ಕೃತಿ ಸನನ್‌, ತಬು ಕೂಡ ನಟಿಸಿದ್ದಾರೆ.

ಫಿಲ್ಮ್‌ಫೇರ್‌ ವರದಿ ಪ್ರಕಾರ ಟಾಕ್ಸಿಕ್‌ ಚಿತ್ರತಂಡ ಈಗಾಗಲೇ ಕರೀನಾ ಕಪೂರ್‌ ಅವರ ಜತೆ ಮಾತುಕತೆ ನಡೆಸಿದೆ. ಮುಂದಿನ ದಿನಗಳಲ್ಲಿ ಈ ಕುರಿತು ಅಧಿಕೃತ ಘೊಷಣೆಯಾಗಲಿದೆ. ಟಾಕ್ಸಿಕ್‌ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ಕರೀನಾ ಕಪೂರ್‌ ನಟಿಸಲಿದ್ದಾರೆ ಎಂದು ವರದಿ ತಿಳಿಸಿದೆ.

ಸ್ಯಾಂಡಲ್‌ವುಡ್‌ಗೆ ಸೀಮಿತವಾಗಿದ್ದ ಯಶ್‌ ಕೆಜಿಎಫ್‌ ಚಿತ್ರದ ಮೂಲಕ ಜಗತ್ತಿನ ಗಮನ ಸೆಳೆದಿದ್ದರು. ಕೆಜಿಎಫ್‌ ಎರಡು ಸರಣಿಗಳು ಬಿಡುಗಡೆಯಾದ ಬಳಿಕ ಇವರ ಮುಂದಿನ ಸಿನಿಮಾ ಯಾವುದೆಂದು ಎಲ್ಲರಲ್ಲೂ ನಿರೀಕ್ಷೆ ಹೆಚ್ಚಾಗಿತ್ತು. ಇತ್ತೀಚೆಗೆ ಯಶ್‌ ತನ್ನ 19ನೇ ಸಿನಿಮಾದ ಹೆಸರನ್ನು ರಿವೀಲ್‌ ಮಾಡಿದ್ದರು. ತನ್ನ ಮುಂದಿನ ಸಿನಿಮಾ ಟಾಕ್ಸಿಕ್‌ ಎಂದಿದ್ದರು. ಇದೇ ಸಮಯದಲ್ಲಿ ಟಾಕ್ಸಿಕ್‌ ಸಿನಿಮಾದ ಟೈಟಲ್‌ ವಿಡಿಯೋ ಬಿಡುಗಡೆ ಮಾಡಲಾಗಿತ್ತು.

ಟಾಕ್ಸಿಕ್‌ ಸಿನಿಮಾ ಇಂಗ್ಲಿಷ್‌, ಕನ್ನಡ, ತೆಲುಗು, ಮಲಯಾಳಂ, ಹಿಂದಿ, ತಮಿಳು ಸೇರಿದಂತೆ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇಂಗ್ಲಿಷ್‌ನಲ್ಲೂ ಬಿಡುಗಡೆಯಾಗುವುದರಿಂದ ಯಶ್‌ ಜಗತ್ತಿನ ಗಮನ ಸೆಳೆಯುವ ಸೂಚನೆಯಿದೆ. ಈ ಸಿನಿಮಾದ ಶೂಟಿಂಗ್‌ ಮತ್ತು ಇತರೆ ಕೆಲಸಗಳಲ್ಲಿ ಯಶ್‌ ತುಂಬಾ ಬ್ಯುಸಿಯಾಗಿದ್ದಾರೆ. ಇದೇ ಜನವರಿ 8 ರಂದು ಇವರ ಹುಟ್ಟುಹಬ್ಬ ಇರುವುದರಿಂದ ಆ ದಿನವೂ ಇವರು ಫ್ರೀ ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ತನ್ನ ಹುಟ್ಟುಹಬ್ಬದಂದು ಅಭಿಮಾನಿಗಳನ್ನು ಖುದ್ದಾಗಿ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

IPL_Entry_Point