ವೇಶ್ಯೆಯಿಂದಲೇ ಸೆಟ್ಟೇರಲಿಲ್ಲ ವಿಷ್ಣುವರ್ಧನ್‌ 100ನೇ ಸಿನಿಮಾ ಹಗಲುಗನಸು! ಸುಹಾಸಿನಿಯೂ ಒಪ್ಪಲಿಲ್ಲ, ರೇವತಿಯೂ ತಿರುಗಿ ನೋಡಲಿಲ್ಲ
ಕನ್ನಡ ಸುದ್ದಿ  /  ಮನರಂಜನೆ  /  ವೇಶ್ಯೆಯಿಂದಲೇ ಸೆಟ್ಟೇರಲಿಲ್ಲ ವಿಷ್ಣುವರ್ಧನ್‌ 100ನೇ ಸಿನಿಮಾ ಹಗಲುಗನಸು! ಸುಹಾಸಿನಿಯೂ ಒಪ್ಪಲಿಲ್ಲ, ರೇವತಿಯೂ ತಿರುಗಿ ನೋಡಲಿಲ್ಲ

ವೇಶ್ಯೆಯಿಂದಲೇ ಸೆಟ್ಟೇರಲಿಲ್ಲ ವಿಷ್ಣುವರ್ಧನ್‌ 100ನೇ ಸಿನಿಮಾ ಹಗಲುಗನಸು! ಸುಹಾಸಿನಿಯೂ ಒಪ್ಪಲಿಲ್ಲ, ರೇವತಿಯೂ ತಿರುಗಿ ನೋಡಲಿಲ್ಲ

ಸಾಹಸ ಸಿಂಹ ವಿಷ್ಣುವರ್ಧನ್‌ ಅವರ ನೂರನೇ ಸಿನಿಮಾ ಹಗಲುಗನಸು ಸೆಟ್ಟೇರಲಿಲ್ಲ ಏಕೆ? ಬಂಧನ ಬಳಿಕ ವಿಷ್ಣು ಸುಹಾಸಿನಿಯನ್ನು ಮತ್ತೆ ಈ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಕರೆತರಲು ಮುಂದಾಗಿದ್ದ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಅವರ ಪ್ಲಾನ್‌ ಪ್ಲಾಪ್‌ ಯಾಕಾಯ್ತು? ಇಲ್ಲಿದೆ ನೋಡಿ ವಿವರ.

ವೇಶ್ಯೆಯಿಂದಲೇ ಸೆಟ್ಟೇರಲಿಲ್ಲ ವಿಷ್ಣುವರ್ಧನ್‌ 100ನೇ ಸಿನಿಮಾ ಹಗಲುಗನಸು! ಸುಹಾಸಿನಿಯೂ ಒಪ್ಪಲಿಲ್ಲ, ರೇವತಿಯೂ ತಿರುಗಿ ನೋಡಲಿಲ್ಲ
ವೇಶ್ಯೆಯಿಂದಲೇ ಸೆಟ್ಟೇರಲಿಲ್ಲ ವಿಷ್ಣುವರ್ಧನ್‌ 100ನೇ ಸಿನಿಮಾ ಹಗಲುಗನಸು! ಸುಹಾಸಿನಿಯೂ ಒಪ್ಪಲಿಲ್ಲ, ರೇವತಿಯೂ ತಿರುಗಿ ನೋಡಲಿಲ್ಲ

Vishnuvardhan: ಡಾ. ವಿಷ್ಣುವರ್ಧನ್‌ ಮತ್ತು ಸುಹಾಸಿನಿ ಕಾಂಬಿನೇಷನ್‌ನಲ್ಲಿ 1984ರಲ್ಲಿ ತೆರೆಕಂಡಿದ್ದ ಸಿನಿಮಾ ಬಂಧನ. ಉಷಾ ನವರತ್ನರಾಂ ಅವರ ಕಾದಂಬರಿ ಆಧಾರಿಸಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು ಎಸ್.ವಿ.ರಾಜೇಂದ್ರಸಿಂಗ್ ಬಾಬು. ನಿರ್ದೇಶನದ ಜತೆಗೆ ಸ್ವತಃ ಅವರೇ ಬಂಧನ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಆಗಿನ ಕಾಲದಲ್ಲಿ ದೊಡ್ಡ ಮಟ್ಟದ ಹಿಟ್‌ ಕಂಡ ಸಿನಿಮಾಗಳಲ್ಲೊಂದಾಗಿತ್ತು ಬಂಧನ. ಈ ಒಂದು ಸಿನಿಮಾದಿಂದಲೇ ವಿಷ್ಣುವರ್ಧನ್‌ ಮತ್ತು ಸುಹಾಸಿನಿ ಜೋಡಿ ಎಲ್ಲರಿಗೂ ಇಷ್ಟವಾಯ್ತು. ಹೀಗಿರುವಾಗಲೇ ಇದೇ ಜೋಡಿಯನ್ನು ಹಾಕಿ ಇನ್ನೊಂದು ಸಿನಿಮಾ ಕೈಗೆತ್ತಿಕೊಂಡಿದ್ದ ರಾಜೇಂದ್ರ ಸಿಂಗ್‌ಗೆ ಅದ್ಯಾಕೋ ಸೆಟ್ಟೇರಲೇ ಇಲ್ಲ! ಕನ್ನಡ ಮಾಣಿಕ್ಯ ಯೂಟ್ಯೂಬ್‌ನಲ್ಲಿ ಈ ಕುರಿತ ವಿವರ ಬಿತ್ತರವಾಗಿದೆ.

