ಸಾಮಾಜಿಕ ಕಳಕಳಿಯ ವಿಕಾಸ ಪರ್ವ ಚಿತ್ರಕ್ಕೆ ಪ್ರಣಯರಾಜ ಶ್ರೀನಾಥ್‌ ಸಾಥ್‌; ಟ್ರೇಲರ್‌ ಬಿಡುಗಡೆ ಮಾಡಿ ಹರಸಿದ ಹಿರಿಯ ನಟ-sandalwood news rohit nagesh acted vikasa parva movie trailer released by veteran actor pranaya raja srinath mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಸಾಮಾಜಿಕ ಕಳಕಳಿಯ ವಿಕಾಸ ಪರ್ವ ಚಿತ್ರಕ್ಕೆ ಪ್ರಣಯರಾಜ ಶ್ರೀನಾಥ್‌ ಸಾಥ್‌; ಟ್ರೇಲರ್‌ ಬಿಡುಗಡೆ ಮಾಡಿ ಹರಸಿದ ಹಿರಿಯ ನಟ

ಸಾಮಾಜಿಕ ಕಳಕಳಿಯ ವಿಕಾಸ ಪರ್ವ ಚಿತ್ರಕ್ಕೆ ಪ್ರಣಯರಾಜ ಶ್ರೀನಾಥ್‌ ಸಾಥ್‌; ಟ್ರೇಲರ್‌ ಬಿಡುಗಡೆ ಮಾಡಿ ಹರಸಿದ ಹಿರಿಯ ನಟ

ಸಾಮಾಜಿಕ ಕಳಕಳಿಯ ಜತೆಗೆ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ಹೊತ್ತು ತರುತ್ತಿರುವ ವಿಕಾಸ ಪರ್ವ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಹಿರಿಯ ನಟ ಶ್ರೀನಾಥ್ ವಿಕಾಸ ಪರ್ವ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ಸಾಮಾಜಿಕ ಕಳಕಳಿಯ ವಿಕಾಸ ಪರ್ವ ಚಿತ್ರಕ್ಕೆ ಪ್ರಣಯರಾಜ ಶ್ರೀನಾಥ್‌ ಸಾಥ್‌; ಟ್ರೇಲರ್‌ ಬಿಡುಗಡೆ ಮಾಡಿ ಹರಸಿದ ಹಿರಿಯ ನಟ
ಸಾಮಾಜಿಕ ಕಳಕಳಿಯ ವಿಕಾಸ ಪರ್ವ ಚಿತ್ರಕ್ಕೆ ಪ್ರಣಯರಾಜ ಶ್ರೀನಾಥ್‌ ಸಾಥ್‌; ಟ್ರೇಲರ್‌ ಬಿಡುಗಡೆ ಮಾಡಿ ಹರಸಿದ ಹಿರಿಯ ನಟ

Vikasa Parva Kannada Movie: ಸ್ಯಾಂಡಲ್‌ವುಡ್‌ನ ಹಿರಿಯ ನಟ ಪ್ರಣಯರಾಜ ಶ್ರೀನಾಥ್‌, ನಟನೆಯಿಂದ ದೂರವೇ ಉಳಿದಿದ್ದಾರೆ. ಆದರೆ, ಬಣ್ಣದ ಲೋಕದ ನಂಟಿನಿಂದ ದೂರವಾಗಿಲ್ಲ. ಇದೀಗ ಹೊಸಬರ ಸಿನಿಮಾವೊಂದಕ್ಕೆ ಹರಸಿ ಹಾರೈಸಿದ್ದಾರೆ. ಅಂದರೆ, ಸಾಮಾಜಿಕ ಕಳಕಳಿಯ ಜೊತೆಗೆ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ಹೊತ್ತು ತರುತ್ತಿರುವ ವಿಕಾಸ ಪರ್ವ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಹಿರಿಯ ನಟ ಶ್ರೀನಾಥ್ ವಿಕಾಸ ಪರ್ವ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ಸಿನಿಮಾ ಬಗ್ಗೆ ಮಾಹಿತಿ ನೀಡುವ ಚಿತ್ರದ ಕಾರ್ಯಕಾರಿ ನಿರ್ಮಾಪಕ ವಿಶೃತ್ ನಾಯಕ್ ಮಾತನಾಡಿ, ವಿಕಾಸ ಪರ್ವ ಉತ್ತಮ ಸಂದೇಶವಿರುವ ಚಿತ್ರ. ನಾನೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದೇನೆ. ಕಿರುತೆರೆಯಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ರೋಹಿತ್ ನಾಗೇಶ್ ಈ ಚಿತ್ರದ ಪ್ರಮುಖಪಾತ್ರದಲ್ಲಿ ಅಭಿನಯಿಸಿದ್ದಾರೆ. ಸ್ವಾತಿ, ನಿಶಿತಾ ಗೌಡ, ಅಶ್ವಿನ್ ಹಾಸನ್, ಬಿಲ್ವ, ಬಲ ರಾಜವಾಡಿ, ಕುರಿಬಾಂಡ್ ರಂಗ, ಅಭಯ್ ಸುವರ್ಣ ಮುಂತಾದವರು ತಾರಾಬಳಗದಲ್ಲಿದ್ದಾರೆ ಎಂದರು.

