ಕನ್ನಡ ಸುದ್ದಿ  /  Entertainment  /  Sandalwood News Sa Hi Pra Shaale Kasaragodu Kantara Fame Actor Ranjan Acts Scam 1770 Movie Trailer Released Mnk

ಹಗರಣದ ಹಿಂದೆ ಬಿದ್ದ ದಡ್ಡ ಪ್ರವೀಣ; ಶಿಕ್ಷಣ ವ್ಯವಸ್ಥೆಯ ವಾಸ್ತವ ತೆರೆದಿಡುವ SCAM 1770 ಚಿತ್ರದಲ್ಲೀತ ಅತೀ ಬುದ್ಧಿವಂತ!

ಮನುಷ್ಯನ ಜೀವನದಲ್ಲಿ ಶಿಕ್ಷಣ ಬಹುಮುಖ್ಯ. ಹೀಗೆ ಎಲ್ಲವನ್ನೂ ಕಲಿತು, ಅದೇ ಜ್ಞಾನದಿಂದಲೇ ಇತ್ತೀಚಿನ ಆಧುನಿಕ ಯುಗದಲ್ಲಿ ಹಗರಣಗಳ ಸರಮಾಲೆಗಳೇ ಆಗುತ್ತಿವೆ. ಈ ಹಗರಣಗಳ ಕಥೆಯನ್ನೇ ಸಿನಿಮಾ ಮೂಲಕ ಹೇಳಲು ಬರುತ್ತಿದೆ ಸ್ಕ್ಯಾಮ್‌ 1770 ಸಿನಿಮಾ.

ಹಗರಣದ ಹಿಂದೆ ಬಿದ್ದ ದಡ್ಡ ಪ್ರವೀಣ; ಶಿಕ್ಷಣ ವ್ಯವಸ್ಥೆಯ ವಾಸ್ತವ ತೆರೆದಿಡುವ ‘ಸ್ಕ್ಯಾಮ್‌ 1770’ ಚಿತ್ರದಲ್ಲೀತ ಅತೀ ಬುದ್ಧಿವಂತ!
ಹಗರಣದ ಹಿಂದೆ ಬಿದ್ದ ದಡ್ಡ ಪ್ರವೀಣ; ಶಿಕ್ಷಣ ವ್ಯವಸ್ಥೆಯ ವಾಸ್ತವ ತೆರೆದಿಡುವ ‘ಸ್ಕ್ಯಾಮ್‌ 1770’ ಚಿತ್ರದಲ್ಲೀತ ಅತೀ ಬುದ್ಧಿವಂತ!

Scam 1770 Trailer: ಸ ಹಿ ಪ್ರಾ ಶಾಲೆ ಕಾಸರಗೋಡು ಚಿತ್ರದ ಮೂಲಕ ದಡ್ಡ ಪ್ರವೀಣ ಎಂದೇ ಖ್ಯಾತಿ ಪಡೆದ ರಂಜಿತ್‌, ಅದಾದ ಮೇಲೂ ಕಾಂತಾರ ಸೇರಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಇದೇ ರಂಜಿತ್‌, ಪ್ರಧಾನ ಪಾತ್ರದಲ್ಲಿ ನಟಿಸಿರುವ ಹೊಸ ಸಿನಿಮಾವೊಂದರ ಟ್ರೇಲರ್‌ ಬಿಡುಗಡೆ ಆಗಿದೆ. ಆ ಚಿತ್ರಕ್ಕೆ ಸ್ಕ್ಯಾಮ್‌ 1770 ಎಂದು ಶೀರ್ಷಿಕೆ ಇಡಲಾಗಿದೆ. ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ಬಗ್ಗೆ ಈ ಸಿನಿಮಾ ಮಾತನಾಡಲಿದೆ.