ಈಡೇರದ ಆ ಕನಸು…

ಬಂಧನ ಹಿಟ್‌ ಆದ ಬಳಿಕ ಇದೇ ಜೋಡಿಯನ್ನಿಟ್ಟುಕೊಂಡು ಇನ್ನೊಂದು ಸಿನಿಮಾ ಮಾಡಬೇಕು ಎಂದು ನಿರ್ಧರಿಸಿದ್ದರು ರಾಜೇಂದ್ರ ಸಿಂಗ್‌ ಬಾಬು. ಇವರಿಬ್ಬರ ಹ್ಯಾಪಿ ಎಂಡಿಂಗ್‌ ಸಿನಿಮಾ ಕೊಡಿ ಎಂದು ಸಿನಿಮಾ ಪ್ರಿಯರಿಂದಲೂ ಮನವಿಗಳು ಹೋಗಿದ್ದವು. ಹೀಗಿರುವಾಗ, ಈ ಜೋಡಿಗೆ ಯಾವ ರೀತಿಯ ಕಥೆ ಮಾಡಬೇಕು ಎಂದು ಹುಡುಕಾಟದಲ್ಲಿದ್ದಾಗ, ವಿಷ್ಣುವರ್ಧನ್‌ ಅವರ ಸುಪ್ರಭಾತ ಸಿನಿಮಾ ಬಿಡುಗಡೆ ಆಗುತ್ತೆ. ಈ ಥರದ ಕಥೆಯನ್ನೇ ಮಾಡಬೇಕೆಂದುಕೊಂಡಿದ್ದ ರಾಜೇಂದ್ರ ಸಿಂಗ್‌ಗೆ ಮತ್ತೆ ನಿರಾಸೆಯಾಗುತ್ತೆ.

ಹಗಲುಗನಸು ಚಿತ್ರಕ್ಕೆ ಆರಂಭದಲ್ಲಿಯೇ ವಿಘ್ನ

ಛೇ ನಾನು ಮಾಡಬೇಕು ಅಂದುಕೊಂಡಿದ್ದ ಪರಿಕಲ್ಪನೆಯ ಸಿನಿಮಾ ಸುಪ್ರಭಾತದ ಮೂಲಕ ತೆರೆಕಂಡಿದೆಯಲ್ಲ. ಅದೂ ವಿಷ್ಣು ಮತ್ತು ಸುಹಾಸಿನಿ ಜೋಡಿಯದ್ದು ಎಂದು ರಾಜೇಂದ್ರ ಸಿಂಗ್‌ ನಿರಾಸೆಯಾಗುತ್ತಾರೆ. ಈ ಸಿನಿಮಾ ಬಳಿಕ ವಿಷ್ಣುವರ್ಧನ್‌ ಮತ್ತು ಸುಹಾಸಿನಿ ಅವರ ಬಳಿ ಹೋಗಿ, ನಮ್ಮ ಚಿತ್ರಕ್ಕೆ ನಿಮ್ಮ ಕಾಲ್‌ಶೀಟ್‌ ಮೀಸಲಿಡಿ. ನಿಮ್ಮಿಬ್ಬರ ಇನ್ನೊಂದು ಸಿನಿಮಾ ಮಾಡುವ ಆಸೆಯಿದೆ ಎನ್ಜುತ್ತಾರೆ. ಅದಕ್ಕೆ ಇಬ್ಬರಿಂದಲೂ ಒಪ್ಪಿಗೆ ಸಿಕ್ಕಿತ್ತು. ಹೀಗಿರುವಾಗ ಉಷಾ ನವರತ್ನರಾಂ ಅವರು ಬರೆದ ಹಗಲುಗನಸು ಸಿನಿಮಾ ಮಾಡುವ ಆಲೋಚನೆ ಬರುತ್ತೆ ರಾಜೇಂದ್ರ ಸಿಂಗ್‌ ಬಾಬು ಅವರಿಗೆ.