ಚಿತ್ರತಂಡದ ಸಹಕಾರದಿಂದ ವಿಕಾಸ ಪರ್ವ ಚಿತ್ರ ಚೆನ್ನಾಗಿ ಮೂಡಿಬಂದಿದೆ. ನಮ್ಮ ಚಿತ್ರಕ್ಕೆ ಎಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಅನ್ಬು ಅರಸ್. ಅಂದಹಾಗೆ ಮೈಂಡ್ ಥಾಟ್ಸ್ ಮೀಡಿಯಾ ಬ್ಯಾನರ್‌ನಲ್ಲಿ ಸಮೀರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಅನ್ಬು ಅರಸ್ ನಿರ್ದೇಶಿಸಿದ್ದಾರೆ. ಈಗಾಗಲೇ ಸೆನ್ಸಾರ್ ಕೂಡ ಮುಗಿದು ಚಿತ್ರ ಬಿಡುಗಡೆಯ ಹೊಸ್ತಿಲಿನಲ್ಲಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ.

ವಿಶೃತ್ ನಾಯಕ್ ಅವರು ಒಳ್ಳೆಯ ಕಥೆ ಮಾಡಿದ್ದಾರೆ ಎಂದು ಮಾತನಾಡಿದ ನಟ ರೋಹಿತ್ ನಾಗೇಶ್, ಈ ಚಿತ್ರದ ಕುರಿತು ಒಂದು ಮಾತು ಹೇಳಬಹುದು. ಚಿತ್ರ ನೋಡುವವರಿಗೆ ಬೇಸರವಾಗಲ್ಲ. ನೋಡಿದ ಮೇಲೆ ಯಾರು ನಮಗೆ ಬಯ್ಯುವುದಿಲ್ಲ. ಅಂತಹ ಉತ್ತಮ ಸಿನಿಮಾವಿದು. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಶ್ರೀನಾಥ್ ಅವರಿಗೆ ಹಾಗೂ ಆಗಮಿಸಿರುವ ಎಲ್ಲಾ ಅತಿಥಿಗಳಿಗೆ ಧನ್ಯವಾದ ತಿಳಿಸಿದರು ರೋಹಿತ್.

ಛಾಯಾಗ್ರಹಣದ ಬಗ್ಗೆ ಛಾಯಾಗ್ರಾಹಕ ನವೀನ್ ಸುವರ್ಣ ಹಾಗೂ ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಎಪಿಓ ಮಾಹಿತಿ ನೀಡಿದರು. ನಟಿ ಸ್ವಾತಿ, ನಟರಾದ ಅಶ್ವಿನ್ ಹಾಸನ್, ತಮ್ಮ ಪಾತ್ರದ ಕುರಿತು ಮಾತನಾಡಿದರು. ಕನ್ನಡವೇ ಸತ್ಯ ರಂಗಣ್ಣ, ವೀರಕಪುತ್ರ ಶ್ರೀನಿವಾಸ್ ಮುಂತಾದ ಗಣ್ಯರು ಸಮಾರಂಭದಲ್ಲಿದ್ದರು. ಈ ಸಂದರ್ಭದಲ್ಲಿ ಚಿತ್ರದ ಹಾಡುಗಳನ್ನು ಪ್ರದರ್ಶಿಸಲಾಯಿತು. ಹಾಡು ಬರೆದಿರುವ ಡಾ. ವಿ. ನಾಗೇಂದ್ರಪ್ರಸಾದ್ ಹಾಗೂ ಆಡಿಯೋ ಹಕ್ಕು ಪಡೆದಿರುವ ಲಹರಿ ಸಂಸ್ಥೆಯ ವೇಲು ಸಮಾರಂಭದಲ್ಲಿ ಉಪಸ್ಥಿತರಿದ್ದರು.