ರಾನಿ ಸಿನಿಮಾ ನಾಯಕ ಕಿರಣ್‌ ರಾಜ್‌ ಕಾರು ಅಪಘಾತ, ಎದೆ ಭಾಗಕ್ಕೆ ಪೆಟ್ಟು; ಚಿಕಿತ್ಸೆ ನೀಡುತ್ತಿರುವ ವೈದ್ಯರು-sandalwood news ronny kannada movie actor kiran raj met an accident in bengaluru kannada film industry rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ರಾನಿ ಸಿನಿಮಾ ನಾಯಕ ಕಿರಣ್‌ ರಾಜ್‌ ಕಾರು ಅಪಘಾತ, ಎದೆ ಭಾಗಕ್ಕೆ ಪೆಟ್ಟು; ಚಿಕಿತ್ಸೆ ನೀಡುತ್ತಿರುವ ವೈದ್ಯರು

ರಾನಿ ಸಿನಿಮಾ ನಾಯಕ ಕಿರಣ್‌ ರಾಜ್‌ ಕಾರು ಅಪಘಾತ, ಎದೆ ಭಾಗಕ್ಕೆ ಪೆಟ್ಟು; ಚಿಕಿತ್ಸೆ ನೀಡುತ್ತಿರುವ ವೈದ್ಯರು

ರಾನಿ ಸಿನಿಮಾ ನಟ ಕಿರಣ್‌ ರಾಜ್‌ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದೆ. ಕಿರಣ್‌ ರಾಜ್‌ ಅಭಿನಯದ ರಾನಿ ಸಿನಿಮಾ ನಾಳೆ(ಸೆಪ್ಟೆಂಬರ್‌ 12) ತೆರೆ ಕಾಣುತ್ತಿದೆ. ಸಿನಿಮಾ ಬಿಡುಗಡೆಗೆ ಒಂದು ದಿನ ಇರುವಾಗಲೇ ಈ ಘಟನೆ ಸಂಭವಿಸಿದೆ. ಕಿರಣ್‌ ರಾಜ್‌ ಎದೆ ಭಾಗಕ್ಕೆ ಪೆಟ್ಟು ಬಿದಿದ್ದು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

ರಾನಿ ಸಿನಿಮಾ ನಾಯಕ ಕಿರಣ್‌ ರಾಜ್‌ ಕಾರು ಅಪಘಾತ, ಎದೆ ಭಾಗಕ್ಕೆ ಪೆಟ್ಟು; ಚಿಕಿತ್ಸೆ ನೀಡುತ್ತಿರುವ ವೈದ್ಯರು
ರಾನಿ ಸಿನಿಮಾ ನಾಯಕ ಕಿರಣ್‌ ರಾಜ್‌ ಕಾರು ಅಪಘಾತ, ಎದೆ ಭಾಗಕ್ಕೆ ಪೆಟ್ಟು; ಚಿಕಿತ್ಸೆ ನೀಡುತ್ತಿರುವ ವೈದ್ಯರು (PC: @iamyogitharj)

ಕೆಲವು ದಿನಗಳ ಹಿಂದಷ್ಟೇ ನಿರ್ದೇಶಕ ನಾಗಶೇಖರ್‌ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿತ್ತು. ಈ ಸುದ್ದಿ ಹಸಿಯಾಗಿರುವಾಗಲೇ ಇದೀಗ ನಟ ಕಿರಣ್‌ ರಾಜ್‌ ಕಾರು ಕೂಡಾ ಅಪಘಾತಕ್ಕೆ ಒಳಗಾಗಿದೆ. ಘಟನೆಯಲ್ಲಿ ನಟ ಕಿರಣ್‌ ರಾಜ್‌ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ರಾನಿ ಬಿಡುಗಡೆಗೆ ಒಂದು ದಿನ ಇರುವಾಗಲೇ ಸಂಭವಿಸಿದ ಅಪಘಾತ

ಕಿರಣ್‌ ರಾಜ್‌ ಅಭಿನಯದ ರಾನಿ ಸಿನಿಮಾ ಸೆಪ್ಟೆಂಬರ್‌ 12, ಗುರುವಾರ ತೆರೆ ಕಾಣುತ್ತಿದೆ. ಸದ್ಯಕ್ಕೆ ಚಿತ್ರತಂಡ ಪ್ರಮೋಷನ್‌ ಕೆಲಸದಲ್ಲಿ ಬ್ಯುಸಿ ಇದೆ. ಕಿರಣ್‌ ರಾಜ್‌ ಗುಟ್ಟಯ್ಯನ ಪಾಳ್ಯ ಬಳಿ ಇರುವ ನಿರಾಶ್ರಿತರ ಕೇಂದ್ರಕ್ಕೆ ಹೋಗುವಾಗ ಈ ಅಪಘಾತ ನಡೆದಿದ್ದು ಅಪಘಾತದಲ್ಲಿ ಕಿರಣ್‌ ರಾಜ್‌ ಕಾರು ಸಂಪೂರ್ಣ ಜಖಂಗೊಂಡಿದೆ. ಕಿರಣ್‌ ರಾಜ್‌, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಕಿರಣ್‌ ರಾಜ್‌ ಎದೆ ಭಾಗಕ್ಕೆ ಪೆಟ್ಟು ಬಿದ್ದಿದ್ದು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಕಿರಣ್‌ ರಾಜ್‌ ಜೊತೆ ಕಾರಿನಲ್ಲಿ ಎಕ್ಸಿಕ್ಯೂಟಿವ್‌ ಪ್ರೊಡ್ಯೂಸರ್‌ ಗಿರೀಶ್‌ ಕೂಡಾ ಪ್ರಯಾಣಿಸುತ್ತಿದ್ದು ಅವರು ಸೀಟ್‌ ಬೆಲ್ಟ್‌ ಧರಿಸಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.‌