ಮನುಷ್ಯನ ಜೀವನದಲ್ಲಿ ಶಿಕ್ಷಣ ಬಹುಮುಖ್ಯ. ಹೀಗೆ ಎಲ್ಲವನ್ನೂ ಕಲಿತು, ಅದೇ ಜ್ಞಾನದಿಂದಲೇ ಇತ್ತೀಚಿನ ಆಧುನಿಕ ಯುಗದಲ್ಲಿ ಹಗರಣಗಳ ಸರಮಾಲೆಗಳೇ ಆಗುತ್ತಿವೆ. ಈ ಹಗರಣಗಳ ಕಥೆಯನ್ನೇ ಸಿನಿಮಾ ಮೂಲಕ ಹೇಳಲು ಬರುತ್ತಿದೆ ಸ್ಕ್ಯಾಮ್‌ 1770 ಸಿನಿಮಾ. ಶಿಕ್ಷಣ ಕ್ಷೇತ್ರದಲ್ಲಿ ನಡೆಯುವ ಹಗರಣಗಳೇ ಈ ಸಿನಿಮಾದ ಹೈಲೈಟ್‌. ಇದೀಗ ಈ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಪ್ರತಿನಿತ್ಯ ಮನೆ ಮನೆಗೂ ಪೇಪರ್‌ ಹಾಕಿ, ಶಾಲೆ ಕಲಿಯುತ್ತಿರುವ ಆದರ್ಶ್‌ ಈ ಸಿನಿಮಾದ ಟ್ರೇಲರ್‌ ರಿಲೀಸ್‌ ಮಾಡಿದ್ದಾರೆ.

ಕನ್ನಡದಲ್ಲಿ ಸೂಕ್ಷ್ಮಸಂವೇದನಾ ಶೈಲಿಯ ಆಕ್ಟ್‌ 1978 ಮತ್ತು 19 20 21 ಸಿನಿಮಾಗಳನ್ನು ನಿರ್ಮಿಸಿ ಹಲವು ಪ್ರಶಸ್ತಿಗಳನ್ನೂ ಪಡೆದಿರುವ ನಿರ್ಮಾಪಕ ದೇವರಾಜ್‌ ಆರ್‌, ಈಗ ಸ್ಕ್ಯಾಮ್‌ 1770 ಸಿನಿಮಾವನ್ನು ಡಿ ಕ್ರಿಯೆಷನ್ಸ್‌ ಬ್ಯಾನರ್‌ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ವಿಕಾಸ್ ಪುಷ್ಪಗಿರಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದ್ದು, ಚಿತ್ರದ ಪ್ರಧಾನ ಪಾತ್ರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ಖ್ಯಾತಿಯ ದಡ್ಡ ಪ್ರವೀಣ ಅಲಿಯಾಸ್‌ ರಂಜನ್ ನಟಿಸಿದ್ದಾರೆ.

ಸದ್ಯದ ಶಿಕ್ಷಣ ವ್ಯವಸ್ಥೆಯ ಕುರಿತು ನಾವು ಈ ಸಿನಿಮಾ ಮಾಡಿದ್ದೇವೆ. ಇಂದಿನ ದಿನಗಳಲ್ಲಿ ಶಿಕ್ಷಣರಂಗ ದುಡ್ಡು ಮಾಡುವ ಕ್ಷೇತ್ರವಾಗಿ ಬೆಳೆದು ನಿಂತಿದೆ. ವ್ಯವಹಾರ ಆಗಿಹೋಗಿದೆ‌. ಶಿಕ್ಷಣ ಎಲ್ಲರಿಗೂ ಸಿಗಬೇಕು. ಜೀವನಕ್ಕೆ ವಿದ್ಯಾಭ್ಯಾಸ ತುಂಬ ಮುಖ್ಯ. ಹಣವಂತರಿಗಷ್ಟೇ ಇದು ನಿಲುಕುತ್ತಿದೆ. ಬಡವರು ಮಧ್ಯಮ ವರ್ಗದವರಿಗೆ ಗಗನ ಕುಸುಮವೇ ಆಗಿದೆ. ದುಬಾರಿಯೂ ಆಗಿದೆ. ಸದ್ಯ ಸಮಾಜದಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿನ ನ್ಯೂನ್ಯತೆಗಳ ಬಗ್ಗೆಯೇ ಈ ಸಿನಿಮಾ ಮಾಡಿದ್ದೇವೆ. ಮುಂದಿನ ತಿಂಗಳ ಏಪ್ರಿಲ್ 12ರಂದು ಸಿನಿಮಾ ತೆರೆಗೆ ಬರಲಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಮಿಸ್‌ ಮಾಡದೇ ನೋಡಬೇಕಿರುವ ಚಿತ್ರವಿದು ಎಂಬುದು ನಿರ್ದೇಶಕ ವಿಕಾಸ್ ಪುಷ್ಪಗಿರಿ ಮಾತು.