ವೇಶ್ಯೆ ಪಾತ್ರದಿಂದ ಚಿತ್ರವೇ ನಿಂತು ಹೋಗುತ್ತೆ…

ಕತೆಯನ್ನು ವಿಷ್ಣುವರ್ಧನ್‌ ಮತ್ತು ಸುಹಾಸಿನಿ ಅವರಿಗೂ ಹೇಳಿರುತ್ತಾರೆ. ಅವರಿಂದಲೂ ಒಪ್ಪಿಗೆ ಸಿಕ್ಕಿರುತ್ತದೆ. ಇನ್ನೇನು ಎಲ್ಲವೂ ರೆಡಿಯಾಗಿ, ಶೂಟಿಂಗ್‌ ಹೊರಡಬೇಕು ಎನ್ನುವಷ್ಟರಲ್ಲಿ ಸುಹಾಸಿನಿ ಅವರು ಈ ಸಿನಿಮಾದಲ್ಲಿ ನಾನು ನಟಿಸಲ್ಲ ಎನ್ನುತ್ತಾರೆ. ಕಾರಣ ಏನೆಂದು ಕೇಳಿದಾಗ, ನಮ್ಮ ಅಮ್ಮ ಈ ಸಿನಿಮಾ ಮಾಡಲು ಒಪ್ಪಿಗೆ ಕೊಡ್ತಿಲ್ಲ ಎನ್ನುತ್ತಾರೆ. ಅಷ್ಟಕ್ಕೆ ಮುಗಿಯಲಿಲ್ಲ, ರಾಜೇಂದ್ರ ಸಿಂಗ್‌ ಬಾಬು ಅವರು ನೇರವಾಗಿ ಸುಹಾಸಿನಿ ಅವರ ಅಮ್ಮನನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತಾರೆ. ಈ ಚಿತ್ರದಲ್ಲಿ ಸುಹಾಸಿನಿ ವೇಶ್ಯೆ ಪಾತ್ರ ಮಾಡಬೇಕಿರುತ್ತದೆ. ಆಗಷ್ಟೇ ಮಣಿರತ್ನಂ ಅವರ ಜತೆಗೆ ಸುಹಾನಿಸಿ ಮದುವೆ ನಿಶ್ಚಯವಾದ ಬೆನ್ನಲ್ಲೇ ಈ ಸಿನಿಮಾ ಬೇಡ ಎಂದಿರುತ್ತಾರೆ.

ಇಂಥ ಸಮಯದಲ್ಲಿ ಈ ಥರದ ಪಾತ್ರ ಬೇಡ ಎನ್ನುತ್ತಾರೆ ಅವರ ತಾಯಿ. ಈ ಸಿನಿಮಾ ಬೇಡ ಎಂದು ಸುಹಾಸಿನಿ ಪ್ರಾಜೆಕ್ಟ್‌ನಿಂದಲೇ ಹೊರನಡೆಯುತ್ತಾರೆ. ಹೀಗಿರುವಾಗ ನಿಮ್ಮ ಸ್ನೇಹಿತೆ ರೇವತಿಯವರನ್ನು ಒಂದು ಬಾರಿ ಕೇಳಿ ನೋಡಿ ಎಂದೂ ಮನವಿ ಮಾಡ್ತಾರೆ ರಾಜೇಂದ್ರ ಸಿಂಗ್‌ ಬಾಬು. ಬಳಿಕ ರೇವತಿಗೂ ಈ ಪಾತ್ರ ಇಷ್ಟವಾಗಿ ಮಾಡಲು ಒಪ್ಪಿಕೊಳ್ತಾರೆ. ವಿಪರ್ಯಾಸ ಏನೆಂದರೆ, ಇದೇ ಸಮಯದಲ್ಲಿ ರೇವತಿ ಅವರಿಗೂ ಮದುವೆ ನಿಶ್ಚಯವಾಗುತ್ತದೆ. ಬಳಿಕ ಈ ಸಿನಿಮಾದಿಂದ ಅವರೂ ಕೂಡ ಹಿಂದೆ ಸರಿಯುತ್ತಾರೆ.

ಇದರಿಂದ ಮತ್ತೆ ನಿರಾಸೆಯಾದ ರಾಜೇಂದ್ರ ಸಿಂಗ್‌ ಬಾಬು, ಈ ಕಥೆಗೆ ಸಿನಿಮಾ ಆಗೋ ನಸೀಬು ಇಲ್ಲ ಅನ್ಸುತ್ತೆ. ಹಾಗಾಗಿ ವಿಷ್ಣುವರ್ಧನ್‌ ಅವರ 100ನೇ ಸಿನಿಮಾ ಮಾಡಬೇಕೆಂದಿದ್ದ ಹಗಲುಗನಸು ಸಿನಿಮಾ ಪ್ರಾಜೆಕ್ಟ್‌ ಅನ್ನೇ ಕೈ ಬಿಡ್ತಾರೆ. ಅದಾದ ಬಳಿಕ ವೇಮು ಜೋಷಿ ಅವರು ಬರೆದ ಭಾರತೀಯ ಸೇನೆ ಹಿನ್ನೆಲೆಯ ಕಥೆಯನ್ನಿಟ್ಟುಕೊಂಡು ಮಾಡುವ ಸಿನಿಮಾ ಮುತ್ತಿನ ಹಾರ. ಅಂದುಕೊಂಡಂತೆ ವಿಷ್ಣುವರ್ಧನ್‌ ಮತ್ತು ಸುಹಾಸಿನಿ ಈ ಚಿತ್ರದಲ್ಲಿ ನಾಯಕ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ. ಮುಂದೆ ಈ ಸಿನಿಮಾ ಸಹ ಕನ್ನಡದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದಾಗುತ್ತದೆ. ಈ ಬಗ್ಗೆ 

Whats_app_banner