ಕಿರಣ್‌ ರಾಜ್‌ ಪ್ರತಿ ವಾರವೂ ನಿರಾಶ್ರಿತರ ಶಿಬಿರಕ್ಕೆ ಹೋಗಿ ಅನಾಥ ಮಕ್ಕಳಿಗೆ ಊಟ ನೀಡಿ ಬರುರ್ತಿದ್ದರು. ಗುರುವಾರ ಕಿರಣ್‌ ರಾಜ್‌ ಅಭಿನಯದ ರಾನಿ ಸಿನಿಮಾ ರಿಲೀಸ್‌ ಆಗುತ್ತಿದೆ. ಈ ಸಂದರ್ಭ ಇಂದು (ಸೆಪ್ಟೆಂಬರ್‌ 11) ಊಟ ಕೊಡಲು ಹೋಗುವಾಗ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕಾರಿನ ಮುಂಭಾಗ ನಜ್ಜು ಗುಜ್ಜಾಗಿದೆ. ರಸ್ತೆಗೆ ಅಡ್ಡಲಾಗಿ ಬಂದ ಮುಂಗುಸಿಯನ್ನು ತಪ್ಪಿಸಲು ಹೋಗಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಕಿರುತೆರೆ ಮೂಲಕ ನಟನೆಗೆ ಎಂಟ್ರಿ ಕೊಟ್ಟಿದ್ದ ಕಿರಣ್‌ ರಾಜ್

ಕಿರಣ್‌ ರಾಜ್‌ ಹಿಂದಿ ಕಿರುತೆರೆ ಮೂಲಕ ನಟನೆಗೆ ಎಂಟ್ರಿ ಕೊಟ್ಟರು. ಹೀರೋಸ್‌, ಲವ್‌ ಬೈ ಚಾನ್ಸ್‌, ಯೇ ರಿಶ್ತಾ ಕ್ಯಾ ಕೆಹತಾ ಹೈ, ತು ಆಶಿಕಿ ಧಾರಾವಾಹಿಗಳಲ್ಲಿ ನಟಿಸಿದ ಕಿರಣ್‌ ರಾಜ್‌ ನಂತರ ಬೆಂಗಳೂರಿಗೆ ಬಂದು ಲೈಫ್‌ ಸೂಪರ್‌ ಗುರು ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ದೇವತೆ, ಗುಂಡ್ಯಾನ ಹೆಂಡತಿ ಧಾರಾವಾಹಿಗಳಲ್ಲಿ ನಟಿಸಿದ ನಂತರ ಕಿನ್ನರಿ ಧಾರಾವಾಹಿಗೆ ನಾಯಕನಾಗಿ ಆಯ್ಕೆ ಆದರು. ನಕುಲ್‌ ಪಾತ್ರ ಅವರಿಗೆ ಒಳ್ಳೆ ಹೆಸರು ತಂದು ನೀಡಿತು. ಇದಾದ ನಂತರ ಸಿನಿಮಾಗಳಲ್ಲಿ ನಟಿಸಿದ್ದ ಕಿರಣ್‌ ರಾಜ್‌ ಕನ್ನಡತಿ ಧಾರಾವಾಹಿಯಲ್ಲಿ ಹರ್ಷ ಎಂಬ ಪಾತ್ರದಲ್ಲಿ ಮಿಂಚಿದ್ದರು.

ರಾನಿ ಚಿತ್ರವನ್ನು ಸ್ಟಾರ್‌ ಕ್ರಿಯೇಷನ್ಸ್ ಲಾಂಛನದಲ್ಲಿ ಚಂದ್ರಕಾಂತ್ ಪೂಜಾರಿ ಮತ್ತು ಉಮೇಶ್ ಹೆಗಡೆ ನಿರ್ಮಿಸಿದ್ದು ಗುರುತೇಜ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಸಮೀಕ್ಷಾ, ಅಪೂರ್ವ, ರಾಧ್ಯ, ರವಿಶಂಕರ್, ಮೈಕೋ ನಾಗರಾಜ್ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ.

mysore-dasara_Entry_Point