ಅದೇ ರೀತಿ ಸಿನಿಮಾ ಬಗ್ಗೆ ಮಾತನಾಡಿದ ರಂಜನ್‌, ಕಾಂತಾರ ಸಿನಿಮಾ ಶೂಟಿಂಗ್‌ ಸಮಯದಲ್ಲಿ ಈ ಸಿನಿಮಾ ತಂಡದವರು ನನ್ನನ್ನು ಹುಡುಕುತ್ತಿದ್ದರು. ಫೋನ್‌ ಮಾಡಿದರೂ, ನಾನು ಅವರಿಗೆ ಸಿಕ್ಕಿರಲಿಲ್ಲ. ಕಾಂತಾರ ಸೆಟ್‌ನಲ್ಲಿ ಫೋನ್‌ ಬಳಕೆಗೆ ಅವಕಾಶ ಇರುತ್ತಿರಲಿಲ್ಲ. ಸ್ನೇಹಿತನನೊಬ್ಬನಿಂದ ಈ ವಿಚಾರ ತಿಳಿಯಿತು. ಸ ಹಿ ಪ್ರಾ ಶಾಲೆ ಕಾಸರಗೋಡು ಚಿತ್ರದಲ್ಲಿ ದಡ್ಡ ಪ್ರವೀಣನಾಗಿದ್ದೆ. ಸ್ಕ್ಯಾಮ್‌ 1770 ಸಿನಿಮಾದಲ್ಲಿ ಜಾಣನ ಪಾತ್ರ ನೀಡಿದ್ದಾರೆ ಎಂದರು.

ನಾಯಕಿಯಾಗಿ ನಿಶ್ಚಿತಾ ನಟಿಸಿದ್ದಾರೆ. ಇನ್ನುಳಿದಂರೆ ಚಿತ್ರದಲ್ಲಿ ಹರಿಣಿ, ನಾರಾಯಣಸ್ವಾಮಿ, ನಟನ ಪ್ರಶಾಂತ್, ರಾಘು ಶಿವಮೊಗ್ಗ, ಸಂಗೀತ ನಿರ್ದೇಶಕ ಸತೀಶ್ ಆರ್ಯನ್ ಹಾಗೂ ನಿರ್ದೇಶಕರೊಂದಿಗೆ ಚಿತ್ರಕಥೆ ಬರೆದಿರುವ ಶಂಕರ್ ರಾಮನ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು. ಟ್ರೇಲರ್‌ ಮೂಲಕ ಪ್ರಚಾರ ಕಣಕ್ಕೆ ಇಳಿದಿರುವ ಈ ಸಿನಿಮಾ ಇನ್ನೇನು ಶೀಘ್ರದಲ್ಲಿ ಚಿತ್ರಮಂದಿರಕ್ಕೆ ಬರಲಿದೆ. ಈ ಸಿನಿಮಾದ ಜತೆಗೆ ಇನ್ನೂ ಹಲವು ಚಿತ್ರಗಳ ಆಫರ್‌ಗಳೂ ರಂಜನ್‌ಗೆ ಸಿಕ್ಕಿದ್ದು, ಶೂಟಿಂಗ್‌ನಲ್ಲೂ ಭಾಗವಹಿಸಿದ್ದಾರೆ.

IPL_Entry_Point