ಕನ್ನಡ ಸುದ್ದಿ  /  Entertainment  /  Sandalwood News Rohit Starrer Raktaksha Title Track Lyrical Song Released Sung By Vasishta Simha Mnk

Raktaksha: ರಕ್ತಾಕ್ಷ ಚಿತ್ರಕ್ಕೆ ಸಿಕ್ತು ಸಿಂಹ ಕಂಠ; ರಾಯಚೂರು ಹುಡುಗನ ಚಿತ್ರಕ್ಕೆ ಸಾಥ್‌ ನೀಡಿದ ವಸಿಷ್ಠ

ಬಿಸಿಲು ನಾಡು ರಾಯಚೂರಿನ ಹುಡುಗ ರೋಹಿತ್‌ ಈಗ ಚಂದನವನಕ್ಕೆ ನಾಯಕನಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಇವರ ಈ ಚೊಚ್ಚಲ ಪ್ರಯತ್ನಕ್ಕೆ ನಟ ವಸಿಷ್ಠ ಸಿಂಹ ಸಾಥ್‌ ನೀಡಿದ್ದಾರೆ.

ರಕ್ತಾಕ್ಷ ಚಿತ್ರಕ್ಕೆ ಸಿಕ್ತು ಸಿಂಹ ಕಂಠ; ರಾಯಚೂರು ಹುಡುಗನ ಚಿತ್ರಕ್ಕೆ ಸಾಥ್‌ ನೀಡಿದ ವಸಿಷ್ಠ
ರಕ್ತಾಕ್ಷ ಚಿತ್ರಕ್ಕೆ ಸಿಕ್ತು ಸಿಂಹ ಕಂಠ; ರಾಯಚೂರು ಹುಡುಗನ ಚಿತ್ರಕ್ಕೆ ಸಾಥ್‌ ನೀಡಿದ ವಸಿಷ್ಠ

Raktaksha: ಮಾಡೆಲಿಂಗ್‌ ಕ್ಷೇತ್ರದಿಂದ ಸಿನಿಮಾರಂಗಕ್ಕೆ ಬಂದು ನೆಲೆ ಕಂಡುಕೊಂಡವರು ಸಾಕಷ್ಟು ಮಂದಿಯಿದ್ದಾರೆ. ಈಗ ಆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ ನಟ ರೋಹಿತ್ (Rohit).‌ ಮೂಲತಃ ಬಿಸಿಲು ನಾಡು ರಾಯಚೂರಿನ (Raichuru) ಈ ಹುಡುಗ ಈಗ ಚಂದನವನದಲ್ಲಿ ನಟನಾಗಿ ಗುರುತಿಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ.

ಕಳೆದ ಆರು ವರ್ಷದಿಂದ ಮಾಡೆಲಿಂಗ್‌ನಲ್ಲಿ ಗುರುತಿಸಿಕೊಂಡಿರುವ ರೋಹಿತ್, ಈಗ ಸಾಯಿ ಪ್ರೊಡಕ್ಷನ್ ಹೋಮ್‌ ಬ್ಯಾನರ್‌ ಅಡಿಯಲ್ಲಿ ಚಿತ್ರ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ವಾಸುದೇವ ಎಸ್.ಎನ್ ಎಂಬುವವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಇವರಿಗಿದು ಚೊಚ್ಚಲ ನಿರ್ದೇಶನದ ಸಿನಿಮಾ. ಚಿತ್ರಕ್ಕೆ ರಕ್ತಾಕ್ಷ ಎಂಬ ಶೀರ್ಷಿಕೆ ಇಡಲಾಗಿದ್ದು, ಚಿತ್ರದ ಮೊದಲ ಹಾಡು ಬಿಡುಗಡೆ ಆಗಿದೆ.

ಇದನ್ನೂ ಓದಿ: Pinki Elli: ವಿದೇಶಿ ಸಿನಿಮೋತ್ಸವಗಳಲ್ಲಿ ಮಿಂಚಿದ್ದ ನೈಜ ಘಟನೆ ಆಧರಿತ ಪಿಂಕಿ ಎಲ್ಲಿ ಚಿತ್ರವೀಗ ಬೆಳ್ಳಿತೆರೆಗೆ

ವಿಶೇಷ ಏನೆಂದರೆ ಈ ಸಿನಿಮಾದ ಹಾಡಿಗೆ ಧ್ವನಿಯಾದವರು, ನಟ ವಸಿಷ್ಠ ಸಿಂಹ. ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಧೀರೇಂದರ್ ದಾಸ್ ದಾಸ್ಮೋಡ ಸಂಗೀತದ ನೀಡಿದ್ದಾರೆ. ಹೀಗೆ ಹಾಡು ಬಿಡುಗಡೆಯಾದ ಬಗ್ಗೆ ಮತ್ತು ಸಿನಿಮಾ ಮೂಡಿಬಂದ ಬಗ್ಗೆ ನಟ ಮತ್ತು ನಿರ್ಮಾಪಕರಾಗಿರುವ ರೋಹಿತ್‌ ಮಾಹಿತಿ ನೀಡಿದ್ದಾರೆ.

"ಚಿಕ್ಕಂದಿನಿಂದಲೂ ಕಲಾವಿದನಾಗಬೇಕು ಎಂಬ ಕನಸಿತ್ತು. ಈಗ ಅದು ನನಸಾಗಿದೆ. 3 ತಿಂಗಳಲ್ಲಿ ಲುಕ್, ಫಿಸಿಕ್ ಬದಲಾಯಿಸಿದ್ದೇನೆ. ನಾನು ರೀಲ್ ಹೀರೋ ಆಗಲು ಬಂದಿಲ್ಲ. ರಿಯಲ್ ಹೀರೋ ಆಗಲು ಬಂದಿದ್ದೇನೆ. ನನ್ನ ಕೆಲಸದ ಮುಖಾಂತರ ನಾನು ಎಲ್ಲರಿಗೂ ಪರಿಚಯವಾಗಬೇಕು. ಉತ್ತರಕರ್ನಾಟಕದಲ್ಲಿಯೂ ತುಂಬಾ ಪ್ರತಿಭೆಗಳಿದ್ದಾರೆ ಇದ್ದಾರೆ. ಅವರಿಗೆಲ್ಲಾ ನನ್ನ ಕೈಯಲ್ಲಾದ ಅವಕಾಶ ಕೊಡುತ್ತೇನೆ. ಈ ಚಿತ್ರದಲ್ಲಿ ಸತ್ಯಘಟನೆಗಳನ್ನೂ ಉಲ್ಲೇಖ ಮಾಡಲಾಗಿದೆ" ಎಂದರು.

ಇದನ್ನೂ ಓದಿ: ಅತ್ತೆಯ ಬರ್ತ್‌ಡೇ ಆಚರಿಸಿದ ಅಳಿಯ ವಸಿಷ್ಠ ಸಿಂಹ; ಖುಷಿ, ನಗುವಿನ ಅಲೆಯಲ್ಲಿ ತೇಲಿದ ಹರಿಪ್ರಿಯಾ

ನನ್ನ ಮೊದಲ ಸಿನಿಮಾ, ರಕ್ತಾಕ್ಷ ಅಂದ ತಕ್ಷಣ ಮಾಸ್ ಟೈಟಲ್ ಎನಿಸುತ್ತದೆ. ಸಸ್ಪೆನ್ಸ್ ಕ್ರೈಮ್ ಥ್ರಿಲ್ಲರ್ ಎಂದು ಹೇಳ್ತಿದ್ದಾರೆ. ಮಾಸ್ ಆಗಿಯೂ ಸಸ್ಪೆನ್ಸ್ ಥ್ರಿಲ್ಲರ್ ಆಗಿಯೂ ಎಲ್ಲಾ ರೀತಿಯೂ ಇದೆ. ಸಾಂಗ್ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಎಂದರು ನಿರ್ದೇಶಕ ವಾಸುದೇವ ಎಸ್.ಎನ್.

ಇನ್ನು ಕೆಜಿಎಫ್‌ ಸಿನಿಮಾ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ ಅನುಭವ ಇರುವ ನಟಿ ರೂಪಾ ರಾಯಪ್ಪ ಈ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ. "ಈ ಚಿತ್ರದಲ್ಲಿ ನಾನು ಪ್ರಮುಖವಾದ ಪಾತ್ರವೊಂದನ್ನು ಮಾಡಿದ್ದೇನೆ. ಈ ಸಿನಿಮಾ ನಾನು ಆಯ್ಕೆ ಮಾಡಲು ಕಾರಣ ರೋಹಿತ್ ಅವರಲ್ಲಿನ ಪ್ರಾಮಾಣಿಕತೆ. ರೋಹಿತ್ ಎಲ್ಲಾ ಕಲಾವಿದರನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಟೈಟಲ್ ಟ್ರ್ಯಾಕ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ಪ್ರತಿಯೊಬ್ಬರೂ ಸಿನಿಮಾ ಬೆಂಬಲಿಸಿ ಎಂದರು.

ಇದನ್ನೂ ಓದಿ: ಸೋಷಿಯಲ್‌ ಮೀಡಿಯಾದಲ್ಲಿ ಪತಿ ಫೋಟೋ ಹಾಕಲು ಮಹಾಲಕ್ಷ್ಮೀ ಹಿಂದೇಟು; ಪತ್ನಿಯ ವರ್ತನೆಗೆ ರವೀಂದ್ರ ಚಂದ್ರಶೇಖರನ್‌ ಕಳವಳ

ರಾಯಚೂರು ಜಿಲ್ಲೆಯ ಮುದ್ಗಲ್ ಎಂಬ ಪುಟ್ಟ ಪಟ್ಟಣದ ರೋಹಿತ್, ಮಾಡಲಿಂಗ್ ಜತೆಗೆ ಎರಡು ವರ್ಷಗಳ ರಂಗಭೂಮಿ ಅನುಭವ ಪಡೆದಿದ್ದಾರೆ. ಈ ಹಿಂದೆ ಎಬಿ ಪಾಸಿಟಿವ್ ಸಿನಿಮಾದಲ್ಲಿ ಖಳನಾಯಕನಾಗಿ ರೋಹಿತ್‌ ಅಭಿನಯಿಸಿದ್ದರು. ಇದೀಗ ರಕ್ತಾಕ್ಷ ಸಿನಿಮಾ ಮೂಲಕ ಹೀರೋ ಆಗಿ ಪದಾರ್ಪಣೆ ಮಾಡಿದ್ದಾರೆ. ರೂಪಾ ರಾಯಪ್ಪ ಜತೆಗೆ ಅರ್ಚನಾ ಕೊಟ್ಟಿಗೆ, ಪ್ರಮೋದ್ ಶೆಟ್ಟಿ, ರಚನಾ ದಶರತ್, ಗುರುದೇವ್ ನಾಗರಾಜ, ವಿಲಾಸ್ ಕುಲಕರ್ಣಿ, ಶಿವಮೊಗ್ಗ ರಾಮಣ್ಣ ಚಿತ್ರದಲ್ಲಿ ನಟಿಸಿದ್ದಾರೆ.

IPL_Entry_Point